»   » ಅಮೀರ್, ಸಲ್ಮಾನ್, ಶಾರುಖ್ ಈದ್ ಆಚರಣೆ ಸಂಭ್ರಮ

ಅಮೀರ್, ಸಲ್ಮಾನ್, ಶಾರುಖ್ ಈದ್ ಆಚರಣೆ ಸಂಭ್ರಮ

Written by: * ಜೇಮ್ಸ್ ಮಾರ್ಟಿನ್
Subscribe to Filmibeat Kannada

ಮುಸ್ಲಿಮ್ ಬಾಂಧವರ ಪವಿತ್ರ ಹಬ್ಬ ಈದ್ ಉಲ್ ಫಿತ್ರ್ ಸಂಭ್ರಮಾಚರಣೆ ಬಾಲಿವುಡ್ ನಲ್ಲೂ ಕಂಡು ಬಂದಿದೆ. ಹಿಂದಿ ಚಿತ್ರರಂಗದ ಪ್ರಮುಖ ನಟರಾದ ಅಮೀರ್ ಖಾನ್, ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಮನೆಯಲ್ಲಿನ ಈದ್ ಸಂತಸದ ಚಿತ್ರಗಳು ನಿಮಗಾಗಿ ಇಲ್ಲಿದೆ.

ವಿಶ್ವದೆಲ್ಲೆಡೆ ಇರುವ ಮುಸ್ಲಿಂ ಬಾಂಧವರು ರಂಜಾನ್ ಮಾಸದ ಅಂತ್ಯದ ಆಚರಣೆ ಮುಸ್ಲಿಮ್ ಸಮುದಾಯ ಈದ್ ಹಬ್ಬಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ದಾನ ಧರ್ಮ ಸದ್ಭಾವನೆಗಳನ್ನು ವೃದ್ಧಿಸುವ ಈ ಹಬ್ಬ ಬಡವರ ಪಾಲಿಗೆ ವರವಾಗಿ ಪರಿಣಮಿಸಲಿದೆ. ಈದ್ ಅಂಗವಾಗಿ ಇಫ್ತಾರ್ ಕೂಟಗಳು, ದಾನ ಕಾರ್ಯಗಳು ಎಲ್ಲೆಡೆ ನಡೆಯುತ್ತದೆ. [ದೇಶದ ವಿವಿಧೆಡೆ ಈದ್ ಹಬ್ಬದಾಚರಣೆ ಸಂಭ್ರಮ]

ಸಲ್ಮಾನ್ ಖಾನ್ ಅವರು ಈ ಬಾರಿ ಭರ್ಜರಿಯಾಗಿ ಹಬ್ಬದಾಚರಣೆ ಮಾಡಿದರೆ, ಶಾರುಖ್ ಖಾನ್ ಅವರು ಸರಳವಾಗಿ ಆಚರಿಸಿಕೊಂಡರು. ಇಬ್ಬರು ತಮ್ಮ ರಾಗ ದ್ವೇಷ ಮರೆತು ಬಾಬಾ ಸಿದ್ದಿಕಿ ಅವರ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದು ಈ ಬಾರಿಯ ವಿಶೇಷ. ಸಲ್ಮಾನ್ ಖಾನ್ ಈದ್ ಸಂಭ್ರಮದಲ್ಲಿ ದೊಡ್ಡ ಮಟ್ಟದ ದಾನ ಕಾರ್ಯಕ್ಕೆ ಮುಂದಾದ ಸುದ್ದಿಯೂ ಬಂದಿದೆ.ಈ ಬಗ್ಗೆ ನಿರೀಕ್ಷಿಸಿ..

ಅಮೀರ್ ಖಾನ್ ಅವರು ತಮ್ಮ ಪತ್ನಿ ಕಿರಣ್ ರಾವ್ ಪುತ್ರ ಅಜಾದ್, ಜುನೈದ್ ಹಾಗೂ ಪುತ್ರಿ ಇರಾ ಜತೆ ಈದ್ ಆಚರಣೆಯಲ್ಲಿ ತೊಡಗಿದ್ದರು. ವಿಶೇಷವೆಂದರೆ ಅಮೀರ್ ಅವರು ತಮ್ಮ ಮೊದಲ ಪತ್ನಿಯನ್ನು ಈದ್ ಸಂತಸಕೂಟಕ್ಕೆ ಆಹ್ವಾನಿಸಿದ್ದರು. ಅಮೀರ್, ಶಾರುಖ್ ಹಾಗೂ ಸಲ್ಮಾನ್ ಸಂಭ್ರಮಾಚರಣೆ ಚಿತ್ರಗಳು ಇಲ್ಲಿವೆ...[ಅಮೀರ್ ಹೊಡೆದ್ರು 'ಯೂ ಟರ್ನ್']

