»   » ಚಿಕ್ಕಿ ಶ್ರೀದೇವಿ ಬಗ್ಗೆ ಅರ್ಜುನ ಉವಾಚವೇನು?

ಚಿಕ್ಕಿ ಶ್ರೀದೇವಿ ಬಗ್ಗೆ ಅರ್ಜುನ ಉವಾಚವೇನು?

Written by: * ಜೇಮ್ಸ್ ಮಾರ್ಟಿನ್
Subscribe to Filmibeat Kannada

ಭಾರತ ಚಿತ್ರರಂಗ ಕಂಡಿರುವ ಪ್ರತಿಭಾವಂತ ತಾರೆ ಶ್ರೀದೇವಿ ಮತ್ತೆ ವೃತ್ತಿ ಬದುಕು ಆರಂಭಿಸಿ ಯಶಸ್ಸು ಗಳಿಸಬಹುದು ಆದರೆ, ಖಾಸಗಿ ಬದುಕಿನಲ್ಲಿ ಅಳಿಸಲಾಗದ ಕೊರಗು ಇನ್ನೂ ಆಕೆಯನ್ನು ಕಾಡುತ್ತಲೇ ಇದೆ. ಬೋನಿ ಕಪೂರ್ ಅವರನ್ನು ವರಿಸಿದ ಮೇಲೆ ಅವರ ಮಕ್ಕಳಿಗೆ ತಾಯಿ ಕೂಡಾ ಆದ ಶ್ರೀದೇವಿಗೆ ಇನ್ನೂ ಮಲತಾಯಿ ಪಟ್ಟದಿಂದ ಮುಕ್ತಿ ಸಿಕ್ಕಿಲ್ಲ. ತನ್ನ ಚಿಕ್ಕಮ್ಮ ಶ್ರೀದೇವಿ ಕಪೂರ್ ಬಗ್ಗೆ ಅರ್ಜುನ್ ಕಪೂರ್ ಪ್ರಪ್ರಥಮ ಬಾರಿಗೆ ಮಾತನಾಡಿ ಸಂಚಲನ ಮೂಡಿಸಿದ್ದಾನೆ.

ಮಲತಾಯಿ ಶ್ರೀದೇವಿ ಬಗ್ಗೆ ಎಂದೂ ಹೆಚ್ಚು ಮಾತನಾಡದ ಅರ್ಜುನ್ ಕಪೂರ್, ಈಗ ಇದ್ದಕ್ಕಿದ್ದಂತೆ ಶ್ರೀದೇವಿ ಬಗ್ಗೆ ಟಿವಿ ಶೋವೊಂದರಲ್ಲಿ ಹೇಳಿಕೆ ನೀಡಿದ್ದಾನೆ. 'ನನ್ನ ಚಿಕ್ಕ ಅಮ್ಮ ನಮ್ಮಪ್ಪನಿಗೆ ಹೆಂಡತಿಯೇ ಹೊರತೂ ನನಗೆ ಎಂದಿಗೂ ತಾಯಿಯಾಗಲಾರಳು. ನಮ್ಮ ತಾಯಿ ಮಗನ ಸಂಬಂಧ ಎಂದಿಗೂ ಸರಿ ಹೋಗುವುದಿಲ್ಲ. ನನ್ನಪ್ಪ ಹೆಂಡತಿ ಎನ್ನುವುದು ಬಿಟ್ಟರೆ ಹೆಚ್ಚು ಹೇಳಲಾರೆ' ಎಂದಿದ್ದಾನೆ.[ಶಾರುಖ್ ಪುತ್ರನೊಂದಿಗೆ ಶ್ರೀದೇವಿ ಪುತ್ರಿ ನಿಜನಾ!]

