»   » ಹಣಕ್ಕಾಗಿ ಎಂಥಾ ಜಾಹೀರಾತಿಗೂ ಸೈ ಅನ್ನೋ ನಟಿಯಲ್ಲ!

ಹಣಕ್ಕಾಗಿ ಎಂಥಾ ಜಾಹೀರಾತಿಗೂ ಸೈ ಅನ್ನೋ ನಟಿಯಲ್ಲ!

Posted by:
Subscribe to Filmibeat Kannada

ಕೆಲವರಿಗೆ ದುಡ್ಡು ಮಾಡುವುದಕ್ಕೆ ಒಂದು ಪಾಲಿಸಿ ಅನ್ನೋದು ಇರುತ್ತೆ, ದುಡ್ಡೇ ದೊಡ್ಡಪ್ಪ ಎನ್ನುವ ಕ್ಯಾಟಗರಿಯಿಂದ ಹೊರತಾದ ಸೆಲೆಬ್ರಿಟಿಗಳೂ ಇದ್ದಾರೆ ಎನ್ನುವುದಕ್ಕೆ ಬಾಲಿವುಡ್ ಚಿತ್ರೋದ್ಯಮದ ಈ ನಟಿ ಉದಾಹರಣೆಯಾಗಿದ್ದಾರೆ.

ಸುಲಭವಾಗಿ ಸಿಗುವ ದುಡ್ಡು ಜಾಹೀರಾತಿನಿಂದ ಬರುವಂತದ್ದು. ಕಾಂಡೋಮ್ ನಿಂದ ಹಿಡಿದು ಎಸಿಯವರೆಗೆ ಬಾಲಿವುಡ್ ಸೆಲೆಬ್ರಿಟಿಗಳು ಹಲವು ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಉದಾಹರಣೆಗಳಿವೆ.

Kangana Ranaut rejects fairness cream ad deal worth Rs 2 crore

ಆದರೆ, ಶ್ರೇಷ್ಟ ನಟಿ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಕಂಗನಾ ರನಾವತ್ ಜಾಹೀರಾತಿ ಕಂಪೆನಿಯೊಂದು ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಲು, ನೀಡಲು ಮುಂದಾಗಿದ್ದ ಎರಡು ಕೋಟಿ ರೂಪಾಯಿ ಆಫರ್ ಅನ್ನು ತಿರಸ್ಕರಿಸಿದ್ದಾರೆ.

ಫೇರ್ ನೆಸ್ ಕ್ರೀಮ್ ಸಂಸ್ಥೆಯೊಂದು ತನ್ನ ಪ್ರತಿನಿಧಿಯಾಗಲು ಆಫರ್ ನೀಡಿತ್ತು. ಆದರೆ ಅಂದವನ್ನು ಅಳೆಯುವುದಕ್ಕೆ ಬಣ್ಣ ಮಾನದಂಡವಲ್ಲ ಎಂದು ಕಂಗನಾ ನಿಜ ಜೀವನದಲ್ಲೂ ನಾಯಕಿಯಾಗಿದ್ದಾರೆ.

ಬಿಳಿ ಚರ್ಮದವರು ಮಾತ್ರ ಸುಂದರಿಯರು ಅನ್ನುವುದಕ್ಕೆ ನನ್ನ ವಿರೋಧವಿದೆ ಎಂದು ಕಂಗನಾ ಆಫರ್ ತಿರಸ್ಕರಿಸಿ, ಹಣಕ್ಕಾಗಿ ಎಂಥಾ ಜಾಹೀರಾತಿಗೂ ಸೈ ಅನ್ನೋ ನಟಿಯರ ಪಟ್ಟಿಯಲ್ಲಿ ತಾನಿಲ್ಲ ಎನ್ನುವುದನ್ನು ಕಂಗನಾ ತೋರಿಸಿಕೊಟ್ಟಿದ್ದಾರೆ.

2014ರ ಸಾಲಿನ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಕಂಗನಾ 'ಕ್ವೀನ್' ಚಿತ್ರದ ಅದ್ಭುತ ನಟನೆಗಾಗಿ ಪಡೆದಿದ್ದರೆ, ಕನ್ನಡದ ವಿಜಯ್ ಹರಿವು 'ನಾನು ಅವನಲ್ಲ ಅವಳು' ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದರು. (ಸಂಚಾರಿ ವಿಜಯ್ ಕಣ್ಣೀರ ಕಥೆಗೆ ಸಂದ ಜಯ)

ಕಂಗನಾ ರಣಾವತ್, ಮಾಧವನ್, ಜಿಮ್ಮ್ ಶೇರ್ಗಿಲ್ ಪ್ರಮುಖ ಭೂಮಿಕೆಯಲ್ಲಿರುವ ಹಿಂದಿ 'ತನು ವೆಡ್ಸ್ ಮನು ರಿಟರ್ನ್ಸ್' ಚಿತ್ರ ಹೋದ ಶುಕ್ರವಾರ (ಮೇ 22) ಬಿಡುಗಡೆಯಾಗಿತ್ತು ಮತ್ತು ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ. ಚಿತ್ರದ ವಿಮರ್ಶೆಗಾಗಿ ಇಲ್ಲಿ ಕ್ಲಿಕ್ಕಿಸಿ

English summary
Bollywood actress Kangana Ranaut rejects fairness cream ad deal worth Rs 2 crore.
Please Wait while comments are loading...

Kannada Photos

Go to : More Photos