»   » ಶಾರ್ಟ್ಸ್ ನಲ್ಲಿ ಕಣ್ಣು ಕುಕ್ಕಿದ ಖತರ್ನಾಕ್ ಚೆಲುವೆ!

ಶಾರ್ಟ್ಸ್ ನಲ್ಲಿ ಕಣ್ಣು ಕುಕ್ಕಿದ ಖತರ್ನಾಕ್ ಚೆಲುವೆ!

Written by: ಉದಯರವಿ
Subscribe to Filmibeat Kannada

ಅಬ್ಬಬ್ಬಬ್ಬಾ ಈಗ ನಮ್ಮ ಬಾಲಿವುಡ್ ಬೆಡಗಿಯರ ಮುಂದೆ ಹಾಲಿವುಡ್ ಬೆಡಗಿಯರನ್ನು ನಿವಾಳಿಸಿ ಎಸೆಯಬೇಕು. ಟಾಪ್ ಟು ಬಾಟಮ್ ಯಾವುದರಲ್ಲೂ ಕಮ್ಮಿ ಇಲ್ಲದಂತೆ ಬಾಲಿವುಡ್ ತಾರೆಗಳು ತಯಾರಾಗಿದ್ದಾರೆ. ಸಾಣೆ ಹಿಡಿದ ಕತ್ತಿಯಂತಿರುವ ಕತ್ರಿನಾ ಕೈಫ್ ಗೆ ಸೈಡು ಹೊಡೆಯಲು ಇನ್ನೊಬ್ಬ ಬೆಡಗಿ ಎಂಟ್ರಿ ಕೊಟ್ಟಿದ್ದಾರೆ.

ರಂಭೆ, ಊರ್ವಶಿ, ಮೇನಕೆಯರನ್ನು ಎರಕ ಹೊಯ್ದಂತಿರುವ ಈ ಬೆಡಗಿ ಹೆಸರು ಕೃತಿ ಸನೋನ್. ಈಗಷ್ಟೇ ಬಾಲಿವುಡ್ ಗೆ ಅಡಿಯಿಟ್ಟಿರುವ ತಾಜಾ ತಾಜಾ ತಾರೆ. ಸಬ್ಬೀರ್ ಖಾನ್ ಆಕ್ಷನ್ ಕಟ್ ಹೇಳುತ್ತಿರುವ 'ಹೀರೋಪಂಟಿ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. [ಹಾಟ್ ತಾರೆಗಳ ಸೆಕ್ಸಿ ಬೆನ್ನಿನ ಚಿಲಿಪಿಲಿ ಚಿತ್ರಗಳು]

ಈ ಚಿತ್ರ ಇನ್ನೇನು ತೆರೆಗೆ ರಾಚಲು ಸಿದ್ಧವಾಗಿದೆ. ಅಷ್ಟರಲ್ಲೇ ಬಾಲಿವುಡ್ ಚಿತ್ರರಂಗದ ಗ್ರಾಮರ್ ಅರೆದು ಕುಡಿದಂತೆ ಶಾರ್ಟ್ಸ್ ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಪಡ್ಡೆಗಳಂತೂ ಕರೆಂಟ್ ಶಾಕ್ ಹೊಡೆದವರಂತಾಗಿದ್ದಾರೆ. ಸ್ಲೈಡ್ ನಲ್ಲಿ ನೋಡಿ ಇನ್ನಷ್ಟು ಕಲರ್ ಫುಲ್ ಚಿತ್ರಗಳು.

ಬಾಲಿವುಡ್ ನಲ್ಲಿ ಮಿಂಚಲು ಹೊರಟ ಕೃತಿ ಸನೋನ್

ಬಾಲಿವುಡ್ ನಲ್ಲಿ ಮಿಂಚಲು ಹೊರಟ ಕೃತಿ ಸನೋನ್

ಕೃತಿ ಸನನ್ ಮೊದಲು ಅಭಿನಯಿಸಿದ್ದು ಟಾಲಿವುಡ್ ನಲ್ಲಿ, ಪ್ರಿನ್ಸ್ ಮಹೇಶ್ ಬಾಬು ನಾಯಕ ನಟನಾಗಿರುವ '1 ನೇನೊಕ್ಕಡಿನೋ' ಚಿತ್ರದ ಮೂಲಕ ಬಣ್ಣ ಹಚ್ಚಿದ ತಾರೆ ಈಗ ಬಾಲಿವುಡ್ ನಲ್ಲಿ ಮಿಂಚಲು ಹೊರಟಿದ್ದಾರೆ.

ಹೀರೋಪಂಟಿ ಚಿತ್ರದಲ್ಲಿ ಹೀರೋಯಿನ್

ಹೀರೋಪಂಟಿ ಚಿತ್ರದಲ್ಲಿ ಹೀರೋಯಿನ್

ಸಬ್ಬೀರ್ ಖಾನ್ ಆಕ್ಷನ್ ಕಟ್ ಹೇಳುತ್ತಿರುವ 'ಹೀರೋಪಂಟಿ' ಚಿತ್ರದಲ್ಲಿ ಪ್ರಮುