»   » ಆಟದ ಮೈದಾನದಲ್ಲಿ ಸನ್ನಿ ಲಿಯೋನ್ XXX ಪ್ರಚಾರ

ಆಟದ ಮೈದಾನದಲ್ಲಿ ಸನ್ನಿ ಲಿಯೋನ್ XXX ಪ್ರಚಾರ

Written by: ರವಿಕಿಶೋರ್
Subscribe to Filmibeat Kannada

ಬಾಲಿವುಡ್ ಗೆ ಬಂದ ನೀಲಿವುಡ್ ತಾರೆ ಈಗ ಬೆಳ್ಳಿಪರದೆ ಮೇಲೆ ಮಿಂಚಿನ ಸಂಚಾರ ಉಂಟು ಮಾಡುತ್ತಿರುವುದು ಗೊತ್ತೇ ಇದೆ. ಸನ್ನಿ ಲಿಯೋನ್ ಹೆಜ್ಜೆ ಇಟ್ಟಲ್ಲೆಲ್ಲಾ ಏನೋ ಒಂಥರಾ ಭಾವ. ರಸಿಕರಿಗೆ ಒಂಥರಾ ಆದರೆ ಪಡ್ಡೆಗಳಿಗೆ ಇನ್ನೊಂಥರಾ ಅನುಭವ ಕೊಡುವ ತಾರೆ.

ಇತ್ತೀಚೆಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಬಹಳ ಗೆಲುವಿನಿಂದ ಓಡಾಡುತ್ತಾ ಎಲ್ಲರ ಕಣ್ಣು ಅವರ ಮೇಲೆ ಬೀಳುವಂತೆ ಮಾಡಿದರು. ಎನರ್ಜಿ ಡ್ರಿಂಕ್ XXX ಪ್ರಚಾರ ರಾಯಭಾರಿಯೂ ಆಗಿರುವ ಸನ್ನಿ ಲಿಯೋನ್ ಮೈದಾನದಲ್ಲಿ ಆ ಒಂದು ಕಾವಿನಲ್ಲೇ ತಮ್ಮ ಬೇಳೆ ಬೇಯಿಸಿಕೊಂಡರು. [ಟೈಗರ್ಸ್ ವಿರುದ್ಧ ಬುಲ್ಡೋಜರ್ಸ್ ವಿರೋಚಿತ ಗೆಲುವು]

ತೆಲುಗು ವಾರಿಯರ್ಸ್ ಹಾಗೂ ಕೇರಳ ಸ್ಟ್ರೈಕರ್ಸ್ ತಿಣುಕಾಡುತ್ತಿದ್ದರೆ ಸನ್ನಿ ಮಾತ್ರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ XXX ಎನರ್ಜಿ ಡ್ರಿಂಕ್ ಹಿಡಿದು ಎಲ್ಲರಿಗೂ ಹೊಸ ಎನರ್ಜಿ ತುಂಬುತ್ತಿದ್ದರು. ಬನ್ನಿ ನೋಡೋಣ ಸನ್ನಿಯ ಎನರ್ಜಿ ಚಿತ್ರಗಳು.

ಅಭಿಮಾನಿಗಳಿಗೆ ಸನ್ನಿ ಲಿಯೋನ್ XXX ಎನರ್ಜಿ

ಅಭಿಮಾನಿಗಳಿಗೆ ಸನ್ನಿ ಲಿಯೋನ್ XXX ಎನರ್ಜಿ

ಒಂದು ಕಡೆ ತೆಲುಗು ವಾರಿಯರ್ಸ್ ಇನ್ನೊಂದು ಕಡೆ ಕೇರಳ ಸ್ಟ್ರೈಕರ್ಸ್ ಸೆಣೆಸಾಟ. ಈ ಗ್ಯಾಪ್ ನಲ್ಲಿ ಸನ್ನಿ ಲಿಯೋನ್ ತಮ್ಮ XXX ಎನರ್ಜಿ ಡ್ರಿಂಕ್ ಹಿಡಿದು ಎಲ್ಲರಿಗೂ ಹೊಸ ಎನರ್ಜಿ ತುಂಬು ಪ್ರಯತ್ನ ಮಾಡಿದರು.

ಅಭಿಮಾನಿಗಳಿಗೆ ಹೊಸ ಹುರುಪು ತುಂಬಿದ ಸನ್ನಿ

ಅಭಿಮಾನಿಗಳಿಗೆ ಹೊಸ ಹುರುಪು ತುಂಬಿದ ಸನ್ನಿ

ತನ್ನ ಪತಿ ಡೇನಿಯಲ್ ವೆಬರ್ ಜೊತೆ ಸನ್ನಿ ಕಾಣಿಸಿಕೊಂಡದ್ದು ಹೀಗೆ. ಸಿಸಿಎಲ್ ನಲ್ಲೂ ತಮ್ಮ ಪತಿಯೊಂದಿಗೆ ಎನರ್ಜಿ ಡ್ರಿಂಕ್ ಹಿಡಿದು ಅಭಿಮಾನಿಗಳಿಗೆ ಹೊಸ ಸ್ಫೂರ್ತಿ ತುಂಬಿದರು.

ಸಚಿನ್ ಜೋಷಿ ಜೊತೆಗೆ ಎನರ್ಜಿ ಗರ್ಲ್

ಸಚಿನ್ ಜೋಷಿ ಜೊತೆಗೆ ಎನರ್ಜಿ ಗರ್ಲ್

ಸಚಿನ್ ಜೋಷಿ ಜೊತೆ ತಮ್ಮ XXX ಎನರ್ಜಿ ಡ್ರಿಂಕ್ ಪ್ರಚಾರ ಮಾಡಿದ ಬಗೆ ಈ ಚಿತ್ರದಲ್ಲಿ ಕಾಣಬಹುದು.