ಸಂಸಾರದೊಂದಿಗೆ ಅಮೀರ್ ಖಾನ್
  

ಸಂಸಾರದೊಂದಿಗೆ ಅಮೀರ್ ಖಾನ್

ಪತ್ನಿ ಕಿರಣ್ ರಾವ್ ಹಾಗೂ ಪುತ್ರ ಅಜಾದ್ ಜತೆಯಲ್ಲಿ ಹೊಸ ಬಟ್ಟೆ ತೊಟ್ಟ ಅಮೀರ್ ಖಾನ್

ಸಲ್ಮಾನ್ ಖಾನ್ ಫ್ಯಾಮಿಲಿ ಫೋಟೋ
  

ಸಲ್ಮಾನ್ ಖಾನ್ ಫ್ಯಾಮಿಲಿ ಫೋಟೋ

ಸಲ್ಮಾನ್ ಖಾನ್ ಅವರು ತಂದೆ ಸಲೀಂ ಖಾನ್, ಸೋದರರಾದ ಅರ್ಬಾಜ್ ಖಾನ್ ಹಾಗೂ ಸೊಹೈಲ್ ಖಾನ್ ಜತೆ ಗ್ರೂಪ್ ಫೋಟೋದಲ್ಲಿ

ಅಭಿಮಾನಿಗಳನ್ನು ನೋಡಲು ಶಾರುಖ್ ಕಾತುರ
  

ಅಭಿಮಾನಿಗಳನ್ನು ನೋಡಲು ಶಾರುಖ್ ಕಾತುರ

ಈದ್ ಶುಭಾಶಯ ಹಂಚಿಕೊಳ್ಳಲು ತಮ್ಮ ಮನೆ ಬಳಿ ಬಂದಿದ್ದ ಅಭಿಮಾನಿಗಳನ್ನು ನೋಡಲು ಶಾರುಖ್ ಕಾತುರದಿಂದ ಮನೆಯ ಮಹಡಿ ಬಳಿ ಬಂದು ಫ್ಲೈಯಿಂಗ್ ಕಿಸ್ ಕೊಟ್ಟರು

ಕುಟುಂಬ ಸದಸ್ಯರ ಜತೆ ಅಮೀರ್
  

ಕುಟುಂಬ ಸದಸ್ಯರ ಜತೆ ಅಮೀರ್

ಕುಟುಂಬ ಸದಸ್ಯರ ಜತೆ ಅಮೀರ್ ಖಾನ್ ಅವರು ಫೋಟೋಗೆ ಪೋಸ್ ಕೊಟ್ಟಿದ್ದು ಹೀಗೆ. ಅಮೀರ್ ಖಾನ್ ಮನೆಗೆ ಅವರ ಮಾಜಿ ಪತ್ನಿ ಪುತ್ರರು ಹಾಗೂ ಅಕ್ಕ, ಅಳಿಯ ಇಮ್ರಾನ್ ಖಾನ್ ಹಾಗೂ ಅವರ ಗೆಳತಿ ಅವಂತಿಕಾ ಎಲ್ಲರೂ ಬಂದು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮನೆಯ ಬಾಲ್ಕನಿಯಲ್ಲಿ ನಿಂತ ಸಲ್ಮಾನ್
  

ಮನೆಯ ಬಾಲ್ಕನಿಯಲ್ಲಿ ನಿಂತ ಸಲ್ಮಾನ್

ಮನೆಯ ಬಾಲ್ಕನಿಯಲ್ಲಿ ನಿಂತ ಸಲ್ಮಾನ್ ಖಾನ್ ಅವರು ಮನೆ ಮುಂದೆ ನೆರೆದಿದ್ದ ಅಭಿಮಾನಿಗಳತ್ತ ಕೈ ಬೀಸಿ ಶುಭ ಹಾರೈಕೆ ಸಲ್ಲಿಸಿದರು.

ಶಾರುಖ್ ರಿಂದ ಸರಳವಾಗಿ ಈದ್ ಆಚರಣೆ
  

ಶಾರುಖ್ ರಿಂದ ಸರಳವಾಗಿ ಈದ್ ಆಚರಣೆ

ಕಳೆದ ವರ್ಷ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದ ಯಶಸ್ಸಿನಿಂದ ಬೀಗಿದ್ದ ಶಾರುಖ್ ಖಾನ್ ಅವರು ಭರ್ಜರಿಯಾಗಿ ಈದ್ ಆಚರಣೆ ಮಾಡಿಕೊಂಡಿದ್ದರು. ಈ ಬಾರಿ ಮನೆಯಲ್ಲಿ ಸರಳವಾಗಿ ಈದ್ ಆಚರಣೆ ಮಾಡಿದ್ದು ಕಂಡು ಬಂದಿತು.

English summary
Actor Aamir celebrated Eid with his wife Kiran Rao and son Azad, Junaid, daughter Ira. He had also invited his nephew Imraan Khan and his ex-wife too. Bollywood stars took it to Twitter to wish all fans and family a very Happy Eid.
Please Wait while comments are loading...

Kannada Photos

Go to : More Photos