»   » ನೀರಿನ ಬಿಲ್ ಕಟ್ಟದ ದಿಯಾ ಫೈರ್ ಟ್ವೀಟ್

ನೀರಿನ ಬಿಲ್ ಕಟ್ಟದ ದಿಯಾ ಫೈರ್ ಟ್ವೀಟ್

Posted by:
Subscribe to Filmibeat Kannada

ಹೈದರಾಬಾದ್, ಜೂ. 18: ತಮ್ಮ ನಿವಾಸದ ನೀರಿನ ಶುಲ್ಕವನ್ನು ಬಾಕಿ ಉಳಿಸಿಕೊಂಡಿರುವ ನಟಿ ದಿಯಾ ಮಿರ್ಜಾಗೆ ಹೈದರಾಬಾದಿನನ ಜಲ ಪೂರೈಕೆ ಮತ್ತು ಒಳ ಚರಂಡಿ ಮಂಡಳಿ ರೆಡ್ ನೋಟಿಸ್ ಜಾರಿ ಮಾಡಿದೆ. ಶುಲ್ಕ ಪಾವತಿಸದೇ ಹೋದರೆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಸಿದೆ. ಇದರಿಂದ ಸಿಟ್ಟಿಗೆದ್ದ ದಿಯಾ ಟ್ವಿಟ್ಟರ್ ನಲ್ಲಿ 'ಫೈರ್' ಮಾಡುತ್ತಿದ್ದಾರೆ.

ಇಲ್ಲಿನ ಜುಬಿಲಿ ಹಿಲ್ಸ್ ಪ್ರದೇಶದಲ್ಲಿರುವ ತಮ್ಮ ನಿವಾಸದ ನೀರು ಪೂರೈಕೆ ಬಿಲ್ ಅನ್ನು 2008ರಿಂದ ಅವರು ಪಾವತಿಸಿರಲಿಲ್ಲ. 2009ಕ್ಕೆ 33,480 ರೂಪಾಯಿ ಇದ್ದ ಬಾಕಿ ಮೊತ್ತವು ಬಡ್ಡಿ ಸೇರಿ ಈಗ 2.26 ಲಕ್ಷ ರೂ. ತಲುಪಿದೆ.

ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ ಬಾಕಿ ಮೊತ್ತ ಪಾವತಿಸುವಂತೆ ಹಲವು ಬಾರಿ ಎಚ್ಚರಿಕೆಯ ನೋಟಿಸ್ ನೀಡಿದ್ದರೂ ದಿಯಾ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಬಾಕಿ ಮೊತ್ತ ಪಾವತಿಸುವಂತೆ ಹೇಳಿ 2012ರಲ್ಲಿಯೇ ಮಂಡಳಿ ನೀರು ಸಂಪರ್ಕ ಕಡಿತಗೊಳಿಸಿತ್ತು. ಅದಕ್ಕೂ ಕ್ಯಾರೆ ಅಂದಿರಲಿಲ್ಲ. ಕೊನೆಗೆ ಮಂಡಳಿ ರೆಡ್ ನೋಟಿಸ್ ಜಾರಿಗೊಳಿಸಿದೆ.

