twitter
    For Quick Alerts
    ALLOW NOTIFICATIONS  
    For Daily Alerts

    ಬಾಲಿವುಡ್ ನಟ ಸದಾಶಿವ ಅಮರಾಪುರ್ಕರ್ ವಿಧಿವಶ

    |

    ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಹಿಂದಿ ಚಿತ್ರರಂಗದ ಹಿರಿಯ ನಟ ಸದಾಶಿವ ಅಮರಾಪುರ್ಕರ್ ಮುಂಬೈನಲ್ಲಿ ಸೋಮವಾರ ಮುಂಜಾನೆ ವಿಧಿವಶರಾಗಿದ್ದಾರೆ. ಹಿಂದಿ ಮತ್ತು ಮರಾಠಿ ಭಾಷೆಗಳ ಸುಮಾರು 300 ಚಿತ್ರಗಳಲ್ಲಿ ಸದಾಶಿವ ಅವರು ನಟಿಸಿದ್ದರು.

    ಸದಾಶಿವ ಅಮರಾಪುರ್ಕರ್ ಅವರು (64) ಎರಡು ವಾರಗಳ ಹಿಂದೆ ಮುಂಬೈನ ಕೋಕಿಲಾಬೆನ್ ಧೀರುಬಾಯಿ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಮುಂಜಾನೆ 2 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

    Amrapurkar

    ಅಮಹಮದಾಬಾದ್‌ ಮೂಲದ ಅಮರಾಪುರ್ಕರ್ ಅವರು 1950 ಮೇ 11ರಂದು ಜನಿಸಿದ್ದರು. 80ರ ದಶಕದಲ್ಲಿ ಹಿಂದಿ ಮತ್ತು ಮಠಾಠಿ ಭಾಷೆಗಳಲ್ಲಿ ಹೆಚ್ಚು ಬೇಡಿಕೆಯ ನಟರಾಗಿದ್ದ ಅಮರಾಪುರ್ಕರ್ ಅವರು ಸುಮಾರು 300 ಚಿತ್ರಗಳಲ್ಲಿ ನಟಿಸಿದ್ದಾರೆ.

    ಖಳನಟರಾಗಿ ಪ್ರಖ್ಯಾತರಾಗಿದ್ದ ಅಮರಾಪುರ್ಕರ್ ಅರ್ಧಸತ್ಯ, ಸಡಕ್‌ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅರ್ಧಸತ್ಯ ಚಿತ್ರಕ್ಕಾಗಿ ಮೊದಲ ಬಾರಿಗೆ ಫಿಲಂಫೇರ್ ಪ್ರಶಸ್ತಿ ಪಡೆದಿದ್ದರು. ಸಡಕ್ ಚಿತ್ರದ ಮಹಾರಾಣಿ ಪಾತ್ರದ ಮೂಲಕ ಪ್ರಸಿದ್ಧಿ ಪಡೆದಿದ್ದರು.

    Sadashiv

    2012ರಲ್ಲಿ ಬಿಡುಗಡೆಗೊಂಡಿದ್ದ 'ಬಾಂಬೆ ಟಾಕೀಸ್‌' ಅಮರಾಪುರ್ಕರ್ ಅವರ ಕೊನೆ ಚಿತ್ರ. ಅಮರಾಪುರ್ಕರ್ ತಮ್ಮ ಸಿನಿ ಬದುಕಿನಲ್ಲಿ ಎರಡು ಬಾರಿ ಫಿಲಂಫೇರ್ ಪ್ರಶಸ್ತಿ ಪಡೆದಿದ್ದಾರೆ.

    ಸದಾಶಿವ ಅಮರಾಪುರ್ಕರ್ ಅವರ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.

    English summary
    Bollywood actor Sadashiv Amrapurkar (64) who was being treated for a lung infection at Kokilaben Dhirubhai Ambani Hospital Mumbai passed away on Monday morning.
    Monday, November 3, 2014, 17:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X