»   » ಅಮೀರ್ ಖಾನ್ PK ಕಥೆ ಲೀಕ್ ಆಯ್ತಂತೆ!

ಅಮೀರ್ ಖಾನ್ PK ಕಥೆ ಲೀಕ್ ಆಯ್ತಂತೆ!

Written by: * ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನ ಪ್ರತಿಭಾವಂತ ನಟ ಅಮೀರ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ PK(peekay) ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಬೆತ್ತಲಾಗಿ (ಆಯಕಟ್ಟಿನ ಜಾಗದಲ್ಲಿ ರೇಡಿಯೋ ಇತ್ತು) ಪೋಸ್ ಕೊಟ್ಟ ಮೇಲೆ ಈಗ ಚಿತ್ರದ ಕಥೆ ಬೆತ್ತಲಾಗಿದೆ ಐ ಮೀನ್ ಕಥೆ ಲೀಕ್ ಆಗಿದೆ. ಪಿಕೆ ಚಿತ್ರದಲ್ಲಿನ ಅಮೀರ್ ಹಾಗೂ ಅನುಷ್ಕಾ ಪಾತ್ರಗಳು, ಚಿತ್ರಕಥೆ ಸೋರಿಕೆಯಾಗಿರುವ ಬಗ್ಗೆ ವರದಿಗಳು ಬಂದಿವೆ. ಈ ಬಗ್ಗೆ ಚಿತ್ರ ತಂಡ ಮಾತ್ರ ಯಾವುದೇ ಸ್ಪಷ್ಟನೆ ನೀಡಿಲ್ಲ.

ಪಿಕೆ ಚಿತ್ರದ ಪೋಸ್ಟರ್ ಬಗ್ಗೆ ಗದ್ದಲ, ಚರ್ಚೆ, ಟೀಕೆ ಅಲ್ಲದೆ ಪೋಸ್ಟರ್ ಈಗ ಕೋರ್ಟ್ ಮೆಟ್ಟಿಲೇರಿದೆ. ಮುಂಬೈನ ಸಾಮಾಜಿಕ ಕಾರ್ಯಕರ್ತ ಹೇಮಂತ್ ಪಾಟೀಲ್ ಎಂಬುವವರು ಚಿತ್ರದ ವಿರುದ್ಧ ಇನ್ ಜಂಕ್ಷನ್ ನೀಡುವಂತೆ ಕೋರಿ ಕೋರ್ಟಿಗೆ ಸಿವಿಲ್ ಮೊಕದ್ದಮೆ ಹೂಡಿದ್ದಾರೆ.[ಮಿ. ಪರ್ಫೆಕ್ಟ್ ಆಲ್ಲ, ಕಾಪಿ ಕ್ಯಾಟ್?]

ಚಿತ್ರದ ಪೋಸ್ಟರ್ ಅಸಲಿಯಲ್ಲ, ಅಮೀರ್ ಖಾನ್ ರಂಥ ಮಿ. ಪರ್ಫೆಕ್ಷನಿಸ್ಟ್ ಯಾಕೋ ಮಿ.ಕಾಪಿ ಕ್ಯಾಟ್ ಆಗುತ್ತಿದ್ದಾರೆ ಎಂಬ ಗುಲ್ಲೆದ್ದಿತ್ತು. ಈಗ ಚಿತ್ರದ ಕಥೆ ಲೀಕ್ ಆಗಿರುವುದು ಕೂಡಾ ಪ್ರಚಾರ ತಂತ್ರವೇ? ಎಂಬ ಮಾತುಗಳು ಕೇಳಿಬಂದಿವೆ. ಈ ನಡುವೆ ಲಭ್ಯ ಮಾಹಿತಿ ಪ್ರಕಾರ ಪೀಕೆ ಚಿತ್ರದಲ್ಲಿ ಅಮೀರ್ ಖಾನ್ ಅವರು ಅನ್ಯಗ್ರಹದಿಂದ ಭಾರತಕ್ಕೆ ಬಂದಿರುವ ಜೀವಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿನ ಅಮೀರ್ ಖಾನ್ ಗೆಟ್ ಅಪ್ ಹಾಗೂ ಇನ್ನಷ್ಟು ಮಾಹಿತಿ ಮುಂದೆ ಓದಿ...

