»   » 'ದಂಗಲ್' ನಟಿ ಝೈರಾ ವಿವಾದಕ್ಕೆ ಅಮೀರ್ ಖಾನ್ ಎಂಟ್ರಿ

'ದಂಗಲ್' ನಟಿ ಝೈರಾ ವಿವಾದಕ್ಕೆ ಅಮೀರ್ ಖಾನ್ ಎಂಟ್ರಿ

Posted by:
Subscribe to Filmibeat Kannada

ದಂಗಲ್ ಗರ್ಲ್ ಎಂದೇ ಖ್ಯಾತಿ ಪಡೆದಿರುವ ಕಾಶ್ಮೀರಿ ಹುಡುಗಿ 'ಝೈರಾವಾಸಿಂ', ಅಮೀರ್ ಖಾನ್ ಅಭಿನಯದ ರೆಕಾರ್ಡ್ ಬ್ರೇಕಿಂಗ್ ಸಿನಿಮಾ 'ದಂಗಲ್' ನಲ್ಲಿ ಮಿಂಚಿನ ನಟನೆ ನಿರ್ವಹಿಸಿದ್ದಾರೆ. 16 ವರ್ಷದ ಈ ಕಾಶ್ಮೀರಿ ಪೋರಿ ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅನ್ನು ಭೇಟಿ ಮಾಡಿ ಈಗ ವಿವಾದಕ್ಕೆ ಸಿಲುಕಿದ್ದಾಳೆ.[ಫಿಲಂಫೇರ್: 'ದಂಗಲ್' ಚಿತ್ರಕ್ಕೆ ನಾಲ್ಕು ಪ್ರಶಸ್ತಿಗಳ ಸಂಭ್ರಮ]

'ದಂಗಲ್' ಸಿನಿಮಾ ದ ಉತ್ತಮ ಅಭಿನಯಕ್ಕೆ ಫಿಲ್ಮ್ ಇಂಡಸ್ಟ್ರಿ ಮತ್ತು ಇತರೆ ಹಲವು ಕಡೆಗಳಿಂದ ಪ್ರಶಸ್ತಿ ಸ್ವೀಕರಿಸಿದ ನಂತರ ಝೈರಾ ವಾಸಿಂ ಕಳೆದ ಶನಿವಾರ 'ಮೆಹಬೂಬ ಮುಫ್ತಿ' ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಮುಖ್ಯಮಂತ್ರಿ ಅವಳ ಶಿಕ್ಷಣ, ಆಸಕ್ತಿ, ನಟನೆ ಮತ್ತು ಸೃಜನಶೀಲ ಕ್ಷೇತ್ರದ ಬಗ್ಗೆ ವಿಚಾರಿಸಿದ್ದರು. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿವಾದಕ್ಕೆ ಸಿಲುಕಿದ್ದು, ಝೈರಾ ಕ್ಷಮೆಯಾಚನೆ ಕೇಳಿದ್ದಾರೆ. ಕ್ಷಮೆಯಾಚನೆ ಈಗ ವಿವಾದಕ್ಕೆ ಕಾರಣವಾಗಿದೆ..

ಝೈರಾ ವಾಸಿಂ ಏನೆಂದು ಕ್ಷಮೆಯಾಚಿಸಿದರು, ಇದಕ್ಕೆ ಅಮೀರ್ ಖಾನ್‌ ಪ್ರತಿಕ್ರಿಯೆ ಏನು? ಎಂಬುದರ ಕಂಪ್ಲೀಟ್ ಡೀಟೇಲ್ ಇಲ್ಲಿದೆ ಓದಿ..

