»   » ದೀಪಿಕಾ ಪಡುಕೋಣೆಗೆ ಅಲ್ಪಸ್ವಲ್ಪ ಕನ್ನಡ ಬರುತ್ತಂತೆ

ದೀಪಿಕಾ ಪಡುಕೋಣೆಗೆ ಅಲ್ಪಸ್ವಲ್ಪ ಕನ್ನಡ ಬರುತ್ತಂತೆ

Posted by:
Subscribe to Filmibeat Kannada

ಒಂದು ದಿನ ಬೆಳಿಗ್ಗೆ ಎದ್ದ ದೀಪಿಕಾ ಪಡುಕೋಣೆ ಸೀದಾ ಅಮ್ಮನ ಹತ್ತಿರ ಬಂದು ಅಮ್ಮ ನಾನು ಬ್ಯಾಡ್ಮಿಂಟನ್ ಪ್ಲೇಯರ್ ಆಗಲ್ಲ, ನಾನು ಮಾಡೆಲ್ ಆಗ್ತೀನಿ, ಸಿನಿಮಾ, ರ್ಯಾಂಪ್ ವಾಕ್ ಮಾಡ್ಬೇಕು ಅಂದ್ಕೊಂಡಿದ್ದೀನಿ ಅಂದ್ಳು. ಆಗತಾನೆ ಕಾಲೇಜು ಮೆಟ್ಟಿಲೇರಿದ್ದ ಹುಡುಗಿ ಬೆಳಿಗ್ಗೆ ಬೆಳಿಗ್ಗೆ ಏನಾದ್ರೂ ಕನಸು ಬಿದ್ದಿರ್ಬೇಕು. ಹೋಗು ಮುಖ ತೊಳ್ಕೊಂಡು ಫ್ರೆಶ್ ಆಗು ಅಂದ್ರು.

ಇತ್ತೀಚೆಗೆ ಅವಾರ್ಡ್ಸ್ ಫಂಕ್ಷನ್ನಲ್ಲಿ "2013ರ ಬಾಲಿವುಡ್ ಸ್ಟಾರ್" ಅಂತ ದೀಪಿಕಾಗೆ ಜೀ ವಾಹಿನಿ ಅವಾರ್ಡ್ ಕೊಟ್ಟಾಗ ಅಮ್ಮನ ಈ ಘಟನೆಯನ್ನ ನೆನಪಿಸಿಕೊಂಡರು. ಅಮ್ಮನ ಮುಖದಲ್ಲಿ ಮಗಳ ಕನಸು ನಿಜವಾದ ಸಂತಸವಿತ್ತು. ಅಪ್ಪ ಪ್ರಕಾಶ್ ಪಡುಕೋಣೆ ಮಗಳಿಗೆ ಅವಾರ್ಡ್ ಕೊಡ್ತಿದ್ರೆ ದೀಪಿಕಾ ಕಣ್ಣಲ್ಲಿ ಅಮ್ಮನ ಪ್ರೀತಿ ಪ್ರೋತ್ಸಾಹವನ್ನ ನೆನೆದು ಕಳೆದುಹೋಗಿದ್ರು.

ಅವತ್ತು ಹೈಸ್ಕೂಲಲ್ಲಿ ಬ್ಯಾಡ್ಮಿಂಟನ್ ಮತ್ತು ಇತರೆ ಸ್ಪೋರ್ಟ್ಸ್ಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟವನ್ನ ಪ್ರತಿನಿಧಿಸಿದ ದೀಪಿಕಾ ಬಾಲಿವುಡ್ ನ ಹಾರ್ಟ್ ಥ್ರೋಬ್ ಆಗ್ತೀನಿ ಎಂದು ಕನಸು ಮನಸ್ಸಿನಲ್ಲೂ ಊಹಿಸಿರಲಿಲ್ಲವಂತೆ. [ಬಾಲಿವುಡ್ ಕ್ವೀನ್ ದೀಪಿಕಾಗೆ ಬರ್ಥಡೇ ವಿಶ್]

