ಅಮಿತಾಬ್ ಬಚ್ಚನ್ ಹಳೆ ಫೋಟೋ ಆಲ್ಬಂ ನೋಡಿ

Posted by:
Give your rating:

ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ 70ನೇ ವಸಂತಕ್ಕೆ ಅಡಿಯಿಟ್ಟಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಬಾಲಿವುಡ್ ತಾರೆಗಳು ಟ್ವಿಟ್ಟರ್ ನಲ್ಲಿ ಶುಭಾಶಯಗಳ ಮಳೆಗರೆದಿದ್ದಾರೆ. ಚಿರಂಜೀವಿ, ರಜನಿಕಾಂತ್ ಸೇರಿದಂತೆ ಹಲವು ದಕ್ಷಿಣ ತಾರೆಗಳು ಭೇಟಿ ನೀಡಿ ಖುದ್ದಾಗಿ ಬಿಗ್ ಬಿಗೆ ಶುಭಕೋರಿದ್ದಾರೆ.

ಪೂನಂ ಪಾಂಡೆ ಸೇರಿದಂತೆ ಹಲವು ಬಾಲಿವುಡ್ ತಾರೆಗಳು ಟ್ವಿಟ್ಟರ್ ನಲ್ಲಿ ಬಿಗ್ ಬಿಗೆ ಹ್ಯಾಪಿ ಬರ್ತ್ ಡೇ ತಿಳಿಸಿದ್ದಾರೆ. ಪೂನಂ ಪಾಂಡೆ ಈ ಬಾರಿ ರೊಚ್ಚಿಗೆದ್ದು ಯಾವುದೇ ಎಡವಟ್ಟು ಮಾಡಿಕೊಂಡಿಲ್ಲ. ಈಕೆ ಅಮಿತಾಬ್ ರ ಹುಟ್ಟುಹಬ್ಬಕ್ಕೂ ಎಲ್ಲಿ ನಗ್ನ ಚಿತ್ರಗಳ ಮೂಲಕ ಶುಭಹಾರೈಸುತ್ತಾರೋ ಎಂದು ಎಲ್ಲರೂ ಕಂಗಾಲಾಗಿದ್ದರು.

ಆದರೆ ಪೂನಂ ಆ ರೀತಿ ಮಾಡದೆ ಅಮಿತಾಬ್ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ. "ಸರ್ ನಿಮ್ಮ ಆರೋಗ್ಯ ಹಾಗೂ ಸುಖಸಂತೋಷಗಳು ಇನ್ನೂ ಹೆಚ್ಚಾಗಲಿ" ಎಂದು ಪೂನಂ ಹಾರೈಸಿದ್ದಾರೆ.

ಅಮಿತಾಬ್ ಬಾಲ್ಯದ ಫೋಟೋಗಳು

ಅಮಿತಾಬ್ ತನ್ನ ತಂದೆ ಹರಿವಂಶ ರಾಯ್ ಬಚ್ಚನ್ ಹಾಗೂ ತಾಯಿ ತೇಜಿ ಬಚ್ಚನ್ ಜೊತೆಗಿನ ಫೋಟೋ. ಬಾಲ್ಯದ ಹಾಗೂ ಮಗುವಾಗಿದ್ದಾಗಿನ ಚಿತ್ರಗಳನ್ನೂ ಇಲ್ಲಿ ಕಾಣಬಹುದು. ಮೊದಲು ತಮ್ಮ ಪುತ್ರನಿಗೆ ಇನ್ ಕ್ವಿಲಾಬ್ ಎಂದು ಹೆಸರಿಟ್ಟಿದ್ದರು. ಬಳಿಕ ಕವಿ ಸುಮಿತ್ರಾನಂದನ್ ಪಂತ್ ಅವರ ಸಲಹೆ ಮೇರೆಗೆ ಅಮಿತಾಬ್ ಎಂದು ಬದಲಾಯಿಸಿದರು.

ಅಮಿತಾಬ್ ಅವರು ಬಚ್ಚನ್ ಆಗಿದ್ದು ಹೇಗೆ?

ಅಮಿತಾಬ್ ಅವರ ಕುಟುಂಬದ ಹೆಸರು ಶ್ರೀವಾತ್ಸವ್. ಆದರೆ ಹರಿವಂಶರಾಯ್ ಅವರು ತಮ್ಮ ಹೆಸರಿನ ಜೊತೆಗೆ "ಬಚ್ಚನ್" ಎಂಬ ಕಾವ್ಯನಾಮ ಸೇರಿಸಿಕೊಂಡಿದ್ದರು. ಹಿಂದಿ ಆಡುಭಾಷೆಯಲ್ಲಿ "ಬಚ್ಚನ್" ಎಂದರೆ ಮಗುವಿನಂತಹ ಎಂಬರ್ಥ. ಮುಂದೆ ಇದೇ ಅವರ ಕುಲನಾಮವಾಗಿ ಬದಲಾಯಿತು.

