»   » ವಿದ್ಯಾ ಬಾಲನ್ ಆಯ್ತು; ಸದ್ಯದಲ್ಲೇ ಅನುಷ್ಕಾ ಗರ್ಭಿಣಿ

ವಿದ್ಯಾ ಬಾಲನ್ ಆಯ್ತು; ಸದ್ಯದಲ್ಲೇ ಅನುಷ್ಕಾ ಗರ್ಭಿಣಿ

Posted by:
Subscribe to Filmibeat Kannada
ಅರುಂಧತಿ ಚಿತ್ರದ ಮೂಲಕ ದಕ್ಷಿಣ ಭಾರತದಲ್ಲಿ ಪ್ರಸಿದ್ಧರಾದ ಕನ್ನಡ ಮೂಲದ ಮೋಹಕ ತಾರೆ ಅನುಷ್ಕಾ ಶೆಟ್ಟಿ, ಇದೀಗ ವಿದ್ಯಾ ಬಾಲನ್ ದಾರಿ ಹಿಡಿದಿದ್ದಾರೆ. ಅವರೇನೂ ವಿದ್ಯಾರಂತೆ 'ಡರ್ಟಿ ಪಿಕ್ಚರ್' ಮಾಡುತ್ತಿಲ್ಲ. ಬದಲಿಗೆ ಡರ್ಟಿ ನಂತರ ಬಂದ ವಿದ್ಯಾ ಬಾಲನ್ ಚಿತ್ರ 'ಕಹಾನಿ' ಮಾಡುತ್ತಿದ್ದಾರೆ. ಹಿಂದಿಯಲ್ಲಿ ಬಂದ ವಿದ್ಯಾ ಬಾಲನ್ ಕಹಾನಿಯೀಗ ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ರೀಮೇಕ್ ಆಗಲಿದೆ.

ಸುದ್ದಿಮೂಲಗಳ ಪ್ರಕಾರ, ಹಿಂದಿಯ ಕಹಾನಿಯನ್ನು ತಮಿಳು ಹಾಗೂ ತೆಲುಗಿಗೆ ರೀಮೇಕ್ ಮಾಡಲಿರುವುದು ಎಂಡೇಮಾಲ್ ಇಂಡಿಯಾ ಕಂಪನಿ. ಈಗಾಗಲೇ ಸಾಕಷ್ಟು ರಿಯಾಲಿಟಿ ಶೋಗಳನ್ನು ನಡೆಸಿ ಮನರಂಜನೆ ವಿಭಾಗದಲ್ಲಿ ಸಾಕಷ್ಟು ಹೆಸರುವಾಸಿಯಾಗಿರುವ ಇದು, ಈಗ ಅನುಷ್ಕಾ ಶೆಟ್ಟಿಯನ್ನು ನಾಯಕಿಯಾಗಿಸಿ ತಮಿಳು-ತೆಲುಗು ಕಹಾನಿಯನ್ನು ತೆರೆಗೆ ತರಲಿದೆ.

ಈ ಚಿತ್ರ ಬರುವ ಸೆಪ್ಟೆಂಬರ್ ನಲ್ಲಿ ಮುಹೂರ್ತ ನಡೆಸಿ ಚಿತ್ರೀಕರಣ ಪ್ರಾರಂಭಿಸಲಿದೆ. ಮುಂದಿನ ವರ್ಷ, ಜನವರಿಯಲ್ಲಿ ಬಿಡಗಡೆಯಾಗಲಿದೆ. ಮಿಸ್ಸಿಂಗ್ ಆಗಿರುವ ತನ್ನ ಗಂಡನನ್ನು ಹುಡುಕುವ ಗರ್ಭಿಣಿ ಹೆಣ್ಣಾಗಿ ವಿದ್ಯಾ ಬಾಲನ್ ಅಮೋಘವಾಗಿ ನಟಿಸಿದ್ದಾರೆ. ಆ ಪಾತ್ರವನ್ನು ಅನುಷ್ಕಾ ಹೇಗೆ ನಿರ್ವಹಿಸುತ್ತಾರೆ ಎಂಬುದಷ್ಟೇ ಈಗಿರುವ ಪ್ರಶ್ನಾರೂಪದ ಕುತೂಹಲ. (ಏಜೆನ್ಸೀಸ್)

English summary
Anushka Shetty has reportedly bagged the remake of Kahaani, which starred Vidya Balan. The Tamil version is produced by Endemol India.
Please Wait while comments are loading...

Kannada Photos

Go to : More Photos