»   » ಮಸ್ತಾನಿ ಕಲೆಕ್ಷನ್: ಅಬ್ಬಬ್ಬಾ ಇದೇನೋ ಹಣಾನೋ, ಹುಣಸೇ ಬೀಜಾನೋ

ಮಸ್ತಾನಿ ಕಲೆಕ್ಷನ್: ಅಬ್ಬಬ್ಬಾ ಇದೇನೋ ಹಣಾನೋ, ಹುಣಸೇ ಬೀಜಾನೋ

Posted by:
Subscribe to Filmibeat Kannada

ಬಾಲಿವುಡ್ ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಆಕ್ಷನ್-ಕಟ್ ನಲ್ಲಿ ಮೂಡಿಬಂದಿದ್ದ ಐತಿಹಾಸಿಕ ಡ್ರಾಮಾ 'ಬಾಜೀರಾವ್ ಮಸ್ತಾನಿ' ಬರೋಬ್ಬರಿ 100 ಕೋಟಿ ಕ್ಲಬ್ ಸೇರಿದೆ.

ಸೋಮವಾರ 100 ಕೋಟಿ ಗಳಿಕೆಯನ್ನು ದಾಟಿ ಸದ್ಯಕ್ಕೆ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಬಾಲಿವುಡ್ ನಟ ರಣವೀರ್ ಸಿಂಗ್, ನಟಿ ಪ್ರಿಯಾಂಕ ಚೋಪ್ರಾ ಮತ್ತು ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ 'ಬಾಜೀರವ್ ಮಸ್ತಾನಿ' ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.[ಬನ್ಸಾಲಿ ಅವರ 'ಬಾಜಿರಾವ್ ಮಸ್ತಾನಿ' ಟ್ರೈಲರ್ ಸೂಪರ್]

ಮರಾಠ ರಾಜ ಪೇಶ್ವೆ ಬಾಜೀರಾವ್ ಮಸ್ತಾನಿ ಮತ್ತು ಕಾಶೀಭಾಯಿ ಕಥೆಯನ್ನಾಧರಿಸಿದ 'ಬಾಜೀರಾವ್ ಮಸ್ತಾನಿ' ಸಿನಿಮಾ ಕಿಂಗ್ ಖಾನ್ ಶಾರುಖ್ ಅವರ 'ದಿಲ್ವಾಲೆ' ಸಿನಿಮಾದೊಂದಿಗೆ ಡಿಸೆಂಬರ್ 18 ರಂದು ಭರ್ಜರಿಯಾಗಿ ತೆರೆ ಕಂಡಿತ್ತು.

'ಬಾಜೀರಾವ್ ಮಸ್ತಾನಿ' ಚಿತ್ರದ ಮೊದಲ ವಾರಾಂತ್ಯ 90.80 ಕೋಟಿ (ಭಾರತದಲ್ಲಿ 60.80 ಕೋಟಿ ಮತ್ತು ವಿದೇಶದಲ್ಲಿ 30 ಕೋಟಿ) ಗಳಿಸಿದೆ. ಸೋಮವಾರಕ್ಕೆ ಸುಮಾರು 10.25 ಕೋಟಿ ಗಳಿಸುವ ಮೂಲಕ 100 ಕೋಟಿ ದಾಟಿದೆ.[ಬ್ರೇಕಿಂಗ್ ನ್ಯೂಸ್: 'ಮಸ್ತಾನಿ' ಬಿಡುಗಡೆಗೆ ಕಂಟಕವಾಗಿರುವ ಶಿವಸೇನೆ]

ಇನ್ನು ಒಂದು ವಿಶೇಷ ಏನಪ್ಪಾ ಅಂದ್ರೆ, ಸೋಮವಾರದ ಗಳಿಕೆಯಲ್ಲಿ ಬನ್ಸಾಲಿ ಅವರ 'ಬಾಜೀರಾವ್ ಮಸ್ತಾನಿ' ನಿರ್ದೇಶಕ ರೋಹಿತ್ ಶೆಟ್ಟಿ ಅವರ 'ದಿಲ್ವಾಲೆ'ಯ ಕಲೆಕ್ಷನ್ ಅನ್ನು ಹಿಂದಿಕ್ಕಿದೆ. 'ದಿಲ್ವಾಲೆ' ಬಿಡುಗಡೆಯಾದ ವಾರಾಂತ್ಯವೇ 100 ಕೋಟಿ ಗಳಿಕೆ ಕಂಡಿತ್ತು.

English summary
Filmmaker Sanjay Leela Bhansali's historical drama film “Bajirao Mastani”, featuring Ranveer Singh, Deepika Padukone and Priyanka Chopra in lead roles, has minted over Rs.100 crore worldwide and is going strong in theatres with positive word of mouth.
Please Wait while comments are loading...

Kannada Photos

Go to : More Photos