»   » ತಿರುಪತಿ ದೇವಾಲಯದಲ್ಲೂ ಬಿಡದ ಕುಡ್ಲದ ನಟಿಯ ಸೆಲ್ಫಿ ಹುಚ್ಚು

ತಿರುಪತಿ ದೇವಾಲಯದಲ್ಲೂ ಬಿಡದ ಕುಡ್ಲದ ನಟಿಯ ಸೆಲ್ಫಿ ಹುಚ್ಚು

Posted by:
Subscribe to Filmibeat Kannada

ಮೊಬೈಲ್ ನಲ್ಲಿ ಫ್ರಂಟ್ ಕ್ಯಾಮರಾ ಅನ್ನೋದನ್ನು ಅದ್ಯಾವ ಪುಣ್ಯಾತ್ಮ ಕಂಡು ಹಿಡಿದ್ನೋ? ದೇವಾಲಯ ಅನ್ನೋದು ಇಲ್ಲಾ, ಸ್ಮಶಾನ ಅನ್ನೋದು ಇಲ್ಲಾ, ಎಲ್ಲಾ ಕಡೆ ಮಗಂದು ಸೆಲ್ಫಿ ಹುಚ್ಜು.

ಯಾವಾಗ ನಮ್ಮ ಪ್ರಧಾನಮಂತ್ರಿಗಳು ಸೆಲ್ಫಿಗೆ ಫೋಸ್ ಕೊಡಲು ಆರಂಭಿಸಿದರೋ, ಇದರ ಜನಪ್ರಿಯತೆಯ ನಾಗಾಲೋಟ ಉತ್ತುಂಗಕ್ಕೇರಲಾರಂಭಿಸಿತು.

ಸೆಲ್ಫಿ ತೆಗೆಯೋದ್ರಿಂದ ಬಡವರಿಗೆ ಊಟ, ಶಿಕ್ಷಣ ಸಿಗುತ್ತೋ ಅನ್ನೋ ರಾಜಕೀಯ ಧುರೀಣರೂ ಕಾರ್ಯಕರ್ತರ ಜೊತೆ ಸೆಲ್ಫಿ ತೆಗೆಸಿಕೊಂಡ ಫೋಟೋಗಳು ಸಾಮಾಜಿಕ ತಾಣದಲ್ಲಿ ಜಾಲಾಡಿದರೆ ಸಿಗದೇ ಇರದು.

'ಮಗಂದು ಸೆಲ್ಫಿ ಬ್ಯಾನ್ ಆಗ್ಬೇಕ್' ಎಂದು ಅಬ್ಬರಿಸಿದ್ದ ಹುಚ್ಚ ವೆಂಕಟ್ ಅವರ ಹೇಳಿಕೆಗೆ ಪೂರಕ ಎನ್ನುವಂತೆ, ಭಾರತೀಯ ಚಿತ್ರೋದ್ಯಮದ ಲೆಜೆಂಡ್ ಅಮಿತಾಬ್ ಬಚ್ಚನ್ ಕೂಡಾ ಸೆಲ್ಫಿ ಬಗ್ಗೆ ಇತ್ತೀಚೆಗೆ ಬೇಸರದ ಮಾತನ್ನಾಡಿದ್ದರು.

ವಿಚಾರಕ್ಕೆ ಬರುವುದಾದರೆ, ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ನಮ್ಮ ಕುಡ್ಲದ ಬೆಡಗಿ ತನ್ನ ಸ್ನೇಹಿತೆಯ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ.

ದೇವಾಲಯದಲ್ಲೂ ಸೆಲ್ಫಿನಾ ಎಂದು ಜಮಾಯಿಸಿದ್ದ ಭಕ್ತಾದಿಗಳು ಬೇಸರ ಮಾಡಿಕೊಳ್ಳದೇ ಖುಷಿ ಪಟ್ಟಿಕೊಂಡಿರುವುದು ವಿಶೇಷ..

ಅಮಿತಾಬ್ ಬೇಸರದ ಮಾತು

ಅಮಿತಾಬ್ ಬೇಸರದ ಮಾತು

ಅಮಿತಾಬ್ ಬಚ್ಚನ್ ಇತ್ತೀಚೆಗೆ ದೆಹಲಿಯಲ್ಲಿ ತೀರಾ ಆತ್ಮೀಯರೊಬ್ಬರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ನೆರೆದಿದ್ದ ಮೃತ ಕುಟುಂಬದ ಸದಸ್ಯರು ಸಾವಿನ ಮನೆ ಅನ್ನೋದು ನೋಡದೇ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ನಿರತರಾಗಿದ್ದರಂತೆ..

