»   » ಶಾರುಕ್ ಖಾನ್ ರ 'ರಾಯೀಸ್' ಚಿತ್ರ ಬಿಡುಗಡೆಯಾಗದಿರಲು ಕಾರಣವೇನು?

ಶಾರುಕ್ ಖಾನ್ ರ 'ರಾಯೀಸ್' ಚಿತ್ರ ಬಿಡುಗಡೆಯಾಗದಿರಲು ಕಾರಣವೇನು?

Written by: ರಮೇಶ್.ಬಿ
Subscribe to Filmibeat Kannada

ಶಾರುಖ್ ಖಾನ್ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಚಿತ್ರ 'ರಾಯೀಸ್' ಮುಂದಿನ ವರ್ಷ ರಿಲೀಸ್ ಆಗಲಿದೆ ಅಂತ ಹೇಳಲಾಗುತ್ತಿದೆ. ನಿಜ ಹೇಳ್ಬೇಕು ಅಂದ್ರೆ, 'ರಾಯೀಸ್' ಮತ್ತು ಸಲ್ಮಾನ್ ಖಾನ್ ಅಭಿನಯದ 'ಸುಲ್ತಾನ್' ಸಿನಿಮಾ ಎರಡೂ ಕೂಡ ರಂಜಾನ್ ಹಬ್ಬಕ್ಕೆ ರಿಲೀಸ್ ಆಗುತ್ತೆ ಅಂತ ಬಾಲಿವುಡ್ ಅಂಗಳದಲ್ಲಿ ಸುದ್ದಿ ಹಬ್ಬಿತ್ತು.

ಆದರೆ 'ಸುಲ್ತಾನ್' ಚಿತ್ರ ಬಿಡುಗಡೆಗೊಂಡಿದ್ದು, ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಹಿನ್ನಲೆಯಲ್ಲಿ 'ರಾಯೀಸ್' ಚಿತ್ರದ ಬಿಡುಗಡೆ ದಿನಾಂಕವನ್ನು ನಟ ಶಾರುಖ್ ಖಾನ್ ಮುಂದೂಡಿದ್ದಾರೆ. ತಮ್ಮ ಚಿತ್ರವನ್ನು ಮುಂದೂಡಲು ಕೆಲ ಕಾರಣಗಳನ್ನು ಸಹ ನೀಡಿದ್ದಾರೆ. [ಚಿತ್ರಗಳು: 'ಅಸಹಿಷ್ಣುತೆ' ಎಫೆಕ್ಟ್ ಶಾರುಖ್ ಚಿತ್ರಕ್ಕೆ ಭಾರಿ ಕಂಟಕ]

2-reasons-why-shahrukh-khan-s-raees-did-not-release-with-sultan

'ರಾಯೀಸ್' ಚಿತ್ರ ಬಿಡುಗಡೆಗೊಂಡರೆ ಏನಿಲ್ಲ ಅಂದ್ರು 3500 ರಿಂದ 4000 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕು. 'ಸುಲ್ತಾನ್' ಸಿನಿಮಾ ಈಗ ವರ್ಲ್ಡ್ ವೈಡ್ ರಿಲೀಸ್ ಆಗಿದೆ. ಹಾಗಾಗಿ ರಂಜಾನ್ ಹಬ್ಬಕ್ಕೆ ನಮ್ಮ ಸಿನಿಮಾ ರಿಲೀಸ್ ಮಾಡಿಲ್ಲ ಎಂದು ಶಾರುಖ್ ಹೇಳಿದ್ದಾರೆ. [100 ಕೋಟಿ ಕ್ಲಬ್ ಸೇರುವ ತವಕದಲ್ಲಿ 'ಸುಲ್ತಾನ್']

2-reasons-why-shahrukh-khan-s-raees-did-not-release-with-sultan

ಒಂದೇ ದಿನ ಎರಡೆರಡು ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಯಾದರೆ ನಷ್ಟ ಅನುಭವಿಸಬೇಕಾಗುತ್ತದೆ ಹಾಗಾಗಿ ಬಿಡುಗಡೆ ಮಾಡಿಲ್ಲ ಎಂದು ಕಾರಣ ನೀಡಿದ್ದಾರೆ. 'ರಾಯೀಸ್' ಚಿತ್ರ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದ್ದು ಮುಂದಿನ ವರ್ಷ ರಿಲೀಸ್ ಮಾಡೋ ಪ್ಲಾನ್ ನಲ್ಲಿದೆಯಂತೆ ಚಿತ್ರತಂಡ.

English summary
Talking to a leading daily, Bollywood Actor Shahrukh Khan gave two reasons as to why 'Raees' was not released with Salman Khan's 'Sultan'
Please Wait while comments are loading...

Kannada Photos

Go to : More Photos