»   » ದೀಪಿಕಾಗಿಂತ ರಣವೀರ್ ಸಂಭಾವನೆ ತುಂಬಾ ಕಡಿಮೆಯಂತೆ ಹೌದಾ.?

ದೀಪಿಕಾಗಿಂತ ರಣವೀರ್ ಸಂಭಾವನೆ ತುಂಬಾ ಕಡಿಮೆಯಂತೆ ಹೌದಾ.?

Written by: ಸೋನು ಗೌಡ
Subscribe to Filmibeat Kannada

ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಅವರು ಬಾಲಿವುಡ್ ಕ್ಷೇತ್ರವನ್ನು ಆಳುತ್ತಿದ್ದಾರೆ. ಬರೀ ಬಾಲಿವುಡ್ ಮಾತ್ರವಲ್ಲದೇ, ಹಾಲಿವುಡ್ ಕ್ಷೇತ್ರದಲ್ಲೂ ಭರವಸೆ ಮೂಡಿಸಿರುವ ದೀಪಿಕಾ ಪಡುಕೋಣೆ ಅವರು ಬಾಲಿವುಡ್ ನಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ ಹೊರಹೊಮ್ಮಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಪದ್ಮಾವತಿ' ಚಿತ್ರಕ್ಕೆ ನಟಿ ದೀಪಿಕಾ ಪಡುಕೋಣೆ ಅವರು ಬರೋಬ್ಬರಿ 11 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿ ನಟ ರಣವೀರ್ ಸಿಂಗ್ ಅವರು ಕೂಡ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.['ಪದ್ಮಾವತಿ' ಚಿತ್ರಕ್ಕೆ ದೀಪಿಕಾಗೆ ಸಿಗುವ ಸಂಭಾವನೆ ಎಷ್ಟು.?]

ಆದರೆ ರಣವೀರ್ ಅವರ ಸಂಭಾವನೆ ದೀಪಿಕಾ ಪಡುಕೋಣೆ ಅವರಿಗಿಂತ ಕೊಂಚ ಕಡಿಮೆಯಂತೆ. ಹೀಗಂತ ಬಿಟೌನ್ ಗಲ್ಲಿ-ಗಲ್ಲಿಯಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಅಲ್ಲ ಹೆಚ್ಚು-ಕಡಿಮೆ ಆದ್ರೂ ಅವರಿಬ್ಬರಿಗೆ ಅಲ್ವಾ.? ಅಂತ ಅಭಿಮಾನಿಗಳು ಸಮಾಧಾನಪಟ್ಟುಕೊಳ್ಳಬಹುದು.[ಫೋರ್ಬ್ಸ್ ಅತಿ ಶ್ರೀಮಂತ ಬೆಡಗಿಯರ ಪಟ್ಟಿಯಲ್ಲಿ ದೀಪಿಕಾ]

ಹಾಲಿವುಡ್ ಸಿನಿಮಾ 'XXX' ನಂತರ ನಟಿ ದೀಪಿಕಾ ಪಡುಕೋಣೆ ಅವರ ವರಸೆ ಬದಲಾಗಿದೆ. ಮಾತ್ರವಲ್ಲದೇ ಅವರಿಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಆದ್ದರಿಂದ ಸಂಜಯ್ ಲೀಲಾ ಬನ್ಸಾಲಿ ಅವರು ಕೂಡ ತುಟಿಪಿಟಕ್ ಅನ್ನದೇ ಡಿಪ್ಪಿ ಕೇಳಿದಷ್ಟು ಸಂಭಾವನೆ ಕೊಟ್ಟಿದ್ದಾರೆ. ಮುಂದೆ ಓದಿ.....

ರಣವೀರ್ ಗೂ ಪಾತ್ರ

ರಣವೀರ್ ಗೂ ಪಾತ್ರ

ಪದ್ಮಾವತಿ ಚಿತ್ರಕ್ಕೆ ನಟರನ್ನು ಹುಡುಕುತ್ತಾ ಸುಸ್ತಾದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಕೊನೆಗೆ ರಣವೀರ್ ಸಿಂಗ್ ಅವರನ್ನೇ, ಈ ಚಿತ್ರದಲ್ಲಿ ನಟಿಸಲು ಕೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.['ಪದ್ಮಾವತಿ' ಜೊತೆ ಹಸಿಬಿಸಿಯಾಗಿ ಕಾಣಿಸಿಕೊಳ್ತಾರಾ ಶಾರುಖ್.?]

ರಣವೀರ್ ಸಂಭಾವನೆ ಎಷ್ಟು.?

ರಣವೀರ್ ಸಂಭಾವನೆ ಎಷ್ಟು.?