ಇತ್ತೀಚೆಗೆ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿಕೊಂಡ ಖುಷಿಯಲ್ಲಿರೋ ಕರಾವಳಿಯ ಕುವರಿ ದೀಪಿಕಾ ಪಡುಕೋಣೆ ಹೇಗಿರ್ತಾರೆ ಅಂತ ನೋಡೋಣ ಬನ್ನಿ. ದೀಪಿಕಾ ಸ್ವಲ್ಪ ಸಿಡುಕಿನ ಹುಡುಗಿಯಂತೆ. ಸ್ಲೈಡ್ ಗಳನ್ನು ಸರಿಸುತ್ತಾ ಹೋದಂತೆ ಇನ್ನಷ್ಟು ವಿವರಗಳು...

ಕನ್ನಡ ಸ್ವಲ್ಪ ಬರತ್ತೆ ಆದರೆ ಮಾತನಾಡಲು ಭಯ
  

ಕನ್ನಡ ಸ್ವಲ್ಪ ಬರತ್ತೆ ಆದರೆ ಮಾತನಾಡಲು ಭಯ

ಕನ್ನಡ ಸ್ವಲ್ಪ ಬಂದರೂ ಮಾತನಾಡಿದ್ರೆ ಎಲ್ಲಿ ಎಡವಟ್ಟಾಗುತ್ತೋ ಅಂತ ಮಾತನಾಡೋಕೆ ಹೆದರ್ತಾರಂತೆ. ಇತ್ತೀಚೆಗೆ 'ರಾಮ್ ಲೀಲಾ' ಚಿತ್ರದ ಪ್ರೊಮೋಷನ್ ಗೆ ಬೆಂಗಳೂರಿಗೆ ಬಂದಿದ್ದ ದೀಪಿಕಾರನ್ನ ಕನ್ನಡದಲ್ಲಿ ಮಾತಾಡಿ ಅಂದ್ರೆ "ಐ ಲಾಸ್ಟ್ ಟಚ್" ಅಂತ ಹೇಳಿ ಇಂಗ್ಲೀಷ್ ನಲ್ಲಿ ಮಾತು ಶುರು ಮಾಡಿದ್ರು.

ಸ್ವಚ್ಛತೆಯೇ ದೀಪಿಕಾರ ಹವ್ಯಾಸ
  

ಸ್ವಚ್ಛತೆಯೇ ದೀಪಿಕಾರ ಹವ್ಯಾಸ

ತಾವಿರೋ ಸ್ಥಳವನ್ನ ಸದಾ ಸ್ವಚ್ಛವಾಗಿ ಇಟ್ಕೊಳ್ಳೋದು ದೀಪಿಕಾ ಹವ್ಯಾಸ. ಒಂದ್ ಸ್ವಲ್ಪ ವ್ಯತ್ಯಾಸವಾದ್ರೂ ಅದನ್ನ ದೀಪಿಕಾ ಇಷ್ಟಪಡೋದಿಲ್ಲ.

ಸೌತ್ ಇಂಡಿಯನ್ ಎಂದರೆ ನಾಲಿಗೆ ಕಚ್ಚಿಕೊಳ್ತಾರೆ
  

ಸೌತ್ ಇಂಡಿಯನ್ ಎಂದರೆ ನಾಲಿಗೆ ಕಚ್ಚಿಕೊಳ್ತಾರೆ

ಈ ಉಡುಪಿಯ ಪಡುಕೋಣೆಯ ಹುಡುಗಿಗೆ ಸೌತ್ ಇಂಡಿಯನ್ ತಿಂಡಿಗಳು ಅಂದ್ರೆ ತುಂಬಾನೇ ಇಷ್ಟ. ಮನೆಗೆ ಬಂದರೆ ಅಮ್ಮನ ಹತ್ತಿರ ಏನಾದ್ರೂ ಸೌತ್ ತಿಂಡಿಯನ್ನ ತಿಂತಾರೆ.

