twitter
    For Quick Alerts
    ALLOW NOTIFICATIONS  
    For Daily Alerts

    ಸಾರ್ವಕಾಲಿಕ ಗಳಿಕೆಯಲ್ಲಿ ಶಾರುಖ್ ಚಿತ್ರ 'ಕಿಂಗ್''

    By ಜೇಮ್ಸ್ ಮಾರ್ಟಿನ್
    |

    2008ರಲ್ಲಿ ತೆರೆಕಂಡ ಅಮೀರ್ ಖಾನ್ ಅವರ ಘಜನಿ ಚಿತ್ರ ನಿರ್ಮಾಪಕರಿಗೆ ಮ್ಯಾಜಿಕ್ ನಂಬರ್ 100 ಕೋಟಿ ರು ದಾಟುವ ಕನಸು ನನಸು ಮಾಡಿತ್ತು. ಬಾಕ್ಸಾಫೀಸಿನ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿದ ಈ ಚಿತ್ರ ಹೊಸ ಹಾದಿಯನ್ನು ಸೃಷ್ಟಿಸಿತು. ಈಗ ಇದೇ ಹಾದಿಯನ್ನು ಇನ್ನಷ್ಟು ವಿಸ್ತರಿಸಿರುವ ಶಾರುಖ್ ಖಾನ್ ಅವರ ಚೆನ್ನೈ ಎಕ್ಸ್ ಪ್ರೆಸ್ ಮ್ಯಾಜಿಕ್ ನಂಬರ್ ಅನ್ನು 200 ಕೋಟಿ ರುಗೆ ಬದಲಾಯಿಸಿದೆ.

    ಅಮೀರ್ ಖಾನ್ ಚಿತ್ರದ ಭಾರತದ ಗಳಿಕೆಯೇ ನೂರು ಕೋಟಿ ಮೀರಿ ಬೆಳೆದಿತ್ತು. ಇದರ ಜೊತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗಳಿಕೆ, ಸ್ಯಾಟಲೈಟ್, ಮ್ಯೂಸಿಕ್ ಹಾಗೂ ಡಿಜಿಟಲ್ ಹಕ್ಕು ಮಾರಾಟ ದರ ಸೇರಿಸಿದರೆ ಘಜನಿ ಭರ್ಜರಿ ಬೆಳೆ ತೆಗೆದಿದ್ದು ಎಲ್ಲರಿಗೂ ಮಾದರಿಯಾಯಿತು.

    2011ರಲ್ಲಿ ಐದು, 2012ರಲ್ಲಿ ಒಂಭತ್ತು ಚಿತ್ರಗಳು 100 ಕೋಟಿ ಕ್ಲಬ್ ಸೇರಿದ್ದು 2013ರಲ್ಲಿ 2 ಹಿಂದಿ ಚಿತ್ರಗಳು ಈ ಪಟ್ಟಿಯಲ್ಲಿವೆ. ಇನ್ನಷ್ಟು ಕ್ಯೂನಲ್ಲಿವೆ. ತ್ವರಿತಗತಿಯಲ್ಲಿ 100 ಕೋಟಿ ರು ಕ್ಲಬ್ ಸೇರಿದ ಸಾಧನೆ ಸಲ್ಮಾನ್ ಖಾನ್ ಅಭಿನಯದ ದಬ್ಬಾಂಗ್ ಚಿತ್ರ ಕೇವಲ 5 ದಿನಗಳಲ್ಲಿ 100 ಕೋಟಿ ರು ಕ್ಲಬ್ ಸೇರಿತ್ತು.

