»   » ಪ್ರಪ್ರಥಮ ಬಾರಿಗೆ ರಾಷ್ಟ್ರ ಪ್ರಶಸ್ತಿ ಪಡೆದ ಅಕ್ಷಯ್ ಕುಮಾರ್ ಗೆ ಖುಷಿಯೋ ಖುಷಿ

ಪ್ರಪ್ರಥಮ ಬಾರಿಗೆ ರಾಷ್ಟ್ರ ಪ್ರಶಸ್ತಿ ಪಡೆದ ಅಕ್ಷಯ್ ಕುಮಾರ್ ಗೆ ಖುಷಿಯೋ ಖುಷಿ

Posted by:
Subscribe to Filmibeat Kannada

2016ನೇ ಸಾಲಿನ ಪ್ರತಿಷ್ಟಿತ 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇಂದು ಪ್ರಕಟವಾಗಿದೆ. 'ರುಸ್ತುಂ' ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಪ್ರಪ್ರಥಮ ಬಾರಿಗೆ 'ಅತ್ಯುತ್ತಮ ನಟ' ಪ್ರಶಸ್ತಿಯನ್ನ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮುಡಿಗೇರಿಸಿಕೊಂಡಿದ್ದಾರೆ.[ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿ ಪ್ರಕಟ: ಸಂಪೂರ್ಣ ಪಟ್ಟಿ ಇಲ್ಲಿದೆ]

ಮೊಟ್ಟ ಮೊದಲ ಬಾರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನ ಪಡೆದಿರುವುದಕ್ಕೆ ನಟ ಅಕ್ಷಯ್ ಕುಮಾರ್ ಫುಲ್ ಹ್ಯಾಪಿ ಆಗಿದ್ದಾರೆ. ಟ್ವಿಟ್ಟರ್ ನಲ್ಲೂ ತಮ್ಮ ಸಂತಸವನ್ನ ವ್ಯಕ್ತಪಡಿಸಿದ್ದಾರೆ. ''ನಿಮಗೆ ಯಾವ ಅವಾರ್ಡ್ ಕೂಡ ಸಿಗುವುದಿಲ್ಲ. ಅವಾರ್ಡ್ ಫಂಕ್ಷನ್ ಗಳಿಗೆ ಹೋಗಲೇಬೇಡಿ'' ಅಂತ ತಮಾಷೆ ಮಾಡುತ್ತಿದ್ದ ಪತ್ನಿ ಟ್ವಿಂಕಲ್ ಖನ್ನಾಗೆ ಈ ಪ್ರಶಸ್ತಿಯನ್ನ ಅಕ್ಕಿ ಅರ್ಪಿಸಿದ್ದಾರೆ. ಮುಂದೆ ಓದಿ...

ಟ್ವಿಟ್ಟರ್ ನಲ್ಲಿ ಧನ್ಯವಾದ ಸಲ್ಲಿಸಿದ ಅಕ್ಷಯ್ ಕುಮಾರ್

ಟ್ವಿಟ್ಟರ್ ನಲ್ಲಿ ಧನ್ಯವಾದ ಸಲ್ಲಿಸಿದ ಅಕ್ಷಯ್ ಕುಮಾರ್

''ಧನ್ಯವಾದಗಳು... ಈ ಸಮಯಕ್ಕೆ ಇದು ತುಂಬಾ ಚಿಕ್ಕ ಪದ. ಆದ್ರೆ, ನನಗಾಗುತ್ತಿರುವ ಸಂತಸವನ್ನ ಹೇಗೆ ವ್ಯಕ್ತಪಡಿಸುವುದು ಅಂತ ನನಗೆ ಗೊತ್ತಾಗುತ್ತಿಲ್ಲ. ರಾಷ್ಟ್ರೀಯ ಪ್ರಶಸ್ತಿಯ ಜ್ಯೂರಿ ಮೆಂಬರ್ ಗಳಿಗೆ ಹಾಗೂ ನನ್ನ ಅಭಿಮಾನಿಗಳಿಗೆ ನಾನು ಹೃತ್ಪೂರ್ವಕ ಧನ್ಯವಾದ ಅರ್ಪಿಸಲು ಇಚ್ಛಿಸುತ್ತೇನೆ'' ಅಂತ ಟ್ವಿಟ್ಟರ್ ನಲ್ಲಿ ವಿಡಿಯೋ ಮೂಲಕ ಎಲ್ಲರೂ ಥ್ಯಾಂಕ್ಯು ಹೇಳಿದ್ದಾರೆ ಅಕ್ಷಯ್ ಕುಮಾರ್. ['ರುಸ್ತುಂ' ಕಲೆಕ್ಷನ್: ಬಾಕ್ಸಾಫೀಸ್ ಚಿಂದಿ ಉಡಾಯಿಸಿದ ಅಕ್ಷಯ್]