ಮೊದಲ ಪತ್ನಿ ಮೋನಾ ಕಪೂರ್ ತೊರೆದು ಸೂಪರ್ ಸ್ಟಾರ್ ಶ್ರೀದೇವಿ ಮದುವೆಯಾದ ನಿರ್ಮಾಪಕ ಬೋನಿ ಕಪೂರ್ ಅವರ ಮೊದಲ ಸಂಸಾರ ಸುಖಮಯವಾಗಿರಲಿಲ್ಲ. ಅರ್ಜುನ್ ಕಪೂರ್ ಈಗ 2 ಸ್ಟೇಟ್ ಚಿತ್ರದ ನಂತರ ಸ್ಟಾರ್ ಎನಿಸಿಕೊಂಡಿದ್ದಾನೆ. ಆದರೆ, ಅದಕ್ಕೂ ಮೊದಲು ಗುಂಡು ಗುಂಡಾಗಿ ಇದ್ದ ಅರ್ಜುನ್ ನನ್ನು ಮುದ್ದಿಸಲು ಯತ್ನಿಸಿದ ಶ್ರೀದೇವಿ ತಾಯಿ ಹೃದಯಕ್ಕೆ ಸದಾ ಕಾಲ ನೋವೇ ಸಿಗುತ್ತಿತ್ತು.

ಶ್ರೀದೇವಿಯನ್ನು ಅವಮಾನಿಸುವುದಿಲ್ಲ
  

ಶ್ರೀದೇವಿಯನ್ನು ಅವಮಾನಿಸುವುದಿಲ್ಲ

ನಾನು ಯಾರನ್ನು ಈ ಬಗ್ಗೆ ದೂಷಿಸುವುದಿಲ್ಲ. ನನ್ನ ತಾಯಿ ಮೋನಾ ಕಪೂರ್ ಅವರು ಎಲ್ಲರನ್ನು ಗೌರವಿಸುವುದನ್ನು ಕಲಿಸಿದ್ದಾರೆ. ನಾನು ಎಂದಿಗೂ ಅವರೊಂದಿಗೆ ತುಂಬು ಸಂಸಾರದಂತೆ ಬಾಳಲು ಸಾಧ್ಯವಿಲ್ಲ. ಹಾಗಂತ ಅವರ ಮೇಲೆ ನನಗೆ ಯಾವ ದ್ವೇಷವಲ್ಲ ಎಂದು ಅರ್ಜುನ್ ಕಪೂರ್ ಹೇಳಿದ್ದಾರೆ.

ಬೋನಿ ಕಪೂರ್ ಮೊದಲ ಸಂಸಾರ
  

ಬೋನಿ ಕಪೂರ್ ಮೊದಲ ಸಂಸಾರ

ಅಮ್ಮ ಮೋನಾ ಕಪೂರ್ ಜತೆ ಅರ್ಜುನ್ ಕಪೂರ್ ಇರುವ ಚಿತ್ರ. ಮೋನಾ ಶೌರಿ ಕಪೂರ್ ಹಾಗೂ ಬೋನಿ ಕಪೂರ್ ದಂಪತಿಗೆ ಅರ್ಜುನ್ ಕಪೂರ್ ಅಲ್ಲದೆ, ಅನ್ಶುಲಾ ಎಂಬ ಮಗಳಿದ್ದು, ಆಕೆ ಗೂಗಲ್ ಸಂಸ್ಥೆ ಉದ್ಯೋಗಿಯಾಗಿದ್ದಾಳೆ. 1983 ರಿಂದ 1996 ರತನಕ ಬೋನಿ-ಮೋನಾ ದಾಂಪತ್ಯ ಸ್ಥಿರವಾಗಿತ್ತು.

1996 ರಲ್ಲಿ ಶ್ರೀದೇವಿಯನ್ನು ಮದುವೆಯಾದ ಬೋನಿ ಅವರಿಗೆ ಜಾಹ್ನವಿ ಹಾಗೂ ಖುಷಿ ಎಂಬ ಇಬ್ಬರು ಪುತ್ರಿಯರಿದ್ದಾರೆ.