    ನಂತರ ಕಳೆದ ಒಂದೂವರೆ ವರ್ಷದಿಂದ ಬಾಕ್ಸಾಫೀಸ್ ನಲ್ಲಿ ಬರೀ ಸಲ್ಮಾನ್ ಖಾನ್ ಚಿತ್ರಗಳದ್ದೇ ಸುದ್ದಿ. ಸಲ್ಮಾನ್ ಖಾನ್ ಅವರ ಏಕ್ ಥಾ ಟೈಗರ್ ಚಿತ್ರ ನಿರ್ಮಿಸಿದ್ದ ದಾಖಲೆಯನ್ನು ಈಗ ಚೆನ್ನೈ ಎಕ್ಸ್ ಪ್ರೆಸ್ ಮುರಿದು ಹಾಕಿದೆ. ಸಲ್ಮಾನ್ ಖಾನ್ ಅವರ ಚಿತ್ರ 10 ದಿನಗಳ ನಂತರ 200 ಕೋಟಿ ರು ಎಣಿಸಿತ್ತು. ಶಾರುಖ್ ಚಿತ್ರ 6 ದಿನಗಳಲ್ಲೇ ಈ ಸಾಧನೆ ಮಾಡಿದೆ. 15 ದಿನಗಳ ಲೆಕ್ಕಾಚಾರ ತೆಗೆದುಕೊಂಡರೆ ಸರ್ವಕಾಲಿಕ 20 ಭರ್ಜರಿ ಗಳಿಕೆ ಹಿಂದಿ ಚಿತ್ರಗಳ ಪಟ್ಟಿ ಇಲ್ಲಿದೆ ಓದಿ...

    #1 ಚೆನ್ನೈ ಎಕ್ಸ್ ಪ್ರೆಸ್

    #1 ಚೆನ್ನೈ ಎಕ್ಸ್ ಪ್ರೆಸ್

    ಬಿಡುಗಡೆಗೊಂಡ 17 ದಿನಗಳಲ್ಲಿ ರೋಹಿತ್ ಶೆಟ್ಟಿ ಅವರ ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ಒಟ್ಟಾರೆ 216.78 ಕೋಟಿ ರು ಗಳಿಸಿದೆ. ಈ ವರೆಗೂ ಯಾವುದೇ ಹಿಂದಿ ಸಿನಿಮಾ ಇಷ್ಟು ತ್ವರಿತವಾಗಿ ಇಷ್ಟು ದೊಡ್ಡ ಮೊತ್ತದ ಗುರಿ ತಲುಪಿಲ್ಲ. ಈ ಹಿಂದೆ ಅಮೀರ್ ಖಾನ್ ಅವರ 3 ಈಡಿಯಟ್ಸ್ ಚಿತ್ರ 202 ಕೋಟಿ ರು ಗಳಿಸಿದ್ದೇ ಸಾಧನೆಯಾಗಿತ್ತು. ವಿಶ್ವದಾದ್ಯಂತ ಗಳಿಕೆ ಸದ್ಯಕ್ಕೆ 371 ಕೋಟಿ ರು ದಾಟಿದೆ.

    #2 3 ಈಡಿಯಟ್ಸ್

    #2 3 ಈಡಿಯಟ್ಸ್

    ಡಿ. 25, 2009ರಲ್ಲಿ ತೆರೆ ಕಂಡ 3 ಈಡಿಯಟ್ಸ್ ಚಿತ್ರ ಮೊದಲ 8 ದಿನಗಳಲ್ಲಿ 79 ಕೋಟಿ ರು ಗಳಿಕೆ ಮಾಡಿತು. ಘಜನಿ ದಾಖಲೆ ಮುರಿದು 9 ದಿನಗಳಲ್ಲಿ 100 ಕೋಟಿ ರು ಗಳಿಕೆ ಕಂಡಿತ್ತು. ದೇಶಿ ಬಾಕ್ಸಾಫೀಸ್ ನಲ್ಲಿ 200 ಕೋಟಿ ರು ಮೀರಿದ ಮೊದಲ ಚಿತ್ರ ಎನಿಸಿತು. ಒಟ್ಟಾರೆ 202.47 ಕೋಟಿ ದಾಖಲಿಸಿತು. ವಿಶ್ವದಾದ್ಯಂತ ಒಟ್ಟಾರೆ 385 ಕೋಟಿ ರು ಗಳಿಸಿದೆ.

