»   » ಖ್ಯಾತ ನಿರ್ದೇಶಕ ಭಟ್ಟರ ಮಗಳ ರಂಗೀಲಾ ಚಿತ್ರಗಳು!

ಖ್ಯಾತ ನಿರ್ದೇಶಕ ಭಟ್ಟರ ಮಗಳ ರಂಗೀಲಾ ಚಿತ್ರಗಳು!

Written by: ರವಿಕಿಶೋರ್
Subscribe to Filmibeat Kannada

ಪ್ರಸ್ತುತ ಚಿತ್ರರಂಗದಲ್ಲಿ ಹೀರೋ, ಹೀರೋಯಿನ್, ನಿರ್ದೇಶಕ, ನಿರ್ಮಾಪಕರ ವಾರಸತ್ವ ಜೋರಾಗಿಯೇ ನಡೆಯುತ್ತಿದೆ. ಅದು ಸ್ಯಾಂಡಲ್ ವುಡ್ ನಿಂದ ಹಾಲಿವುಡ್ ತನಕ ಹಬ್ಬಿರುವುದು ಗೊತ್ತೇ ಇದೆ. ಈಗ ಖ್ಯಾತ ನಿರ್ದೇಶಕ ಮಹೇಶ್ ಭಟ್ ಅವರ ಪುತ್ರಿ ಅಲಿಯಾ ಭಟ್ ಬಾಲಿವುಡ್ ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ.

ಕಳೆದ ವರ್ಷ ಬಂದ 'ಸ್ಟುಡೆಂಟ್ ಆಫ್ ದ ಇಯರ್' ಚಿತ್ರದ ಮೂಲಕ ಬಾಲಿವುಡ್ ಗೆ ಪ್ರವೇಶ ಪಡೆದಿದ್ದರು. ತಮ್ಮ ಚೊಚ್ಚಲ ಚಿತ್ರದ ಮೂಲಕವೇ ಎಲ್ಲರ ಗಮನಸೆಳೆದಿದ್ದರು. ಆ ಚಿತ್ರದ ಬಳಿಕ ಫ್ಯಾಷನ್ ಶೋಗಳು, ಮ್ಯಾಗಜಿನ್ ಗಳಲ್ಲಿ ಹಾಟ್ ಆಗಿ ಕಾಣಿಸಿಕೊಂಡು ಭಾರಿ ಸದ್ದು ಮಾಡಿದರು.

ಸ್ಟಾರ್ ಡೈರೆಕ್ಟರ್ ಮಗಳಾದ ಕಾರಣ ಅವಕಾಶಗಳು ಸುನಾಯಾಸವಾಗಿ ಬಂದವು. ಹಾಗಂತ ಈಕೆಗೆ ಪ್ರತಿಭೆ ಇಲ್ಲ ಎಂದಲ್ಲ. ಇತ್ತೀಚೆಗೆ ಯಾವುದೇ ಕಾರ್ಯಕ್ರಮಕ್ಕೆ ಬಂದರೂ ಶಾರ್ಟ್ಸ್ ನಲ್ಲಿ ಬಂದು ಎಲ್ಲರ ಕಣ್ಣು ಕುಕ್ಕುತ್ತಿದ್ದಾರೆ. ಫೋಟೋಗ್ರಾಫರ್ಸ್ ಅಲಿಯಾ ಅಂದಚೆಂದಗಳನ್ನು ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಬಂಧಿಸುತ್ತಿದ್ದಾರೆ. ಇತ್ತೀಚೆಗೆ ಆಕೆ 'ಹಲೋ' ಮ್ಯಾಗಜಿನ್ ನಲ್ಲಿ ಕಂಡುಬಂದಿದ್ದು ಹೀಗೆ...

ಎಲ್ಲರ ಕಣ್ಣು ಕುಕ್ಕಿದ ಅಲಿಯಾ ಭಟ್

ಎಲ್ಲರ ಕಣ್ಣು ಕುಕ್ಕಿದ ಅಲಿಯಾ ಭಟ್

ಹಲೋ ಮ್ಯಾಗಜಿನ್ ನಲ್ಲಿ ತಮ್ಮ ತಾಜಾ ತಾಜಾ ಚಿತ್ರಗಳ ಮೂಲಕ ಎಲ್ಲರ ಕಣ್ಣು ಕುಕ್ಕಿದ್ದಾರೆ ಅಲಿಯಾ ಭಟ್. ವಯಸ್ಸು ಕಡಿಮೆ ಇದ್ದರೂ ಸಾಕಷ್ಟು ನುರಿತ ರೂಪದರ್ಶಿಯರೂ ನಾಚುವಂತೆ ಪೋಸು ನೀಡಿದ್ದಾರೆ.

