»   » 2014ರ ಬಹು ನಿರೀಕ್ಷಿತ ಮೆಗಾ ಚಿತ್ರಗಳು

2014ರ ಬಹು ನಿರೀಕ್ಷಿತ ಮೆಗಾ ಚಿತ್ರಗಳು

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

2014 ಆರಂಭದಲ್ಲೇ ಅಮೀರ್ ಖಾನ್ ಅಭಿನಯದ ಧೂಮ್ 3 ಚಿತ್ರ 500 ಕೋಟಿ ರು ಗಡಿ ದಾಟಿ ಹೊಸ ಗಡಿಕಲ್ಲು ಸ್ಥಾಪಿಸಿದೆ. ಚಿತ್ರದ ಗಳಿಕೆಗಿಂತ ಜನರ ಪ್ರೀತಿ ಗಳಿಕೆ ಮುಖ್ಯ ಎಂದು ಸಲ್ಮಾನ್ ಖಾನ್ ಧಾರಾಳವಾಗಿ ಹೇಳಿದ್ದಾರೆ. ಅದರೆ, ನಿರ್ಮಾಪಕರು, ವಿತಕರು ಹಾಗೂ ಶಾರುಖ್ ಖಾನ್ ರಂಥ ಪಕ್ಕಾ ಮಾರ್ಕೆಟಿಂಗ್ ಚಿತ್ರಕರ್ಮಿಗಳು ಮಾತ್ರ ಎಂದಿನಂತೆ ಬಾಕ್ಸಾಫೀಸ್ ಗಳಿಕೆ ಗ್ರಾಫ್ ಏರಿಸಲು ನಾನಾ ತಂತ್ರಗಳನ್ನು ರೂಪಿಸುತ್ತಿದ್ದಾರೆ.

ಸಲ್ಮಾನ್, ಶಾರುಖ್, ಅಮೀರ್ ಖಾನ್ ತ್ರಯರಲ್ಲದೆ ಉತ್ತಮ ಚಿತ್ರ ನಿರ್ಮಾಣ ಮೂಲಕ ಗಮನ ಸೆಳೆದಿರುವ ಜಾನ್ ಅಬ್ರಹಾಂ ಅವರ ಮೆಗಾ ಚಿತ್ರಗಳು ಈ ವರ್ಷ ತೆರೆ ಕಾಣಲಿದೆ. 2014ರಲ್ಲಿ ತೆರೆ ಕಾಣಲಿರುವ ಬಿಗ್ ಬಜೆಟ್ ಹಾಗೂ ಸೂಪರ್ ಹಿಟ್ ಆಗುವ ನಿರೀಕ್ಷೆ ಹುಟ್ಟಿಸಿರುವ ಚಿತ್ರಗಳ ಸಂಗ್ರಹ ಇಲ್ಲಿದೆ ನೋಡಿ...

ಸಲ್ಮಾನ್ ಖಾನ್  ಅಭಿನಯದ ಜೈ ಹೋ
  

ಸಲ್ಮಾನ್ ಖಾನ್ ಅಭಿನಯದ ಜೈ ಹೋ

ತೆಲುಗಿನಲ್ಲಿ ಭರ್ಜರಿ ಯಶಸ್ಸು ಕಂಡ ಚಿರಂಜೀವಿ ಅಭಿನಯದ ಸ್ಟಾಲಿನ್ ಚಿತ್ರದ ರಿಮೇಕ್ ಚಿತ್ರ ಜೈಹೋ ನಲ್ಲಿ ಸಲ್ಮಾನ್ ಖಾನ್ ಮುಖ್ಯಭೂಮಿಕೆಯಲ್ಲಿದ್ದು, ಸಲ್ಮಾನ್ ಸೋದರ ಸೊಹೈಲ್ ಖಾನ್ ನಿರ್ದೇಶನ ಮಾಡಿದ್ದಾರೆ.

ಜೈಹೋ ಚಿತ್ರದ ಪೋಸ್ಟರ್, ಟೀಸರ್, ಟ್ರೇಲರ್, ಹಾಡುಗಳು ಈಗಾಗಲೇ ಅಭಿಮಾನಿಗಳ ಮೆಚ್ಚುಗೆ ಪಡೆದಿದೆ. ಫ್ಯಾನ್ಸ್ ತಮ್ಮದೇ ವಿನ್ಯಾಸದ ಪೋಸ್ಟರ್ ಗಳನ್ನು ಸಲ್ಮಾನ್ ಗೆ ಕೊಡುಗೆಯಾಗಿ ನೀಡಿದ್ದಾರೆ. ಧೂಮ್ 3 ಚಿತ್ರದ ಓಟಕ್ಕೆ ಜೈ ಹೋ ಬ್ರೇಕ್ ಹಾಕುತ್ತದೆ ಎಂಬ ನಿರೀಕ್ಷೆಯಂತೂ ಇದ್ದೇ ಇದೆ