    ಅಮೀರ್ ಖಾನ್, ಶರ್ಮಾನ್ ಜೋಶಿ, ಮಾಧವನ್, ಬೋಮನ್ ಇರಾನಿ ಹಾಗೂ ಕರೀನಾ ಕಪೂರ್ ಪ್ರಮುಖ ಭೂಮಿಕೆಯಲ್ಲಿದ್ದರು.

    #3 ಎಕ್ ಥಾ ಟೈಗರ್

    #3 ಎಕ್ ಥಾ ಟೈಗರ್

    ಆಗಸ್ಟ್ 15, 2012 ರಂದು ತೆರೆ ಕಂಡ ಎಕ್ ಥಾ ಟೈಗರ್ ಚಿತ್ರ ಸಲ್ಮಾನ್ ಖಾನ್ -ಕತ್ರೀನಾ ಕೈಫ್ ಜೋಡಿಯ ಲಾಭದಿಂದ ಮೊದಲ ಐದು ದಿನಗಳಲ್ಲೇ 100 ಕೋಟಿ ರು ಗಳಿಕೆ ಕ್ಲಬ್ ಸೇರಿತ್ತು.

    ವಿಮರ್ಶಕರ ಮಿಶ್ರ ಪ್ರತಿಕ್ರಿಯೆ ನಡುವೆಯೂ ಭಾರತದ ಬಾಕ್ಸಾಫೀಸ್ ನಲ್ಲಿ ಒಟ್ಟಾರೆ 198.78 ಕೋಟಿ ರು ಗಳಿಕೆ ಮಾಡಿತು. ಸರ್ವಕಾಲಿಕ ದಾಖಲೆ ಪಟ್ಟಿಯಲ್ಲಿ ಈಗ ಮೂರನೇ ಸ್ಥಾನದಲ್ಲಿದೆ. ವಿಶ್ವದಾದ್ಯಂತ ಒಟ್ಟಾರೆ 310 ಕೋಟಿ ರು ಗಳಿಸಿದೆ.
    #4 ಯೇ ಜವಾನಿ ಹೇ ದಿವಾನಿ

    #4 ಯೇ ಜವಾನಿ ಹೇ ದಿವಾನಿ

    ರಣಬೀರ್ ಕಪೂರ್ -ದೀಪಿಕಾ ಪಡುಕೋಣೆ ಅಭಿನಯದ ಈ ಚಿತ್ರ ಮೇ 31, 2013ರಂದು 3000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಬಿಡುಗಡೆಗೊಂಡಿತು. ಮೊದಲ ವಾರ 107.61 ಕೋಟಿ ರು ನಿವ್ವಳ ಲಾಭ, ಒಟ್ಟಾರೆ 188.57 ಕೋಟಿ ರು ಗಳಿಕೆ. ವಿಶ್ವದಾದ್ಯಂತ 301 ಕೋಟಿ ರು ಗಳಿಸಿದೆ. ಇನ್ನಷ್ಟು ನಿರೀಕ್ಷಿಸಿ

    #5 ದಬ್ಬಾಂಗ್ 2

    #5 ದಬ್ಬಾಂಗ್ 2

    ಡಿ.21, 2012ರಲ್ಲಿ 3000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಂಡ ದಬ್ಬಾಂಗ್ 2 ಚಿತ್ರ ಒಟ್ಟಾರೆ 6 ದಿನಗಳಲ್ಲೇ 108.37 ಕೋಟಿ ಗಳಿಸಿ ಸಲ್ಮಾನ್ ಖಾನ್ ಪವರ್ ತೋರಿಸಿತು. ಒಟ್ಟಾರೆ ದೇಶಿ ಬಾಕ್ಸಾಫೀಸ್ ಗಳಿಕೆ 155 ಕೋಟಿ ರು ದಾಟಿತು. ವಿಶ್ವದಾದ್ಯಂತ ಒಟ್ಟಾರೆ 251 ಕೋಟಿ ರು ಗಳಿಸಿತು.