ಟೈಮ್ ಸೆನ್ಸ್ ಇಲ್ಲದವರು

ಟೈಮ್ ಸೆನ್ಸ್ ಇಲ್ಲದವರು

ಈ ಬಗ್ಗೆ ಸಾಮಾಜಿಕ ತಾಣದಲ್ಲಿ ಬೇಸರದ ಮಾತನ್ನಾಡಿದ್ದ ಅಮಿತಾಬ್, ಸ್ಮಶಾನದಲ್ಲೂ ಸೆಲ್ಫಿ ತೆಗೆದುಕೊಳ್ಳುವವರ ಬಗ್ಗೆ ನನಗೆ ತೀವ್ರ ಆಕ್ಷೇಪ ಇದೆ, ಇದೇನಾ ನಾವು ತೋರಿಸುವ ಮಾನವೀಯತೆ ಎಂದು ಸೆಲ್ಫಿ ಸಂಸ್ಕೃತಿ ಬೇಗೆ ಬೇಸರದ ಮಾತನ್ನಾಡಿದ್ದರು.

ಕುಡ್ಲದ ಪೊಣ್ಣು ಶಿಲ್ಪಾ ಶೆಟ್ಟಿ

ಕುಡ್ಲದ ಪೊಣ್ಣು ಶಿಲ್ಪಾ ಶೆಟ್ಟಿ

ಪತಿ ರಾಜ್ ಕುಂದ್ರಾ ಐಪಿಎಲ್ ವಿಚಾರದಲ್ಲಿ ಮುಖಭಂಗ ಅನುಭವಿಸಿದ ನಂತರ ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ಶಿಲ್ಪಾ ಶೆಟ್ಟಿ ಆಂಧ್ರದ ಕಾಂಗ್ರೆಸ್ ಮುಖಂಡ ಸುಬ್ಬಿರಾಮಿ ರೆಡ್ಡಿ ಪುತ್ರಿ ಪಿಂಕಿ ರೆಡ್ಡಿ ಜೊತೆ ತಿಮ್ಮಪ್ಪನ ದರುಶನಕ್ಕೆ ಬಂದಿದ್ದರು.(Image courtesy: https://twitter.com/TheShilpaShetty)

ಸೆಲ್ಫಿ ತೆಗೆದು ಖುಷಿ ಪಟ್ಟ ಸಪೂರ ರಾಣಿ

ಸೆಲ್ಫಿ ತೆಗೆದು ಖುಷಿ ಪಟ್ಟ ಸಪೂರ ರಾಣಿ

ಸುಬ್ಬಿರಾಮಿ ರೆಡ್ಡಿ ಅವರ ಪುತ್ರಿ ಪಿಂಕಿ ರೆಡ್ಡಿಯ ಜತೆ ತಿರುಮಲನ ಸನ್ನಿಧಾನಕ್ಕೆ ತೆರಳಿದ್ದ ಶಿಲ್ಪಾ ಶೆಟ್ಟಿ ಸ್ವಾಮಿಯ ದರ್ಶನ ಪಡೆದು, ತೀರ್ಥ ಪ್ರಸಾದ ಸ್ವೀಕರಿಸಿ ತದ ನಂತರ ದೇವಾಲಯದ ಆವರಣದಲ್ಲಿ ಪಿಂಕಿ ರೆಡ್ಡಿ ಜತೆ ಸೆಲ್ಫಿ ತೆಗೆದು ಖುಷಿ ಪಟ್ಟರು. (Image courtesy:https://twitter.com/TheShilpaShetty)

ಜನಜಂಗುಳಿಯಾದರೂ ಯಾರಿಗೂ ಬೇಸರವಿರಲಿಲ್ಲ

ಶಿಲ್ಪಾ ಎಂಡ್ ಪಿಂಕಿ ತಿಮ್ಮಪ್ಪನ ಸನ್ನಿಧಾನದಲ್ಲಿ ಸೆಲ್ಫಿ ತೆಗೆದುಕೊಳ್ಳಬೇಕಾದರೆ ಅಲ್ಲಿ ಸೇರಿದ್ದ ಕೆಲವು ಭಕ್ತ ಸಮುದಾಯ 'ಏಳುಕುಂಡಲವಾಡು ನಿನ್ನ ದರ್ಶನ ಯಾವ ಆಗುತ್ತೋ' ಎನ್ನುವ ಚಿಂತೆಯನ್ನು ಬದಿಗೊತ್ತಿ ಶಿಲ್ಪಾ ಶೆಟ್ಟಿಯವರನ್ನು ಸುತ್ತವರಿದಿದ್ದು ಬಹುಷ: ತಿರುಪತಿ ತಿಮ್ಮಪ್ಪನಿಗೂ ಮುಜುಗರಕ್ಕೀಡು ಮಾಡಿರಬಹುದು.

English summary
Actress Shilpa Shetty visited Tirupati temple and took self with her friend.
Please Wait while comments are loading...

Kannada Photos

Go to : More Photos