»   » ಹಿಂದಿ ಚಿತ್ರರಂಗದ ಕಾಮಿಡಿಯನ್ ದೇವನ್ ಇನ್ನಿಲ್ಲ

ಹಿಂದಿ ಚಿತ್ರರಂಗದ ಕಾಮಿಡಿಯನ್ ದೇವನ್ ಇನ್ನಿಲ್ಲ

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹಿಂದಿ ಚಿತ್ರರಂಗದಲ್ಲಿ ವೈವಿಧ್ಯಮಯ ಪಾತ್ರ ನಿರ್ವಹಿಸಿದ ನಟ, ನಿರ್ಮಾಪಕ, ನಿರ್ದೇಶಕ ದೇವನ್ ವರ್ಮ ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.

ಹಿಂದಿ ಚಿತ್ರರಂಗದ ದಿಗ್ಗಜ ಅಶೋಕ್ ಕುಮಾರ್ ಅವರ ಅಳಿಯನಾಗಿದ್ದ ದೇವನ್ ಅವರು ಪತ್ನಿ ರೂಪಾ ಗಂಗೂಲಿ ಅವರನ್ನು ಅಗಲಿದ್ದಾರೆ.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ದೇವನ್ ಅವರು ಪುಣೆಯ ಸ್ವಗೃಹದಲ್ಲಿ ಮಂಗಳವಾರ ಬೆಳಗ್ಗೆ 2 ಗಂಟೆ ಸುಮಾರಿಗೆ ಹೃದಯಾಘಾತದಿಂದ ವಿಧಿವಶರಾದರು ಎಂದು ಕುಟುಂಬದವರು ಹೇಳಿದ್ದಾರೆ. ಮಂಗಳವಾರ ಮಧ್ಯಾಹ್ನ ಯೆರವಾಡ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.

Actor, Director, Comedian Deven Verma passes away at 77

ಅಂಗೂರ್, ಚೋರಿ ಮೇರಾ ಕಾಮ್, ಅಂದಾಜ್ ಅಪ್ನಾ ಅಪ್ನಾ, ಬೇಮಿಸಾಲ್, ಜುದಾಯಿ, ದಿಲ್ ತೋ ಪಾಗಲ್ ಹೇ, ಕೋರಾ ಕಾಗಜ್ ಮುಂತಾದ ಚಿತ್ರಗಳ ಮೂಲಕ ದೇವನ್ ಜನಮನ್ನಣೆ ಗಳಿಸಿದ್ದರು. 2003ರಲ್ಲಿ ಕಲ್ಕತ್ತಾ ಮೇಲ್ ಚಿತ್ರದ ನಂತರ ಅವರು ಸಿನಿರಂಗದಲ್ಲಿ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ.

ಅಂಗೂರ್, ಚೋರ್ ಕೆ ಘರ್ ಚೋರ್, ಚೋರಿ ಮೇರಾ ಕಾಮ್ ಚಿತ್ರದ ನಟನೆಗಾಗಿ ಫಿಲಂಫೇರ್ ಪ್ರಶಸ್ತಿ ಗಳಿಸಿದ್ದರು. ದಾನಾ ಪಾನಿ, ಚಟ್ಪಟಿ, ಬೇಷರಮ್, ನಾದಾನ್, ಯಕೀನ್ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದರು. ಪುಣೆಯಲ್ಲೇ ಹುಟ್ಟಿ ಬೆಳೆದ ದೇವನ್ ಅವರು ರಾಜ್ಯಶಾಸ್ತ್ರ, ಸೋಷಿಯಾಲಜಿ ವಿಷಯಗಳಲ್ಲಿ ಪದವಿ ಪಡೆದುಕೊಂಡಿದ್ದರು. ನಂತರ ಸಿನಿಮಾ ಜಗತ್ತಿಗೆ 1961ರ ಸುಮಾರಿಗೆ ಕಾಲಿರಿಸಿ ಹಿಂದಿ, ಮರಾಠಿ, ಭೋಜ್ ಪುರಿ ಚಿತ್ರಗಳಲ್ಲಿ ನಟಿಸಿದ್ದರು. ದೇವನ್ ಅವರ ಕಾಮಿಡಿ ಪಾತ್ರಗಳು ಜನರ ಮನಸಿನಲ್ಲಿ ಸದಾ ನೆನಪಲ್ಲಿರುತ್ತವೆ.

English summary
Veteran Bollywood character actor, director and producer Deven Verma died here early Tuesday following a heart attack and kidney failure, family sources said. He was 77.
Please Wait while comments are loading...

Kannada Photos

Go to : More Photos