twitter
    For Quick Alerts
    ALLOW NOTIFICATIONS  
    For Daily Alerts

    ಅಶ್ಲೀಲ, ಅವಾಚ್ಯ, ನಿಂದನಾ 'ಎಐಬಿ'ವಿಡಿಯೋ ಇನ್ನಿಲ್ಲ

    By ಜೇಮ್ಸ್ ಮಾರ್ಟಿನ್
    |

    ನಾಚಿಕೆ, ಮಾನ, ಮರ್ಯಾದೆ ಬಿಟ್ಟು ಸಾರ್ವಜನಿಕ ವೇದಿಕೆಯಲ್ಲಿ ಅಶ್ಲೀಲ, ಅವಾಚ್ಯ, ನಿಂದನಾ ಭಾಷೆ ಬಳಕೆ ಮಾಡಿದ ಆರೋಪ ಹೊತ್ತಿರುವ ಎಬಿಐ ನಾಕೌಟ್ ತಂಡ ಕೊನೆಗೂ ವಿವಾದಿತ ವಿಡಿಯೋವನ್ನು ಯೂಟ್ಯೂಬ್ ನಿಂದ ತೆಗೆದು ಹಾಕಿದೆ.

    ಮಹಾರಾಷ್ಟ್ರ ಸರ್ಕಾರ, ಸಂಸ್ಕೃತಿ ಇಲಾಖೆ, ಹಿಂದೂ ಪರ ಸಂಘಟನೆಗಳು, ಎಂಎನ್ಎಸ್ ನಿಂದ ತೀವ್ರ ಆಕ್ಷೇಪ ಕೇಳಿ ಬಂದ ಹಿನ್ನಲೆಯಲ್ಲಿ AIB Roast ವಿಡಿಯೋವನ್ನು ಒತ್ತಡಕ್ಕೆ ಮಣಿದು ತೆಗೆದು ಹಾಕಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಮಿಡಿಯನ್ ಗಳ ತಂಡ ಈ ಬಗ್ಗೆ ನಿಮ್ಮ ಜೊತೆ ಮತ್ತೆ ಮಾತನಾಡುತ್ತೇವೆ ಎಂದು ಹೇಳಿದ್ದಾರೆ. [ಕರಣ್, ಅರ್ಜುನ್ ಮೇಲೆ ಕೇಸ್]

    ಸೆಲೆಬ್ರಿಟಿಗಳನ್ನು ಕಾರ್ಯಕ್ರಮಕ್ಕೆ ಕರೆಸಿಕೊಂಡು ಎಫ್ ಲ್ಯಾಂಗ್ವೇಜ್ ಬಳಸಿಕೊಂಡು ಉಗಿಯುವ ಎಐಬಿ ನಾಕೌಟ್ ಶೋ ಭಾರತದಲ್ಲೇ ಪ್ರಪ್ರಥಮ ಹಾಗೂ ಅಭೂತಪೂರ್ವ ಎನಿಸಿತ್ತು. ಎಂಟು ಜನ ಪ್ಯಾನೆಲ್ ಸದಸ್ಯರು ಸೇರಿಕೊಂಡು ಚಿತ್ರ ನಿರ್ಮಾಣಗಾರ ಕರಣ್ ಜೋಹರ್, ಗುಂಡೇ ಚಿತ್ರದ ಜೋಡಿ ರಣವೀರ್ ಸಿಂಗ್ ಹಾಗೂ ಅರ್ಜುನ್ ಕಪೂರ್ ಅವರನ್ನು ಹಿಗ್ಗಾ ಮುಗ್ಗಾ ಬೈದಾಡುವ ಕಾರ್ಯಕ್ರಮ ಇದಾಗಿತ್ತು.

    ಈ ಶೋನಲ್ಲಿ ಬಳಸಿದ ಭಾಷೆ ಪಡ್ಡೆಗಳು ಹೇಳುವಂತೆ 'ಸೊಂಟದ ಕೆಳಗಿನ ಭಾಷೆ' ಯಾಗಿತ್ತು. ಸಾಲದ್ದಕ್ಕೆ ಪ್ಯಾನೆಲ್ ನಲ್ಲಿ ಅದಿತಿ ಮಿತ್ತಲ್ ಕೂಡಾ ಇದ್ದರು. ಆಲಿಯಾಭಟ್, ದೀಪಿಕಾ ಪಡುಕೋಣೆ, ಸೋನಾಕ್ಷಿ ಸಿನ್ಹಾ ಅವರಂತೂ ಬಿದ್ದು ಬಿದ್ದು ನಕ್ಕು ಸುಸ್ತಾದರು.