    #6 ಬಾಡಿಗಾರ್ಡ್

    #6 ಬಾಡಿಗಾರ್ಡ್

    ಆಗಸ್ಟ್ 31,2011 ರಂದು 2,600 ಪ್ರಿಂಟ್ ಗಳೊಂದಿಗೆ ತೆರೆ ಕಂಡ ಸಲ್ಮಾನ್ ಖಾನ್ 'ಬಾಡಿಗಾರ್ಡ್' ಚಿತ್ರ ಮೊದಲ ವಾರದಲ್ಲೇ 88 ಕೋಟಿ ರು ಗಡಿ ದಾಟಿತು. ಎರಡನೇ ವಾರದ ಮೊದಲ ದಿನದ ಹೊತ್ತಿಗೆ 100 ಕೋಟಿ ರು ಗಳಿಸಿ ದಾಖಲೆ ಬರೆಯಿುತು. ಒಟ್ಟಾರೆ 148.86 ಕೋಟಿ ರು ಭಾರತದ ಬಾಕ್ಸಾಫೀಸ್ ನಲ್ಲೇ ಕೊಳ್ಳೆ ಹೊಡೆಯಿತು.ವಿಶ್ವದಾದ್ಯಂತ ಒಟ್ಟಾರೆ 230 ಕೋಟಿ ರು ಗಳಿಸಿತು.

    #7 ದಬ್ಬಾಂಗ್

    #7 ದಬ್ಬಾಂಗ್

    ಸುಮಾರು 1,800 ಸ್ಕ್ರೀನ್ ಗಳಲ್ಲಿ ಸೆ.10, 2010ರಂದು ತೆರೆ ಕಂಡ ಸಲ್ಮಾನ್ ಖಾನ್ ಚಿತ್ರ ದಬ್ಬಾಂಗ್ 10 ದಿನಗಳಲ್ಲೇ 100 ಕೋಟಿ ರು ಕ್ಲಬ್ ಸೇರಿತು. ಈ ಕ್ಲಬ್ ಸೇರಿದ ಸಲ್ಮಾನ್ ಖಾನ್ ಮೊದಲ ಚಿತ್ರ ಎನಿಸಿತು. ಒಟ್ಟಾರೆ ಭಾರತದಲ್ಲಿ 138 ಕೋಟಿ ರು.ಗೂ ಅಧಿಕ ಮೊತ್ತ ಗಳಿಸಿತು. ವಿಶ್ವದಾದ್ಯಂತ ಒಟ್ಟಾರೆ 215 ಕೋಟಿ ರು ಗಳಿಸಿದೆ.

    #8 ರೌಡಿ ರಾಥೋರ್

    #8 ರೌಡಿ ರಾಥೋರ್

    ಜು.1, 2012 ರಂದು 2800 ಕ್ಕೂ ಅಧಿಕ ತೆರೆಗಳಲ್ಲಿ ಕಾಣಿಸಿಕೊಂಡ ಅಕ್ಷಯ್ ಕುಮಾರ್ ಹಾಗೂ ಸೋನಾಕ್ಷಿ ಅವರ ರೌಡಿ ರಾಥೋರ್ ಚಿತ್ರ ಉತ್ತಮ ಓಪನಿಂಗ್ ಪಡೆಯಿತು. 11 ದಿನಗಳಲ್ಲೇ 100 ಕೋಟಿ ರು ಗಳಿಕೆ ಮಾಡಿತು. ಭಾರತದ ಬಾಕ್ಸಾಫೀಸ್ ನಲ್ಲಿ ಒಟ್ಟಾರೆ 133.25ಕೋಟಿ ರು ನಿವ್ವಳ ಗಳಿಕೆ ಮಾಡಿದೆ.

