»   » ಕೃತಿ ಖರಬಂದ ಆಹಾ ನಿನ್ನ ಧ್ವನಿ ಏನ್ ಚೆಂದಾ......

ಕೃತಿ ಖರಬಂದ ಆಹಾ ನಿನ್ನ ಧ್ವನಿ ಏನ್ ಚೆಂದಾ......

Written by: Sonu
Subscribe to Filmibeat Kannada

ಚಿರಂಜೀವಿ ಸರ್ಜಾ ಅವರ ಜೊತೆ 'ಚಿರು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಲಗ್ಗೆ ಇಟ್ಟವರು ನಟಿ ಕೃತಿ ಖರಬಂದ. ತದನಂತರ ರಾಕಿಂಗ್ ಸ್ಟಾರ್ ಯಶ್ ಜೊತೆ 'ಗೂಗ್ಲಿ' ಚಿತ್ರದಲ್ಲಿ ಸಿಂಪಲ್ ಆಗಿ ಮಿಂಚಿ ಸದ್ದಿಲ್ಲದೇ ಕನ್ನಡದ ಚೋರರ ಹೃದಯಕ್ಕೂ ಕಾಲಿಟ್ಟರು.

'ಚಿರು', 'ಗೂಗ್ಲಿ', ಹಾಗೂ 'ಬೆಳ್ಳಿ' ಚಿತ್ರಗಳಲ್ಲಿ ಅಂದದ ಸಲ್ವಾರ್, ಸೀರೆ ಉಟ್ಟು ಚೆಂದವಾಗಿ ಕಾಣಿಸುತ್ತಿದ್ದ ಕೃತಿ ಅವರು ಬಾಲಿವುಡ್ ಗೆ ಬಲಗಾಲಿಟ್ಟು ಒಳ ಹೋಗಿದ್ದೇ ತಡ ಏಕ್ ದಂ ವರಸೆ ಬದಲಾಯಿಸಿಬಿಟ್ಟರು.[ಗರತಿ 'ಗಂಗಮ್ಮ' ಹೋಗಿ 'ಬಿಚ್ಚಮ್ಮ' ಆದ್ರಾ 'ಗೂಗ್ಲಿ' ಬೆಡಗಿ ಕೃತಿ]

ವಿಕ್ರಂ ಭಟ್ ನಿರ್ದೇಶನದ 'ರಾಝ್ ರಿಬೂಟ್' ಎಂಬ ಹಿಂದಿ ಹಾರರ್-ಥ್ರಿಲ್ಲರ್ ಸಿನಿಮಾದಲ್ಲಿ ನಟಿ ಕೃತಿ ಅವರು ಸಖತ್ ಬೋಲ್ಡ್ ಆಗಿ ಹಸಿ-ಬಿಸಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. 'ಕಿಸ್ಸರ್ ಬಾಯ್' ಇಮ್ರಾನ್ ಹಶ್ಮಿ ಅವರ ಜೊತೆ ಬೇರೆ ಡ್ಯುಯೆಟ್ ಹಾಡುತ್ತಿರುವುದರಿಂದ ಎರ್ರಾ-ಬಿರ್ರಿಯಾಗಿ ಹಾಟ್ ಲುಕ್ ನಲ್ಲಿ ಮಿಂಚಿ ಪಡ್ಡೆ ಹೈಕಳ ಮೈ ಬೆಚ್ಚಗಾಗಿಸಿದ್ದಾರೆ.

ಇತ್ತೀಚೆಗಷ್ಟೆ ಅಪಘಾತದಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡು ಮನೆಯಲ್ಲೇ ರೆಸ್ಟ್ ಮಾಡುತ್ತಿದ್ದ ಕೃತಿ ಅವರು ಇದೀಗ ಮತ್ತೆ 'ರಾಝ್ ರಿಬೂಟ್' ಚಿತ್ರದ ಕೆಲಸಗಳತ್ತ ಗಮನ ಹರಿಸಿದ್ದಾರೆ. ಮುಂದೆ ಓದಿ...