     ಎಐಬಿ ಹಾಗೂ ಸೆಲೆಬ್ರಿಟಿಗಳ ಮೇಲೆ ಎಫ್ ಐಆರ್

    ಎಐಬಿ ಹಾಗೂ ಸೆಲೆಬ್ರಿಟಿಗಳ ಮೇಲೆ ಎಫ್ ಐಆರ್

    ಸಾರ್ವಜನಿಕವಾಗಿ ಅದರಲ್ಲೂ ಮಹಿಳೆಯರಿದ್ದ ಕಾರ್ಯಕ್ರಮದಲ್ಲಿ M$%^&R F#$K ನಂಥ ಅವಾಚ್ಯ ಶಬ್ದಗಳನ್ನು ಬಳಸಿದ ಆರೋಪದ ಮೇಲೆ ಅರ್ಜುನ್ ಕಪೂರ್ ಹಾಗೂ ರಣವೀರ್ ಸಿಂಗ್ ಅಲ್ಲದೆ ರಾಜೀವ್ ಮಸಂದ್, ರಘು ರಾಮ್, ಅದಿತಿ ಮಿತ್ತಲ್, ಕರಣ್ ಜೋಹರ್ ಹಾಗೂ ಎಐಬಿ ನಾಕೌಟ್ ತಂಡದ ಮೇಲೆ ಮುಂಬೈನ ಬ್ರಾಹ್ಮಣ್ ಏಕ್ತಾ ಸೇವ ಸಂಸ್ಥಾ ಅಧ್ಯಕ್ಷ ಅಖಿಲೇಶ್ ತಿವಾರಿ ಅವರು ಮುಂಬೈ ಪೊಲೀಸರಿಗೆ ದೂರು ಸಲ್ಲಿಸಿದ್ದರು. ದೂರು ಸ್ವೀಕರಿಸಿದ ಪೊಲೀಸರು ಎಲ್ಲರ ಮೇಲೆ ಎಫ್ ಐಆರ್ ದಾಖಲಿಸಿದ್ದಾರೆ.

    ಎಐಬಿ ಮಾಡಿದ ತಪ್ಪೇನು? ಇದು ಸರಿಯೇ?

    ಎಐಬಿ ಮಾಡಿದ ತಪ್ಪೇನು? ಇದು ಸರಿಯೇ?

    ದೀಪಿಕಾ ಪಡುಕೋಣೆ, ಆಲಿಯಾ ಭಟ್, ಸೋನಾಕ್ಷಿ ಸಿನ್ಹಾ, ಅನುರಾಗ್ ಕಶ್ಯಪ್ ಸೇರಿದಂತೆ 4000ಕ್ಕೂ ಅಧಿಕ ಆಹ್ವಾನಿತ ಜನರಿಂದ ಕಿಕ್ಕಿರಿದ ಸಭಾಂಗಣದಲ್ಲಿ ರಣವೀರ್ ಸಿಂಗ್ ಹಾಗೂ ಅರ್ಜುನ್ ಕಪೂರ್ ರನ್ನು ಅತಿಥಿಗಳಾಗಿ ಕರೆಸಿಕೊಂಡು ಅವರ ಮೇಲೆ ಎಫ್ ಭಾಷೆ ಪ್ರಯೋಗಿಸಲಾಯಿತು.

    ವೋರ್ಲಿಯಲ್ಲಿ All India Bakchod (AIB) ಆಯೋಜನೆಯ ಕಾಮಿಡಿ ಶೋಗೆ ಕರಣ್ ಜೋಹರ್ ನಿರೂಪಕರಾಗಿದ್ದರು. ಸಭೆಯಲ್ಲಿದ್ದವರೇ ಏನು ನಡೆಯುತ್ತದೆ ಎಂಬುದು ಗೊತ್ತಿತ್ತು. ಶೋ ಮೊದಲಿಗೆ ಇದು 18+ ಎಂದು ಹೇಳಲಾಗಿತ್ತು. ಶೋ ಇಷ್ಟವಿಲ್ಲದವರು ನೋಡದಿದ್ದರೆ ಸಾಕಾಗಿತ್ತು. ಎಂದು ಸಂಸ್ಥೆ ಹೇಳಿದೆ.

    ಎಂಎನ್ಎಸ್ ಕೂಡಾ ಎಐಬಿಗೆ ಎಚ್ಚರಿಕೆ ನೀಡಿದೆ.

    ಎಂಎನ್ಎಸ್ ಕೂಡಾ ಎಐಬಿಗೆ ಎಚ್ಚರಿಕೆ ನೀಡಿದೆ.