Dia Mirza 'shocked' over notice for defaulting Rs 2.26 lakh water dues

ದಿಯಾ ಸ್ಪಷ್ಟನೆ: ಇದರಲ್ಲಿ ನನ್ನ ತಪ್ಪೇನು ಇಲ್ಲ. ಬೇರೊಬ್ಬರು ನನ್ನ ಹೆಸರಿನಲ್ಲಿ ಕನೆಕ್ಷನ್ ತೆಗೆದುಕೊಂಡಿದ್ದರು. ಯಾರ ತಪ್ಪು ಎಂದು ನಂತರ ಪರಿಶೀಲಿಸುತ್ತೇನೆ. ಮೊದಲು ಎಲ್ಲಾ ಬಿಲ್ ಚುಕ್ತಾ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಜಲ ಸಂರಕ್ಷಣೆ ಮಾಡುವ ಸರ್ಕಾರೇತರ ಸಂಸ್ಥೆ ಜೊತೆ ಕಾರ್ಯ ನಿರ್ವಹಿಸುವ ನಾನು ನೀರಿನ ಬಿಲ್ ಕಟ್ಟಿಲ್ಲ ಎಂದರೆ ನಗೆಪಾಟಲಾಗುತ್ತೇನೆ. ವೃಥಾ ಆರೋಪಕ್ಕೆ ಸಿಲುಕಲು ನನಗೆ ಇಷ್ಟವಿಲ್ಲ. ಜಲಮಂಡಳಿ ಅಧಿಕಾರಿಗಳು ಮಾಧ್ಯಮಗಳ ಮುಂದೆ ನನ್ನ ವಿರುದ್ಧ ಹೇಳಿಕೆ ನೀಡುವ ಮೊದಲು ವಿಷಯ ಇತ್ಯರ್ಥ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

ದಿಯಾ ಮಿರ್ಜಾ ಅವರ ಮನೆ ಸಂಖ್ಯೆ: 8-2-293/82/BH ಹಾಗೂ ಗ್ರಾಹಕ ಸಂಖ್ಯೆ :613533225 ಮೇಲೆ 2.26 ಲಕ್ಷ ರು ಬಾಕಿ ಮೊತ್ತ ಬರಬೇಕಿದೆ. 2012ರಲ್ಲಿ ನೀರಿನ ಸಂಪರ್ಕ ಕಡಿತಗೊಳಿಸಲಾಗಿದೆ. ಹಲವು ಬಾರಿ ನೋಟಿಸ್ ನೀಡಿದರು ಒಂದಕ್ಕೂ ಉತ್ತರಿಸಿಲ್ಲ. ಮನೆಯಲ್ಲಿ ಯಾರು ಇಲ್ಲದಿದ್ದರೆ ಅಥವಾ ಮನೆ ಖಾಲಿ ಮಾಡಿಕೊಂಡು ಹೋಗಿದ್ದರೆ ಜಲಮಂಡಳಿಗೆ ವಿಷಯ ತಿಳಿಸಬೇಕಾದ್ದು ನಾಗರೀಕರ ಕರ್ತವ್ಯವಲ್ಲವೇ. ದಿಯಾ ಅವರು ಯಾವುದೇ ಮಾಹಿತಿ ನೀಡಿಲ್ಲ ಎಂದು HMWSSB ಅಧಿಕಾರಿ ಪಿಜೆ ಶ್ರೀನಾರಾಯಣ ಹೇಳಿದ್ದಾರೆ.

ದಿಯಾ ಮಿರ್ಜಾ ಅವರ ಮನೆ ವಾಚ್ ಮನ್ ರೆಡ್ ನೋಟಿಸ್ ಸ್ವೀಕರಿಸಲು ನಿರಾಕರಿಸಿದ್ದರಿಂದ ನೋಟಿಸ್ ಅನ್ನು ಮನೆಯ ಬಾಗಿಲಿಗೆ ಅಂಟಿಸಿ ಅಧಿಕಾರಿಗಳು ತೆರಳಿದ್ದಾರೆ. ವಿಷಯ ತಿಳಿದ ಮೇಲೆ ದಿಯಾ ಮಿರ್ಜಾ ಸಾಮಾಜಿಕ ಜಾಲ ತಾಣದಲ್ಲಿ ಟ್ವೀಟ್ ಮೇಲೆ ಟ್ವೀಟ್ ಮಾಡಿದ್ದಾರೆ.

English summary
Actor Dia Mirza is shocked with reports about non-payment for water dues by her. The actress tweeted, "baffled by reports regarding non-payment of water dues on my Hyderabad property! Getting to the bottom of it."
Please Wait while comments are loading...

Kannada Photos

Go to : More Photos