twitter
    For Quick Alerts
    ALLOW NOTIFICATIONS  
    For Daily Alerts

    ಕೊನೆಗೂ 100 ಕೋಟಿ ಗಳಿಕೆ ಕ್ಲಬ್ ಸೇರಿದ 'ಪಿಕೆ'

    By ಜೇಮ್ಸ್ ಮಾರ್ಟಿನ್
    |

    ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾದರೂ ಅಮೀರ್ ಖಾನ್ ಅಭಿನಯದ 'ಪಿಕೆ' ಚಿತ್ರಕ್ಕೆ ಆರಂಭದ ದಿನ ಉತ್ತಮ ಗಳಿಕೆ ಸಿಕ್ಕಿರಲಿಲ್ಲ. ಅದರೆ, ನಾಲ್ಕು ದಿನಗಳಲ್ಲಿ ಹಾಗೂ ಹೀಗೂ ನೂರು ಕೋಟಿ ಗಳಿಕೆ ದಾಟುವ ಮೂಲಕ ಮತ್ತೊಮ್ಮೆ ಆಮೀರ್ ಖಾನ್ ಯಶಸ್ವಿ ಚಿತ್ರಗಳ ಸರದಾರ ಎನಿಸಿಕೊಂಡಿದ್ದಾರೆ.

    ಭಾರತದಲ್ಲೇ 5200ಸ್ಕ್ರೀನ್ ಗಳಲ್ಲಿ ತೆರೆಗೆ ಬಂದಿರುವ 'ಪಿಕೆ', ವಿದೇಶಗಳಲ್ಲಿ 800ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಂಡಿದೆ. ಬೃಹತ್ ಪ್ರಮಾಣದಲ್ಲಿ ರಿಲೀಸ್ ಆಗಿರುವ ಪಿಕೆ ಚಿತ್ರದ ಗಳಿಕೆ ಮಾತ್ರ ಮೊದಲ ದಿನ ಡಲ್ ಹೊಡೆದಿತ್ತು.[ವಿಮರ್ಶಕ ಕೆಂಗಣ್ಣು ಕೂಡಾ ತಂಪಾಗಿಸಿದ 'ಪಿಕೆ' ]

    'ಧೂಮ್ 3' ಚಿತ್ರಕ್ಕಿಂತ ಬಿಗ್ ಓಪನ್ನಿಂಗ್ ಪಡೆದುಕೊಂಡ್ರು 'ಸಿಂಗಂ ರಿಟರ್ನ್ಸ್' ಮತ್ತು 'ಬ್ಯಾಂಗ್ ಬ್ಯಾಂಗ್' ಚಿತ್ರಗಳಿಗಿಂತಲೂ ಕಮ್ಮಿ ಕಲೆಕ್ಷನ್ ಮಾಡಿ, ಮಾರುಕಟ್ಟೆ ತಜ್ಞರ ಲೆಕ್ಕಾಚಾರ ತಲೆ ಕೆಳಗು ಮಾಡಿತು. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

    ರಾಜಕುಮಾರ್ ಇರಾನಿ ನಿರ್ದೇಶನದ ಈ ಚಿತ್ರಕ್ಕೆ ಆರಂಭದ ದಿನವೇ ಪ್ರೇಕ್ಷಕ ವಲಯದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದರೆ, ವಿಮರ್ಶಕರು ಚಿತ್ರವನ್ನು ಎತ್ತಿ ಹಿಡಿದಿದ್ದರು. ಅಮೀರ್ ಖಾನ್ ಮತ್ತು ಅನುಷ್ಕಾ ಶರ್ಮಾ ಅಭಿನಯ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆದಿದೆ. [ಪಿಕೆ ಮೊದಲ ದಿನವೇ ಡಲ್ ಗಳಿಕೆ]

    ನಾಲ್ಕು ದಿನದ ಗಳಿಕೆ ವಿವರ

    ನಾಲ್ಕು ದಿನದ ಗಳಿಕೆ ವಿವರ

    ಶುಕ್ರವಾರ : 26.63 ಕೋಟಿ ರೂಪಾಯಿ
    ಶನಿವಾರ : 30.34 ಕೋಟಿ ರೂಪಾಯಿ
    ಭಾನುವಾರ : 38.44 ಕೋಟಿ ರೂಪಾಯಿ
    ಸೋಮವಾರ : 21.22 ಕೋಟಿ ರೂಪಾಯಿ