ಅಮಿತಾಬ್ ರ ಚೊಚ್ಚಲ ಚಿತ್ರ ಫ್ಲಾಪ್

ಅಮಿತಾಬ್ ಅಭಿನಯದ ಮೊಟ್ಟಮೊದಲ ಚಿತ್ರ 'ಸಾತ್ ಹಿಂದೂಸ್ತಾನಿ' ಚಿತ್ರ ಬಾಕ್ಸಾಫೀಸಲ್ಲಿ ಸೋತು ಸುಣ್ಣವಾಗಿತ್ತು. ಆದರೆ ಅಮಿತಾಬ್ ಅವರು ಅತ್ಯುತ್ತಮ ನವನಟ ಪ್ರಶಸ್ತಿಗೆ ಪಾತ್ರರಾದರು.

ಅಮಿತಾಬ್ ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲು

ಪ್ರಕಾಶ್ ಮೆಹ್ರಾ ಅವರ 'ಝಂಜೀರ್' (1973) ಚಿತ್ರ ಅಮಿತಾಬ್ ಅವರ ವೃತ್ತಿಜೀವನದಲ್ಲಿ ಪ್ರಮುಖ ಮೈಲಿಗಲ್ಲು. ಈ ಚಿತ್ರದ ಮೂಲಕ "ಆಂಗ್ರಿ ಎಂಗ್ ಮೆನ್" ಎಂಬ ಪಟ್ಟವನ್ನು ಅಮಿತಾಬ್ ಅಲಂಕರಿಸಿದರು.

See next photo feature article

ಅಮಿತಾಬ್ ಗೃಹಸ್ಥಾಶ್ರಮ ಪ್ರವೇಶ

ಜಯಾ ಭಾದುರಿ ಅವರನ್ನು ಅಮಿತಾಬ್ 1973ರಲ್ಲಿ ವಿವಾಹವಾದರು. ಅಮಿತಾಬ್ ಹಾಗೂ ಜಯಾ ಅವರು ಝಂಜೀರ್, ಅಭಿಮಾನ್, ಚುಪ್ಕೆ ಚುಪ್ಕೆ, ಮಿಲಿ ಹಾಗೂ ಶೋಲೆ ಚಿತ್ರಗಳಲ್ಲಿ ಜೊತೆಯಾಗಿ ಅಭಿನಯಿಸಿದ್ದಾರೆ. 'ಕಭಿ ಖುಷಿ ಕಭಿ ಘಂ' ಚಿತ್ರ ಅವರಿಬ್ಬರೂ ಒಟ್ಟಿಗೆ ಅಭಿನಯಿಸಿದ ಕೊನೆಯ ಚಿತ್ರ.


ಬುಧವಾರ (ಅ.10) ಮಧ್ಯರಾತ್ರಿಯಿಂದಲೇ ಆರಂಭವಾದ ಬಿಗ್ ಬಿ ಹುಟ್ಟುಹಬ್ಬ ಸಂಭ್ರಮ ಗುರುವಾರ (ಅ.11) ಸಂಜೆತನಕ ಮುಂದುವರಿಯಲಿದೆ. ಸಂಜೆಗೆ ಶಶಿ ಕಪೂರ್, ದಿಲೀಪ್ ಕುಮಾರ್ ಸೇರಿದಂತೆ ಬಾಲಿವುಡ್ ಚಿತ್ರಜಗತ್ತಿನ ಹಲವು ಗಣ್ಯರು ಬಿಗ್ ಬಿಯನ್ನು ಭೇಟಿ ಮಾಡಿ ಶುಭಹಾರೈಸಲಿದ್ದಾರೆ.

ಬಿಗ್ ಬಿ ಅವರ 70ನೇ ಹುಟ್ಟುಹಬ್ಬ ನಿಮಿತ್ತ ಒನ್ಇಂಡಿಯಾ ಕನ್ನಡ ನಿಮಗೆ ಪ್ರಸ್ತುತ ಪಡಿಸುತ್ತಿದೆ ಅವರ ಕೆಲವೊಂದು ಅಪರೂಪದ ಫೋಟೋಗಳನ್ನು. ಒಂದೊಂದಾಗಿ ವೀಕ್ಷಿಸುತ್ತಾ ಮುಂದೆ ಹೋದಂತೆ ಕಾಲ ಹಿಂದೆ ಸರಿದ ಅನುಭವವಾಗುತ್ತದೆ.

Read more about: ಅಮಿತಾಬ್ ಬಚ್ಚನ್, ಬಿಗ್ ಬಿ, ಹುಟ್ಟುಹಬ್ಬ, amitabh bachchan, big b, birthday

English summary
Superstar Amitabh Bachchan turns 70 today. Bollywood stars took to Twitter to wish Big B on his birthday. Here are some of the rare and unseen pictures of Amitabh Bachchan.
Please Wait while comments are loading...

Kannada Photos

Go to : More Photos