»   » ಕಡೆಗೂ ಹೊಸ ಫ್ಲ್ಯಾಟ್ ಖರೀದಿಸಿದ ಅಭಿಷೇಕ್ ಬಚ್ಚನ್

ಕಡೆಗೂ ಹೊಸ ಫ್ಲ್ಯಾಟ್ ಖರೀದಿಸಿದ ಅಭಿಷೇಕ್ ಬಚ್ಚನ್

Written by: ಉದಯರವಿ
Subscribe to Filmibeat Kannada

ಬಾಲಿವುಡ್ ನಲ್ಲಿ ಪ್ರತಿಭಾನ್ವಿತ ನಟ ಎಂದು ಗುರುತಿಸಿಕೊಂಡಿರುವ ಅಭಿಷೇಕ್ ಬಚ್ಚನ್ ಹೊಸ ಮನೆ ಮಾಡುತ್ತಿದ್ದಾರೆ ಎಂಬ ಸುದ್ದಿ ಇತ್ತು. ಈಗ ಆ ಮಾತು ಅಕ್ಷರಶಃ ನಿಜವಾಗಿದೆ. ಇತ್ತೀಚೆಗೆ ಅವರು ಮುಂಬೈನ ಪ್ರತಿಷ್ಠಿತ ವೊರ್ಲಿ ಬಡಾವಣೆಯಲ್ಲಿ ಫ್ಲ್ಯಾಟ್ ಖರೀದಿಸಿದ್ದಾರೆ.

ಶ್ರೀಮಂತರೇ ತುಂಬಿತುಳುಕಿರುವ ಈ ಬಹುಮಹಡಿ ಕಟ್ಟದಲ್ಲಿನ ಫ್ಲ್ಯಾಟ್ ನ ಬೆಲೆ ರು.41.14 ಕೋಟಿಗಳು. ಸುಮಾರು 3,875 ಚದರಡಿ ವಿಸ್ತೀರ್ಣದ ಈ ಫ್ಲ್ಯಾಟ್ 37ನೇ ಮಹಡಿಯಲ್ಲಿದೆ ಎಂಬುದು ವಿಶೇಷ. ಸ್ಕೈಲಾರ್ಕ್ ಟವರ್ಸ್ ನಿರ್ಮಿಸಿರುವ ಈ ಫ್ಲ್ಯಾಟ್ ನ ಚದರಡಿ ಬೆಲೆ ರು.1.06 ಲಕ್ಷ. [ಅಮಿತಾಬ್ ಬಚ್ಚನ್ ಕುಟುಂಬದಲ್ಲಿ ಅತ್ತೆ ಸೊಸೆ ಜಗಳ]

Abhishek Bachchan buys new flat

ವಿಶಾಲವಾದ ಕೋಣೆಗಳು, ಅಷ್ಟೇ ವಿಶಾಲವಾದ ಮೇಲ್ಮಾಳಿಗೆ, ವಿಸ್ತಾರವಾದ ನಡುಮನೆ ಹೀಗೆ ಐಶಾರಾಮಿ ಜೀವನಕ್ಕೆ ಬೇಕಾದ ಸಕಲ ಹಂಗುಗಳೂ ಇಲ್ಲಿವೆ. ಈ ಫ್ಲ್ಯಾಟ್ ನ ಸ್ಟ್ಯಾಂಪ್ ಶುಲ್ಕವೇ ರು. 2.05 ಕೋಟಿಗಳು. ಐದು ಬೆಡ್ ರೂಂಗಳ ಸುಸಜ್ಜಿತ ಮನೆ ಇದು.

ಅಂದಹಾಗೆ ಅಭಿಷೇಕ್ ಬಚ್ಚನ್ ಅವರು ರಿಯಲ್ ಎಸ್ಟೇಟ್ ಮೇಲೆ ಹಣ ಹೂಡಲು ಇದನ್ನು ಖರೀದಿಸಿದ್ದಾರೋ ಅಥವಾ ಹೆಂಡತಿ ಮತ್ತು ಮಗಳ ಜೊತೆ ಇಲ್ಲಿರಲು ಖರೀದಿಸಿದ್ದಾರೋ ಎಂಬುದು ಸದ್ಯಕ್ಕೆ ಗೊತ್ತಾಗುತ್ತಿಲ್ಲ.

ಸಾಕಷ್ಟು ಹಿಂದೆಯೇ ಐಶ್ವರ್ಯಾ ರೈ ಹಾಗೂ ಜಯ ಬಚ್ಚನ್ ನಡುವೆ ಬಿರುಕು ಮೂಡಿದ, ಅತ್ತೆ ಸೊಸೆ ಜಗಳ ಆಡಿದ ಸುದ್ದಿ ಇತ್ತು. ಆಗಲೇ ಐಶ್ವರ್ಯಾ ರೈ ಬೇರೆ ಮನೆ ಮಾಡಲು ನಿರ್ಧರಿಸಿದ್ದರು ಎಂಬ ಸುದ್ದಿಯ ಹಿಂದೆಯೇ ನಮ್ಮ ಸಂಸಾರ ಆನಂದಸಾಗರ ಎಂಬ ಸುದ್ದಿಯೂ ತೇಲಿಬಂದು ಆಲ್ ಈಸ್ ವೆಲ್ ಎಂಬ ಸಂದೇಶವನ್ನು ಬಚ್ಚನ್ ಕುಟುಂಬ ರವಾನಿಸಿತ್ತು.

English summary
Bollywood actor Abhishek Bachchan finally booked a luxury apartment in an upcoming Worli project for Rs 41.14 crore. The apartment is on the 37th floor of Skylark Towers in the prime Annie Besant Road area of Worli.
Please Wait while comments are loading...

Kannada Photos

Go to : More Photos