»   » ಪಾಕಿಸ್ತಾನದಲ್ಲಿ ಶಾರುಖ್ 'ಫ್ಯಾನ್' ಮಾಡಿದ ಕಲೆಕ್ಷನ್ ಎಷ್ಟು?

ಪಾಕಿಸ್ತಾನದಲ್ಲಿ ಶಾರುಖ್ 'ಫ್ಯಾನ್' ಮಾಡಿದ ಕಲೆಕ್ಷನ್ ಎಷ್ಟು?

Written by: ಸೋನು ಗೌಡ
Subscribe to Filmibeat Kannada

ಕಿಂಗ್ ಖಾನ್ ಶಾರುಖ್ ಖಾನ್ ಅವರ 'ಫ್ಯಾನ್' ಸಿನಿಮಾ ಕೇವಲ ಭಾರತದಲ್ಲಿ ಮಾತ್ರವಲ್ಲದೇ ಪಕ್ಕದ ಪಾಕಿಸ್ತಾನದಲ್ಲೂ ಭಾರಿ ಸದ್ದು ಮಾಡುತ್ತಿದ್ದು, ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ.

ಹೌದು 'ಫ್ಯಾನ್' ಬಿಡುಗಡೆ ಆದ ಮೂರೇ ದಿನದಲ್ಲಿ ಪಾಕಿಸ್ತಾನದಲ್ಲಿ ಸುಮಾರು 50 ಮಿಲಿಯನ್ ಗೂ ಅಧಿಕ ಗಳಿಗೆ ಮಾಡುವ ಮೂಲಕ ಬಾಕ್ಸಾಫೀಸ್ ನಲ್ಲಿ ದಾಖಲೆ ಸೃಷ್ಟಿಸಿದೆ.[ಶಾರುಖ್ ಖಾನ್ 'ಫ್ಯಾನ್' ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್]

Actor Shahrukh's 'Fan' film sets new box office record in Pakistan

ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅವರ 'ಫ್ಯಾನ್' ಚಿತ್ರವನ್ನು ಪಾಕಿಸ್ತಾನದಲ್ಲಿ ಅಧೀಕೃತವಾಗಿ ವಿತರಣೆ ಮಾಡಿರುವ ಜಿಯೋ ಫಿಲಂಸ್ ಸಂಸ್ಥೆ ಹೇಳಿಕೊಂಡಿರುವಂತೆ 'ಫ್ಯಾನ್' ಚಿತ್ರ ಮೂರು ದಿನದಲ್ಲಿ 50 ಮಿಲಿಯನ್ ಡಾಲರ್ ಗೂ ಅಧಿಕ ಗಳಿಕೆ ಮಾಡಿದೆ.[ಶಾರುಖ್ 'ಫ್ಯಾನ್'ಗೆ ಫ್ಯಾನ್ ಆಗಿ ಚಪ್ಪಾಳೆ ತಟ್ಟಿದ್ದಾರೆ ವಿಮರ್ಶಕರು!]

Actor Shahrukh's 'Fan' film sets new box office record in Pakistan

ಕರಾಚಿ ಮತ್ತು ಲಾಹೋರ್ ಭಾಗದಲ್ಲಿ ಹೆಚ್ಚಿನ ಗಳಿಕೆಯಾಗಿದ್ದು, 'ಫ್ಯಾನ್' ಚಿತ್ರಕ್ಕೆ ಪಾಕಿಸ್ತಾನದ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಮಾತ್ರವಲ್ಲದೇ ಮಲ್ಟಿಪ್ಲೆಕ್ಸ್ ಮತ್ತು ಸಾಮಾನ್ಯ ಚಿತ್ರಮಂದಿರಗಳಲ್ಲಿ ಇನ್ನೂ ಒಂದು ವಾರದ ಮಟ್ಟಿನ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆಯಂತೆ.[ಚಿತ್ರಗಳಲ್ಲಿ: ಶಾರುಖ್ 'ಫ್ಯಾನ್' ನೋಡಿ ಫ್ಯಾನ್ಸ್ ಆದ ಬಾಲಿವುಡ್ ಸ್ಟಾರ್ಸ್]

Actor Shahrukh's 'Fan' film sets new box office record in Pakistan

ಇನ್ನೂ ಬರೀ ಪ್ರೇಕ್ಷಕರಿಂದ ಮಾತ್ರವಲ್ಲದೇ, ಪಾಕಿಸ್ತಾನದ ಪತ್ರಿಕೆಗಳು ಉತ್ತಮ ವಿಮರ್ಶೆಯನ್ನು ವ್ಯಕ್ತಪಡಿಸಿವೆ. ಎಂದು ಪಾಕಿಸ್ತಾನದ ಚಿತ್ರವಿತರಕ ನದೀಮ್ ಮಂಡ್ವಿವಾಲಾ ಅವರು ತಿಳಿಸಿದ್ದಾರೆ.

English summary
King Khan hah Rukh Khan's latest film 'Fan' has set a new record for box office collections in Pakistan at Rs 50 million in the first three days of the release. The movie is directed by Maneesh Sharma.
Please Wait while comments are loading...

Kannada Photos

Go to : More Photos