ಸಲ್ಮಾನ್ ಖಾನ್ ಅವರ ಕಿಕ್
  

ಸಲ್ಮಾನ್ ಖಾನ್ ಅವರ ಕಿಕ್

ಸಲ್ಮಾನ್ ಖಾನ್ ಅವರು ನಾಯಕರಾಗಿರುವ ಕಿಕ್ ಚಿತ್ರ ತುಂಬಾ ಕಾಲ ವಿಳಂಬದ ನಂತರ ತೆರೆಗೆ ಬರಲು ಸಿದ್ಧವಾಗಿದೆ. ಇದು ಕೂಡಾ ತೆಲುಗಿನಲ್ಲಿ ರವಿತೇಜ ಅಭಿನಯಿಸಿದ ಕಿಕ್ ಚಿತ್ರದ ರಿಮೇಕ್. ಚಿತ್ರ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲ ನಿರ್ದೇಶಕನ ಕ್ಯಾಪ್ ಧರಿಸಿ ಈ ಚಿತ್ರವನ್ನು ಮುಂದಿನ ಈದ್ ಸಂದರ್ಭದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಅಮೀರ್ ಖಾನ್ ಅವರ P.K
  

ಅಮೀರ್ ಖಾನ್ ಅವರ P.K

ರಾಜ್ ಕುಮಾರ್ ಹಿರಾಣಿ ಅವರ ಬಹು ನಿರೀಕ್ಷಿತ ಚಿತ್ರದಲ್ಲಿ ಅಮೀರ್ ಖಾನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಆಧ್ಯಾತ್ಮ, ವಾಣಿಜ್ಯ ಉದ್ದೇಶಕ್ಕಾಗಿ ದೇವರ ಬಳಕೆ ಬಗ್ಗೆ ಚಿತ್ರ ಕಥೆ ಹೆಣೆಯಲಾಗಿದೆ. 3 ಈಡಿಯಟ್ಸ್ ನಂತರ ಅಮೀರ್- ಹಿರಾಣಿ ಜೋಡಿ ಮತ್ತೊಮ್ಮೆ ಕಮಾಲ್ ಮಾಡಲಿದೆ ಎಂದು ಸಿನಿ ಪಂಡಿತರ ನಿರೀಕ್ಷೆ. 3 ಈಡಿಯಟ್ಸ್ 200 ಕೋಟಿ ರು ಕ್ಲಬ್ ಖಾತೆ ಓಪನ್ ಮಾಡಿದ ಚಿತ್ರ ಎಂಬುದನ್ನು ಮರೆಯುವಂತಿಲ್ಲ.

ಶಾರುಖ್ ಅವರ ಹ್ಯಾಪಿ ನ್ಯೂ ಇಯರ್
  

ಶಾರುಖ್ ಅವರ ಹ್ಯಾಪಿ ನ್ಯೂ ಇಯರ್

ಓಂ ಶಾಂತಿ ಓಂ ನಂತರ ಶಾರುಖ್ ಖಾನ್ -ದೀಪಿಕಾ - ಫರ್ಹಾಖಾನ್ ಜೋಡಿ ಮತ್ತೊಮ್ಮೆ ಒಂದಾಗಿದ್ದು ಹ್ಯಾಪಿ ನ್ಯೂ ಇಯರ್ ಚಿತ್ರದ ಮೂಲಕ ಸಿನಿ ರಸಿಕರನ್ನು ರಂಜಿಸಲು ಬರುತ್ತಿದ್ದಾರೆ. ಚೆನ್ನೈ ಎಕ್ಸ್ ಪ್ರೆಸ್ ಯಶಸ್ಸಿನ ಓಟ ನೋಡಿರುವ ಶಾರುಖ್ ಅಭಿಮಾನಿಗಳು ಈ ಚಿತ್ರಕ್ಕಾಗಿ ಮುಂದಿನ ದೀಪಾವಳಿ ತನಕ ಕಾಯಬೇಕಾಗುತ್ತದೆ.

ಶಾರುಖ್ ಖಾನ್ Fan
  

ಶಾರುಖ್ ಖಾನ್ Fan

ಬಾಲಿವುಡ್ ನ ಸೂಪರ್ ಸ್ಟಾರ್ ಕಿಂಗ್ ಖಾನ್ ಶಾರುಖ್ ಒಬ್ಬ ಅಭಿಮಾನಿ(Fan) ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಭಾರಿ ಕುತೂಹಲ ಕೆರಳಿಸಿರುವ ಚಿತ್ರಗಳ ಸಾಲಿನಲಿ Fan ಕೂಡಾ ಒಂದೆನಿಸಿದೆ. ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರದ ಯಶಸ್ಸು ಕಟ್ಟಿಟ್ಟಬುತ್ತಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಅಕ್ಷಯ್ ಕುಮಾರ್ ಅವರ It’s Entertainment
  

