»   » 90ರ ದಶಕದ ಬ್ಲಾಕ್ ಬಸ್ಟರ್ ಸಿನಿಮಾ ಸೀಕ್ವೆಲ್ ನಲ್ಲಿ ಆಲಿಯಾ ಭಟ್?

90ರ ದಶಕದ ಬ್ಲಾಕ್ ಬಸ್ಟರ್ ಸಿನಿಮಾ ಸೀಕ್ವೆಲ್ ನಲ್ಲಿ ಆಲಿಯಾ ಭಟ್?

Posted by:
Subscribe to Filmibeat Kannada

ಬಿ ಟೌನ್ ನಲ್ಲಿ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳ ಮುಂದುವರಿದ ಭಾಗಗಳು ಮೂಡಿಬರುತ್ತಿರುವುದು ನಿಮಗೆಲ್ಲಾ ಗೊತ್ತೇ ಇರುವ ವಿಷಯ. ಉದಾಹರಣೆಗೆ 'ಧೂಮ್', 'ಕ್ರಿಶ್', 'ಏಕ್ ಥಾ ಟೈಗರ್' ಚಿತ್ರಗಳ ಸೀಕ್ವೆಲ್ ಮುಂದುವರೆಯುತ್ತಲೇ ಇದೆ.['ಪ್ರೀತಿ-ಪ್ರೇಮ'ಕ್ಕೆ ಎಳ್ಳುನೀರು ಬಿಟ್ಟ ಬಾಲಿವುಡ್ ನ ಮತ್ತೊಂದು ಜೋಡಿ]

ಈಗ ಅಂತಹದೊಂದು ಸಾಲಿಗೆ ಬಾಲಿವುಡ್ ನ 90 ರ ದಶಕದ ಸಿನಿಮಾವೊಂದು ಸೇರಿಕೊಂಡಿದೆ. ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಡೀಟೇಲ್ಸ್ ಇಲ್ಲಿದೆ ನೋಡಿ..

ಸಂಜಯ್ ದತ್ 'ಸಡಕ್' ಚಿತ್ರ

ಸಂಜಯ್ ದತ್ 'ಸಡಕ್' ಚಿತ್ರ

ಡಿಎನ್ ಎ ವರದಿ ಪ್ರಕಾರ, ನಿರ್ದೇಶಕ ಮಹೇಶ್ ಭಟ್ ತಮ್ಮ 90 ದಶಕದ 'ಸಡಕ್' ಚಿತ್ರದ ಮುಂದುವರಿದ ಭಾಗ ನಿರ್ಮಿಸಲು ಪ್ಲಾನ್ ಮಾಡುತ್ತಿದ್ದಾರಂತೆ. ಈ ಸಿನಿಮಾದಲ್ಲಿ ಸಂಜಯ್ ದತ್ ಮತ್ತು ಪೂಜಾ ಭಟ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.[ಮುದ್ದು ಬೆಡಗಿಗೆ ಬಿಕಿನಿ ಧರಿಸಲು ಸೈಕ್ಲಿಂಗ್ ಸಹಾಯ ಆಯ್ತಂತೆ!]

'ಸಡಕ್' ಚಿತ್ರಕ್ಕೆ ಆಲಿಯಾ ಭಟ್

'ಸಡಕ್' ಚಿತ್ರಕ್ಕೆ ಆಲಿಯಾ ಭಟ್

ಅಂದಹಾಗೆ ತಮ್ಮ ನಿರ್ದೇಶನದ 'ಸಡಕ್' ಸೀಕ್ವೆಲ್ ಚಿತ್ರಕ್ಕೆ ಮಹೇಶ್ ಭಟ್ ತಮ್ಮ ಕಿರಿಯ ಮಗಳಾದ ಆಲಿಯಾ ಭಟ್ ರನ್ನೇ ಮುಖ್ಯಭೂಮಿಕೆಯಲ್ಲಿ ನಟಿಸಲು ಸೇರಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಬಿ ಟೌನ್ ನಲ್ಲಿ ಕೇಳಿಬರುತ್ತಿವೆ.