'ಪದ್ಮಾವತಿ' ಚಿತ್ರಕ್ಕಾಗಿ ನಟಿ ದೀಪಿಕಾ ಪಡುಕೋಣೆ ಅವರಿಗೆ ಸುಮಾರು 11 ಕೋಟಿ ರೂಪಾಯಿ ಸಂಭಾವನೆ ಕೊಟ್ರೆ, ನಟ ರಣವೀರ್ ಸಿಂಗ್ ಅವರಿಗೆ 7 ರಿಂದ 8 ಕೋಟಿ ರೂಪಾಯಿ ಸಂಭಾವನೆ ಕೊಟ್ಟಿದ್ದಾರೆ, ಎಂದು ಈ ಮೊದಲು ಸುದ್ದಿಯಾಗಿತ್ತು. ಆದರೆ ಇದು ಎಷ್ಟು ನಿಜ, ಎಷ್ಟು ಸುಳ್ಳು ಅಂತ ಯಾರಿಗೂ ಗೊತ್ತಿಲ್ಲ.[ಊರಿಗೊಬ್ಳೆ 'ಪದ್ಮಾವತಿ' ದೀಪಿಕಾ ಗಂಡ ಆಗ್ತಾರಾ ವಿಕ್ಕಿ.?]

ಶಾಹೀದ್ ಕಪೂರ್

ಶಾಹೀದ್ ಕಪೂರ್

ಇನ್ನು ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಅವರಿಗೆ ನಾಯಕರಾಗಿ ನಟ ರಣವೀರ್ ಮತ್ತು ನಟ ಶಾಹೀದ್ ಕಪೂರ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಸುದ್ದಿಯಾಗಿದೆ. ಅದರೆ ಆ ಬಗ್ಗೆ ಚಿತ್ರತಂಡದಿಂದ ಇನ್ನೂ ಅಧೀಕೃತ ಮಾಹಿತಿ ಹೊರಬಿದ್ದಿಲ್ಲ.

ರಣವೀರ್ ಹೊರ ಹೋಗಿದ್ರಾ?

ರಣವೀರ್ ಹೊರ ಹೋಗಿದ್ರಾ?

ನಟ ಶಾಹೀದ್ ಕಪೂರ್ ಅವರು ಈ ಚಿತ್ರದಲ್ಲಿ ಪಾತ್ರ ವಹಿಸುತ್ತಿರುವುದರಿಂದ ನಟ ರಣವೀರ್ ಸಿಂಗ್ ಅವರು 'ಪದ್ಮಾವತಿ' ಚಿತ್ರತಂಡದಿಂದ ಹೊರ ನಡೆದಿದ್ದರು ಅಂತ ಕೂಡ ಈ ಮೊದಲು ಗಾಸಿಪ್ ಆಗಿತ್ತು. ಆದರೆ ಇದನ್ನೆಲ್ಲಾ ಸುಳ್ಳು ಎಂದಿದ್ದಾರೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು.

ಹೃತಿಕ್ ಹೆಸರು ಕೇಳಿಬರುತ್ತಿದೆ

ಹೃತಿಕ್ ಹೆಸರು ಕೇಳಿಬರುತ್ತಿದೆ

ನಟ ಶಾಹೀದ್ ಕಪೂರ್ ಅವರನ್ನು 'ಪದ್ಮಾವತಿ' ದೀಪಿಕಾ ಅವರ ಗಂಡನ ಪಾತ್ರದಲ್ಲಿ ನಟಿಸಲು ಸಂಜಯ್ ಬನ್ಸಾಲಿ ಅವರು ಕೇಳಿಕೊಂಡಾಗ ರಣವೀರ್ ಅವರಿಗೆ ಇಷ್ಟವಾಗಲಿಲ್ಲವಂತೆ. ಅದಕ್ಕೆ ರಣವೀರ್ ಅವರ ಜಾಗಕ್ಕೆ ಹೃತಿಕ್ ರೋಷನ್ ಅವರನ್ನು ಕರೆತರಲು ಬನ್ಸಾಲಿ ಪ್ಲ್ಯಾನ್ ಮಾಡಿದ್ದರು. ಇದೀಗ ಯಾರು ಫೈನಲ್ ಆಗುತ್ತಾರೆ ಅನ್ನೋದು ಇನ್ನೂ ತಿಳಿದುಬಂದಿಲ್ಲ. ಸದ್ಯಕ್ಕೆ ಶಾಹೀದ್ ಕಪೂರ್, ರಣವೀರ್ ಮತ್ತು ದೀಪಿಕಾ ಮೂವರ ಹೆಸರು ಬನ್ಸಾಲಿ ಲಿಸ್ಟ್ ನಲ್ಲಿದೆ.

ಮೂರನೇ ಬಾರಿ ಒಂದಾಗುತ್ತಾ ಜೋಡಿ.?

ಮೂರನೇ ಬಾರಿ ಒಂದಾಗುತ್ತಾ ಜೋಡಿ.?

'ರಾಮ್ ಲೀಲಾ', 'ಬಾಜೀರಾವ್ ಮಸ್ತಾನಿ' ಚಿತ್ರದ ನಂತರ ಬಾಲಿವುಡ್ ನ ಸುಂದರ ಪ್ರೇಮಿಗಳಾದ ದೀಪಿಕಾ ಮತ್ತು ರಣವೀರ್ ಅವರನ್ನು ಮತ್ತೆ 'ಪದ್ಮಾವತಿ' ಚಿತ್ರದ ಮೂಲಕ ಬನ್ಸಾಲಿ ಒಂದು ಮಾಡುತ್ತಾರಾ, ಅನ್ನೋದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.

English summary
Deepika Padukone is ruling Bollywood these days! She is the higest paid actress of tinsel town and rumours were rife that she is being paid more than beau Ranveer Singh in Padmavati.
Please Wait while comments are loading...

Kannada Photos

Go to : More Photos