»   » ಬಾಲಿವುಡ್ ಪರ್ಫೆಕ್ಷನಿಸ್ಟ್ ಅಮೀರ್ ಖಾನಿಗೆ ನಿದ್ದೆಯಿಲ್ಲದ ರಾತ್ರಿಗಳು

ಬಾಲಿವುಡ್ ಪರ್ಫೆಕ್ಷನಿಸ್ಟ್ ಅಮೀರ್ ಖಾನಿಗೆ ನಿದ್ದೆಯಿಲ್ಲದ ರಾತ್ರಿಗಳು

Posted by:
Subscribe to Filmibeat Kannada

ವರ್ಷಕ್ಕೊಂದು ಚಿತ್ರದಲ್ಲಿ ಕಾಣಿಸಿಕೊಂಡರೂ ಆ ಚಿತ್ರವನ್ನು ಶಿಸ್ತುಬದ್ದವಾಗಿ ತೆರೆಗೆ ತರುವಲ್ಲಿ ಹಿಂದಿ ಚಿತ್ರೋದ್ಯಮದ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಹೆಸರುವಾಸಿ.

ಚಿತ್ರದ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುವ ಅಮೀರ್, ಅದಕ್ಕಾಗಿ ಪೂರ್ವ ತಯಾರಿ ನಡೆಸುವುದು ಇಡೀ ಚಿತ್ರದ್ಯೋಮಕ್ಕೆ ಮಾದರಿ. (ನೆಮ್ಮದಿ ಹಾಳುಗೆಡಹುವ ಚಿತ್ರ ಯಾರಿಗೆ ಬೇಕು)

ಹಲವು ವಿವಾದಗಳ ನಡುವೆಯೂ ಕೋಟಿ ಕೋಟಿ ಬಾಚಿ, ಬಾಕ್ಸಾಫೀಸಿನಲ್ಲಿ ದಾಖಲೆ ನಿರ್ಮಿಸಿದ ಪಿಕೆ ಚಿತ್ರದಲ್ಲಿ ಅಮೀರ್ ಖಾನ್ ನಟನೆ ವ್ಯಾಪಕ ಪ್ರಶಂಸೆಗೆ ಒಳಾಗಿತ್ತು, ಜೊತೆಗೆ ಚಿತ್ರದ ಕಥಾಹಂದರ ಕೂಡಾ ಭಾರೀ ಚರ್ಚೆಗೊಳಗಾಗಿತ್ತು.

ಇತ್ತೀಚಿನ ದಿನಗಳಲ್ಲಿ ಅಮೀರ್ ಖಾನ್ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಮುಂದೆ ಓದಿ..

ಹೊಸ ಚಿತ್ರ

ಹೊಸ ಚಿತ್ರ

ಚಿಕ್ಕಪ್ಪ ನಾಸಿರ್ ಹುಸೇನ್ ರ ಯಾದೋಂಕಿ ಬಾರಾತ್ (1973) ಚಿತ್ರದಲ್ಲಿ ಬಾಲ ಕಲಾವಿದನಾಗಿ ಕಾಣಿಸಿಕೊಂಡಿದ್ದ ಅಮೀರ್, ಇದಾದ ಹನ್ನೊಂದು ವರ್ಷದ ನಂತರ ಹೋಲಿ (1984) ಚಿತ್ರದ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದರು. ಈಗ ಅಮೀರ್ ಅವರ ಹೊಸ ಚಿತ್ರ ಸೆಟ್ಟೇರುತ್ತಿದೆ.

ದೇಶೀ ಶೈಲಿಯ ಕುಸ್ತಿ

ದೇಶೀ ಶೈಲಿಯ ಕುಸ್ತಿ

ಅಮೀರ್ ಖಾನ್ ಮನೆಯಲ್ಲಿ ಟಿವಿ ನೋಡುತ್ತಿದ್ದ ವೇಳೆ ದೇಶೀ ಶೈಲಿಯ ಕುಸ್ತಿ ಪಂದ್ಯ ನೋಡಿ ಆಕರ್ಷಿತರಾಗುತ್ತಾರೆ. ಮುಂಜಾನೆ ನಾಲ್ಕು ಗಂಟೆಯ ತನಕ ಟಿವಿಯಲ್ಲಿ ಈ ಪಂದ್ಯವನ್ನು ವೀಕ್ಷಿಸಿ ಪ್ರಭಾವಕ್ಕೊಳಗಾಗುತ್ತಾರೆ.

ಡಂಗಲ್

ಡಂಗಲ್

ಅಮೀರ್ ಖಾನ್ ಅವರ 'ಡಂಗಲ್' (ಮಲ್ಲಯುದ್ದ, ಕುಸ್ತಿ) ಎನ್ನುವ ಚಿತ್ರ ಸೆಟ್ಟೇರಲು ಸಜ್ಜಾಗಿದೆ. ಇದು ಕುಸ್ತಿಪಟು ಮಹಾವೀರ್ ಸಿಂಗ್ ಮತ್ತು ಆತನ ಇಬ್ಬರು ಖ್ಯಾತ ಪುತ್ರಿಯರಾದ ಗೀತಾ ಮತ್ತು ಬಬಿತಾ ಪೋಗಟ್ ನಡುವಣ ಕಥಾನಕವನ್ನು ಹೊಂದಿದೆ.

ತಂದೆಯ ಪಾತ್ರದಲ್ಲಿ

ತಂದೆಯ ಪಾತ್ರದಲ್ಲಿ

ಈ ಚಿತ್ರದಲ್ಲಿ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅಮೀರ್ ಖಾನ್, ಪಾತ್ರಕ್ಕೆ ನ್ಯಾಯ ಒದಗಿಸಲು ನಿದ್ದೆಯಿಲ್ಲದ ರಾತ್ರಿಯನ್ನು ಕಳೆಯುತ್ತಿದ್ದಾರೆ. ದೇಶೀ ಕುಸ್ತಿಯ ಈ ಪಂದ್ಯ ಟಿವಿಯಲ್ಲಿ ಪ್ರತೀ ದಿನ ಬೆಳಗ್ಗೆ ನಾಲ್ಕು ಗಂಟೆಗೆ ಪ್ರಸಾರವಾಗುತ್ತದೆ.

ಸೆಪ್ಟಂಬರ್ ತಿಂಗಳಲ್ಲಿ ಸೆಟ್ಟೇರಲಿರುವ ಚಿತ್ರ

ಸೆಪ್ಟಂಬರ್ ತಿಂಗಳಲ್ಲಿ ಸೆಟ್ಟೇರಲಿರುವ ಚಿತ್ರ

ಇದೇ ಬರುವ ಸೆಪ್ಟಂಬರ್ ತಿಂಗಳಲ್ಲಿ ಚಿತ್ರ ಸೆಟ್ಟೇರಲಿದೆ. ನಿತೀಶ್ ತಿವಾರಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಫಾತಿಮಾ ಶೇಖ್, ಸನ್ಯಾ ಮಲ್ಹೋತ್ರ, ಝೈರಾ ವಾಸಿಂ ಮತ್ತು ಸುಹಾನಿ ಭಟ್ನಾಗರ್ ಈ ಚಿತ್ರದ ನಾಲ್ವರು ನಾಯಕಿಯರು.

English summary
Aamir Khan spends sleepless nights watching wrestling matches to prepare for his new movie Danga.
Please Wait while comments are loading...

Kannada Photos

Go to : More Photos