»   » 200 ಕೋಟಿ ಗಡಿ ದಾಟಿದ ಚೆನ್ನೈ ಎಕ್ಸ್ ಪ್ರೆಸ್

200 ಕೋಟಿ ಗಡಿ ದಾಟಿದ ಚೆನ್ನೈ ಎಕ್ಸ್ ಪ್ರೆಸ್

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಶಾರುಖ್ ಖಾನ್- ದೀಪಿಕಾ ಪಡುಕೋಣೆ ಯಶಸ್ವಿ ಜೋಡಿಯೊಂದಿಗೆ ರೋಹಿತ್ ಶೆಟ್ಟಿ ನೀಡಿರುವ ಮಸಾಲೆ ಭರಿತ ಮನರಂಜನೆ ಚಿತ್ರ ಚೆನ್ನೈ ಎಕ್ಸ್ ಪ್ರೆಸ್ ಜಾಸ್ತಿ ಹತ್ತಬೇಡಿ ಎಂದು ವಿಮರ್ಶಕರು ಎಚ್ಚರಿಕೆ ನೀಡಿದ್ದರು., ಆದರೆ, ಮನರಂಜನೆ ಮುಖ್ಯವಾಗಿರಬೇಕಾದರೆ ಪ್ರೇಕ್ಷಕರು ರಜಾ ದಿನಗಳಲ್ಲಿ ಮುಗಿ ಬಿದ್ದು ಚಿತ್ರಮಂದಿರಕ್ಕೆ ನುಗ್ಗಿ ಮತ್ತೆ ಮತ್ತೆ ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸಿದ್ದಾರೆ.

ಇದರ ಪರಿಣಾಮ ವಿಶ್ವದಾದ್ಯಂತ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದೆ. ಕೇವಲ 6 ದಿನಗಳಲ್ಲಿ ರೋಹಿತ್ ಶೆಟ್ಟಿ ನಿರ್ದೇಶನದ ಚೆನ್ನೈ ಎಕ್ಸ್ ಪ್ರೆಸ್ ಚಿತ್ರ 200 ಕೋಟಿ ರು ಗಡಿ ದಾಟಿ ಮುನ್ನುಗ್ಗುತ್ತಿದೆ. ಬಾಲಿವುಡ್ ಮಂದಿ ಲೆಕ್ಕಾಚಾರವನ್ನು ತಲೆ ಕೆಳಗು ಮಾಡಿ ಶಾರುಖ್ ಮತ್ತೊಮ್ಮೆ ಬಾಕ್ಸಾಫೀಸ್ ಕಿಂಗ್ ಎಂಬುದನ್ನು ಅವರ ಅಭಿಮಾನಿಗಳು ನಿರೂಪಿಸಿದ್ದಾರೆ. [ಚಿತ್ರದ ವಿಮರ್ಶೆ ಓದಿ]

ಕಳೆದ ಒಂದೂವರೆ ವರ್ಷದಿಂದ ಬಾಕ್ಸಾಫೀಸ್ ನಲ್ಲಿ ಬರೀ ಸಲ್ಮಾನ್ ಖಾನ್ ಚಿತ್ರಗಳದ್ದೇ ಸುದ್ದಿ. ಸಲ್ಮಾನ್ ಖಾನ್ ಅವರ ಏಕ್ ಥಾ ಟೈಗರ್ ಚಿತ್ರ ನಿರ್ಮಿಸಿದ್ದ ದಾಖಲೆಯನ್ನು ಈಗ ಚೆನ್ನೈ ಎಕ್ಸ್ ಪ್ರೆಸ್ ಮುರಿದು ಹಾಕಿದೆ. ಸಲ್ಮಾನ್ ಖಾನ್ ಅವರ ಚಿತ್ರ 10 ದಿನಗಳ ನಂತರ 200 ಕೋಟಿ ರು ಎಣಿಸಿತ್ತು. ಶಾರುಖ್ ಚಿತ್ರ 6 ದಿನಗಳಲ್ಲೇ ಈ ಸಾಧನೆ ಮಾಡಿದೆ.

