»   » ಬಿಗ್ ಬಿ ಅಮಿತಾಬ್ ಗೆ ಎಪ್ಪತ್ತು ಲಕ್ಷ ಫಾಲೋವರ್ಸ್

ಬಿಗ್ ಬಿ ಅಮಿತಾಬ್ ಗೆ ಎಪ್ಪತ್ತು ಲಕ್ಷ ಫಾಲೋವರ್ಸ್

Posted by:
Subscribe to Filmibeat Kannada

ಭಾರತದ ಜನಸಂಖ್ಯೆ ನೂರು ಕೋಟಿ ಗಡಿ ದಾಟಿ ಚೀನಾ ದೇಶದ ಜನಸಂಖ್ಯೆಗೆ ಹತ್ತಿರವಾಗುತ್ತಿದೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿಮಾನಿಗಳ ಸಂಖ್ಯೆಯೂ ಕೋಟಿಗಳಲ್ಲೇ ಇದೆ. ಈಗವರ ಟ್ವಿಟ್ಟರ್ ಅಭಿಮಾನಿಗಳ ಸಂಖ್ಯೆ ಎಪ್ಪತ್ತು ಲಕ್ಷಕ್ಕೆ ತಲುಪಿದೆ.

ಕಾಕತಾಳೀಯ ಎಂಬಂತೆ ಎಪ್ಪತ್ತರ ಹರೆಯದ ಅಮಿತಾಬ್ ಬಚ್ಚನ್ ಅವರಿಗೆ ಟ್ವಿಟ್ಟರ್ ನಲ್ಲಿ 70 ಲಕ್ಷದ ಫಾಲೋವರ್ಸ್ ಇರುವುದು ವಿಶೇಷ. ಬಿಗ್ ಬಿ ಇದುವರೆಗೂ 26,857 ಟ್ವೀಟ್ಸ್ ಮಾಡಿದ್ದಾರೆ. ಅಮಿತಾಬ್ ರನ್ನು 70 ಲಕ್ಷ ಮಂದಿ ಫಾಲೋ ಮಾಡುತ್ತಿದ್ದರೆ, ಅವರು ಕೇವಲ 840 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ.


ಈ ಇಳಿವಯಸ್ಸಿನಲ್ಲೂ ಅಮಿತಾಬ್ ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಆಕ್ಟೀವ್ ಆಗಿದ್ದು, ಇಂದಿನ ಜಮಾನಾ ನಾಯಕರಿಗೂ ಅಚ್ಚರಿ ಉಂಟು ಮಾಡುತ್ತಿದ್ದಾರೆ. ಅದೆಷ್ಟೋ ಯುವ ಪೀಳಿಗೆ ನಟರೂ ಟ್ವಿಟ್ಟರ್ ನಲ್ಲಿದ್ದರೂ ಅಮಿತಾಬ್ ಎನರ್ಜಿಗೆ ಅವರು ಬೆರಗಾಗದೆ ಇರಲ್ಲ.

ಈ ಬಗ್ಗೆ ಟ್ವೀಟಿಸಿರುವ ಅಮಿತಾಬ್, "ಟ್ವಿಟ್ಟರ್ ನಲ್ಲಿ 70 ಲಕ್ಷ ಪ್ಲಸ್ ಫಾಲೋವರ್ಸ್, ಎಲ್ಲರಿಗೂ ಥ್ಯಾಂಕ್ಸ್" ಎಂದಿದ್ದಾರೆ. ಬಾಲಿವುಡ್ ಚಿತ್ರರಂಗ ಆಗಬಹುದು, ಭಾರತೀಯ ಸಿನಿಮಾ ಆಗಬಹುದು. ತಮಗೆ ಅನ್ನಿಸಿದ್ದನ್ನು ಸದಾ ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುತ್ತಾರೆ ಅಮಿತಾಬ್.

ಬ್ಲಾಗ್ ಬರೆಯುವುದರಲ್ಲೂ ಆಕ್ಟೀವ್ ಆಗಿರುವ ಅಮಿತಾಬ್ ಅವರು ಟ್ವಿಟ್ಟರ್ ನಲ್ಲಿ ಜನರಲ್ ಟಾಪಿಕ್ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೊರಹಾಕುತ್ತಿರುತ್ತಾರೆ. ಶೀಘ್ರದಲ್ಲೇ ಅವರ ಫಾಲೋವರ್ಸ್ ಸಂಖ್ಯೆ ಒಂದು ಕೋಟಿ ಮುಟ್ಟುವ ನಿರೀಕ್ಷೆ ಇದೆ. (ಏಜೆನ್ಸೀಸ್)

English summary
Big B Amitabh Bachchan, the star and acting legend has now hit a 7 Million mark on Twitter, a social micro blogging site. Amitabh, who is 71 years old now, has 7 million followers, follows 840 people and has tweeted 26,857 tweets so far.
Please Wait while comments are loading...

Kannada Photos

Go to : More Photos