ಗುಣಮುಖರಾದ್ರು ಕೃತಿ

ಗುಣಮುಖರಾದ್ರು ಕೃತಿ

ಎರಡು ವಾರಗಳ ಹಿಂದೆ ಅಪಘಾತದಲ್ಲಿ ಕಾಲಿಗೆ ಗಾಯ ಮಾಡಿಕೊಂಡು ಸಂಪೂರ್ಣ ಬೆಡ್ ರೆಸ್ಟ್ ನಲ್ಲಿದ್ದ ನಟಿ ಕೃತಿ ಖರಬಂದ ಅವರು ಇದೀಗ ಪೂರ್ತಿ ಗುಣಮುಖರಾಗಿದ್ದು, ಬಾಕಿ ಉಳಿದಿರುವ ಸಿನಿಮಾಗಳ ಕೆಲಸಗಳತ್ತ ಗಮನ ಹರಿಸಿದ್ದಾರೆ.[ಕೃತಿ ಮುಡಿಗೇರಿದ 'ಬೆಂಗಳೂರಿಗರ ಬಹುಮೆಚ್ಚುಗೆಯ ನಟಿ' ಕಿರೀಟ]

ರಾಝ್ ಡಬ್ಬಿಂಗ್

ರಾಝ್ ಡಬ್ಬಿಂಗ್

ಗುಣಮುಖರಾಗಿ ಮತ್ತೆ ಸಿನಿಮಾದತ್ತ ಗಮನ ಹರಿಸಿರುವ ಕೃತಿ ಅವರು ಬಾಲಿವುಡ್ ನ ಚೊಚ್ಚಲ ಚಿತ್ರ 'ರಾಝ್ ರಿಬೂಟ್'ನ ಡಬ್ಬಿಂಗ್ ಕೆಲಸಗಳಲ್ಲಿ ಈಗಾಗಲೇ ತೊಡಗಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಕೃತಿ ಅವರು ತಮ್ಮ ಧ್ವನಿ ನೀಡುತ್ತಿದ್ದಾರೆ ಅನ್ನೋದು ಮತ್ತೊಂದು ವಿಶೇಷ.[ಕಿಸ್ಸರ್ ಬಾಯ್ ಜೊತೆ ಲಿಪ್ ಲಾಕ್ ಕಥೆ ಬಿಚ್ಚಿಟ್ಟ ಕೃತಿ ಖರಬಂದ]

ನಟನೆಗಿಂತ ಡಬ್ಬಿಂಗ್ ಕಷ್ಟ

ನಟನೆಗಿಂತ ಡಬ್ಬಿಂಗ್ ಕಷ್ಟ

ನಟಿ ಕೃತಿ ಅವರ ಪ್ರಕಾರ ನಟನೆ ಮಾಡುವುದಕ್ಕಿಂತ ಡಬ್ಬಿಂಗ್ ಮಾಡೋದು ತುಂಬಾ ಕಷ್ಟವಂತೆ. ಇದೇ ಮೊದಲ ಬಾರಿಗೆ 'ರಾಝ್ ರಿಬೂಟ್' ಗೆ ತಮ್ಮದೇ ಧ್ವನಿ ನೀಡಿರುವ ಕೃತಿ ಅವರು ನಟನೆ ಸುಲಭ, ಡಬ್ಬಿಂಗ್ ಕಷ್ಟ-ಕಷ್ಟ ಎಂದಿದ್ದಾರೆ. ಇಲ್ಲಿಯವರೆಗೆ ನಟಿಸಿದ ಯಾವುದೇ ಸಿನಿಮಾಗಳಿಗೆ ಕೃತಿ ತಮ್ಮ ಧ್ವನಿ ನೀಡಿಲ್ಲ, ಇದೇ ಮೊದಲು.[ಬಿಟೌನ್ ನ ಕಿಸ್ಸರ್ ಬಾಯ್ ಜೊತೆ 'ಗೂಗ್ಲಿ' ಬೆಡಗಿ ರೊಮ್ಯಾನ್ಸ್..!]

ಸೆಪ್ಟೆಂಬರ್ ನಲ್ಲಿ ರೆಡಿಯಾಗಿ

ಸೆಪ್ಟೆಂಬರ್ ನಲ್ಲಿ ರೆಡಿಯಾಗಿ

ಕೃತಿ ಅವರು ಬೋಲ್ಡ್ ಅಂಡ್ ಹಾಟ್ ಲುಕ್ ನಲ್ಲಿ ನಿಮ್ಮನ್ನು ಭಯಪಡಿಸಲು ಸೆಪ್ಟೆಂಬರ್ ತಿಂಗಳಿನಲ್ಲಿ ಥಿಯೇಟರ್ ಗೆ ಬರುತ್ತಿದ್ದಾರೆ. ಸೆಪ್ಟೆಂಬರ್ 16 ರಂದು ಇಮ್ರಾನ್ ಹಶ್ಮಿ, ಗೌರವ್ ಅರೋರ ಕಾಣಿಸಿಕೊಂಡಿರುವ 'ರಾಝ್ ರಿಬೂಟ್' ಗ್ರ್ಯಾಂಡ್ ಆಗಿ ತೆರೆಗೆ ಬರುತ್ತಿದೆ. ಅಂತೂ ಕೊನೆಗೂ ಕೃತಿ ಅವರ ಸ್ವೀಟ್ ವಾಯ್ಸ್ ಕೇಳುವ ದಿನ ಹತ್ತಿರ ಬರುತ್ತಿದೆ.