    #9 ಜಬ್ ತಕ್ ಹೇ ಜಾನ್

    #9 ಜಬ್ ತಕ್ ಹೇ ಜಾನ್

    ಶಾರುಖ್ ಖಾನ್, ಕತ್ರೀನಾ ಕೈಫ್, ಅನುಷ್ಕಾ ಶರ್ಮ ಇದ್ದ ಜಬ್ ತಕ್ ಹೇ ಜಾನ್ ಚಿತ್ರ ನ.12, 2012ರಂದು 2,500ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಂಡಿತು. ಯಶ್ ಬ್ಯಾನರ್ ನ ಈ ಚಿತ್ರ 11 ದಿನಗಳಲ್ಲಿ 100 ಕೋಟಿ ರು ದಾಟಿತು. ಒಟ್ಟಾರೆ ದೇಶಿ ಬಾಕ್ಸಾಫೀಸ್ ನಲ್ಲಿ ನಿವ್ವಳ ಗಳಿಕೆ 120.85 ಕೋಟಿ ರು. ವಿಶ್ವದಾದ್ಯಂತ ಒಟ್ಟಾರೆ 211 ಕೋಟಿ ರು ಗಳಿಸಿದೆ.

    #10 ರೆಡಿ

    #10 ರೆಡಿ

    2011ರ ಜೂ.3 ರಂದು ತೆರೆ ಕಂಡ ಸಲ್ಮಾನ್ ಖಾನ್-ಆಸೀನ್ ಚಿತ್ರ 'ರೆಡಿ' ಕೇವಲ 1900 ಚಿತ್ರಮಂದಿರಗಳಲ್ಲಿ ತೆರೆ ಕಂಡಿತ್ತು. ಎರಡು ವಾರಗಳಲ್ಲಿ 100 ಕೋಟಿ ರು ಗಳಿಕೆ ಮಾಡಿದ ಈ ಚಿತ್ರ ದೇಶಿ ಮಾರುಕಟ್ಟೆಯಲ್ಲಿ ಒಟ್ಟಾರೆ 119.78 ಕೋಟಿ ರು ಗಳಿಸಿತು.

    #11 ಅಗ್ನಿಪಥ್

    #11 ಅಗ್ನಿಪಥ್

    ಜ.26, 2012ರಂದು 3000 ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ತೆರೆ ಕಂಡ ಅಗ್ನಿ ಪಥ್ ಚಿತ್ರ 11 ದಿನಗಳಲ್ಲಿ 100 ಕೋಟಿ ರು ಕ್ಲಬ್ ಸೇರಿತು. ಆದರೆ, ಹೃತಿಕ್ ರೋಷನ್, ಸಂಜಯ್ ದತ್ ಇದ್ದ ಈ ಚಿತ್ರ ಭಾರತದಲ್ಲಿ ಒಟ್ಟಾರೆ ನಿವ್ವಳ ಗಳಿಕೆಯಲ್ಲಿ 115 ಕೋಟಿ ರು ದಾಟಲಿಲ್ಲ.

    #12 ರಾ ಒನ್

    #12 ರಾ ಒನ್

    ಅಕ್ಟೋಬರ್ 26,2011ರಂದು 3100ಕ್ಕೂ ಅಧಿಕ ಸ್ಕ್ರೀನ್ ನಲ್ಲಿ ಕಾಣಿಸಿ ರಾ.ಒನ್ ಚಿತ್ರ ದೀಪಾವಳಿ ವಾರಾಂತ್ಯದಲ್ಲಿ ಭರ್ಜರಿ ಗಳಿಕೆ ಮಾಡಿತು. ಶಾರುಖ್ ಹಾಗೂ ಕರೀನಾ ಕಪೂರ್ 11 ದಿನಗಳಲ್ಲಿ 100 ಕೋಟಿ ರು ಕ್ಲಬ್ ಸೇರಿದ ಈ ಚಿತ್ರ ಒಟ್ಟಾರೆ ದೇಶಿ ಬಾಕ್ಸಾಫೀಸ್ ನಲ್ಲಿ 114.29 ಕೋಟಿ ರು ಗಳಿಸಿತು. ವಿಶ್ವದಾದ್ಯಂತ ಒಟ್ಟಾರೆ 202 ಕೋಟಿ ರು ಗಳಿಸಿದೆ.

