»   » 'ಬಾಹುಬಲಿ' ಪ್ರಭಾಸ್ ಬಗ್ಗೆ ಬಂದ ಲೇಟೆಸ್ಟ್ ನ್ಯೂಸ್

'ಬಾಹುಬಲಿ' ಪ್ರಭಾಸ್ ಬಗ್ಗೆ ಬಂದ ಲೇಟೆಸ್ಟ್ ನ್ಯೂಸ್

Posted by:
Subscribe to Filmibeat Kannada

ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ- ದಿ ಕನ್ ಕ್ಲೂಶನ್' ಚಿತ್ರ ಬಿಡುಗಡೆಗೆ ಇನ್ನೂ ಕೇವಲ 10 ದಿನಗಳು ಬಾಕಿ ಇವೆ. 'ಡಾರ್ಲಿಂಗ್' ಪ್ರಭಾಸ್ ಅಭಿನಯದ ಈ ಚಿತ್ರವನ್ನು 'ಬಾಹುಬಲಿ -ದಿ ಬಿಗಿನ್ನಿಂಗ್' ನೋಡಿದ ಎಲ್ಲರೂ ಸಹ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.[ಕಟ್ಟಪ್ಪ ಕ್ಷಮೆ ಕೇಳುವವರೆಗೂ 'ಬಾಹುಬಲಿ-2' ಬಿಡುಗಡೆ ಇಲ್ಲ.! ಇದು ಕನ್ನಡಿಗರ ಕಟ್ಟಪ್ಪಣೆ.!]

'ಬಾಹುಬಲಿ - ದಿ ಬಿಗಿನ್ನಿಂಗ್' ನಲ್ಲಿ ಶಿವುಡು ಮತ್ತು ಅಮರೇಂದ್ರ ಬಾಹುಬಲಿ ಪಾತ್ರಗಳನ್ನು ಮಾಡಿದ್ದ ಪ್ರಭಾಸ್ 'ಬಾಹುಬಲಿ 2' ಚಿತ್ರದಲ್ಲಿ ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಹೊಸ ಸುದ್ದಿಯೊಂದು ಇಂಟರ್ನೆಟ್ ನಲ್ಲಿ ಹರಿದಾಡುತ್ತಿದೆ. ಹೀಗಿರುವಾಗಲೇ ನಟ ಪ್ರಭಾಸ್ ಬಗ್ಗೆ ಹೊಸ ಹಾಟ್ ನ್ಯೂಸ್ ಒಂದು ಹೊರಬಿದ್ದಿದೆ. ಅದೇನು ಅಂತಿರಾ?...

ಶೀಘ್ರದಲ್ಲೇ ಬಾಲಿವುಡ್ ಚಿತ್ರದಲ್ಲಿ ನಟಿಸಲಿದ್ದಾರೆ ಪ್ರಭಾಸ್

ಶೀಘ್ರದಲ್ಲೇ ಬಾಲಿವುಡ್ ಚಿತ್ರದಲ್ಲಿ ನಟಿಸಲಿದ್ದಾರೆ ಪ್ರಭಾಸ್

ಹೌದು, 'ಬಾಹುಬಲಿ' ಚಿತ್ರದ ಮೂಲಕ ದೇಶದಾದ್ಯಂತ ಚಿರಪರಿಚಿತ ಆಗಿರುವ 'ಡಾರ್ಲಿಂಗ್' ಪ್ರಭಾಸ್ ಸದ್ಯದಲ್ಲೇ ಬಿಗ್ ಬಜೆಟ್ ಸಿನಿಮಾವೊಂದರ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ.

