»   » ಯಂಗೀಸ್ತಾನ್ ಚಿತ್ರಕ್ಕೆ ಸಾಫ್ಟ್ 'ರಾಹು' ಕಾಟ

ಯಂಗೀಸ್ತಾನ್ ಚಿತ್ರಕ್ಕೆ ಸಾಫ್ಟ್ 'ರಾಹು' ಕಾಟ

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಯಂಗೀಸ್ತಾನ್ ಚಿತ್ರ ಹಲವು ವಿಷಯಗಳಿಂದ ಭಾರಿ ಕ್ರೇಜ್ ಹುಟ್ಟು ಹಾಕುತ್ತಿದೆ. ರಾಹುಲ್ ಗಾಂಧಿ ಅವರನ್ನು ಹೋಲುವ ಪಾತ್ರ ಇದೆ ಎಂದು ಭಾರಿ ಪ್ರಚಾರ ಪಡೆಯುವ ಹೊತ್ತಿಗೆ ಅಮೆರಿಕನ್ ದೈತ್ಯ ಸಾಫ್ಟ್ ಡ್ರಿಂಕ್ಸ್ ಸಂಸ್ಥೆಯೊಂದು ಕಾನೂನು ಸಮರ ಸಾರಿದೆ.

ವಾಸು ಭಗ್ನಾನಿ ಅವರ ಪೂಜಾ ಫಿಲಂಸ್ ಹಾಗೂ ಮಲ್ಟಿಮೀಡಿಯಾ ಸ್ಕ್ರೀನ್ ಮೀಡಿಯಾ ನಿರ್ಮಾಣದ ಜಾಕಿ ಭಗ್ನಾನಿ ಹಾಗೂ ನೇಹಾ ಶರ್ಮ ಮುಖ್ಯ ಭೂಮಿಕೆಯಲ್ಲಿರುವ 'ಯಂಗೀಸ್ತಾನ್" ಚಿತ್ರದ ಶೀರ್ಷಿಕೆ ಬಗ್ಗೆ ಪೆಪ್ಸಿ ಕೋ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿದೆ.

ಯಂಗೀಸ್ತಾನ್ ಎಂಬ ಪದ ಕಾಪಿರೈಟ್ ನಮ್ಮ ಬಳಿ ಇದೆ. ನಮ್ಮ ಅನುಮತಿ ಇಲ್ಲದೆ ಪೂಜಾ ಫಿಲಂಸ್ ಸಂಸ್ಥೆ ಈ ಟೈಟಲ್ ಬಳಕೆ ಮಾಡಿರುವುದು ಸರಿಯಿಲ್ಲ ಎಂದು ಪೆಪ್ಸಿ ಸಂಸ್ಥೆ ತನ್ನ ದೂರಿನಲ್ಲಿ ಹೇಳಿದೆ.

ಬಾಲಿವುಡ್ ನಟ ಶಾರುಖ್ ಖಾನ್, ರಣಬೀರ್ ಕಪೂರ್ ಅವರು ಕೂಡಾ ಯಂಗೀಸ್ತಾನ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಯಂಗೀಸ್ತಾನ್ ಜಾಹೀರಾತುಗಳು ಪೆಪ್ಸಿಗೆ ಸೇರಿದ್ದು ಎಂಬುದು ಲೋಕಕ್ಕೆ ಗೊತ್ತಿದೆ ಆದರೆ, ವಸು ಭಗ್ನಾನಿ ಅವರು ತಮ್ಮ ಪುತ್ರ ಚಿತ್ರಕ್ಕಾಗಿ ಈ ಶೀರ್ಷಿಕೆ ಬಳಸಿದ್ದು ಹೇಗೆ ಎಂದು ದೂರಿನಲ್ಲಿ ಪ್ರಶ್ನಿಸಲಾಗಿದೆ. ಈಗ ವಸು ಭಗ್ನಾನಿ ಚಿತ್ರ ನಿರ್ಮಾಣ ಸಂಸ್ಥೆಗೆ ಲೀಗಲ್ ನೋಟಿಸ್ ಕೂಡಾ ಜಾರಿಯಾಗಿದೆ. ಈ ನಡುವೆ ಚಿತ್ರದಲ್ಲಿನ ನಾಯಕನ ಪಾತ್ರ ರಾಹುಲ್ ಗಾಂಧಿ ಅವರನ್ನು ಹೋಲುತ್ತಿರುವುದು ಕಾಕತಾಳೀಯ ಎನ್ನಲಾಗಿದೆ. ಈ ಬಗ್ಗೆ ಮುಂದೆ ಓದಿ...

ಯಂಗೀಸ್ತಾನ್ ಗೆ ವಸು ಭಗ್ನಾನಿ ಸಮರ್ಥನೆ
  

ಯಂಗೀಸ್ತಾನ್ ಗೆ ವಸು ಭಗ್ನಾನಿ ಸಮರ್ಥನೆ

ಯಂಗೀಸ್ತಾನ್ ಶೀರ್ಷಿಕೆಯನ್ನು ಕಾನೂನು ಪ್ರಕಾರವೇ ಸ್ವೀಕರಿಸಲಾಗಿದೆ. ನಮ್ಮ ಲೀಗಲ್ ಟೀಂ ಹೊಸ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿದ್ದಾರೆ. ಚಿತ್ರದ ಬಿಡುಗಡೆಗೆ ಯಾವುದೇ ತೊಂದರೆಯಾಗುವುದಿಲ್ಲ. ಚಿತ್ರದ ಕಥೆಗೆ ಪೂರಕವಾದ ಶೀರ್ಷಿಕೆಯನ್ನೇ ಇಡಲಾಗಿದೆ.