    #13 ಘಜನಿ

    #13 ಘಜನಿ

    ಡಿ.25,2008 ರಲ್ಲಿ ಸುಮಾರು 1,500 ಪ್ರಿಂಟ್ ಗಳೊಂದಿಗೆ ಬಿಡುಗಡೆಗೊಂದ ಅಮೀರ್ ಖಾನ್ ಅವರ ಘಝನಿ ಚಿತ್ರ ಮೊದಲ ವಾರದಲ್ಲಿ 62 ಕೋಟಿ ರು ಗಳಿಸಿತ್ತು. ಸುಮಾರು 18 ದಿನಗಳ ನಂತರ 100 ಕೋಟಿ ರು ಗಳಿಕೆ ಮಾಡಿ ಹೊಸ ದಾಖಲೆ ನಿರ್ಮಿಸಿತು. ಒಟ್ಟಾರೆ ದೇಶಿ ಬಾಕ್ಸಾಫೀಸ್ ನಲ್ಲಿ 114 ಕೋಟಿ ರು. ಗೂ ಅಧಿಕ ಮೊತ್ತ ದಾಖಲಿಸಿತು.

    #14 ಬರ್ಫಿ

    #14 ಬರ್ಫಿ

    ರಣಬೀರ್ ಕಪೂರ್, ಪ್ರಿಯಾಂಕಾ ಛೋಪ್ರಾ, ಇಲಿಯಾನಾ ಅಭಿನಯದ ಈ ಚಿತ್ರ ಸೆ.14, 2012ರಲ್ಲಿ 3000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ತೆರೆ ಕಂಡು ಮೊದಲ ದಿನವೇ ಭರ್ಜರಿ ಗಳಿಕೆ ಮಾಡಿತು. ಆದರೆ, 100 ಕೋಟಿ ರು ಗಳಿಕೆ ಕ್ಲಬ್ ಸೇರಲು 17 ದಿನ ಬೇಕಾಯಿತು. ಒಟ್ಟಾರೆ, ದೇಶಿ ಬಾಕ್ಸಾಫೀಸ್ ನಲ್ಲಿ 112.15 ಕೋಟಿ ರು ಗಳಿಸಿತು.

    #15 ಭಾಗ್ ಮಿಲ್ಕಾ ಸಿಂಗ್

    #15 ಭಾಗ್ ಮಿಲ್ಕಾ ಸಿಂಗ್

    ಫರ್ಹಾನ್ ಅಖ್ತರ್ ಅಭಿನಯದ ಭಾಗ್ ಮಿಲ್ಕಾ ಸಿಂಗ್ ಚಿತ್ರ ಒಟ್ಟಾರೆ ಇಲ್ಲಿವರೆಗೂ 108 ಕೋಟಿ ರು ಗಳಿಸಿತ್ತು. ಇನ್ನೂ ಚಿತ್ರಮಂದಿರಗಳಲ್ಲಿ ಸದ್ದು ಮಾಡುತ್ತಿದೆ.

    #16 ಡಾನ್ 2

    #16 ಡಾನ್ 2

    ಡಿ.23,2011 ರಂದು ಸುಮಾರು 3105 ಸ್ಕ್ರೀನ್ ಗಳಲ್ಲಿ ತೆರೆ ಕಂಡ ಶಾರುಖ್ ಖಾನ್ ಅವರ ಡಾನ್ 2 ಚಿತ್ರ 16 ದಿನಗಳಲ್ಲಿ 100 ಕೋಟಿ ರು ಕ್ಲಬ್ ಸೇರಿತು. ವಿಶ್ವದಾದ್ಯಂತ ಒಟ್ಟಾರೆ 206 ಕೋಟಿ ರು ಗಳಿಸಿದೆ.

    #17 ಗೋಲ್ ಮಾಲ್ 3

    #17 ಗೋಲ್ ಮಾಲ್ 3

    ನ.3, 2010ರ ದೀಪಾವಳಿ ವಾರಾಂತ್ಯದಲ್ಲಿ ತೆರೆ ಕಂಡ ಗೋಲ್ ಮಾಲ್ ಚಿತ್ರ ಮೊದಲ ದಿನವೇ 8.32 ಕೋಟಿ ರು ಗಳಿಕೆ ಕಂಡಿತು. ಮೊದಲ ವಾರ 33.5 ಕೋಟಿ ರು ಬಾಚಿತು.ಒಟ್ಟಾರೆ 17 ದಿನಗಳಲ್ಲಿ 100 ಕೋಟಿ ರು ಗಳಿಕೆ ಕ್ಲಬ್ ಸೇರಿದ ಮೂರನೇ ಚಿತ್ರ ಎನಿಸಿತು.