ಚಿತ್ರದ ಕಥೆ ಏನು? ಅಮೀರ್ ಪಾತ್ರವೇನು?
  

ಚಿತ್ರದ ಕಥೆ ಏನು? ಅಮೀರ್ ಪಾತ್ರವೇನು?

ಪೀಕೆ ಚಿತ್ರದಲ್ಲಿ ಅಮೀರ್ ಖಾನ್ ಅವರು ಅನ್ಯಗ್ರಹ ಜೀವಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಮೀರ್ ಪಾತ್ರ ಬೇರೆ ಗ್ರಹದಿಂದ ದೇವರನ್ನು ಹುಡುಕಿಕೊಂಡು ಭೂಮಿಗೆ ಬರುತ್ತದೆ. ಈ ಹುಡುಕಾಟದಲ್ಲಿ ನಾಯಕಿ ಅನುಷ್ಕಾ ಶರ್ಮ ಸಿಗುತ್ತಾಳೆ. ಅನುಷ್ಕಾ ಈ ಚಿತ್ರದಲ್ಲಿ ವೇಶ್ಯೆ ಪಾತ್ರ ಮಾಡುತ್ತಿದ್ದಾಳೆ.

ಭೂಮಿಗೆ ಬಂದ ಅಮೀರ್ ಖಾನ್ ಗೆ ಭೂಮಿಯ ಜನ ಹೇಗೆ ಡ್ರೆಸ್ ಮಾಡುತ್ತಾರೆ ಎಂಬುದು ತಿಳಿದಿರುವುದಿಲ್ಲ. ಹೀಗಾಗಿ ಸಿಕ್ಕ ಸಿಕ್ಕ ಡ್ರೆಸ್ ಗಳನ್ನು ತೊಟ್ಟುಕೊಳ್ಳುತ್ತಾನೆ. ಅಮೀರ್ ತನ್ನ ದೇವರ ಹುಡುಕಾಟದ ಜೊತೆಗೆ ಇಲ್ಲಿನ ಜನರಿಗೆ ದೇವರ ಬಗ್ಗೆ ಇರುವ ನಂಬಿಕೆಗಳನ್ನು ಬದಲಾಯಿಸುತ್ತಾ ಹೋಗುತ್ತಾನೆ. ಹಾಸ್ಯಮಯ ಧಾಟಿಯಲ್ಲಿ ಮಿಲಿಯನ್ ಡಾಲರ್ ಪ್ರಶ್ನೆಗಳಲ್ಲಿ ಒಂದೆನಿಸಿರುವ ದೇವರ ಇರುವಿಕೆ ಬಗ್ಗೆ ಕಥೆಯನ್ನು ರಾಜಕುಮಾರ್ ಹಿರಾನಿ ಹೆಣೆದಿದ್ದಾರೆ.

 

ಅಮೀರ್ ಖಾನ್ ಎರಡನೇ ಲುಕ್
  

ಅಮೀರ್ ಖಾನ್ ಎರಡನೇ ಲುಕ್

ಅನ್ಯಗ್ರಹ ಜೀವಿಯಾದ ಅಮೀರ್ ಖಾನ್ ಪಾತ್ರಕ್ಕೆ ಗಂಡು ಹೆಣ್ಣಿನ ನಡುವಿನ ಅಂತರ ತಿಳಿಯದ ಕಾರಣ ಈ ಪಾತ್ರ ಸ್ಕರ್ಟ್ ತೊಟ್ಟು ಓಡಾಡುತ್ತದೆ.