ಝೈರಾ ವಾಸಿಂ ಟ್ರೋಲ್

ಝೈರಾ ವಾಸಿಂ ಟ್ರೋಲ್

ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅನ್ನು ಭೇಟಿ ಮಾಡಿದ ಫೋಟೋಗಳು ಆನ್‌ಲೈನ್ ತಾಣಗಳಲ್ಲಿ ಹೊರಹೊಮ್ಮಿದ ನಂತರ 'ದಂಗಲ್' ಚಿತ್ರದಲ್ಲಿ ಗೀತಾ ಪೋಗಟ್ ಪಾತ್ರದಲ್ಲಿ ಅಭಿನಯಿಸಿದ್ದ ಝೈರಾ ವಾಸಿಂ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೇಳಿದ್ದಾರೆ. ನೆನ್ನೆ(ಜನವರಿ 17) ಸಾಮಾಜಿಕ ಜಾಲತಾಣದಲ್ಲಿ ಕಾಶ್ಮೀರದ ಜನರನ್ನು ಕುರಿತು ತಾವು "ಯಾರನ್ನಾದರೂ ನೋಯಿಸಿದ್ದರೇ ಕ್ಷಮೆ ಇರಲಿ" ಎಂದಿದ್ದಾರೆ.

ಝೈರಾ ತಮ್ಮ ಲೆಟರ್‌ ನಲ್ಲಿ ಹೇಳಿದ್ದೇನು?

ಝೈರಾ ತಮ್ಮ ಲೆಟರ್‌ ನಲ್ಲಿ ಹೇಳಿದ್ದೇನು?

"ಇದು ನನ್ನ ಮುಕ್ತ ಕ್ಷಮೆಯಾಚನೆ. ನನ್ನ ಇತ್ತೀಚೆಗಿನ ಕ್ರಮಗಳಿಂದ ಮತ್ತು ನಾನು ಇತ್ತೀಚೆಗೆ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಿದ ಕಾರಣ ಹಲವರಿಗೆ ನೋವಾಗಿದೆ. ಅದಕ್ಕೆ ನಾನು ಮುಕ್ತವಾಗಿ ಕ್ಷಮೆ ಕೇಳುತ್ತಿದ್ದೇನೆ".

'ನಾನು ಕ್ಷಮೆ ಕೇಳಬೇಕು'

'ನಾನು ಕ್ಷಮೆ ಕೇಳಬೇಕು'

" ಆಕಸ್ಮಿಕವಾಗಿ ನಾನು ನೋವುಂಟು ಮಾಡಿರುವ ಎಲ್ಲರಿಗೂ ಕ್ಷಮೆ ಕೇಳಬೇಕು ಮತ್ತು ಕಳೆದ 6 ತಿಂಗಳಿಂದ ಕಣಿವೆಯಲ್ಲಿ ಏನು ನಡೆಯುತ್ತಿದೆಯೋ ಅದರ ಹಿನ್ನೆಲೆಯಲ್ಲಿ ನಾನು ಅವರ ಭಾವನೆಗಳನ್ನು ವಿಶೇಷವಾಗಿ ಅರ್ಥ ಮಾಡಿಕೊಳ್ಳುತ್ತೇನೆ ಎಂಬುದನ್ನು ಅವರಿಗೆ(ಜನರಿಗೆ) ತಿಳಿಸಬೇಕು".

"ನಾನು ಜಸ್ಟ್ 16 ವರ್ಷದ ಹುಡುಗಿ'

"ಆದರೆ ನನಗೆ ನಂಬಿಕೆ ಇದೆ. ಕೆಲವೊಮ್ಮೆ ಈ ರೀತಿಯ ಘಟನೆಗಳು ಆಕಸ್ಮಿಕವಾಗಿ ನಡೆಯುತ್ತವೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳುತ್ತಾರೆ. ನಾನು ಜಸ್ಟ್ 16 ವರ್ಷದ ಹುಡುಗಿ ಎಂಬುದನ್ನು ಜನರು ಮರೆಯದೇ ಅದರಂತೆ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ".

'ಜನರು ಕ್ಷಮಿಸುತ್ತಾರೆ ಎಂಬ ನಂಬಿಕೆ ಇದೆ'

'ಜನರು ಕ್ಷಮಿಸುತ್ತಾರೆ ಎಂಬ ನಂಬಿಕೆ ಇದೆ'

"ನಾನು ಮಾಡಿದ್ದನ್ನು ಕ್ಷಮಿಸಿ. ಈ ಚಟುವಟಿಕೆ ಉದ್ದೇಶ ಪೂರ್ವಕವಾಗಿ ನಡೆದುದಲ್ಲ. ಜನರು ನನ್ನನ್ನು ಕ್ಷಮಿಸುತ್ತಾರೆ ಎಂಬ ನಂಬಿಕೆ ಇದೆ. ಇನ್ನೂ ಹಲವು ಮುಖ್ಯ ವಿಷಯಗಳಿವೆ. ಅವುಗಳನ್ನು ನಾನು ಸ್ಪಷ್ಪಪಡಿಸಬೇಕು".