ಹಿಂದಿ ಸಿನಿ ಅಂಗಳದಲ್ಲಿ ಪ್ರಭಾಸ್ ಲಾಂಚ್ ಗೆ ಬಿಗ್ ಪ್ಲಾನ್

ಹಿಂದಿ ಸಿನಿ ಅಂಗಳದಲ್ಲಿ ಪ್ರಭಾಸ್ ಲಾಂಚ್ ಗೆ ಬಿಗ್ ಪ್ಲಾನ್

ಬಾಲಿವುಡ್ ಚಿತ್ರರಂಗದಲ್ಲಿ ಪ್ರಭಾಸ್ ಅವರ ಗ್ರ್ಯಾಂಡ್ ಎಂಟ್ರಿಗಾಗಿ ನಿರ್ದೇಶಕ ಎಸ್.ಎಸ್.ರಾಜಮೌಳಿ ಹಾಗೂ ಬಾಲಿವುಡ್ ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ ದೊಡ್ಡ ಯೋಜನೆ ರೂಪಿಸಿರುವುದು ವರದಿಯಾಗಿದೆ. ಪ್ರಭಾಸ್ ಬಾಲಿವುಡ್ ನಲ್ಲಿ ನಾಯಕ ನಟನಾಗಿ ಅಭಿನಯಿಸಲಿರುವ ಚಿತ್ರಕ್ಕೆ ರಾಜಮೌಳಿ ಅವರೇ ಆಕ್ಷನ್ ಕಟ್ ಹೇಳಲಿದ್ದು, ಕರಣ್ ಜೋಹರ್ ಬಂಡವಾಳ ಹೂಡಲಿದ್ದಾರೆ.

ಪ್ರಭಾಸ್ ಗೆ ಹಿಂದಿ ಸಿನಿಮಾ ಆಫರ್

ಪ್ರಭಾಸ್ ಗೆ ಹಿಂದಿ ಸಿನಿಮಾ ಆಫರ್

ದಕ್ಷಿಣ ಭಾರತದಲ್ಲಿ 14 ವರ್ಷಗಳಿಂದ ಸೂಪರ್ ಸ್ಟಾರ್ ಆಗಿದ್ದ ಪ್ರಭಾಸ್ ಹೆಸರು 'ಬಾಹುಬಲಿ' ನಂತರ ವಿಶ್ವದಾದ್ಯಂತ ಚಿರಪರಿಚಿತವಾಗಿದೆ. ಈ ಹಿಂದೆ ಪ್ರಭಾಸ್ ಗೆ ಹಿಂದಿ ಸಿನಿಮಾ ಆಫರ್ ಗಳು ಬಂದರೂ ಸಹ 'ಬಾಹುಬಲಿ' ಚಿತ್ರದಲ್ಲಿ ಬಿಜಿ ಆಗಿದ್ದ ಕಾರಣ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ.

ಅಜಯ್ ದೇವಗನ್ ಚಿತ್ರದಲ್ಲಿ ಸ್ಟೆಪ್ ಹಾಕಿದ್ದ ಪ್ರಭಾಸ್

ಅಜಯ್ ದೇವಗನ್ ಚಿತ್ರದಲ್ಲಿ ಸ್ಟೆಪ್ ಹಾಕಿದ್ದ ಪ್ರಭಾಸ್

ಪ್ರಭಾಸ್ ಹೀರೋ ಆಗಿ ಮೊದಲ ಬಾರಿಗೆ ಬಾಲಿವುಡ್ ನಲ್ಲಿ ಬಿಗ್ ಎಂಟ್ರಿ ಕೊಡಲು ಯೋಜನೆ ರೂಪಿಸಿರುವುದು ನಿಜ. ಆದರೆ ಈ ಹಿಂದೆ ಅಜಯ್ ದೇವಗನ್ ರವರ 'ಆಕ್ಷನ್ ಜಾಕ್ಸನ್' ಹಿಂದಿ ಸಿನಿಮಾದಲ್ಲಿ 'ಪಂಜಾಬಿ ಮಸ್ತ್' ಎಂಬ ಹಾಡಿಗೆ ಸ್ಟೆಪ್ ಹಾಕಿದ್ದರು.

ಪ್ರಭಾಸ್ ಬಾಲಿವುಡ್ ಚಿತ್ರ ಆರಂಭ ಯಾವಾಗ?

ಪ್ರಭಾಸ್ ಬಾಲಿವುಡ್ ಚಿತ್ರ ಆರಂಭ ಯಾವಾಗ?

ಪ್ರಭಾಸ್, ಪ್ರಸ್ತುತ ತೆಲುಗಿನಲ್ಲಿ ಎರಡು ಹೋಮ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾಗಳಲ್ಲಿ ಬಿಜಿ ಆಗಿದ್ದಾರೆ. ಈ ಸಿನಿಮಾಗಳು ಕಂಪ್ಲೀಟ್ ಆದ ನಂತರ ಬಾಲಿವುಡ್ ಚಿತ್ರ ಆರಂಭವಾಗಲಿದೆ.

English summary
'Baahubali' lead actor Prabhas could make a big Bollywood debut soon. Reportedly, director SS Rajamouli and producer Karan Johar have big plans to launch Prabhas in Hindi cinema.
Please Wait while comments are loading...

Kannada Photos

Go to : More Photos