»   » ಅನುಷ್ಕಾ ಶರ್ಮಾ ಹಾಟ್ ಬಿಕಿನಿ 'ವಿರಾಟ್' ರೂಪ

ಅನುಷ್ಕಾ ಶರ್ಮಾ ಹಾಟ್ ಬಿಕಿನಿ 'ವಿರಾಟ್' ರೂಪ

Written by: ಉದಯರವಿ
Subscribe to Filmibeat Kannada

ಬಾಲಿವುಡ್ ನಟಿಮಣಿಯರಿಗೆ ಸದಾ ಸುದ್ದಿಯಲ್ಲಿರುವುದು ಹೇಗೆ ಎಂಬ ಕಲೆ ಕರತಲಾಮಲಕ. ಅದರಲ್ಲೂ ತನ್ನ ಚಿಲಿಪಿಲಿ ಪ್ರೇಮಕಲಾಪಗಳಿಂದ ನಿತ್ಯ ಸುದ್ದಿಯಲ್ಲಿರುವ ಬೆಡಗಿ ಅನುಷ್ಕಾ ಶರ್ಮ. ಇತ್ತೀಚೆಗೆ ಜಿಕ್ಯೂ ಇಂಡಿಯಾ ಡಿಸೆಂಬರ್ 2014ರ ಸಂಚಿಕೆಗಾಗಿ ಗೋಲ್ಡನ್ ಬಿಕಿನಿಯಲ್ಲಿ ದರ್ಶನ ನೀಡಿದ್ದಾರೆ.

ಗೋಲ್ಡನ್ ಬಿಕಿನಿಯಲ್ಲಿ ತಮ್ಮ ಒಳಾವರಣವನ್ನು ಅನಾವರಣಗೊಳಿಸಿದ್ದಾರೆ. ಈ ಕಲರ್ ಫುಲ್ ಫೋಟೋಗಳು ಈಗ ಅನುಷ್ಕಾ ಅಭಿಮಾನಿಗಳನ್ನು ಹಾಗೂ ನೇಟಿಜನ್ ಗಳನ್ನು ಸೆಳೆಯುತ್ತಿವೆ. ಆಗಾಗ ಕ್ರಿಕೆಟಿಗ ಕೊಹ್ಲಿ ಜೊತೆಗೆ ಕಾಣಿಸಿಕೊಳ್ಳುತ್ತಾ ವಿರಾಟರೂಪ ದರ್ಶನ ಮಾಡಿಸುತ್ತಲೇ ಇದ್ದಾರೆ. [ಶೀಘ್ರ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ನಿಶ್ಚಿತಾರ್ಥ]

ಅಮೀರ್ ಖಾನ್ ಅವರ ಬಹುನಿರೀಕ್ಷಿತ 'ಪಿಕೆ' ಚಿತ್ರದಲ್ಲಿ ಅನುಷ್ಕಾ ಸದ್ಯಕ್ಕೆ ಬಿಜಿಯಾಗಿದ್ದಾರೆ. ಕೊಹ್ಲಿ ಮತ್ತು ಅನುಷ್ಕಾ ಹಾರಬದಲಾಯಿಸಿಕೊಳ್ಳುವ ಶುಭ ಗಳಿಗೆಗಾಗಿ ಕಾಯುತ್ತಿದ್ದಾರೆ. ಒಂದು ಕಡೆ ಮದುವೆಗೆ ಅಣಿಯಾಗುತ್ತಿರುವ ಅನುಷ್ಕಾ ಇನ್ನೊಂದು ಕಡೆ ಬಿಕಿನಿ ತೊಟ್ಟು ಕಾಣಿಸಿಕೊಂಡು ಹೊಸ ಚರ್ಚೆಗೆ ಗ್ರಾಸವಾಗಿದ್ದಾರೆ.