'ನನ್ನನ್ನು ಯಾರು ಫಾಲೋ ಮಾಡಬೇಕಿಲ್ಲ'

'ನನ್ನನ್ನು ಯಾರು ಫಾಲೋ ಮಾಡಬೇಕಿಲ್ಲ'

'ಮೊದಲ ಮತ್ತು ಪ್ರಮುಖ ವಿಷಯ ಎಂದರೆ ನನ್ನನ್ನು ಕಾಶ್ಮೀರದ ಆದರ್ಶ ಎಂದು ಬಿಂಬಿಸಲಾಗುತ್ತಿದೆ. ಅದು ತಪ್ಪು. ನಾನೂ ಯಾರಿಗೂ ರೋಲ್ ಮಾಡೆಲ್‌ ಅಲ್ಲ. ನನ್ನನ್ನೂ ಯಾರು ಅನುಸರಿಸುವ ಅಗತ್ಯವಿಲ್ಲ. ನಾನು ಮಾಡುತ್ತಿರುವ ಚಟುವಟಿಕೆಗಳಿಗೆ ಹೆಮ್ಮೆ ಇಲ್ಲ. ವಿಶೇಷವಾಗಿ ಯೂತ್ಸ್ ಹೊರಗಡೆ ರಿಯಲ್ ರೋಲ್‌ ಮಾಡೆಲ್‌ ಗಳು ಇದ್ದಾರೆ ಎಂಬುದನ್ನು ತಿಳಿಯಬೇಕು".

ಝೈರಾ ಕೊನೆಯಲ್ಲಿ ಹೇಳಿದ್ದೇನು?

ಝೈರಾ ಕೊನೆಯಲ್ಲಿ ಹೇಳಿದ್ದೇನು?

"ನನ್ನನ್ನು ಹಲವರು ರೋಲ್ ಮಾಡೆಲ್‌ ಆಗಿ ಟ್ರೀಟ್ ಮಾಡಲಾಗುತ್ತಿದೆ. ಇದು ಬಹುಶಃ ಅಪಕೀರ್ತಿ ಉಂಟುಮಾಡಬಹುದು. ಇದು ನನಗೂ ಸಹ ಅಪಕೀರ್ತಿ ಉಂಟುಮಾಡುತ್ತದೆ. ಇಲ್ಲಿಂದ ನಾನು ಯಾವುದೇ ವಾದಗಳನ್ನು ಆರಂಭಿಸಲು ಬಯಸುತ್ತಿಲ್ಲ. ಕೇವಲ ನನ್ನ ಕಡೆಯಿಂದ ನೀಡಿರುವ ಕ್ಷಮೆಯಾಚನೆ". ಝೈರಾ ಕ್ಷಮೆಗಾಗಿ ಅಮೀರ್ ಹೇಳಿದ್ದೇನು ತಿಳಿಯಲು ಮುಂದೆ ಓದಿರಿ..

