twitter
    For Quick Alerts
    ALLOW NOTIFICATIONS  
    For Daily Alerts

    ಹಿಂದಿ ಬಾಕ್ಸಾಫೀಸಿನಲ್ಲಿ ಹೊಸ ಭಾಷ್ಯ ಬರೆದ ಶಾರೂಖ್

    |

    ಬಾಲಿವುಡ್ ಬಾದಶಾ ಶಾರೂಖ್ ಖಾನ್ ಈಗ ಹ್ಯಾಪಿ ಮ್ಯಾನ್. ಅವರ ಅಭಿನಯದ ಚೆನ್ನೈ ಎಕ್ಸ್ ಪ್ರೆಸ್ ಚಿತ್ರಕ್ಕೆ ಅಭೂತಪೂರ್ವ ಓಪನಿಂಗ್ ಸಿಕ್ಕಿದೆ. ದೇಶದೆಲ್ಲಡೆ ಮೊದಲ ದಿನದ ಪ್ರದರ್ಶನಕ್ಕೆ ಅಭಿಮಾನಿಗಳು ದಾಂಗುಡಿ ಇಟ್ಟಿದ್ದಾರೆ.

    3500 ಸ್ಥಳೀಯ ಪ್ರಿಂಟ್ ಮತ್ತು 700 ವಿದೇಶಿ ಪ್ರಿಂಟ್ ಗಳೊಂದಿಗೆ ವಿಶ್ವಾದ್ಯಂತ ಬಿಡುಗಡೆಯಾದ ರೋಹಿತ್ ಶೆಟ್ಟಿ ನಿರ್ದೇಶನದ ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ಈ ಹಿಂದೆ ಸಲ್ಮಾನ್ ಖಾನ್ ಅಭಿನಯದ ಏಕ್ ಥಾ ಟೈಗರ್ ಚಿತ್ರದ ಮೊದಲ ದಿನದ ದಾಖಲೆಯನ್ನು ಮುರಿಯುವ ಮೂಲಕ ಬಾಲಿವುಡ್ ಚಿತ್ರ ಜಗತ್ತಿನಲ್ಲಿ ಹೊಸ ಇತಿಹಾಸ ಬರೆದಿದೆ.

    ಕಳೆದ ವರ್ಷ ಆಗಸ್ಟ್ ಹದಿನೈದರಂದು ಬಿಡುಗಡೆಯಾಗಿದ್ದ ಏಕ್ ಥಾ ಟೈಗರ್ ಚಿತ್ರ 3500 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿತ್ತು ಮತ್ತು ಬಿಡುಗಡೆಯ ದಿನ 32.92 ಕೋಟಿ ರೂಪಾಯಿ ಗಳಿಕೆ ಕಂಡಿತ್ತು. ಈಗ ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ಈ ದಾಖಲೆಯನ್ನು ಮುರಿಯುವ ಮೂಲಕ ಹೊಸ ಭಾಷ್ಯ ಬರೆದಂತಾಗಿದೆ.

    ಮುಂಬೈನ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಶುಕ್ರವಾರ (ಆ 9) ಬಾಲ್ಕನಿ ಟಿಕೆಟುಗಳು 700 ರೂಪಾಯಿವರೆಗೆ ಕಾಳಸಂತೆಯಲ್ಲಿ ಮಾರಾಟವಾಗಿತ್ತು. ಅಂದ ಹಾಗೆ ಶಾರೂಖ್ -ದೀಪಿಕಾ ಪಡುಕೋಣೆ ಅಭಿನಯದ ಚೆನ್ನೈ ಎಕ್ಸ್ ಪ್ರೆಸ್ ಚಿತ್ರಕ್ಕೆ ಮಾಧ್ಯಮಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

    <span style=ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ವಿಮರ್ಶೆ" title="ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ವಿಮರ್ಶೆ" />ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ವಿಮರ್ಶೆ

    ಚೆನ್ನೈ ಎಕ್ಸ್ ಪ್ರೆಸ್ ಮೊದಲ ದಿನದ ಗಳಿಕೆಯೆಷ್ಟು? ಬೆಂಗಳೂರಿನಲ್ಲಿ ಹೇಗಿದೆ ಚಿತ್ರಕ್ಕೆ ಪ್ರತಿಕ್ರಿಯೆ ಸ್ಲೈಡಿನಲ್ಲಿ...