ಸಂಚಲನ ಮೂಡಿಸುತ್ತಲೇ ಇರುವ ಬೆಡಗಿ

ಸಂಚಲನ ಮೂಡಿಸುತ್ತಲೇ ಇರುವ ಬೆಡಗಿ

ಬಾಲಿವುಡ್ ಗೆ ಅಡಿಯಿಟ್ಟಾಗಿನಿಂದ ಅನುಷ್ಕಾ ಶರ್ಮಾ ಸಂಚಲನ ಮೂಡಿಸುತ್ತಲೇ ಇರುವ ಬೆಡಗಿ. ತನ್ನ ಅಂದಚೆಂದಗಳನ್ನು ಆಗಾಗ ಅಭಿಮಾನಿಗಳ ಮುಂದೆ ಈ ರೀತಿ ಪ್ರದರ್ಶಿಸುತ್ತಿದ್ದಾರೆ.

ಕ್ರಿಕೆಟ್ ಮ್ಯಾಚ್ ಗೂ ವಿಶೇಷ ಕಳೆ

ಕ್ರಿಕೆಟ್ ಮ್ಯಾಚ್ ಗೂ ವಿಶೇಷ ಕಳೆ

ಕೆಲವು ವರ್ಷಗಳಿಂದ ಕೊಹ್ಲಿ ಜೊತೆಗೆ ಜೂಟಾಟ ಆಡುತ್ತಾ, ಇಬ್ಬರೂ ಕೈಕೈ ಹಿಡಿದು ಓಡಾಡುತ್ತಾ ಕ್ರಿಕೆಟ್ ಮ್ಯಾಚ್ ಗೂ ವಿಶೇಷ ಕಳೆ ತರುತ್ತಿದ್ದಾರೆ.

ಕೇಕೆ ಶಿಳ್ಳೆಗಳ ಮೂಲಕ ಸಂಭ್ರಮ

ಕೇಕೆ ಶಿಳ್ಳೆಗಳ ಮೂಲಕ ಸಂಭ್ರಮ

ತನ್ನ ಪ್ರಿಯಕರ ಕೊಹ್ಲಿ ಆಡುವ ಮ್ಯಾಚ್ ಗಳಿಗೆ ಹಾಜರಾಗಿ...ಬಹಳ ಶ್ರದ್ಧೆಯಿಂದ ಮ್ಯಾಚ್ ನೋಡುತ್ತಾ...ಕೊಹ್ಲಿ ಶಾಟ್ ಗಳಿಗೆ ಕೇಕೆ ಶಿಳ್ಳೆಗಳ ಮೂಲಕ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.

ಕೊಹ್ಲಿ ಫ್ಲಯಿಂಗ್ ಕಿಸ್ ಗೆ ಢಮಾರ್

ಕೊಹ್ಲಿ ಫ್ಲಯಿಂಗ್ ಕಿಸ್ ಗೆ ಢಮಾರ್

ಅನುಷ್ಕಾರ ಕೈ ಸನ್ನೆಗಳಿಗೆ ಮೈದಾನದಲ್ಲಿ ವಿಹಾಟ್ ಕೊಹ್ಲಿ ವಿಜೃಂಭಿಸುತ್ತಿದ್ದಾರೆ. ಅನುಷ್ಕಾ ಕಡೆಗೆ ಬ್ಯಾಟ್ ತೋರಿಸುತ್ತಾ...ಫ್ಲಯಿಂಗ್ ಕಿಸ್ ಸಹ ಕಳುಹಿಸುತ್ತಿದ್ದಾರೆ.

ಸಖತ್ ಕುತೂಹಲ ಮೂಡಿಸಿರುವ ಚಿತ್ರ

ಸಖತ್ ಕುತೂಹಲ ಮೂಡಿಸಿರುವ ಚಿತ್ರ

ಅನುಷ್ಕಾ ಶರ್ಮಾ ಹಾಗೂ ಅಮೀರ್ ಖಾನ್ ನಟಿಸುತ್ತಿರುವ ಅದ್ದೂರಿ ಬಜೆಟ್ ಚಿತ್ರ 'ಪಿಕೆ' ಸಹ ಸಖತ್ ಕುತೂಹಲ ಮೂಡಿಸಿರುವ ಚಿತ್ರ. ಈ ಚಿತ್ರವನ್ನು ರಾಜ್ ಕುಮಾರ್ ಹಿರಾನಿ ನಿರ್ದೇಶಿಸುತ್ತಿದ್ದಾರೆ.