    ಮಹಾರಾಷ್ಟ್ರದ ಸಂಸ್ಕೃತಿ ಇಲಾಖೆ ಸಚಿವ ವಿನೋದ್ ತಾವ್ಡೆ ಎಚ್ಚರಿಕೆ ನೀಡಿದ ಮೇಲೆ ಎಂಎನ್ ಎಸ್ ಎಚ್ಚರಿಕೆ ನೀಡಿ ವಿಡಿಯೋ ತೆಗೆಯದಿದ್ದರೆ ರಣವೀರ್, ಅರ್ಜುನ್, ಕರಣ್ ಚಿತ್ರಗಳು ರಿಲೀಸ್ ಆಗಲು ಬಿಡುವುದಿಲ್ಲ ಎಂದಿತ್ತು. ಬ್ರಾಹ್ಮಣ್ ಏಕ್ತಾ ಸೇವಾ ಸಂಸ್ಥಾ, ಮಹಾರಾಷ್ಟ್ರ ಸರ್ಕಾರ, ಎಂಎನ್ಎಸ್ ಜೊತೆಗೆ ಸೆನ್ಸಾರ್ ಬೋರ್ಡ್ ನ ಅಶೋಕ್ ಪಂಡಿತ್ ಅವರು ಸೆಲೆಬ್ರಿಟಿಗಳು ಹಾಗೂ ಎಐಬಿ ವಿರುದ್ಧ ಕಿಡಿಕಾರಿದ್ದರು.

    ಕರಣ್ ಮೇಲೆ ಕೆಂಡ ಕಾರಿದ ಪಂಡಿತ್

    ಕರಣ್ ಜೋಹರ್ ವಿರುದ್ಧ ಕಿಡಿಕಾರಿದ ಅಶೋಕ್ ಪಂಡಿತ್, ಎಐಬಿ ಪೋರ್ನ್ ಶೋ ಎಂದು ಜರೆದಿದ್ದಾರೆ. ಅವರ ಟ್ವೀಟ್ ಓದಿ

    We Stand By AIB Knockout ಟ್ರೆಂಡಿಂಗ್

    ಧರ್ಮ, ಜಾತಿ ನಿಂದನೆ ಮಾಡಲಿಲ್ಲ. ಅತಿಥಿಗಳ ಅಥವಾ ಸೆಲೆಬ್ರಿಟಿಗಳ ಒಪ್ಪಿಗೆ ಪಡೆದು ಅವರನ್ನು ಬೈಯಲಾಯಿತು. ಅದನ್ನು ನೋಡಿದ ಜನ ಕೂಡಾ ಸುಮ್ಮನಿದ್ದರು. ಯಾರೂ ಈ ವಿಡಿಯೋ ನೋಡಿ ಎಂದು ಬಲವಂತ ಮಾಡಿಲ್ಲ. ಅದರೂ ಈ ನಿರ್ಬಂಧ ಏಕೆ?

    ಪೊಲೀಸರ ಪ್ರಕಾರ ಅಶ್ಲೀಲತೆಗೆ ಅನುಮತಿ ಇಲ್ಲ

    ಪೊಲೀಸರ ಪ್ರಕಾರ ಅಶ್ಲೀಲತೆಗೆ ಅನುಮತಿ ಇಲ್ಲ

    ಪೋರ್ನ್ ನೋಡುವುದು ತಪ್ಪಲ್ಲ ಅದರೆ, ಸಾರ್ವಜನಿಕವಾಗಿ ಪೋರ್ನ್ ಪ್ರದರ್ಶಿಸಿದರೆ ಪೊಲೀಸರ ಅತಿಥಿಗಳಾಗಬೇಕಾಗುತ್ತದೆ. ಅದೇ ರೀತಿ ಈ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 294 ಪ್ರಕಾರ ಪಬ್ಲಿಕ್ ಆಗಿ ಕಿಸ್ ಮಾಡುವುದರಿಂದ ಹಿಡಿದು ಲೈಂಗಿಕ ಕಿರುಕುಳ, ಅಶ್ಲೀಲ ಪದ ಪ್ರಯೋಗ, ನಿಂದನೆ ಎಲ್ಲವೂ ಅಕ್ಷಮ್ಯವಾಗುತತ್ದೆ. ಹೀಗಾಗಿ ಕಾಮಿಡಿ ಶೋ 18+ ಆದರೂ ಅನುಮತಿ ನೀಡುವ ಮುನ್ನ ಎಚ್ಚರಿಕೆ ವಹಿಸಬೇಕಿತ್ತು.

    English summary
    The members of expletive-laced comedy show ‘AIB Roast’ have removed their latest three part video from Youtube after it sparked a controversy for obscene language and content.
    Wednesday, February 4, 2015, 13:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X