ಇಡ್ಲಿ ಸಾಂಬಾರ್ ಕೇಸರಿಬಾತ್ ಹಾಕಿಸ್ತೀನಿ ಅಂದ್ರು
  

ಇಡ್ಲಿ ಸಾಂಬಾರ್ ಕೇಸರಿಬಾತ್ ಹಾಕಿಸ್ತೀನಿ ಅಂದ್ರು

ಶಾರುಖ್ 'ಚೆನ್ನೈ ಎಕ್ಸ್ ಪ್ರೆಸ್' ಶೂಟಿಂಗ್ ಟೈಮ್ ನಲ್ಲಿ ದಕ್ಷಿಣ ಭಾರತದ ಇಡ್ಲಿ ಸಾಂಬಾರ್ ಕೇಸರಿಬಾತ್ ಬಗ್ಗೆ ಕಾಮಿಡಿ ಮಾಡಿದ್ದಕ್ಕೆ ದೀಪಿಕಾ ಶಾರುಖ್ ಬೆಂಗಳೂರಿಗೆ ಬಂದ್ರೆ ಅಮ್ಮನ ಕೈ ಅಡುಗೆ ಮಾಡಿ ತೋರಿಸ್ಬೇಕು ಅಂತ ಪ್ಲಾನ್ ಮಾಡಿದ್ದಾರೆ.

ದೀಪಾವಳಿಗೆ ಹ್ಯಾಪಿ ನ್ಯೂ ಈಯರ್
  

ದೀಪಾವಳಿಗೆ ಹ್ಯಾಪಿ ನ್ಯೂ ಈಯರ್

ಮತ್ತೆ ಶಾರುಖ್ ದೀಪಿಕಾ ಒಂದಾಗಿರೋ ಚಿತ್ರ 'ಹ್ಯಾಪಿ ನ್ಯೂ ಈಯರ್' ಶೂಟಿಂಗ್ ಹಂತದಲ್ಲಿದೆ. ದೀಪಾವಳಿಗೆ ರಿಲೀಸಾಗಲಿರೋ ಈ ಹ್ಯಾಪಿ ನ್ಯೂ ಈಯರ್ ಸಿನಿಮಾದ ಸಮಯಕ್ಕೆ ಶಾರುಖ್ ಬೆಂಗಳೂರಿಗೆ ಬಂದ್ರೆ ದೀಪಾವಳಿ ಸ್ಪೆಷಲ್ ಗ್ಯಾರಂಟಿ.

ಬ್ಯಾಕ್ ಟು ಬ್ಯಾಕ್ ಐದು ಹಿಟ್ ಕೊಟ್ಟ ಬೆಡಗಿ
  

ಬ್ಯಾಕ್ ಟು ಬ್ಯಾಕ್ ಐದು ಹಿಟ್ ಕೊಟ್ಟ ಬೆಡಗಿ

ದೀಪಿಕಾ ಪಡುಕೋಣೆ ಈಗ ಬಾಲಿವುಡ್ ನ ಸೆನ್ಸೇಷನಲ್ ಬ್ಯೂಟಿ. ದೀಪಿಕಾ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿದೆ. ಒಂದೂವರೆ ವರ್ಷದಲ್ಲಿ ಬ್ಯಾಕ್ ಟು ಬ್ಯಾಕ್ ಐದು ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ.

ರಜನಿಕಾಂತ್ ಜೊತೆಗಿನ ಕನಸು ನನಸು
  

ರಜನಿಕಾಂತ್ ಜೊತೆಗಿನ ಕನಸು ನನಸು

ಅದೆಷ್ಟೋ ಹೀರೋಯಿನ್ ಗಳ ಕನಸಾಗಿರೋ ಸೂಪರ್ ಸ್ಟಾರ್ ರಜನಿಗೆ ಜೋಡಿಯಾಗಿದ್ದಾರೆ ಈ ಬ್ಯೂಟಿ. 'ಕೊಚಾಡಿಯನ್' ಚಿತ್ರ ಕೂಡ ಸದ್ಯದಲ್ಲೇ ತೆರೆಗೆ ಬರೋಕೆ ತಯಾರಾಗ್ತಿದೆ.

English summary
Bollywood actress Deepika Padukone recently celebrates her 28th birthday (5th January, 2014). Deepika spoke a little bit of Kannada. Here are some interesting facts about the actress.
Please Wait while comments are loading...

Kannada Photos

Go to : More Photos