ಮಗಳ ಪಾತ್ರದಲ್ಲಿ ಆಲಿಯಾ ಭಟ್

ಮಗಳ ಪಾತ್ರದಲ್ಲಿ ಆಲಿಯಾ ಭಟ್

ಅಂದಹಾಗೆ ವರದಿಗಳ ಪ್ರಕಾರ ಆಲಿಯಾ ಭಟ್ 'ಸಡಕ್' ಸೀಕ್ವೆಲ್ ನಲ್ಲಿ ಪೂಜಾ ಭಟ್ ಮತ್ತು ಸಂಜಯ್ ದತ್ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. 'ಸಡಕ್' ಸೀಕ್ವೆಲ್ ಸಂಜಯ್ ದತ್ ತನ್ನ ಮಗಳನ್ನು ಒಂದು ದೊಡ್ಡ ಸಮಸ್ಯೆಯಿಂದ ಪಾರುಮಾಡುವ ಸನ್ನಿವೇಶಗಳ ಸುತ್ತ ಸುತ್ತುವ ಚಿತ್ರಕಥೆಯನ್ನು ಹೊಂದಿದ್ದು, ಪೂಜಾ ಭಟ್ ಕೇವಲ ಒಂದು ಫ್ಲ್ಯಾಶ್ ಬ್ಯಾಕ್ ಸೀನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

90 ರ ದಶಕದ 'ಸಡಕ್' ಚಿತ್ರ

90 ರ ದಶಕದ 'ಸಡಕ್' ಚಿತ್ರ

1991 ಡಿಸೆಂಬರ್ 23 ರಂದು ತೆರೆಕಂಡ ರೊಮ್ಯಾಂಟಿಕ್ ಥ್ರಿಲ್ಲರ್ 'ಸಡಕ್' ಚಿತ್ರ ಸಂಜಯ್ ದತ್ ವೃತ್ತಿ ಬದುಕಿಗೆ ಬಿಗ್ ಬ್ರೇಕ್ ನೀಡಿತ್ತು. ಸೂಪರ್ ಹಿಟ್ ಬ್ಲಾಕ್ ಬಸ್ಟರ್ 'ಸಡಕ್' ಸಿನಿಮಾ ಟ್ಯಾಕ್ಸಿ ಚಾಲಕನಿಗೆ, ವೇಶ್ಯಾವಾಟಿಕೆ ದಂಧೆಗೆ ಒತ್ತಾಯ ಪೂರಕವಾಗಿ ಗುರಿಯಾಗುತ್ತಿದ್ದ ಮಹಿಳೆಯೊಬ್ಬಳ ಮೇಲೆ ಪ್ರೀತಿ ಉಂಟಾಗಿ ಅವಳನ್ನು, ಸಮಸ್ಯೆಯಿಂದ ಪಾರು ಮಾಡಿ ಸ್ವತಂತ್ರಗೊಳಿಸುವ ಚಿತ್ರಕಥೆ. ಈಗ ಈ ಚಿತ್ರವನ್ನು ನಿರ್ದೇಶಿಸಿದ್ದ ಮಹೇಶ್ ಬಟ್ ಅವರೇ ಸೀಕ್ವೆಲ್ ನಿರ್ಮಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಚಿತ್ರದಲ್ಲಿ ಆಲಿಯಾ ಭಟ್ ಅಭಿನಯಿಸುತ್ತಾರಾ? ಎಂಬುದು ಕನ್ಫರ್ಮ್ ಆಗಿಲ್ಲ.

English summary
Mahesh Bhatt is planning to make a sequel to Sanjay Dutt- Pooja Bhatt's superhit film Sadak with Alia Bhatt playing their daughter.
Please Wait while comments are loading...

Kannada Photos

Go to : More Photos