ಪಿಕೆ ಚಿತ್ರ ಖುಷಿ ಕೊಡುತ್ತಿದೆ

ಪಿಕೆ ಚಿತ್ರ ಖುಷಿ ಕೊಡುತ್ತಿದೆ

ಅಮೀರ್ ಖಾನ್, ರಾಜ್ ಕುಮಾರ್ ಹಿರಾನಿ ಅವರೊಂದಿಗೆ 'ಪಿಕೆ' ಚಿತ್ರದಲ್ಲಿ ಅಭಿನಯಿಸುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ ಅನುಷ್ಕಾ.

ಮಲ್ಟಿಸ್ಟಾರರ್ ಚಿತ್ರ ದಿಲ್ ಧಡಕ್ನೆ ದೋ

ಮಲ್ಟಿಸ್ಟಾರರ್ ಚಿತ್ರ ದಿಲ್ ಧಡಕ್ನೆ ದೋ

ಜೋಯಾ ಅಕ್ತರ್ ನಿರ್ದೇಶನದ 'ದಿಲ್ ಧಡಕ್ನೆ ದೋ' ಎಂಬ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಣವೀರ್ ಸಿಂಗ್, ಪ್ರಿಯಾಂಕಾ ಚೋಪ್ರಾ, ಫರ್ಹಾನ್ ಅಕ್ತರ್, ಅನಿಲ್ ಕಪೂರ್ ಅಭಿನಯಿಸುತ್ತಿದ್ದಾರೆ. ಆದರೆ ಅನುಷ್ಕಾ ಅವರಿಗಿಂತಲೂ ಪ್ರಿಯಾಂಕಾ ಅವರ ಪಾತ್ರಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

ಆ ಪಾತ್ರ ಇಷ್ಟವಾದ ಕಾರಣ ಒಪ್ಪಿಕೊಂಡೆ

ಆ ಪಾತ್ರ ಇಷ್ಟವಾದ ಕಾರಣ ಒಪ್ಪಿಕೊಂಡೆ

ಈ ಬಗ್ಗೆ ಅನುಷ್ಕಾ ಶರ್ಮಾ ಮಾತನಾಡುತ್ತಾ, "ಮಲ್ಟಿಸ್ಟಾರರ್ ಚಿತ್ರದಲ್ಲಿ ಅಭಿನಯಿಸುತ್ತಿರುವ ಕಾರಣ ನಾನೇನು ಅಭದ್ರತೆಯಿಂದ ಬಳಲುತ್ತಿಲ್ಲ. ಪ್ರಿಯಾಂಕಾ ಅವರಿಗಿಂತಲೂ ನನ್ನ ಪಾತ್ರ ಚಿಕ್ಕದು. ಆದರೂ ನಾನೇನು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ವಾಸ್ತವವಾಗಿ ಜೋಯಾ ಅಕ್ತರ್ ಈ ಪಾತ್ರದ ಬಗ್ಗೆ ಮಾತನಾಡಲು ನನ್ನ ಬಳಿ ಬಂದಾಗ ನಾನು ಒಪ್ಪಿಕೊಳ್ಳುತ್ತೇನೋ ಇಲ್ಲವೋ ಎಂದುಕೊಂಡಿದ್ದರು. ಆದರೆ ಆ ಪಾತ್ರ ಇಷ್ಟವಾದ ಕಾರಣ ಒಪ್ಪಿಕೊಂಡೆ" ಎನ್ನುತ್ತಾರೆ.

ಬಾಲಿವುಡ್ ಯಂಗ್ ಹೀರೋಗಳ ಜೊತೆಗೆ ಹೆಚ್ಚು ಕ್ಲೋಸ್

ಬಾಲಿವುಡ್ ಯಂಗ್ ಹೀರೋಗಳ ಜೊತೆಗೆ ಹೆಚ್ಚು ಕ್ಲೋಸ್

ಅನುಷ್ಕಾಗೆ ಇದುವರೆಗೂ ಕೆಲವು ಸೆಲೆಬ್ರಿಟಿಗಳ ಜೊತೆಗೆ ಸಂಬಂಧ ಇದೆ ಎಂಬ ಗುಸುಗುಸು ಕೇಳಿಬರುತ್ತಿದೆ. ಬಾಲಿವುಡ್ ಯಂಗ್ ಹೀರೋಗಳ ಜೊತೆಗೆ ಮತ್ತು ಇದೀಗ ಹೆಚ್ಚು ಕ್ಲೋಸ್ ಆಗಿರುವುದು ಕ್ರಿಕೆಟಿಗೆ ಕೊಹ್ಲಿ ಜೊತೆಗೆ.

