twitter
    For Quick Alerts
    ALLOW NOTIFICATIONS  
    For Daily Alerts

    'ಆಯುರ್ವೇದ' ಬ್ಯೂಟಿ ರೀಚಾ ಪೊಲೀಸ್ ವಶಕ್ಕೆ!

    By ಜೇಮ್ಸ್ ಮಾರ್ಟಿನ್
    |

    ಆಯುರ್ವೇದ ಚೂರ್ಣ, ಸೌಂದರ್ಯವರ್ಧಕಗಳ ಪರ ಪ್ರಚಾರ ನಡೆಸುವ ಬಾಲಿವುಡ್ ಬೆಡಗಿ ರೀಚಾ ಛಡ್ಡಾ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ ಘಟನೆ ವರದಿಯಾಗಿದೆ.

    ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ ಮುಂಬೈಗೆ ತೆರಳಲು ಬಂದಿದ್ದ ರೀಚಾ ಅವರ ಲಗ್ಗೇಜು ಚೆಕ್ ಮಾಡಿಸಿದ ವಿಮಾನ ನಿಲ್ದಾಣ ಸಿಬ್ಬಂದಿ, ಲಗ್ಗೇಜಿನಲ್ಲಿ ಇರುವ ಆಯುರ್ವೇದ ಪುಡಿ ಬಗ್ಗೆ ಸಂಶಯ ವ್ಯಕ್ತಪಡಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

    ಎಲ್ಲಾ ಹೀರೋಯಿನ್ ಗಳು ವಿದೇಶಿ ಫೇಸ್ ಕ್ರಿಮ್ ಬಳಸುವಾಗ ರೀಚಾ ಛಡ್ಡಾ ಮಾತ್ರ ಮೊದಲಿನಿಂದಲೂ ಸಾಂಪ್ರದಾಯಿಕ ವಿಧಾನಗಳನ್ನು ಅನುಸರಿಸುತ್ತಾ ತ್ವಚೆಯ ಸೌಂದರ್ಯ ಹೆಚ್ಚಿಸಿಕೊಳ್ಳುತ್ತಾ ಬಂದಿದ್ದಾರೆ. ಆಯುರ್ವೇದ ಕ್ರಿಮ್ ಗಳ ಬಗ್ಗೆ ಪ್ರಚಾರ ನಡೆಸಿದ್ದಾರೆ. ಗ್ಯಾಂಗ್ಸ್ ಆಫ್ ವಸ್ಸೇಪುರ್, ಓಯ್ ಲಕ್ಕಿ ಓಯ್ ಸಿನಿಮಾ ಖ್ಯಾತಿಯ ರೀಚಾ ಅವರು ಏನಾದರೂ ಆಗಲಿ ಆಯುರ್ವೇದ ಪರ ನಿಲ್ಲುವುದನ್ನು ಬಿಡುವುದಿಲ್ಲ ಎಂದಿದ್ದಾರೆ. [ರೀಚಾ ಛಡ್ಡಾ ಗ್ಯಾಲರಿ ನೋಡಿ]

    Richa Chadda Detained At Delhi Airport

    ವಿಚಾರಣೆ ಸಂದರ್ಭದಲ್ಲಿ ರೀಚಾ ಬಳಿಯಿದ್ದ ಪುಡಿಯ ಚರಿತ್ರೆ, ಭೂಗೋಳ, ಉತ್ಪಾದನೆ ವಿವರ ಎಲ್ಲವನ್ನು ಸಿಬ್ಬಂದಿ ಕೇಳಿದ್ದಾರೆ. ರೀಚಾ ತನಗೆ ತಿಳಿದಿದ್ದಷ್ಟು ಹೇಳಿದ್ದಾರೆ. ಆದರೆ, ರೀಚಾ ನೀಡಿದ ಉತ್ತರರಿಂದ ತೃಪ್ತರಾಗದ ಅಧಿಕಾರಿಗಳು ಈ ಪುಡಿ ಯಾಕೋ ಮಾದಕ ದ್ರವ್ಯ, ನಿಷೇಧಿತ ಔಷಧ ಪಟ್ಟಿಗೆ ಸೇರಿದೆ ಎಂದು ವಾದಿಸಿದ್ದಾರೆ. ವಾದ -ವಿವಾದಗಳು ಸುಮಾರು 2 ಗಂಟೆಗಳ ಕಾಲ ನಡೆಯಿತು ಎಂದು ಮೂಲಗಳಿಂದ ತಿಳಿದು ಬಂದಿದೆ.

    ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ರೀಚಾ 'ನಾನು ಆಯುರ್ವೇದ ಉತ್ಪನ್ನಗಳನ್ನು ಬಹುಕಾಲದಿಂದ ಬಳಸುತ್ತಿದ್ದೇನೆ. ಮುಂಬೈ ಎಂದಿನಂತೆ ಆಯುರ್ವೇದದ ಪುಡಿಯೊಂದನ್ನು ಕೊಂಡೊಯ್ಯುತ್ತಿದ್ದೆ ಆದರೆ, ಆ ಪುಡಿ ಬಗ್ಗೆ ಸಿಬ್ಬಂದಿಗೆ ಏಕೆ ಅನುಮಾನ ಬಂತೋ ನನಗೆ ಗೊತ್ತಿಲ್ಲ. ಅಂತೂ ಅವರಿಗಿದ್ದ ಸಂಶಯ ನಿವಾರಣೆ ಮಾಡಲು ಎರಡು ಗಂಟೆ ಬೇಕಾಯಿತು. ಪುಣ್ಯಕ್ಕೆ ನನಗೆ ಫ್ಲೈಟ್ ಮಿಸ್ ಆಗಲಿಲ್ಲ ಎಂದಿದ್ದಾರೆ.

    ಈ ಹಿಂದೆ ಇದೇ ದೆಹಲಿ ವಿಮಾನ ನಿಲ್ದಾಣದಲ್ಲಿ ಐಷಾರಾಮಿ ವಸ್ತುವೊಂದನ್ನು ಹೊಂದಿದ್ದ ನಟಿ ಕಂಗನಾ ರಾನೌತ್ ಅವರನ್ನು ವಿಚಾರಣೆಗಾಗಿ ಸುಮಾರು ಎರಡೂವರೆ ಗಂಟೆಗಳ ಕೂರಿಸಲಾಗಿತ್ತು. ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಷ್ಟು ತೆರಿಗೆ ಹಣ ಕಟ್ಟಲು ಕಂಗನಾ ಬಳಿ ಹಣ ಇರಲಿಲ್ಲ ಎಂದು ನಂತರ ಬಹಿರಂಗವಾಗಿತ್ತು.

    English summary
    Ayurvedic powder for beauty use turned out to be the culprit for Richa Chadda getting detained at the Delhi airport. While returning back to Mumbai, the security officials at Delhi airport found something suspicious in her luggage and detained her.
    Thursday, June 19, 2014, 13:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X