»   » ಪ್ರಚಾರ ಬಯಸಿ ಅಪಪ್ರಚಾರ ಗಳಿಸಿದ ಅಮೀಷಾ ಪಟೇಲ್

ಪ್ರಚಾರ ಬಯಸಿ ಅಪಪ್ರಚಾರ ಗಳಿಸಿದ ಅಮೀಷಾ ಪಟೇಲ್

Posted by:
Subscribe to Filmibeat Kannada
ಬಾಲಿವುಡ್ ನಟಿ ಅಮೀಷಾ ಕಡೆಯಿಂದ ಬಂದಿದ್ದ ನ್ಯೂಸ್ 'ಠುಸ್...' ಆಗಿದೆ. ತಾವು ಮುಂಬೈನ ಜುಹು ಏರಿಯಾದಲ್ಲಿ ಫ್ಲಾಟ್ ಒಂದನ್ನು ಖರೀದಿ ಮಾಡಿದ್ದಾಗಿ ನಟಿ ಅಮೀಷಾ ಪಟೇಲ್ ಸುದ್ದಿಯನ್ನು ತೇಲಿಬಿಟ್ಟಿದ್ದರು. ಆ ಸುದ್ದಿ ಎಲ್ಲಾ ಕಡೆ ಹರಿದಾಡಿಕೊಂಡು ಅದೇ ಮನೆಯ ಓನರ್ ಕಿವಿಗೂ ಬಿದ್ದಿದೆ. ತಕ್ಷಣವೇ ಮಾಲೀಕರ ಕಡೆಯಿಂದ, ಈ ಸುದ್ದಿ ಸುಳ್ಳೆಂದು ಬಂದಿರುವ ಇನ್ನೊಂದು ಸುದ್ದಿಯೀಗ ಎಲ್ಲೆಡೆ ಪ್ರಚಾರ ಪಡೆಯುತ್ತಿದೆ.

ಒಂದು ಕಾಲದಲ್ಲಿ ಬಾಲಿವುಡ್ ಚಿತ್ರಗಳಲ್ಲಿ ನಟಿಸಿ ತಕ್ಕಮಟ್ಟಿಗೆ ಹೆಸರು, ಹಣ ಸಂಪಾದಿಸಿದ್ದ ನಟಿ ಅಮೀಷಾಗೆ ಇದ್ದಕ್ಕಿದ್ದಂತೆ ಪ್ರಚಾರದ ಹುಚ್ಚು ಅಮರಿಕೊಂಡಿತೋ ಏನೋ! ಜುಹುವಿನಲ್ಲಿರುವ ಅಮಿತಾಬ್ ಬಚ್ಚನ್ ಬಂಗಲೆ ಸಮೀಪ ಬಲಪಕ್ಕದಲ್ಲಿ ತಾನು 4000 ಸ್ವ್ಕೇರ್ ಫೀಟ್ ಫ್ಲಾಂಟೊಂದನ್ನು ಖರೀದಿಸಿದ್ದಾಗಿ ಹೇಳಿಕೊಂಡು ತಿರುಗಾಡಿದ್ದಾರೆ. ಅದು ಕಿವಿಗೆ ಬಿದ್ದಾಗ ಆ ಆಸ್ತಿಯ ಮಾಲೀಕರಿಗೆ ಹಾರ್ಟ್ ಫೇಲ್ ಆಗೋದೊಂದೇ ಬಾಕಿ!

ನಂತರ ವಿಚಾರಿಸಲಾಗಿ ತಿಳಿದು ಬಂದ ಸಂಗತಿಯೆಂದರೆ, ಅಮೀಷಾ ಫ್ಲಾಟನ್ನು ತೆಗೆದುಕೊಂಡಿರುವುದೇನೋ ಹೌದು. ಆದರೆ ಅದನ್ನು ಖರೀದಿಸಿಲ್ಲ, ಬದಲಾಗಿ ಬಾಡಿಗೆಗೆ ಪಡೆದಿದ್ದಾರೆ ಅಷ್ಟೇ. ಅದನ್ನೇ ಯಾವ ಮೂಡಿನಲ್ಲಿ ಖರೀದಿ ಮಾಡಿದ್ದೇನೆ ಎಂದುಬಿಟ್ಟರೋ ಏನೋ, ಆಗಬಾರದ ಅನಾಹುತ ಆಗಿದೆ. ಪ್ರಚಾರಕ್ಕೆ ಬದಲು ಅಮೀಷಾ ಪಟೇಲ್ ಅವರಿಗೆ ಅಪಪ್ರಚಾರ ಸಿಕ್ಕಿದೆ.

ಈ ಬಗ್ಗೆ ಅಮೀಷಾ ಸಹೋದ್ಯೋಗಿಯೊಬ್ಬರು "ಸಿನಿಮಾ ಉದ್ಯಮದಲ್ಲಿ ಇಂತಹ ಹೇಳಿಕೆಗಳು ಹಾಗೂ ಗಾಸಿಪ್ ಗಳು ತೀರಾ ಸಾಮಾನ್ಯ. ನಾವೇನೂ ಅಂತಹ ಯಾವ ದೊಡ್ಡ ತಪ್ಪನ್ನೂ ಮಾಡಿಲ್ಲ. ಫ್ಲಾಟ್ ತೆಗೆದುಕೊಂಡಿದ್ದೇವೆ ಎಂದಿದ್ದು ಹೌದು, ಆದರೆ ಯಾರಿಗೂ ಖರೀದಿಸಿದ್ದೇವೆ ಎಂದಾಗಲೀ, ಬಾಡಿಗೆಗೆ ಪಡೆದಿದ್ದೇವೆ ಎಂದಾಗಲೀ ವಿವರಿಸಿರಲಿಲ್ಲ" ಎಂದಿದ್ದಾರೆ. ಒಟ್ಟಿನಲ್ಲಿ ಇದೀಗ ಬೇಡಿಕೆಯಿಲ್ಲದ ಅಮೀಷಾ, ಪ್ರಚಾರಕ್ಕಾಗಿ ಈ ರೀತಿ ಮಾಡಿರಬಹುದು ಎಂಬುದು ಬಾಲಿವುಡ್ ಪಂಡಿತರ ಲೆಕ್ಕಾಚಾರ. (ಏಜೆನ್ಸೀಸ್)

English summary
Ameesha Patel said that she has purchased a flat, right next to Amitabh Bachchan's bungalow Prateeksha. But Ameesha lied about the flat for publicity.
Please Wait while comments are loading...

Kannada Photos

Go to : More Photos