    ಮಾಧ್ಯಮಗಳ ವಿಮರ್ಶೆ

    ಮಾಧ್ಯಮಗಳ ವಿಮರ್ಶೆ

    ಹೆಚ್ಚಿನ ಮಾಧ್ಯಮಗಳು ಚಿತ್ರವನ್ನು ಪೈಸಾ ವಸೂಲ್ ಚಿತ್ರವೆಂದು ವಿಮರ್ಶಿಸಿದೆ. ಚಿತ್ರಕ್ಕೆ ಎರಡರಿಂದ ಮೂರುವರೆಯ ವರೆಗೆ ರೇಟಿಂಗ್ ಲಭಿಸಿದೆ. ಯಾವುದೇ ಮಾಧ್ಯಮಗಳಾಗಲಿ ಅಥವಾ ಪತ್ರಿಕೆಗಳಾಗಲಿ ಚಿತ್ರವನ್ನು excellent/out standing ಪಟ್ಟಿಗೆ ಸೇರಿಸಿಲ್ಲ. ಕೆಲವು ಮಾಧ್ಯಮಗಳು/ಪತ್ರಿಕೆಗಳು ಚಿತ್ರಕ್ಕೆ ಬರೀ ಎರಡು ಸ್ಟಾರ್ ನೀಡಿವೆ.

    ಚಿತ್ರದ ಮೊದಲ ದಿನದ ಗಳಿಕೆಯೆಷ್ಟು?

    ಚಿತ್ರದ ಮೊದಲ ದಿನದ ಗಳಿಕೆಯೆಷ್ಟು?

    trade analyst ಪ್ರಕಾರ ಚಿತ್ರ ಮೊದಲ ದಿನ 33.12 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಇದು ಇದುವರೆಗಿನ ಸಾರ್ವಕಾಲಿಕ ದಾಖಲೆ. ಬರೀ 6.75 ಕೋಟಿ ರೂಪಾಯಿ paid review ನಿಂದ ಬಂದಿದೆ. ಈ ಹಿಂದೆ 3 ಈಡಿಯೆಟ್ ಚಿತ್ರಕ್ಕೆ paid review ನಿಂದ 2.7 ಕೋಟಿ ರೂಪಾಯಿ ಬಂದಿತ್ತು.

    ಈದ್ ರಜೆ

    ಈದ್ ರಜೆ

    ಈದ್ - ಉಲ್ - ಫಿತರ್ ಹಬ್ಬದ ಪ್ರಯುಕ್ತ ದೇಶಾದ್ಯಂತ ರಜೆ ಇದ್ದುದ್ದರಿಂದ ಇದರ ಲಾಭವನ್ನು ಗರಿಷ್ಠವಾಗಿ ಚಿತ್ರ ಪಡೆದುಕೊಂಡಿದೆ. ಈ ವಾರಾಂತ್ಯದಲ್ಲಿ ಮಲ್ಟಿ ಪ್ಲೆಕ್ಸ್ ಗಳಲ್ಲಿ ಪ್ರದರ್ಶನದ ಸಂಖ್ಯೆಯನ್ನು ಕೆಲವೊಂದು ಕಡೆ ಹೆಚ್ಚಿಸಲಾಗಿದೆ ಎಂದು ಕೂಡಾ ವರದಿಯಾಗಿದೆ.

    ಬೆಂಗಳೂರಿನಲ್ಲಿ ಚೆನ್ನೈ ಎಕ್ಸ್ ಪ್ರೆಸ್

    ಬೆಂಗಳೂರಿನಲ್ಲಿ ಚೆನ್ನೈ ಎಕ್ಸ್ ಪ್ರೆಸ್

    ಬೆಂಗಳೂರಿನ ಮಲ್ಟಿ ಪ್ಲೆಕ್ಸ್ ಸೇರಿ ಸುಮಾರು 90 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಮೊದಲ ದಿನದ ಎಲ್ಲಾ ಪ್ರದರ್ಶನಗಳು ಹೌಸ್ ಫುಲ್ ಆಗಿತ್ತು. ಬೆಂಗಳೂರಿನಲ್ಲಿ ಅಮೀರ್ ಖಾನ್ ಅಭಿನಯದ 3 ಈಡಿಯೆಟ್ ಚಿತ್ರದ ಮೊದಲ ದಿನದ ಗಳಿಕೆಯನ್ನು ಕೂಡಾ ಚೆನ್ನೈ ಎಕ್ಸ್ ಪ್ರೆಸ್ ಮುರಿದಿದೆ.

    ಬೆಂಗಳೂರಿನ ಕಲೆಕ್ಷನ್

    ಬೆಂಗಳೂರಿನ ಕಲೆಕ್ಷನ್

    ಬೆಂಗಳೂರಿನಲ್ಲಿ ಮೊದಲ ದಿನ ಸುಮಾರು 6.75 ಕೋಟಿ (nett) ರೂಪಾಯಿ ಕಲೆಕ್ಷನ್ ಆಗಿದೆ. paid review ನಲ್ಲಿ ಮೂರು ಲಕ್ಷ ರೂಪಾಯಿ ಬಂದಿದೆ. ಇದು ಹಿಂದಿ ಚಿತ್ರವೊಂದಕ್ಕೆ ಮೊದಲ ದಿನದ ಗಳಿಕೆಯ ದಾಖಲೆಯಾಗಿದೆ.

    English summary
    Shahrukh Khan's most-anticipated movie Chennai Express has received an earth-shattering opening at the Indian Box Office. Chennai Express has collected Rs.33.12 crore on the opening day.&#13;
    Saturday, August 10, 2013, 15:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X