»   » ಅಮಿತಾಬ್ ಬಚ್ಚನ್ ಕೆಬಿಸಿ 6 ಗೆಟಪ್ ಬಹಿರಂಗ!

ಅಮಿತಾಬ್ ಬಚ್ಚನ್ ಕೆಬಿಸಿ 6 ಗೆಟಪ್ ಬಹಿರಂಗ!

Posted by:
Subscribe to Filmibeat Kannada

ಪೋಲ್ ಒಂದರ ಸದ್ಯದ ಸಮೀಕ್ಷೆ ಪ್ರಕಾರ, ಅಮಿತಾಬ್ ಬಚ್ಚನ್ ಅತ್ಯಂತ ಚೆನ್ನಾಗಿ ಡ್ರೆಸ್ ಮಾಡಿಕೊಳ್ಳುವ ಬಾಲಿವುಡ್ ಸೆಲೆಬ್ರಿಟಿ. ಈ ವಿಷಯ ಜಗಜ್ಜಾಹೀರಾದ ಬೆನ್ನಲ್ಲೇ, ಅವರು ಕೆಬಿಸಿ 6 ಕಾರ್ಯಕ್ರಮದ ಫೋಟೋ ಶೂಟ್ ನಲ್ಲಿ ತೆಗೆಸಿಕೊಂಡ ಫೋಟೋ ಟ್ವಿಟ್ಟರ್ ನಲ್ಲಿ ಲೀಕ್ ಆಗಿದೆ. ಆ ಫೋಟೋಗಳು ಪೋಲ್ ನಲ್ಲಿ ಬಂದ ಸುದ್ದಿಗೆ ಪುಷ್ಟಿಕೊಡುವಂತಿದೆ.


ಫೆಬ್ರವರಿಯಲ್ಲಿ ಕಿಬ್ಬೊಟ್ಟೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಬಿಗ್ ಬಿ, ಆರೋಗ್ಯದಲ್ಲಿ ಸುಧಾರಣೆ ಮಾಡಿಕೊಂಡು ಇದೀಗ ಮತ್ತೆ ಕ್ಯಾಮರಾ ಮುಂದೆ ನಿಲ್ಲುತ್ತಿದ್ದಾರೆ. ಆಶ್ಚರ್ಯವೆಂದರೆ, ಮೊದಲಿಗಿಂತ ಹೆಚ್ಚು ಫಿಟ್ ಆಗಿ ಕಾಣುವ ಅಮಿತಾಬ್ ಫೋಟೋ ಶೂಟ್ ಪ್ರಪಂಚದಾದ್ಯಂತ ಎಲ್ಲರ ಗಮನಸೆಳೆಯಲಿದೆ ಎನ್ನಲಾಗಿದೆ. ಟ್ವಿಟ್ಟರ್ ನಲ್ಲಿ ಲೀಕಾದ ಫೋಟೋವಂತೂ ಬಹಳಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದ್ದು ಸುಳ್ಳಲ್ಲ.

ಕೆಬಿಸಿ 6 ಕುರಿತು ಅಮಿತಾಬ್, "ಅವಿನಾಶ್ ಗೌರೀಕರ್ ಜೊತೆ ಕೆಬಿಸಿ 6 ಗಾಗಿ ಇನ್ನೂ ಫೋಟೋ ಶೂಟ್ ನಡೆಯುತ್ತಿದೆ. ಗೌರೀಶ್ ಪ್ರತಿಭಾವಂತ ಹಾಗೂ ಹಾಸ್ಯಪ್ರಜ್ಞೆಯಿರುವ ವ್ಯಕ್ತಿ. " ಎಂದು ಹೊಗಳಿದ್ದಾರೆ. ಅಷ್ಟೇ ಅಲ್ಲ, "ರೋಹಿತ್ ಬಾಲ್ ಅವರ ಸ್ಟೈಲಿಶ್ ಫೋಟೋ ಶೂಟ್ ಪ್ರೊಮೋಗಳು ಸದ್ಯದಲ್ಲೇ ಕೆಬಿಸಿ 6 ಕಾರ್ಯಕ್ರಮ ರಿಜಿಸ್ಟ್ರೇಶನ್ ಪ್ರಕ್ರಿಯೆಗೆ ಮುನ್ನುಡಿ ಬರೆಯಲಿವೆ. ಬಹುಶಃ ಮೆ 28ಕ್ಕೆ ರಿಜಿಸ್ಟ್ರೇಶನ್ ಪ್ರಾರಂಭವಾಗಲಿದೆ" ಎಂದು ಹೇಳಿ ಎಲ್ಲರಿಗೂ ಪುಳಕ ಮೂಡಿಸಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Amitabh Bachchan recently did a photo shoot for KBC 6. And he posted photos of his look in the game show Kaun Banega Crorepati on Twitter.
Please Wait while comments are loading...

Kannada Photos

Go to : More Photos