    ನಾಲ್ಕನೇ ದಿನ ಶೈನ್ ಅದ ಪಿಕೆ

    ನಾಲ್ಕನೇ ದಿನ ಶೈನ್ ಅದ ಪಿಕೆ

    ಮೊದಲ ಮೂರು ದಿನ ನಿರೀಕ್ಷಿತ ಮಟ್ಟದ ಗಳಿಕೆ ಕಾಣದ ಪಿಕೆ ಚಿತ್ರ ಸೋಮವಾರ ಸುಧಾರಣೆ ಕಂಡು 20 ಕೋಟಿ ರು ಗಡಿ ದಾಟುತ್ತಿದ್ದಂತೆ ನಾಲ್ಕು ದಿನಗಳ ಒಟ್ಟಾರೆ ಗಳಿಕೆ 113-114 ಕೋಟಿ ರು ದಾಖಲಾಯಿತು.

    ಧೂಮ್ 3 ಚಿತ್ರದ ನಾಲ್ಕನೇ ದಿನದ ಗಳಿಕೆಗೂ ಪಿಕೆ ನಾಲ್ಕನೇ ದಿನದ ಗಳಿಕೆಗೂ ಸಾಮ್ಯತೆ ಕಂಡು ಬಂದಿದೆ. ಶಾರುಖ್ ಅವರ ಹ್ಯಾಪಿ ನ್ಯೂ ಇಯರ್ ಗಳಿಕೆಗಿಂತ ಉತ್ತಮವಾಗಿದೆ.

    ಹಣ ಗಳಿಕೆ ವೇಗ ಪಡೆದುಕೊಳ್ಳುತ್ತಿಲ್ಲ

    ಹಣ ಗಳಿಕೆ ವೇಗ ಪಡೆದುಕೊಳ್ಳುತ್ತಿಲ್ಲ

    ಐದನೇ ದಿನದ ಗಳಿಕೆ 19 ಕೋಟಿ ಎಂದು ಸದ್ಯದ ಮಾಹಿತಿ ಸಿಕ್ಕಿದ್ದು, ಐದು ದಿನಗಳ ಒಟ್ಟಾರೆ ನಿವ್ವಳ ಗಳಿಕೆ ದೇಶಿ ಮಾರುಕಟ್ಟೆಯಲ್ಲಿ 136.61 ಕೋಟಿ ರು ದಾಟುತ್ತದೆ.

    ಚಿತ್ರದ ಗಳಿಕೆ ಮಾತ್ರ ಏರಿಕೆಯಾಗುತ್ತಿಲ್ಲ ಶೇ 20ರಷ್ಟು ಕುಸಿತ ಕಂಡಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

    200 ಕೋಟಿ ರು ಕ್ಲಬ್ ಸೇರುವುದೇ?

    200 ಕೋಟಿ ರು ಕ್ಲಬ್ ಸೇರುವುದೇ?

    ಅಮೀರ್ ಖಾನ್ ಅವರ ಈ ಹಿಂದಿನ ಎಲ್ಲಾ ಚಿತ್ರಗಳ ದಾಖಲೆ ಮುರಿಯುವ ಲಕ್ಷಣ ಈ ಚಿತ್ರಕ್ಕಿದೆ ಎಂಬುದು ಬರೀ ಹೊಗಳಿಕೆಯ ಮಾತಾಗಿದೆ.

    ಅಂಕಿ ಅಂಶಗಳ ಲೆಕ್ಕಾಚಾರ ಹಾಕಿದರೆ ಪಿಕೆ ಚಿತ್ರ 180 ಕೋಟಿ ರು ಗಳಿಕೆ ಮಾಡಿದರೆ ಹೆಚ್ಚು ಎನ್ನಬಹುದು. ದೇಶಿ ಮಾರುಕಟ್ಟೆಯಲ್ಲಿ 200 ಕೋಟಿ ರು ದಾಟಿದರೆ ಎಲ್ಲವೂ ಭಗವಂತನ ಕೃಪೆ. ಸದ್ಯಕ್ಕೆ ಅಮೀರ್ ಚಿತ್ರ ಗಳಿಕೆಗೆ ಕ್ರಿಸ್ಮಸ್ ಸೀಸನ್ ನ ಕೃಪೆ ಸಿಗಬೇಕಿದೆ. ಈ ವಾರಾಂತ್ಯದ ವೇಳೆಗೆ ಗಳಿಕೆ ಚೇತರಿಸಿಕೊಂಡರೂ ಅಚ್ಚರಿಪಡಬೇಕಾಗಿಲ್ಲ.

    English summary
    Aamir Khan's PK showed a lot of improvement on Sunday and managed to retain it over the first weekday i.e Monday as well. The film had an average opening at the Box Office but it picked up over the last four days.
    Sunday, December 28, 2014, 13:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X