ಕಳೆದ ವರ್ಷ ಆಗಸ್ಟ್ ಹದಿನೈದರಂದು ಬಿಡುಗಡೆಯಾಗಿದ್ದ ಏಕ್ ಥಾ ಟೈಗರ್ ಚಿತ್ರ 3500 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿತ್ತು ಮತ್ತು ಬಿಡುಗಡೆಯ ದಿನ 32.92 ಕೋಟಿ ರೂಪಾಯಿ ಗಳಿಕೆ ಕಂಡಿತ್ತು. ಈಗ ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ಈ ದಾಖಲೆಯನ್ನು ಮುರಿದಿದೆ. ಚೆನ್ನೈ ಎಕ್ಸ್ ಪ್ರೆಸ್ ಬಾಕ್ಸಾಫೀಸ್ ವಿವರಗಳು ಚಿತ್ರ ಸರಣಿಯಲ್ಲಿ ನೋಡಿ...

ಮೊದಲ ವಾರ

ಮೊದಲ ವಾರ

ಮೊದಲ ವಾರದಲ್ಲೇ ದೇಶಿ ಮಾರುಕಟ್ಟೆಯಲ್ಲಿ 100.42 ನಿವ್ವಳ ಲಾಭ ಗಳಿಸಿತ್ತು. ವಾರದ ದಿನಗಳಲ್ಲೂ ಭರ್ಜರಿ ಗಳಿಕೆ ಮುಂದುವರೆಸಿ ಸೋಮವಾರ, ಮಂಗಳ ವಾರ ಹಾಗೂ ಬುಧವಾರ ಸೇರಿದಂತೆ 34.37 ಕೋಟಿ ರು ಗಳಿಸಿದೆ.

ದೇಶಿ ಮಾರುಕಟ್ಟೆಯಲ್ಲಿ

ದೇಶಿ ಮಾರುಕಟ್ಟೆಯಲ್ಲಿ

ಒಟ್ಟಾರೆ ಆಗಸ್ಟ್ 9 ರಂದು ತೆರೆ ಕಂಡ ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ಆರು ದಿನಗಳಲ್ಲೇ 134.79 ಕೋಟಿ ರು ಬರೀ ದೇಶಿ ಮಾರುಕಟ್ಟೆಯಲ್ಲಿ ಕಳಿಸಿದೆ. 11 ದೇಶಗಳಲ್ಲಿ 700+ ಸ್ಕ್ರೀನ್ ಗಳಲ್ಲಿ ಚಿತ್ರ ಯಶಸ್ವಿಯಾಗಿದೆ.

ವಿದೇಶಗಳಲ್ಲಿ

ವಿದೇಶಗಳಲ್ಲಿ

ವಿವಿಧ ದೇಶಗಳಲ್ಲಿ ವೀಕೆಂಡ್ ಗಳಿಕೆ 20 ಕೋಟಿ ರು ನಿವ್ವಳ ಲಾಭವಾಗಿದ್ದು ಮೊದಲ ಆರು ದಿನಗಳ ಗಳಿಕೆ 70.47 ಕೋಟಿ ರು ದಾಟುತ್ತಿದೆ.

200 ಕೋಟಿ ರು ಗಡಿ

200 ಕೋಟಿ ರು ಗಡಿ

ಮೊದಲ ಆರು ದಿನಗಳ ಲೆಕ್ಕಾಚಾರ ಹಾಕಿದರೆ ವಿಶ್ವದಾದ್ಯಂತ 3000 + ಚಿತ್ರಮಂದಿರಗಳಿಂದ ಬಂದಿರುವ ನಿವ್ಚಳ ಗಳಿಕೆ 205.26 ಕೋಟಿ ರು ದಾಟುತ್ತದೆ.