ಅಮೀರ್ ಖಾನ್ ಸಾಂತ್ವನ

ಅಮೀರ್ ಖಾನ್ ಸಾಂತ್ವನ

ಅಮೀರ್ ಖಾನ್, ಸಾಮಾಜಿಕ ಜಾಲತಾಣದಲ್ಲಿ ಝೈರಾ ವಾಸಿಂ ಸ್ಟೇಟ್ ಮೆಂಟ್ ಓದಿ ಅವರಿಗೆ ಸಾಂತ್ವಾನ ಹೇಳಿದ್ದಾರೆ. "ನಾನು ಝೈರಾ ಸ್ಟೇಟ್ ಮೆಂಟ್ ಓದಿದೆ. ಸ್ಟೇಟ್ ಮೆಂಟ್ ಯಾವ ರೀತಿ ಪರಿಣಮಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬಲ್ಲೇ ಮತ್ತು ಕಲ್ಪಿಸಿಕೊಳ್ಳಬಲ್ಲೇ. ಝೈರಾ, ನಾನು ನಿನಗೆ ತಿಳಿಯಲು ಬಯಸುವುದು ಏನೆಂದರೆ ನಾವೆಲ್ಲರೂ ನಿನ್ನ ಜೊತೆ ಇದ್ದೇವೆ. ಬ್ಯೂಟಿ ಅಂದ್ರೆ ಬ್ರೈಟ್, ಯಂಗ್, ಟ್ಯಾಲೆಂಟ್, ಹಾರ್ಡ್‌ ವರ್ಕಿಂಗ್, ಗೌರವಪೂರ್ಣ, ಕಾಳಜಿ ಮತ್ತು ಧೈರ್ಯವಂತ ಮಕ್ಕಳು ನಿನ್ನ ತರ. ನೀನು ಭಾರತದ ಮಕ್ಕಳಿಗೆ ಮಾತ್ರವಲ್ಲದೇ ಪ್ರಪಂಚದಾದ್ಯಂತದ ಮಕ್ಕಳಿಗೆ ಆದರ್ಶ. ನೀನು ನಿಜವಾಗಿಯೂ ನನಗೂ ರೋಲ್‌ ಮಾಡೆಲ್. ಗಾಡ್ ಬ್ಲೆಸ್ ಯು. ಲವ್. ಅಮೀರ್. ನಾನು ಎಲ್ಲರಲ್ಲಿ ಕೇಳಿಕೊಳ್ಳುವುದು ಏನೆಂದರೆ ಅವಳ ಪಾಡಿಗೆ ಅವಳನ್ನು ಬಿಟ್ಟು ಬಿಡಿ ಮತ್ತು ವಾಸ್ತವ ಘಟನೆಗೆ ಗೌರವ ನೀಡಿ. ಆಕೆ ಜಸ್ಟ್ 16 ವರ್ಷದ ಹುಡುಗಿ. ಅವಳ ಬೆಳವಣಿಗೆಗೆ ಪ್ರಯತ್ನಿಸಿ" ಎಂದು ಅಮೀರ್ ಖಾನ್ ಟ್ವೀಟ್ ಮಾಡಿದ್ದಾರೆ.

ಕ್ಷಮೆ ಕೇಳುವ ಅಗತ್ಯವಿಲ್ಲ

ಕ್ಷಮೆ ಕೇಳುವ ಅಗತ್ಯವಿಲ್ಲ

ಕಾಶ್ಮೀರ ಮುಖ್ಯಮಂತ್ರಿ ಭೇಟಿ ಮಾಡಿದ್ದಕ್ಕೆ ಝೈರಾ ಮೇಲೆ ಒತ್ತಡ ಹೇರಿ ಕೆಲವು ಉಗ್ರಗಾಮಿ ಶಕ್ತಿಗಳು ಕ್ಷಮೆ ಕೇಳುವಂತೆ ಮಾಡಿರಬಹುದು ಎಂದು ಊಹಿಸಲಾಗಿದೆ. ಈ ರೀತಿ ಕ್ಷಮೆ ಕೇಳುವುದು ತಪ್ಪು , ಕ್ಷಮೆ ಕೇಳವ ಅಗತ್ಯವಿಲ್ಲ ಎಂದು ಕಾಮನ್ ವೆಲ್ತ್ ಚಿನ್ನ ಪದಕ ವಿಜೇತ ಕುಸ್ತಿಪಟು ಗೀತಾ ಫೋಗಟ್ ಮತ್ತು ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹೇಳಿದ್ದಾರೆ.

English summary
Dangal girl from Jammu and Kashmir Zaira Wasim, who gave a sparkling performance in the Aamir Khan-starrer record-breaking movie, took to social media on Monday to post an apology for meeting state Chief Minister Mehbooba Mufti.
Please Wait while comments are loading...

Kannada Photos

Go to : More Photos