ತಮಿಳು ಚಿತ್ರದಲ್ಲಿ ಬಿಜಿ

ತಮಿಳು ಚಿತ್ರದಲ್ಲಿ ಬಿಜಿ

'ರಾಝ್ ರಿಬೂಟ್' ಡಬ್ಬಿಂಗ್ ಕಾರ್ಯದ ಜೊತೆಗೆ ತಮಿಳಿನ 'ಬ್ರೂಸ್ ಲೀ' ಚಿತ್ರದ ಶೂಟಿಂಗ್ ನಲ್ಲೂ ಬಿಜಿಯಾಗಿರುವ ಕೃತಿ ಅವರು ಸದ್ಯಕ್ಕೆ ಚೆನ್ನೈನಲ್ಲಿ ಬೀಡು ಬಿಟ್ಟಿದ್ದಾರೆ. ಕೃತಿ ಅವರಿಗೆ 'ಬ್ರೂಸ್ ಲೀ' ತಮಿಳಿನಲ್ಲಿ ಚೊಚ್ಚಲ ಸಿನಿಮಾ.['ಏನೋ ಏನೋ ಆಗಿದೆ...' ಕೃತಿಗೆ ಸಂಥಿಂಗ್ ಶುರುವಾಗಿದೆ?!]

ಜಿವಿ ಪ್ರಕಾಶ್ ಹೀರೋ

ಜಿವಿ ಪ್ರಕಾಶ್ ಹೀರೋ

ತಮಿಳು ನಟ ಜಿವಿ ಪ್ರಕಾಶ್ ಅವರ ಜೊತೆ ನಟಿ ಕೃತಿ ಅವರು 'ಬ್ರೂಸ್ ಲೀ' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕೇಡಿ ಅರುಣ್ ವಿಜಯ್

ಕೇಡಿ ಅರುಣ್ ವಿಜಯ್

ಪುನೀತ್ ರಾಜ್ ಕುಮಾರ್ ಅವರ 'ಚಕ್ರವ್ಯೂಹ' ಚಿತ್ರದಲ್ಲಿ ಟಕ್ಕರ್ ಕೊಟ್ಟಿದ ಅರುಣ್ ವಿಜಯ್ ಅವರು 'ಬ್ರೂಸ್ ಲೀ' ಯಲ್ಲಿ ಕೇಡಿಯಾಗಿ ಮಿಂಚಿದ್ದಾರೆ.

ಸೆಪ್ಟೆಂಬರ್ ನಲ್ಲಿ 'ಮಾಸ್ತಿ ಗುಡಿ'

ಸೆಪ್ಟೆಂಬರ್ ನಲ್ಲಿ 'ಮಾಸ್ತಿ ಗುಡಿ'

'ರಾಝ್' ಮತ್ತು 'ಬ್ರೂಸ್ ಲೀ' ಚಿತ್ರದ ಒಂದು ಹಂತದ ಎಲ್ಲಾ ಕೆಲಸಗಳನ್ನು ಮುಗಿಸಿ ಸೆಪ್ಟೆಂಬರ್ ತಿಂಗಳಿನಲ್ಲಿ ದುನಿಯಾ ವಿಜಯ್ ಮತ್ತು ನಾಗಶೇಖರ್ ಕಾಂಬಿನೇಷನ್ ನ 'ಮಾಸ್ತಿ ಗುಡಿ' ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮೊದಲು ಶೂಟಿಂಗ್ ಶೆಡ್ಯೂಲ್ ಮಾಡಲಾಗಿತ್ತಾದರೂ, ಕೃತಿ ಅವರಿಗೆ ಅಪಘಾತ ಆದ ಹಿನ್ನಲೆಯಲ್ಲಿ 'ಮಾಸ್ತಿ ಗುಡಿ' ಶೂಟಿಂಗ್ ರದ್ದಾಗಿತ್ತು.

English summary
Actress Kriti Kharbanda, who suffered a leg injury a couple of weeks ago. Now She was recoverd and dubs for herself in her Hindi debut 'Raaz Reboot'. Hindi Actor Imran Hashmi in the lead. The movie is directed by Vikram Bhatt.
Please Wait while comments are loading...

Kannada Photos

Go to : More Photos