ಪ್ರಿಯಾಮಣಿ ಕೈಕುಲುಕಿದ ಸನ್ನಿ ಲಿಯೋನ್

ಪ್ರಿಯಾಮಣಿ ಕೈಕುಲುಕಿದ ಸನ್ನಿ ಲಿಯೋನ್

ನಮ್ಮ ಬೆಂಗಳೂರು ಬ್ಯೂಟಿ ಪ್ರಿಯಾಮಣಿ ಜೊತೆ ಸನ್ನಿ ಲಿಯೋನ್ ಕಾಣಿಸಿಕೊಂಡದ್ದು ಹೀಗೆ. ಸನ್ನಿ ಲಿಯೋನ್ ಕೈಕುಲುಕಿದ ಪ್ರಿಯಾಮಣಿ ಹರ್ಷಚಿತ್ತರಾದ ಬಗೆಯನ್ನು ಇಲ್ಲಿ ಕಾಣಬಹುದು.

ಚಾರ್ಮಿ ಕೌರ್ ಜೊತೆ ಸನ್ನಿ ಲಿಯೋನ್

ಚಾರ್ಮಿ ಕೌರ್ ಜೊತೆ ಸನ್ನಿ ಲಿಯೋನ್

ಇಬ್ಬರೂ ಸಖತ್ ಬ್ಯೂಟಿಗಳು. ಒಂದು ಕಡೆ ಪ್ರಿಯಾಮಣಿ ಇನ್ನೊಂದು ಕಡೆ ಚಾರ್ಮಿ ಕೌರ್. ಇಬ್ಬರ ಡ್ರೆಸ್ ಗಳೂ ಮ್ಯಾಚಿಂಗ್ ಮ್ಯಾಚಿಂಗ್.

ತಾರೆಗಳ ಜೊತೆ ಇನ್ನೊಂದು ಫೋಟೋ

ತಾರೆಗಳ ಜೊತೆ ಇನ್ನೊಂದು ಫೋಟೋ

ತಾರೆಗಳ ಗ್ರೂಫ್ ಫೋಟೋ ನೋಡುತ್ತಿದ್ದರೆ ಕಣ್ಣುಗಳು ಚಂಚಲವಾಗದಿದ್ದರೆ ಕೇಳಿ. ಒಬ್ಬರಿಗಿಂತ ಒಬ್ಬರು ಕಲರ್ ಫುಲ್.

ಫೋಟೋಗ್ರಾಫರ್ ಜೊತೆ ಗಂಡ ಹೆಂಡತಿ

ಫೋಟೋಗ್ರಾಫರ್ ಜೊತೆ ಗಂಡ ಹೆಂಡತಿ

ತಮ್ಮ XXX ಎನರ್ಜಿ ಡ್ರಿಂಕ್ ಜೊತೆ ಸನ್ನಿ ಲಿಯೋನ್ ಜೊತೆಗೆ ಪತಿ ಡೇನಿಯ ವೆಬರ್ ಫೋಟೋಗ್ರಾಫರ್ ಗೆ ಸೆರೆಸಿಕ್ಕ ಬಗೆ.

ಏನು ಸನ್ನೆ ಮಾಡುತ್ತಿದ್ದಾರೆ ಸನ್ನಿ ಲಿಯೋನ್

ಏನು ಸನ್ನೆ ಮಾಡುತ್ತಿದ್ದಾರೆ ಸನ್ನಿ ಲಿಯೋನ್

ತಪ್ಪಾಗಿ ಅರ್ಥೈಸಿಕೊಳ್ಳಬೇಡಿ...ಸನ್ನಿ ಲಿಯೋನ್ ಸನ್ನೆ ತೆಲುಗು ವಾರಿಯರ್ಸ್ ಗೆ. ಆ ತಂಡದ ಧ್ವಜ ಹಿಡಿದು ಕಾಣಿಸಿಕೊಂಡದ್ದು ಹೀಗೆ.

ಅಬ್ಬಬ್ಬಾ ಸಾಕಾಯಿತಪ್ಪಾ ಪ್ರಚಾರ

ಅಬ್ಬಬ್ಬಾ ಸಾಕಾಯಿತಪ್ಪಾ ಪ್ರಚಾರ

ಎನರ್ಜಿ ಡ್ರಿಂಕ್ ಪ್ರಚಾರ ಮಾಡಿ ಸುಸ್ತಾದ ಸನ್ನಿ ಲಿಯೋನ್ ಕಡೆಗೆ ಎಲ್ಲರೊಂದಿಗೆ ಬೆರೆತು ಮ್ಯಾಚ್ ನೋಡಿದರು.

ಸನ್ನಿಗೆ ಮತ್ತೆ ಹೊಸ ಎನರ್ಜಿ ಬಂತು

ಸನ್ನಿಗೆ ಮತ್ತೆ ಹೊಸ ಎನರ್ಜಿ ಬಂತು

ತೆಲುಗು ವಾರಿಯರ್ಸ್ ಹಾಗೂ ಕೇರಳ ಸ್ಟ್ರೈಕರ್ಸ್ ಪಂದ್ಯಾವಳಿಯ ರೋಚಕ ಕ್ಷಣಗಳನ್ನು ಸವಿಯುತ್ತಿರುವ ಸನ್ನಿ ಹಾಗೂ ಅವರ ಪತಿ.

English summary
Everybody knows that Bollywood actress Sunny Leone is the official brand ambassador for energy drink XXX. Recently, this hot Indo-Canadian star was seen promoting the brand at the Telugu Warriors' first match against Kerala Strikers at the Celebrity Cricket League 4 (CCL) held at Chinnaswamy Stadium in Bangalore on January 26.
Please Wait while comments are loading...

Kannada Photos

Go to : More Photos