twitter
    For Quick Alerts
    ALLOW NOTIFICATIONS  
    For Daily Alerts

    ಬಾಕ್ಸಾಫೀಸ್ ನಲ್ಲೂ ಬುಲೆಟ್ ರಾಜ ಒಳ್ಳೆ ಓಟ

    By ಜೇಮ್ಸ್ ಮಾರ್ಟಿನ್
    |

    ಗ್ಯಾಂಗ್ಸ್ ಆಫ್ ವಸ್ಸೇಪುರ್ ಚಿತ್ರದ ಮೂಲಕ ಪ್ರೇಕ್ಷಕರಿಗೆ ಭೂಗತ ಜಗತ್ತನ ಮಜಲನ್ನು ಪರಿಚಯ ಮಾಡಿಕೊಟ್ಟ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ತಿಗ್ಮಂಶು ಧೂಲಿಯಾ ಅವರ ಮತ್ತೊಮ್ಮೆ ಗೆದ್ದಿದ್ದಾರೆ. ತಿಗ್ಮಂಶು ಅವರ ಹೊಚ್ಚ ಹೊಸ ಚಿತ್ರ ಬುಲೆಟ್ ರಾಜ ಮೊದಲ ವಾರಾಂತ್ಯದಲ್ಲಿ ಭರ್ಜರಿ ಆರಂಭ ಕಂಡಿದೆ. ಛೋಟೆ ನವಾಬ ಸೈಫ್ ಅಲಿ ಖಾನ್ ಬಹು ದಿನಗಳ ನಂತರ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಪ್ರೇಕ್ಷಕರಿಗೆ ಮೆಚ್ಚುಗೆಯಾಗಿದ್ದರೆ, ವಿಮರ್ಶಕರು ಅರೆ ಮನಸ್ಸಿನಿಂದ ಚಿತ್ರ ಓಕೆ ಎಂದಿದ್ದಾರೆ.

    ನಿರೀಕ್ಷೆಯತೆ ದೇಶದ ಉತ್ತರ ಭಾಗದಲ್ಲಿ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಬಂದಿದೆ. ಉತ್ತರ ಪ್ರದೇಶದಲ್ಲಿ ಚಿತ್ರ ಹೌಸ್ ಫುಲ್ ಪ್ರದರ್ಶನ ಕಂಡಿದೆ. ನ.29 ರಂದು ತೆರೆ ಕಂಡ ಸೈಫ್ -ಸೋನಾಕ್ಷಿ ಚಿತ್ರ ಒಟ್ಟಾರೆ 23.3 ಕೋಟಿ ರು ಗಳಿಸಿ ಮಾಡಿದ್ದು ತಿಗ್ಮಂಶು ಅವರ ನಿರ್ದೇಶನದ ಚಿತ್ರಗಳ ಪೈಕಿ ಇದೇ ಉತ್ತಮ ಓಪನಿಂಗ್ ಎನಿಸಿದೆ.

    ಸೈಫ್ ಅವರ ಹೊಸ ಲುಕ್, ಮ್ಯಾನರೀಸಂಗೆ ದೆಹಲಿ, ಉತ್ತರ ಪ್ರದೇಶ, ಬಿಹಾರದ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸೈಫ್ ಅವರ ಚಿತ್ರ ಕೂಡಾ ಬಹು ಕಾಲದ ನಂತರ ಈ ರೀತಿ ಗಳಿಕೆ ಕಂಡಿದೆ. [ಬುಲೆಟ್ ರಾಜ ವಿಮರ್ಶೆ ಓದಿ]