ಚಿತ್ರದ  ಕಥೆ ಎಲ್ಲೋ ಕೇಳಿದ್ದಂತಿದೆ
  

ಚಿತ್ರದ ಕಥೆ ಎಲ್ಲೋ ಕೇಳಿದ್ದಂತಿದೆ

ಚಿತ್ರದ ಕಥೆ ಎಲ್ಲೋ ಕೇಳಿದ್ದಂತಿದೆ ನಿಮಗನಿಸಿದರೆ ತಪ್ಪಲ್ಲ. ದೇವರ ಹುಡುಕಾಟ ಬಗ್ಗೆ ಬಂದ ಅಕ್ಷಯ್ ಕುಮಾರ್ ನಾಯಕತ್ವದ ಓ ಮೈ ಗಾಡ್ ಚಿತ್ರ ಯಶಸ್ಸುಗೊಳಿಸಿದ್ದರಿಂದ ಈ ಚಿತ್ರದ ಕಥಾಹಂದರಕ್ಕೆ ಹೋಲಿಕೆ ಮಾಡುವುದು ಸಾಮಾನ್ಯ. ಆದರೆ, ಹಿರಾನಿ ಚಿತ್ರಗಳ ಕಥೆ ಸಿಂಪಲ್ ಆದರೂ ನಿರೂಪಣೆಯಲ್ಲಿ ಹೊಸತನ ಇದ್ದೇ ಇರುತ್ತದೆ.

ಅಮೀರ್ ಮಾನ ಉಳಿಸಿದ ಟ್ರಾನಿಸ್ಟರ್ ಬಗ್ಗೆ
  

ಅಮೀರ್ ಮಾನ ಉಳಿಸಿದ ಟ್ರಾನಿಸ್ಟರ್ ಬಗ್ಗೆ

ಅಮೀರ್ ಮಾನ ಉಳಿಸಿದ ಟ್ರಾನಿಸ್ಟರ್ ಬಗ್ಗೆ ಇನ್ನೂ ಏನು ತಿಳಿದು ಬಂದಿಲ್ಲ. ಟ್ರಾನ್ಸಿಸ್ಟರ್ ರೇಡಿಯೋ ಏಕೆ ಅಮೀರ್ ಕುತ್ತಿಗೆಗೆ ನೇತು ಹಾಕಿಕೊಂಡಿರುತ್ತಾನೆ. ಟ್ರಾನ್ಸಿಸ್ಟರ್ ಕಥೆಯ ಓಟಕ್ಕೆ ಹೇಗೆ ಸಹಕಾರಿ ಎಂಬುದು ಇನ್ನೂ ತಿಳಿಯಬೇಕಿದೆ.

ರಾಜಸ್ಥಾನಿ ಉಡುಗೆಯಲ್ಲಿ ಅಮೀರ್ ಖಾನ್
  

ರಾಜಸ್ಥಾನಿ ಉಡುಗೆಯಲ್ಲಿ ಅಮೀರ್ ಖಾನ್

ರಾಜಸ್ಥಾನಿ ಉಡುಗೆಯಲ್ಲಿ ಅಮೀರ್ ಖಾನ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ರಾಜಸ್ಥಾನದಲ್ಲೇ ನಡೆದಿದ್ದು ವಿಶೇಷ. ಪೀಕೆ ಚಿತ್ರದಲ್ಲಿ ಅಮೀರ್ ಖಾನ್, ಅನುಷ್ಕಾ ಶರ್ಮ ಅಲ್ಲದೆ ಸಂಜಯ್ ದತ್, ಸುಶಾಂತ್ ಸಿಂಗ್ ರಜಪೂಟ್ ಕೂಡಾ ಪ್ರಮುಖ ಪಾತ್ರಧಾರಿಗಳಾಗಿದ್ದಾರೆ. ಚಿತ್ರ ಡಿಸೆಂಬರ್ 19ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ.

English summary
Aamir Khan's upcoming movie PK recently created quite a buzz with the release of its first poster. Aamir Khan's role and the plot of PK has been revealed and according to a report, Aamir Khan will be seen playing the role of an alien in PK.
Please Wait while comments are loading...

Kannada Photos

Go to : More Photos