ಮೊದಲ ಚಿತ್ರ ಸ್ಟುಡೆಂಟ್ ಆಫ್ ದಿ ಇಯರ್

ಮೊದಲ ಚಿತ್ರ ಸ್ಟುಡೆಂಟ್ ಆಫ್ ದಿ ಇಯರ್

ಸ್ಟುಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಅಡಿಯಿಟ್ಟ ಅಲಿಯಾ ಎಲ್ಲರ ಗಮನಸೆಳೆದರು. ಕರಣ್ ಜೋಹರ್ ಚಿತ್ರದ ನಾಯಕ ನಟ. ಧರ್ಮಾ ಪ್ರೊಡಕ್ಷನ್ಸ್, ಶಾರುಖ್ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್ ಟೈನ್ ಮೆಂಟ್ ಬ್ಯಾನರ್ ನಲ್ಲಿ ಈ ಚಿತ್ರ ನಿರ್ಮಾಣವಾಗಿತ್ತು.

ಚಿತ್ರ ಸೋತರೂ ಅವಕಾಶಗಳಲ್ಲಿ ಹಿಂದೆ ಬೀಳಲಿಲ್ಲ

ಚಿತ್ರ ಸೋತರೂ ಅವಕಾಶಗಳಲ್ಲಿ ಹಿಂದೆ ಬೀಳಲಿಲ್ಲ

ಸ್ಟುಡೆಂಟ್ ಆಫ್ ದ ಇಯರ್ ಚಿತ್ರ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹೇಳಿಕೊಳ್ಳುವಂತಹ ಸದ್ದು ಮಾಡದಿದ್ದರೂ ಅಲಿಯಾಗೆ ಸಾಕಷ್ಟು ಅವಕಾಶಗಳಂತೂ ಸಿಕ್ಕಿದವು. ಸದ್ಯಕ್ಕೆ ಅಲಿಯಾ ಇಂತಿಯಾಜ್ ಅಲಿ ನಿರ್ದೇಶನದ ಹೈವೇ, ಅಭಿಷೇಕ್ ವರ್ಮನ್ ನಿರ್ದೇಶನದ 2 ಸ್ಟೇಟ್ಸ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಹೈವೇ ಚಿತ್ರದಲ್ಲೂ ಹಾಟ್ ಅಲಿಯಾ ಭಟ್

ಹೈವೇ ಚಿತ್ರದಲ್ಲೂ ಹಾಟ್ ಅಲಿಯಾ ಭಟ್

ಇನ್ನು 'ಹೈವೇ' ಚಿತ್ರದ ವಿಚಾರಕ್ಕೆ ಬಂದರೆ ಈ ಚಿತ್ರದಲ್ಲಿ ಅಲಿಯಾ ಭಟ್ ತನಗಿಂತಲೂ ದೊಡ್ಡವರಾದ ರಣದೀಪ್ ಹೂಡಾತೋ ರೊಮ್ಯಾನ್ಸ್ ಮಾಡುತ್ತಾರೆ. ಎ.ಆರ್.ರೆಹಮಾನ್ ಸಂಗೀತ ನಿರ್ದೇಶನದ ಈ ಚಿತ್ರ ಡಿಸೆಂಬರ್ ನಲ್ಲಿ ತೆರೆ ಕಾಣಲಿದೆ.

2 ಸ್ಟೇಟ್ಸ್ ಚಿತ್ರದಲ್ಲೂ ಮಸ್ತ್ ರೋಲ್

2 ಸ್ಟೇಟ್ಸ್ ಚಿತ್ರದಲ್ಲೂ ಮಸ್ತ್ ರೋಲ್

2 ಸ್ಟೇಟ್ಸ್ ಚಿತ್ರಕ್ಕೆ ಅಭಿಷೇಕ್ ವರ್ಮನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಾಜಿದ್ ನಡಿಯಾ ವಾಲಾ, ಕರಣ್ ಜೋಹರ್ ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರವಿದು. ಅರ್ಜುನ್ ಕಪೂರ್ ನಾಯಕ ನಟ. ಏಪ್ರಿಲ್ ನಲ್ಲಿ ಈ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ.

English summary
Alia Bhatt Hello Magazine September 2013 Photoshoot. Alia Bhatt plays the perfect after-party ingenue for this glam shoot in our September issue. Check our behind the scenes coverage of her striking a pose at the Four Seasons, Mumbai.
Please Wait while comments are loading...

Kannada Photos

Go to : More Photos