    #18 ಹೌಸ್ ಫುಲ್ 2

    #18 ಹೌಸ್ ಫುಲ್ 2

    ಹೌಸ್ ಫುಲ್ 2 ಚಿತ್ರ 3000 ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಏ.6, 2012ರಂದು ತೆರೆ ಕಂಡಿತು. 17 ದಿನಗಳಲ್ಲಿ 100 ಕೋಟಿ ರು ಕ್ಲಬ್ ಸೇರಿತು. ಅಕ್ಷಯ್ ಕುಮಾರ್, ಜಾನ್ ಅಬ್ರಹಾಂ, ಶ್ರೇಯಸ್ ತಾಲ್ಪಡೆ, ಆಸೀನ್, ಜಾಕ್ವಲೀನ್ ಫರ್ನಾಂಡೀಸ್ ಅಬ್ಭಿನಯಿಸಿದ್ದರು. ಒಟ್ಟಾರೆ 106 ಕೋಟಿ ರು ಗಳಿಸಿದೆ.

    #19 ಸನ್ ಆಫ್ ಸರ್ದಾರ್

    #19 ಸನ್ ಆಫ್ ಸರ್ದಾರ್

    ನವೆಂಬರ್ 12,2012ರಂದು 2000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸನ್ ಆಫ್ ಸರ್ದಾರ್ ಚಿತ್ರ ತೆರೆ ಕಂಡಿತು. ಅಜಯ್ ದೇವಗನ್ ಹಾಗೂ ಸಂಜಯ್ ದತ್ ಅವರು 100 ಕೋಟಿ ಗಳಿಕೆ ಕ್ಲಬ್ ಸೇರಿದರು. 16 ದಿನಗಳಲ್ಲಿ 100 ಕೋಟಿ ರು ಗಳಿಕೆ ಪಡೆದ ಚಿತ್ರ ನಂತರ 105.3 ಕೋಟಿ ರು ಬಂದ ನಂತರ ಗಳಿಕೆ ನಿಲ್ಲಿಸಿತು.

    #20 ಬೋಲ್ ಬಚ್ಚನ್

    #20 ಬೋಲ್ ಬಚ್ಚನ್

    ಜು 6, 2012ರಂದು ತೆರೆ ಕಂಡ ಬೋಲ್ ಬಚ್ಚನ್ ಚಿತ್ರ ಮೊದಲ ಹತ್ತು ದಿನಗಳಲ್ಲಿ 82.93 ಕೋಟಿ ರು ಗಳಿಸಿತು ಆದರೆ, ದಕ್ಷಿಣ ಭಾರತದಲ್ಲಿ 'ಈಗ' ಚಿತ್ರ ಎದುರು ನಿಲ್ಲಲಾರದೆ ಗಳಿಕೆಯಲ್ಲಿ ಡಲ್ ಹೊಡೆದು ಹಾಗೂ ಹೀಗೂ 100 ಕೋಟಿ ಕ್ಲಬ್ ಸೇರಿತು. ಒಟ್ಟಾರೆ 35 ದಿನಗಳಲ್ಲಿ 82.93ಗಳಿಕೆಗೆ ಉಳಿದ 17.17 ಕೋಟಿ ರು ಸೇರಿಸಿದ್ದೇ ದೊಡ್ಡ ಸಾಧನೆ.

    English summary
    After 15 days Chennai Express tops 20 all time highest grosser Hindi movies.Two-week-old movie Chennai Express starring Shahrukh Khan and Deepika Padukone in leads, has continued to keep the cash register ringing at the Indian Box Office in the third week. The Rohit Shetty-directed flick has done superb collection in the third weekend.
    Sunday, October 6, 2013, 17:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X