'ರುಸ್ತುಂ' ಮತ್ತು ರಾಷ್ಟ್ರೀಯ ಪ್ರಶಸ್ತಿ

'ರುಸ್ತುಂ' ಮತ್ತು ರಾಷ್ಟ್ರೀಯ ಪ್ರಶಸ್ತಿ

''ರುಸ್ತುಂ' ಚಿತ್ರದಲ್ಲಿ ನನಗೆ ಸಿಕ್ಕ ಪಾತ್ರ ತುಂಬಾ ವಿಶೇಷವಾದದ್ದು. ನಮ್ಮ ದೇಶದ ನೌಕಾಪಡೆಯ ಯೂನಿಫಾರ್ಮ್ ಧರಿಸುವುದೇ ನನಗೆ ತುಂಬಾ ಸ್ಪೆಷಲ್ ಎನಿಸಿತ್ತು. ಈಗ ಅದೇ ಪಾತ್ರಕ್ಕೆ ನನಗೆ ನ್ಯಾಷನಲ್ ಅವಾರ್ಡ್ ಬಂದಿರುವುದು ಮತ್ತಷ್ಟು ಸ್ಪೆಷಲ್ ಆಗಿಸಿದೆ'' - ಅಕ್ಷಯ್ ಕುಮಾರ್, ನಟ

ಅಪ್ಪ-ಅಮ್ಮ, ಪತ್ನಿಗೆ ಪ್ರಶಸ್ತಿ ಅರ್ಪಣೆ

ಅಪ್ಪ-ಅಮ್ಮ, ಪತ್ನಿಗೆ ಪ್ರಶಸ್ತಿ ಅರ್ಪಣೆ

''ನನಗೆ ಆಶೀರ್ವದಿಸಿದ ನನ್ನ ಅಪ್ಪ-ಅಮ್ಮನಿಗೆ ಹಾಗೂ 'ಅವಾರ್ಡ್ ಫಂಕ್ಷನ್ ಗಳಿಗೆ ಹೋಗುವುದನ್ನ ನಿಲ್ಲಿಸಿಬಿಡಿ, ಯಾಕಂದ್ರೆ ನಿಮಗೆ ಯಾವ ಪ್ರಶಸ್ತಿಯೂ ಸಿಗುವುದಿಲ್ಲ' ಅಂತ ಸದಾ ತಮಾಷೆ ಮಾಡುತ್ತಿದ್ದ ನನ್ನ ಪತ್ನಿಗೆ ಈ ರಾಷ್ಟ್ರೀಯ ಪ್ರಶಸ್ತಿಯನ್ನ ಅರ್ಪಿಸಲು ಇಚ್ಛಿಸುತ್ತೇನೆ'' - ಅಕ್ಷಯ್ ಕುಮಾರ್, ನಟ

ಅಕ್ಷಯ್ ಕುಮಾರ್ ಪತ್ನಿ ಪ್ರತಿಕ್ರಿಯೆ

ಅಕ್ಷಯ್ ಕುಮಾರ್ ಪತ್ನಿ ಪ್ರತಿಕ್ರಿಯೆ

''ನಾನು ನಗುತ್ತಿದ್ದೇನೋ, ಅಳ್ತಿದ್ದೇನೋ.. ಗೊತ್ತಾಗುತ್ತಿಲ್ಲ. ಅಷ್ಟು ಖುಷಿ ಆಗುತ್ತಿದೆ. ಹೆಮ್ಮೆ ಎನಿಸುತ್ತಿದೆ'' ಅಂತ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಟ್ವೀಟ್ ಮಾಡಿದ್ದಾರೆ.

English summary
Bollywood Actor Akshay Kumar has taken his twitter account to express his happiness on winning 'Best Actor' National Award for 'Rustom'.
Please Wait while comments are loading...

Kannada Photos

Go to : More Photos