»   » ನವವಧು ಬಿಪಾಶಾ ಮೆಹೆಂದಿ ಸಂಭ್ರಮದಲ್ಲಿ ಬಾಲಿವುಡ್ ಗಣ್ಯರ ದಂಡು

ನವವಧು ಬಿಪಾಶಾ ಮೆಹೆಂದಿ ಸಂಭ್ರಮದಲ್ಲಿ ಬಾಲಿವುಡ್ ಗಣ್ಯರ ದಂಡು

Written by: ಸೋನು ಗೌಡ
Subscribe to Filmibeat Kannada

'ಅಲೋನ್' ಚಿತ್ರದಲ್ಲಿ ಒಟ್ಟಾಗಿ ನಟಿಸಿ ತದನಂತರ ಪ್ರೇಮಿಗಳಾಗಿ ಇದೀಗ ನೂತನ ಜೀವನಕ್ಕೆ ಕಾಲಿಡಲು ತಯಾರಾಗಿರುವ ಕೃಷ್ಣ ಸುಂದರಿ ಬಿಪಾಶಾ ಬಸು ಮತ್ತು ನಟ ಕರಣ್ ಸಿಂಗ್ ಗ್ರೋವರ್ ಅವರ ಮದುವೆ ಮುನ್ನಾ ದಿನದ ಶಾಸ್ತ್ರಗಳು ಈಗಾಗಲೇ ಮುಗಿದಿದ್ದು, ಇಂದು (ಏಪ್ರಿಲ್ 29) ಬೆಳಗ್ಗೆಯಿಂದಲೇ ಮೆಹೆಂದಿ ಶಾಸ್ತ್ರ ಮತ್ತು ಸಂಗೀತ ಕಾರ್ಯಕ್ರಮ ಆರಂಭವಾಗಿದೆ.

ಈ ಮದರಂಗಿ ಶಾಸ್ತ್ರಕ್ಕೆ ಬಿಪಾಶಾ ಅವರ ಖಾಸ ದೋಸ್ತ್ ಗಳಾದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದರ್ ಅವರು ತಮ್ಮ ಪತಿ ರಾಜ್ ಕುಂದರ್ ಜೊತೆಗೆ ತಂಗಿ ಶಮಿತಾ ಶೆಟ್ಟಿ ಅವರ ಜೊತೆ ಆಗಮಿಸಿದ್ದಾರೆ. ಜೊತೆಗೆ ನಟಿ ಸೊಫಿ ಚೌಧರಿ ಮತ್ತು ಬಾಲಿವುಡ್ ನ ಕೆಲ ಸ್ಟಾರ್ ಗಳು ಪಾಲ್ಗೊಂಡಿದ್ದರು.[ಫೋಟೋ ಗ್ಯಾಲರಿ: ವಧು ಪೂಜೆಯಲ್ಲಿ ಮಿಂಚಿದ ಕೃಷ್ಣ ಸುಂದರಿ ಬಿಪಾಶಾ]

Bipasha's Mehendi Ceremony; Shilpa Shetty Spotted At The Venue

ಇನ್ನು ಬಾಲಿವುಡ್ ನ ಸ್ಟಾರ್ ನಟಿಯರ ಜೊತೆ ತುಂಬಾ ಖುಷಿಯಾಗಿರುವ ನವವಧು ನಟಿ ಬಿಪಾಶಾ ಬಸು ಅವರು ಸಾಕಷ್ಟು ಮಸ್ತಿ ಮಾಡುತ್ತಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರ ಅವರು ಮದರಂಗಿ ವಾಸನೆ ಸಹಿಸಲಾರದೆ ಮೂಗು ಮುಚ್ಚಿಕೊಂಡಂತೆ ಫೋಟೋಗಳಿಗೆ ಫೋಸ್ ನೀಡಿದ್ದಾರೆ.

ಮುಂಬೈನ ಕ್ಲಬ್ ಇನ್ ಜುಹ್ ನಲ್ಲಿ ನಡೆಯುತ್ತಿರುವ ಮದರಂಗಿ ಶಾಸ್ತ್ರ ಸಮಾರಂಭಕ್ಕೆ ನವವಧು ಬಿಪಾಶಾ ಬಸು ಅವರು ತಿಳಿ ಗುಲಾಬಿ ಬಣ್ಣಕ್ಕೆ ಬಂಗಾರದ ಬಣ್ಣದ ಪ್ರಿಂಟ್ ಇರುವ ಲೆಹೆಂಗಾ ತೊಟ್ಟು ಫಳ ಫಳ ಹೊಳೆಯುತ್ತಿದ್ದಾರೆ. ಕರಣ್ ಅವರು ಅಚ್ಚ ಬಿಳಿ ಬಣ್ಣದ ಕುರ್ತಾ ಪೈಜಾಮ ತೊಟ್ಟಿದ್ದಾರೆ.[ಬಿಪಾಶಾ ಬಸು - ಕರಣ್ ಮದುವೆ ಆಮಂತ್ರಣ ಪತ್ರಿಕೆ ಹಿಂಗಿದೆ.!]

ನಾಳೆ (ಏಪ್ರಿಲ್ 30) ಬಿಪಾಶಾ ಬಸು ಅವರ ಮನೆಯಲ್ಲಿಯೇ ಸರಳವಾಗಿ ಮತ್ತು ಬೆಂಗಾಲಿ ಶೈಲಿಯಲ್ಲಿ ಶಾಸ್ತ್ರೋಕ್ತವಾಗಿ ಮದುವೆ ನೆರವೇರಲಿದ್ದು, ಕೃಷ್ಣಸುಂದರಿ ಬಿಪಾಶಾ ಮತ್ತು ಕರಣ ಸಿಂಗ್ ನವ ಜೀವನಕ್ಕೆ ಕಾಲಿಡಲಿದ್ದಾರೆ.

ಬಿಪಾಶಾ ಬಸು ಅವರ ಮದರಂಗಿ ಶಾಸ್ತ್ರ ಸಮಾರಂಭದ ಫೋಟೋ ಆಲ್ಬಂ ನೋಡಿ ಕೆಳಗಿನ ಗ್ಯಾಲರಿಯಲ್ಲಿ...

-
-
-
-
-
-
-
-
-
-
-
-
-
-
-
-
English summary
Hindi Actress Bipasha Basu's 'Mehendi' ceremony B-town actresses including Shilpa Shetty, Sophie Choudhary and Shamita Shetty were also spotted at the event.
Please Wait while comments are loading...

Kannada Photos

Go to : More Photos