ಚುನಾವಣೆ ನೀತಿ ಸಂಹಿತೆಯಿಂದ ಬಚಾವ್
  

ಚುನಾವಣೆ ನೀತಿ ಸಂಹಿತೆಯಿಂದ ಬಚಾವ್

ರಾಹುಲ್ ಗಾಂಧಿ ಪಾತ್ರ ಹೋಲಿಕೆ ಇರುವ ಈ ಚಿತ್ರ ಮುಂಬರುವ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ. ಮಾ.28ರಂದು ತೆರೆಗೆ ಬರಲಿರುವ ಈ ಚಿತ್ರ ಚುನಾವಣಾ ನೀತಿ ಸಂಹಿತೆಯಿಂದ ಬಚಾವಾಗುವ ಸಾಧ್ಯತೆಯಿದೆ.

ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚುನಾವಣೆ ನಡೆಯುವುದರಿಂದ ರಾಹುಲ್ ಗಾಂಧಿ ಅವರ ಇಮೇಜ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಈ ಚಿತ್ರ ಬಿಟ್ಟಿ ಪ್ರಚಾರ ಸಿಗಲಿದೆ.

 

  

ಪೆಪ್ಸಿ ಯಂಗೀಸ್ತಾನ್ ಜಾಹೀರಾತು ನೋಡಿ

ಶಾರುಖ್ ಖಾನ್ ಹಾಗೂ ರಣಬೀರ್ ಕಪೂರ್ ಇರುವ ಪೆಪ್ಸಿ ಯಂಗೀಸ್ತಾನ್ ಜಾಹೀರಾತು ನೋಡಿ...

  

ಯಂಗೀಸ್ತಾನ್ ಚಿತ್ರದ ಟ್ರೇಲರ್ ಹೇಗಿದೆ

ಯಂಗೀಸ್ತಾನ್ ಚಿತ್ರದ ಟ್ರೇಲರ್ ಹೇಗಿದೆ ನೋಡಿ.. ಪ್ರಮುಖ ಪಾತ್ರಧಾರಿ, ರಾಜಕೀಯ ಚಿತ್ರಣದ ಕಥೆಯ ಝಲಕ್ ಕಾಣಿರಿ

ಯಂಗೀಸ್ತಾನ್ ಮೂಲ ತೆಲುಗು ಚಿತ್ರ ಲೀಡರ್
  

ಯಂಗೀಸ್ತಾನ್ ಮೂಲ ತೆಲುಗು ಚಿತ್ರ ಲೀಡರ್

ಯಂಗೀಸ್ತಾನ್ ಮೂಲ ತೆಲುಗು ಚಿತ್ರ ಲೀಡರ್ ಕಥೆ ಹೀಗಿದೆ :ಸಾಫ್ಟ್ ವೇರ್ ಕಂಪನಿಯ ಯುವ ಸಿಇಒ ಆಗಿದ್ದ ನಾಯಕ ತನ್ನ ತಂದೆಯ ಮರಣ ನಂತರ ರಾಜಕೀಯ ರಂಗಕ್ಕೆ ಧುಮುಕಿ ದೊಡ್ಡ ಪಕ್ಷವೊಂದರ ಮುಂದಾಳತ್ವ ವಹಿಸುತ್ತಾನೆ.

ಭ್ರಷ್ಟ ವ್ಯವಸ್ಥೆಯನ್ನು ಭ್ರಷ್ಟತೆಯಿಂದಲೇ ಕೊಲ್ಲುತ್ತಾ ಬರುತ್ತಾನೆ. ತಂದೆ ಸಾವಿನ ಹಿಂದಿರುವ ಷಡ್ಯಂತ್ರವನ್ನು ಛೇದಿಸಿ ಮುಖ್ಯಮಂತ್ರಿಯಾಗುತ್ತಾನೆ. ಸುಮಾರು 100,000 ಕಪ್ಪು ಹಣ ಸಂಗ್ರಹಿಸಿ ಜನರ ನಿಧಿ ಸ್ಥಾಪಿಸುವುದು ನಾಯಕನ ಉದ್ದೇಶವಾಗಿರುತ್ತದೆ. ಅದರೆ, ರಾಜಕೀಯ ಚದುರಂಗದಾಟದಿಂದ ಕುರ್ಚಿ ತೊರೆದ ನಾಯಕ ಮತ್ತೆ ಪಾದಯಾತ್ರೆ ನಡೆಸಿ ಜನರ ವಿಶ್ವಾಸ ಗಳಿಸಿ ಲೀಡರ್ ಎನಿಸುತ್ತಾನೆ. ರಾಜಕೀಯ ಆಟದ ಜತೆ ಪ್ರೇಮ ಕಥೆ ಬೆರೆಸಿ ಶೇಖರ್ ಕಮುಲಾ ಸುಂದರ ಚಿತ್ರವನ್ನು ನೀಡಿದ್ದರು. ರಾಣಾ ದಗ್ಗುಬಾತಿ ಸಮರ್ಥವಾಗಿ ಅಭಿನಯಿಸಿದ್ದರು. ಆಂಧ್ರ ರಾಜಕೀಯದ ಕಥೆ ಯನ್ನು ಈಗ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಪಾತ್ರಕ್ಕೆ ಹೊಂದಿಸಿ ಚಿತ್ರ ತೆರೆಗೆ ತರಲಾಗುತ್ತಿದೆ.

 

English summary
According to what's being reported, a leading soft drink maker has sent an eight-page legal notice to the makers of the film - Vashu Bhagnani's Puja Films and Multi Screen Media (MSM) - asking that they change their movie's title, and withdraw all promotional material.
Please Wait while comments are loading...

Kannada Photos

Go to : More Photos