ರಣವೀರ್ ಸಿಂಗ್ ಈಗ ಮಾಜಿ ಫ್ರೆಂಡ್

ರಣವೀರ್ ಸಿಂಗ್ ಈಗ ಮಾಜಿ ಫ್ರೆಂಡ್

ಆರಂಭದಲ್ಲಿ ರಣವೀರ್ ಸಿಂಗ್ ಜೊತೆಗೆ ಅನುಷ್ಕಾ ಹೆಸರು ಹೆಚ್ಚಾಗಿ ಕೇಳಿಬರುತ್ತಿತ್ತು. ಈಗ ವಿರಾಟ್ ಕೊಹ್ಲಿ ಜೊತೆಗೆ ಥಳುಕು ಹಾಕಿಕೊಂಡಿದೆ. ಇದಕ್ಕೂ ಮೊದಲು ಐದು ಮಂದಿ ಬಾಲಿವುಡ್ ನಟರು ಅನುಷ್ಕಾ ಬಾಯ್ ಫ್ರೆಂಡ್ಸ್ ಲಿಸ್ಟ್ ನಲ್ಲಿದ್ದರು.

ಮಾಡೆಲಿಂಗ್ ನಿಂದ ಬಂದ ಬೆಡಗಿ

ಮಾಡೆಲಿಂಗ್ ನಿಂದ ಬಂದ ಬೆಡಗಿ

ಬೆಳ್ಳಿತೆರೆಗೆ ಅಡಿಯಿಡುವುದಕ್ಕೂ ಮುನ್ನ ಅನುಷ್ಕಾ ಶರ್ಮಾ ಮಾಡೆಲಿಂಗ್ ಮಾಡುತ್ತಿದ್ದರು. ಆಗ ಜೋಹೆಬ್ ಯೂಸಪ್ ಎಂಬುವವರೊಂದಿಗೆ ಬಹಳ ಕ್ಲೋಸ್ ಆಗಿದ್ದರು. ಇಬ್ಬರೂ ಎರಡು ವರ್ಷಗಳ ಕಾಲ ಜೊತೆಯಾಗಿ ಹಿತವಾಗಿ ಅಲೆದಾಡಿದರು. ಅನುಷ್ಕಾ ಸಿನಿಮಾಗೆ ಅಡಿಯಿಟ್ಟ ಬಳಿಕ ಇಬ್ಬರ ನಡುವಿನ ಅಂತರ ಹೆಚ್ಚಾಯಿತು.

ಶಾಹಿದ್ - ಅನುಷ್ಕಾ ಚುಂಬನ ರಹಸ್ಯ

ಶಾಹಿದ್ - ಅನುಷ್ಕಾ ಚುಂಬನ ರಹಸ್ಯ

ಶಾಹಿದ್, ಅನುಷ್ಕಾ, ಇಮ್ರಾನ್ ಖಾನ್ ಅಭಿನಯದ 'ಮೇರೆ ಬ್ರದರ್ ಕಿ ದುಲ್ಹನ್' ಸಕ್ಸಸ್ ಪಾರ್ಟಿಯಲ್ಲಿ ಶಾಹಿದ್ ಹಾಗೂ ಅನುಷ್ಕಾ ಚುಂಬನ ವಿನಿಮಯ ಮಾಡಿಕೊಂಡಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು. ಆದರೆ ನಿಜವಾಗಿ ಏನು ನಡೆಯಿತು ಎಂಬುದು ಇದುವರೆಗೂ ಗೊತ್ತಾಗಿಲ್ಲ.

English summary
super hot and sexy Bikini & Lingerie photoshoot of Anushka Sharma for GQ India Magazine December 2014 month.
Please Wait while comments are loading...

Kannada Photos

Go to : More Photos