    ವಿಮರ್ಶಕರಿಂದ ಪರ್ವಾಗಿಲ್ಲ ಓಕೆ ಎಂಬ ಪ್ರಮಾಣ ಪತ್ರ ಪಡೆದ ಬುಲೆಟ್ ರಾಜ ಬಾಕ್ಸಾಫೀಸ್ ನಲ್ಲಿ ಮಾತ್ರ ವೇಗದ ಗಳಿಕೆಯಲ್ಲಿ ತೊಡಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಬಾಯಿ ಮಾತಿನ ಪ್ರಚಾರ. ಭಾನುವಾರ ಸುಮಾರು ಶೇ 25ಕ್ಕೂ ಅಧಿಕ ಪ್ರೇಕ್ಷಕರ ವರ್ಗ ಚಿತ್ರಮಂದಿರಕ್ಕೆ ನುಗ್ಗಿದೆ. ವಾರಾಂತ್ಯದಲ್ಲಿ ಪ್ರತಿ ದಿನದ ಗಳಿಕೆ ವಿವರ ಮುಂದಿದೆ ನೋಡಿ..

    ವಾರಾಂತ್ಯದ ಗಳಿಕೆ ಹೀಗಿದೆ

    ವಾರಾಂತ್ಯದ ಗಳಿಕೆ ಹೀಗಿದೆ

    * ಶುಕ್ರವಾರ ನ.29 : 7.5 ಕೋಟಿ ರು
    * ಶನಿವಾರ ನ.30 : 7 ಕೋಟಿ ರು
    * ಭಾನುವಾರ ಡಿ.1 : 8.8 ಕೋಟಿ ರು
    ಒಟ್ಟಾರೆ 23.3 ಕೋಟಿ ರು ಗಳಿಸಿದೆ. ಇತ್ತೀಚಿಗೆ ರಿಲೀಸ್ ಆದ ಚಿತ್ರಗಳಿಗೆ ಹೋಲಿಸಿದರೆ ಇದು ಕಡಿಮೆ ಎನಿಸಿದರೂ ಸೈಫ್ ಅವರ ಚಿತ್ರ ಈ ರೀತಿ ಗಳಿಕೆ ಮಾಡಿದ್ದು ಇದೇ ಮೊದಲು

    ಸಾಗರೋತ್ತರ ದೇಶಗಳಲ್ಲಿ

    ಸಾಗರೋತ್ತರ ದೇಶಗಳಲ್ಲಿ

    ಸಾಗರೋತ್ತರ ದೇಶಗಳಲ್ಲಿ ಸುಮಾರು $ 912,257 [Rs. 5.68 crores] ಗಳಿಸಿದೆ ಎಂದು ಮಾರುಕಟ್ಟೆ ತಜ್ಞ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.

    ಗಳಿಕೆ ಆಗಲು ಕಾರಣ

    ಗಳಿಕೆ ಆಗಲು ಕಾರಣ

    ಡೈಲಾಗ್, ಹಾಡು ಕುಣಿತದ ಜತೆಗೆ ಬಹು ತಾರಾಗಣವೂ ಚಿತ್ರದ ಓಟಕ್ಕೆ ಕಾರಣ ಎನ್ನಲಾಗಿದೆ. ಸೈಫ್ ಹಾಗೂ ಸೋನಾಕ್ಷಿ ಹೊಸ ಜೋಡಿ ಜತೆಗೆ ಜಿಮ್ಮಿ ಶೆರ್ ಗಿಲ್, ರಾಜ್ ಬಬ್ಬದ್, ಗುಲ್ಶನ್ ಗ್ರೋವರ್, ರವಿ ಕಿಶನ್, ಚಂಕಿ ಪಾಂಡೆ ಹಾಗೂ ವಿದ್ಯುತ್ ಜಮ್ವಾಲ್ ಉತ್ತಮ ಅಭಿನಯದ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ

    ಗಳಿಕೆ ಕಡಿಮೆಗೆ ಕಾರಣ

    ಗಳಿಕೆ ಕಡಿಮೆಗೆ ಕಾರಣ

    ಹಲವೆಡೆ ಚಿತ್ರಕ್ಕೆ ಸಿಕ್ಕಿರುವ 15 + ಸರ್ಟೀಫಿಕೆಟ್ ಕಂಡು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಕುಟುಂಬ ವರ್ಗಗಳು ದೂರ ಉಳಿದಿರುವುದು ಚಿತ್ರಕ್ಕೆ ಹೊಡೆದ ಬಿದ್ದಿದೆ. ಬಾಯಿ ಮಾತಿನ ಪ್ರಚಾರ ಚಿತ್ರದ ಗಳಿಕೆ ಸಮಸ್ಥಿತಿಯಲ್ಲಿ ಇರಿಸಿದೆ

    ಪ್ರಮಾಣ ಪತ್ರ ಗೊಂದಲ

    15+ ಸರ್ಟಿಫಿಕೇಟ್ ಭಾರತದಲ್ಲಷ್ಟೆ ಅಲ್ಲ ವಿದೇಶಗಳಲ್ಲೂ ಚಿತ್ರದ ಪ್ರದರ್ಶನಕ್ಕೆ ತೊಂದರೆ ಕೊಟ್ಟಿದೆ.

    ತಿಗ್ಮಂಷು ಮಸಾಲ ಚಿತ್ರ

    ತಿಗ್ಮಂಷು ಮಸಾಲ ಚಿತ್ರ

    ದಿಲ್ ಸೆ ಚಿತ್ರಕ್ಕೆ ಸ್ಕ್ರಿಪ್ಟ್ ಬರೆದ ತಿಗ್ಮಂಷು ನಟ, ನಿರ್ಮಾಪಕ, ನಿರ್ದೇಶಕ, ಸಾಹಿತಿಯಾಗಿ ಹೆಸರುವಾಸಿ. ಅನುರಾಗ್ ಕಶ್ಯಪ್ ಅವರ ಗ್ಯಾಂಗ್ ಆಫ್ ವಸ್ಸೆಪುರ್ ಚಿತ್ರದಲ್ಲಿ ರಾಮಧೀರ್ ಸಿಂಗ್ ಪಾತ್ರದಲ್ಲಿ ಮಿಂಚಿದ್ದರು. ಆದರೆ, ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಬುಲೆಟ್ ರಾಜದಲ್ಲಿ ಹೆಚ್ಚಿನ ಮಸಾಲೆ ಬೆರೆಸಿದ್ದಾರೆ.

    ಇರ್ಫಾನ್ ಖಾನ್ ಅಭಿನಯದ ಭಾರತೀಯ ಅಥ್ಲೀಟ್ ಬಗ್ಗೆ 'ಪಾನ್ ಸಿಂಗ್ ತೋಮರ್' ಚಿತ್ರ ನಿರ್ದೆಶಿಸಿ ರಾಷ್ಟ್ರಪ್ರಶಸ್ತಿ ಗಳಿಸಿದ್ದ ತಿಗ್ಮಂಶು ಅವರ ಸಾಹೇಬ್ ಬಿವಿ ಔರ್ ಗ್ಯಾಂಗ್ ಸ್ಟರ್ ಎರಡು ಭಾಗ ಕೂಡಾ ಜನಪ್ರಿಯತೆ ಗಳಿಸಿತ್ತು.

    ಕಿರುತೆರೆಯಲ್ಲಿ ಜೀ ಟಿವಿಯ ನಾಯ ದೌರ್, ಸ್ಟಾರ್ ಪ್ಲಸ್ ಮುಸಾಫೀರ್, ಫುರ್ಸತ್ ಮೇ ಮುಂತಾದ ಸರಣಿಗಳನ್ನು ತಿಗ್ಮಂಷು ನಿರ್ದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

    English summary
    Tigmanshu Dhulia’s Bullett Raja which is back dropped against a mafia based in Uttar Pradesh has turned out to be a complete action packed entertainer. The film which hit the screens on 29th November, Friday has collected 23.3 crores at the Box Office making it the biggest opening weekend for Director Tigmanshu Dhulia!!!
    Tuesday, December 3, 2013, 12:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X