ಅಕ್ಷಯ್ ಕುಮಾರ್ ಅವರ It’s Entertainment

ಚೆನ್ನೈ ಎಕ್ಸ್ ಪ್ರೆಸ್ ಗೆ ಕಥೆ ಒದಗಿಸಿದ ಜೋಡಿ ಫರ್ಹಾದ್ -ಸಾಜಿದ್ ಕಥೆ ಹೆಣೆದಿರುವ ಎಂಟರ್ ಟೈನ್ಮೆಂಟ್ ಚಿತ್ರದ ಮೂಲಕ ಅಕ್ಷಯ್ ಕುಮಾರ್ ಮತ್ತೊಮ್ಮೆ ಯಶಸ್ವಿ ಚಿತ್ರಗಳ ಅಕೌಂಟ್ ಓಪನ್ ಮಾಡಲು ಸಿದ್ಧರಾಗಿದ್ದಾರೆ. ಟಿಪ್ಸ್ ಸಂಸ್ಥೆ ನಿರ್ಮಾಣದ ಈ ಚಿತ್ರ ಮೊದಲ ವಾರದಲ್ಲೇ 100 ಕೋಟಿ ರು ಗಳಿಸುತ್ತದೆ ಎಂದು ಅಭಿಮಾನಿಗಳ ಅಂಬೋಣ

ಅಕ್ಷಯ್ ವೆಲ್ ಕಮ್ ಬ್ಯಾಕ್
  

ಅಕ್ಷಯ್ ವೆಲ್ ಕಮ್ ಬ್ಯಾಕ್

ಅನೀಸ್ ಬಾಜ್ಮಿ ಅವರ ಹಾಸ್ಯ ಪ್ರಧಾನ ಚಿತ್ರ ವೆಲ್ಕಮ್ ಬ್ಯಾಕ್ ಚಿತ್ರ 2007ರಲ್ಲಿ ತೆರೆ ಕಂಡ ಮೊದಲ ಭಾಗದ ಮುಂದುವರೆದ ಭಾಗವಾಗಿದೆ. ಅನಿಲ್ ಕಪೂರ್, ನಾನಾ ಪಾಟೇಕರ್, ಪರೇಶ್ ರಾವಲ್ ನಗೆ ಬುಗ್ಗೆ ಉಕ್ಕಿಸಲು ಸಿದ್ಧರಾಗಿದ್ದಾರೆ.

ಜಾನ್ ಅಬ್ರಹಾಂ, ಶ್ರುತಿ ಹಾಸನ್ ಕೂಡಾ ನಟಿಸುವ ಸಾಧ್ಯತೆಯಿದೆ. ಅಮಿತಾಬ್, ರೇಖಾ ಈ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಗಾಳಿಸುದ್ದಿ ಕೂಡಾ ಹಬ್ಬಿತ್ತು.

 

ರಾಜ್ ಬ್ಯಾನರ್ ನ Gunday
  

ರಾಜ್ ಬ್ಯಾನರ್ ನ Gunday

ದಬ್ಬಾಂಗ್ ,ಗ್ಯಾಂಗ್ಸ್ ಆಫ್ ವಸ್ಸೇಪುರ್ ನಂಥ ಚಿತ್ರಗಳ ನಂತರ ಬಾಲಿವುಡ್ ನಲ್ಲಿ ಭೂಗತ ಜಗತ್ತಿನ ಕಥೆ ಹೇಳುವ ನಿರೂಪಣಾ ಶೈಲಿಯೇ ಬದಲಾಗಿಬಿಟ್ಟಿದೆ. ಅಮಿತಾಬ್ ಅವರ ಹಳೆ ಹಿಟ್ ಚಿತ್ರಗಳ ರೀತಿಯಲ್ಲೇ ಸಾಗುವ ಶೈಲಿ ಹೋಲುವ 'ಗುಂಡೇ' ಚಿತ್ರ ಕೂಡಾ ನಿರೀಕ್ಷೆ ಹುಟ್ಟಿಸಿದೆ. ಯಶ್ ರಾಜ್ ಬ್ಯಾನರ್ ನ ಶ್ರೀರಕ್ಷೆ ಇರುವ ಈ ಚಿತ್ರ ಹೊಸಬರಿಗೆ ಉತ್ತಮ ವೇದಿಕೆ ಒದಗಿಸುವ ನಿರೀಕ್ಷೆ ಇದೆ

English summary
2014 will be a joyous year for Bollywood as a variety of quality films are lining up to set the Box Office on fire. All big stars of Bollywood, obsessed with the high of 100 crore clubs, are planning mega releases for their films in 2014.
Please Wait while comments are loading...

Kannada Photos

Go to : More Photos