ಮುಂದುವರೆದ ಒಟ

ಮುಂದುವರೆದ ಒಟ

ಗುರುವಾರ(ಆ.15) ರಂದು ಸ್ವಾತಂತ್ರೋತ್ಸವದ ದಿನದಂದು ದೇಶಿ ಮಾರುಕಟ್ಟೆಯಲಿ ಸುಮಾರು 30 + ಕೋಟಿ ರು ಗಳಿಸುವ ನಿರೀಕ್ಷೆ ಹುಟ್ಟಿಸಿದೆ. ಒಟ್ಟಾರೆ ಮೊದಲ ವಾರದ ಗಳಿಕೆ ಅಂದಾಜು 250 ಕೋಟಿ ರು ದಾಟಲಿದೆ.

entertainment, entertainment

entertainment, entertainment

ಬಾಲಿವುಡ್ ಹಂಗಾಮ: ತರಣ್ ಆದರ್ಶ್ ಚೆನ್ನೈ ಎಕ್ಸ್ ಪ್ರೆಸ್ ಚಿತ್ರಕ್ಕೆ 5ಕ್ಕೆ 4 ಸ್ಟಾರ್ ನೀಡಿದ್ದಾರೆ ತರಣ್ ಆದರ್ಶ್ ಚೆನ್ನೈ ಎಕ್ಸ್ ಪ್ರೆಸ್ ಇಡೀ ಚಿತ್ರದಲ್ಲಿ ರೋಹಿತ್ ಶರ್ಮ ಟ್ರೇಡ್ ಮಾರ್ಕ್ ಸ್ಟಾಂಪ್ ಛಾಪು ಮೂಡಿರುವುದನ್ನು ಕಾಣಬಹುದು.

ಈ ಹಿಂದೆ ಶಾರುಖ್ -ದೀಪಿಕಾ ಜೋಡಿ entertainment, entertainment ಹಾಗೂ entertainment ಎಂದು ಓಂ ಶಾಂತಿ ಓಂ ನಲ್ಲಿ ಕಂಡಿದ್ದನ್ನು ಇಲ್ಲೂ ಕಾಣಬಹುದು. ಚಿತ್ರ ಬಿಡುಗಡೆಗೂ ಮುನ್ನ ಹುಟ್ಟಿಸಿದ ಕ್ರೇಜಿಗೆ ತಕ್ಕಂತೆ ಚಿತ್ರ ಮೂಡಿ ಬಂದಿದೆ

2 and half stars

2 and half stars

ಚೆನ್ನೈ ಎಕ್ಸ್ ಪ್ರೆಸ್ ಕೆಲವು ಕಡೆ ನಗೆಬುಗ್ಗೆ ಹುಟ್ಟಿಸುತ್ತದೆ ನಿಜ. ಆದರೆ, ಎಲ್ಲಾ ಮಸಾಲೆ ಚಿತ್ರಗಳ ಸಿದ್ಧಸೂತ್ರಕ್ಕೆ ಜೋತುಬಿದ್ದು ಯಶಸ್ವಿ ಚಿತ್ರವಾಗುವಲ್ಲಿ ವಿಫಲವಾಗಿದೆ : ಸುಕನ್ಯಾ ವರ್ಮ

ನಟನೆ ಬಗ್ಗೆ ನಿರೀಕ್ಷೆ ಸಲ್ಲ

ನಟನೆ ಬಗ್ಗೆ ನಿರೀಕ್ಷೆ ಸಲ್ಲ

ಚೆನ್ನೈ ಎಕ್ಸ್ ಪ್ರೆಸ್ ಚಿತ್ರದಲ್ಲಿ ಎದ್ದು ಕಾಣುವುದು ದೀಪಿಕಾ ಪಡುಕೋಣೆ ಹಾಗೂ ಅವರ ದಕ್ಷಿಣ ಭಾರತ ಶೈಲಿ ಉಡುಗೆ, ಹಾವ-ಭಾವ ಹಾಗೂ ಭಾಷೆ. ಶಾರುಖ್ ಚೇಷ್ಟೆ ನಗೆ ಉಕ್ಕಿಸಿದರೂ ಅವರ ವಯಸ್ಸಿಗೆ ತಕ್ಕ ಪಾತ್ರವಲ್ಲ ಹಾಗೂ ಅವರ ನಟನೆ ಬಗ್ಗೆ ನಿರೀಕ್ಷೆ ಸಲ್ಲ.

English summary
Shahrukh Khan-Deepika Padukone film Chennai Express business collection has crossed Rs 200 crore at worldwide Box Office in 6 days business.
Please Wait while comments are loading...

Kannada Photos

Go to : More Photos