»   » ಸನ್ನಿ ಲಿಯೋನ್ ರ ಈ ವಿಡಿಯೋ ನೋಡಿದ್ದೀರಾ?

ಸನ್ನಿ ಲಿಯೋನ್ ರ ಈ ವಿಡಿಯೋ ನೋಡಿದ್ದೀರಾ?

Written by: ರವಿಕಿಶೋರ್
Subscribe to Filmibeat Kannada

ಐಸ್ ಬಕೆಟ್ ಚಾಲೆಂಜ್ ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚುಹೆಚ್ಚು ಪ್ರಚಾರ ಪಡೆಯುತ್ತಿದೆ. ಬಾಲಿವುಡ್ ಹೀರೋಗಳು, ಹೀರೋಯಿನ್ಸ್ ಎಲ್ಲರೂ ಈ ಚಾಲೆಂಜ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಪಟ್ಟಿಗೆ ತಾಜಾ ಸೇರ್ಪಡೆ ಎಂದರೆ ಒಂದು ಕಾಲದ ನೀಲಿಚಿತ್ರಗಳ ತಾರೆ ಸನ್ನಿ ಲಿಯೋನ್.

ಸನ್ನಿ ಅವರನ್ನು ಅವರ ಕುಟುಂಬಿಕರು, ಟ್ವಿಟ್ಟರ್ ಅಭಿಮಾನಿಗಳು ಐಸ್ ಬಕೆಟ್ ಚಾಲೆಂಜ್ ತೆಗೆದುಕೊಳ್ಳಲು ಹೇಳಿದಾಗ ಅವರು ಆ ಸವಾಲನ್ನು ಸ್ವೀಕರಿಸಿದರು. ಇಲ್ಲಿದೆ ನೋಡಿ ಅವರು ಎದುರಿಸಿದ ಐಸ್ ಬಕೆಟ್ ಚಾಲೆಂಜ್ ವಿಡಿಯೋ. [ಮಂಡ್ಯ ಹೈದನ ಜತೆ ಸೇಸಮ್ಮ ಸನ್ನಿ ಜಿಂಗ್ ಚಾಕ್ ಸ್ಟೆಪ್]


ತಣ್ಣಗಿನ ನೀರನ್ನು ತಲೆಯ ಮೇಲೆ ಸುರಿದುಕೊಂಡು ಸ್ವಲ್ಪ ಹೊತ್ತು ಕುಣಿದು ಕುಪ್ಪಳಿಸಿದರು ಸನ್ನಿ ಲಿಯೋನ್. ಬಳಿಕ ಗಾಯಕ ಹನಿಸಿಂಗ್ ಅವರಿಗೆ ಚಾಲೆಂಜನ್ನು ಪಾಸ್ ಮಾಡಿದರು. ಎಎಲ್ಎಸ್ (amyotrophic lateral sclerosis) ಕಾಯಿಲೆಯಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲು ನಿಧಿ ಸಂಗ್ರಹಿಸಲು ಈ ಚಾಲೆಂಜ್ ಅಮೆರಿಕಾದಲ್ಲಿ ಆರಂಭವಾಗಿ ಇದೀಗ ಜಗತ್ತಿನಾದ್ಯಂತ ಪಸರಿಸಿದೆ.

Actress Sunny Leone

ಐಸ್ ಬಕೆಟ್ ಚಾಲೆಂಜನ್ನು ಹಾಟ್ ಬೆಡಗಿ ಸನ್ನಿ ಎದುರಿಸಿ ಎಲ್ಲರ ಗಮನಸೆಳೆದಿದ್ದಾರೆ. ಅಮೆರಿಕದ ಎಎಲ್ಎಸ್ ಅಸೋಸಿಯೇಷನ್ ಗೆ ದೇಣಿಗೆ ನೀಡಲು ಒಂದು ಬಕೆಟ್ ಮಂಜುಗಡ್ಡೆ ಭರಿತ ನೀರನ್ನು ತಲೆ ಮೇಲಿಂದ ಸುರಿದುಕೊಳ್ಳುವ ಹುಚ್ಚಾಟ ಉತ್ತರಗೋಳದಲ್ಲಿ ಆರಂಭವಾಯಿತು. ಅದೀಗ ವಿಶ್ವದೆಲ್ಲೆಡೆ ಹಬ್ಬಿದೆ. ಮೊದಲಿಗೆ ಕ್ರೀಡಾಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಫೋಟೊ, ವಿಡಿಯೋ ಹಾಕಿದರು ನಂತರ ಸಿನಿಮಾ ತಾರೆಯರು ನಾಮುಂದು ತಾಮುಂದು ಎಂದು ಮುಗಿಬಿದ್ದರು.

English summary
How can the latest Western import Sunny Leone not do her bit in something as trending as Ice bucket challenge. The former adult star nominated by her family and Twitter fans took the icy cold challenge. She later nominated rapper-singer Yo Yo Honey Singh to take up the challenge.
Please Wait while comments are loading...

Kannada Photos

Go to : More Photos