 

ಅರ್ಜುನ್ ಕಪೂರ್ ಮೊದಲ ಲವ್
  

ಅರ್ಜುನ್ ಕಪೂರ್ ಮೊದಲ ಲವ್

ಅರ್ಜುನ್ ಕಪೂರ್ ಮೊದಲ ಲವ್ ಅನುಭವ ಪಡೆದಿದ್ದು, ಸಲ್ಮಾನ್ ಖಾನ್ ಅವರ ತಂಗಿ ಅರ್ಪಿತಾ ಖಾನ್ ರಿಂದ. ಇಬ್ಬರು ಒಳ್ಳೆ ಸ್ನೇಹಿತರಾಗಿದ್ದು, ಪ್ರೇಮಿಗಳಾಗಿದ್ದರು.

ಕೆಲ ವರ್ಷಗಳ ಹಿಂದೆ ಕತ್ರೀನಾ ಜತೆ ಅರ್ಜುನ್
  

ಕೆಲ ವರ್ಷಗಳ ಹಿಂದೆ ಕತ್ರೀನಾ ಜತೆ ಅರ್ಜುನ್

ಕೆಲ ವರ್ಷಗಳ ಹಿಂದೆ ಕತ್ರೀನಾ ಜತೆ ಅರ್ಜುನ್ ಇದ್ದ ಚಿತ್ರವಿದು, ಈಗ ಆಕರ್ಷಕ ಮೈಕಟ್ಟು ಬೆಳೆಸಿಕೊಂಡಿರುವ ಅರ್ಜುನ್ ಆಗ ಎಲ್ಲರಿಂದ ನಿಂದನೆಗೆ ಒಳಪಟ್ಟಿದ್ದು ಇದೆ. ಮಲತಾಯಿ ಶ್ರೀದೇವಿಯ ಬಳಿ ಎಂದೂ ಸುಳಿಯದೆ ಅಮ್ಮನ ಮಡಿಲಲ್ಲೇ ಬೆಳೆದ ಅರ್ಜುನ್ ಹೆಚ್ಚು ವಾಚಾಳಿಯಲ್ಲ. ಅಪ್ಪನ ಇನ್ನೊಂದು ಸಂಸಾರದ ಬಗ್ಗೆ ಬೇಸರವಿದ್ದರೂ ಎಲ್ಲೂ ಏನು ಮಾತನಾಡಿರಲಿಲ್ಲ.

 ಶ್ರೀದೇವಿ ಬಗ್ಗೆ ಗೌರವವಿದೆ ಆದರೆ,
  

ಶ್ರೀದೇವಿ ಬಗ್ಗೆ ಗೌರವವಿದೆ ಆದರೆ,

ಶ್ರೀದೇವಿ ಬಗ್ಗೆ ಗೌರವವಿದೆ ಆದರೆ, ನಮ್ಮ ಸಂಸಾರದ ಭಾಗವಾಗಿ ಅವರನ್ನು ಸ್ವೀಕರಿಸಲಾರೆ ಎಂದು ಅರ್ಜುನ್ ಮೊದಲ ಬಾರಿಗೆ ಹೇಳಿದ್ದಾನೆ. ಶ್ರೀದೇವಿ ಅವರ ಮಕ್ಕಳು(ಈತನಿಗೆ ತಂಗಿಯರು) ಚಿತ್ರರಂಗಕ್ಕೆ ಕಾಲಿರಿಸುವುದರ ಬಗ್ಗೆ ಕೂಡಾ ಅರ್ಜುನ್ ಪ್ರತಿಕ್ರಿಯಿಸಿಲ್ಲ. ಇಷ್ಕ್ ಜಾದೆ, 2 ಸ್ಟೇಟ್ ನಂತರ ಅರ್ಜುನ್ ತನ್ನ ವೃತ್ತಿ ಬದುಕಿನ ಬಗ್ಗೆ ಹೆಚ್ಚು ಸೀರಿಯಸ್ ಆಗಿದ್ದು, ಖಾಸಗಿ ಬದುಕಿನ ಬಗ್ಗೆ ಹೆಚ್ಚು ಕೇಳಬೇಡಿ ಎಂದಿದ್ದಾನೆ.

English summary
Bollywood actor Arjun Kapoor has never been in good relationship with his step mother Sridevi and now the actor has made the fact evident in public.
Please Wait while comments are loading...

Kannada Photos

Go to : More Photos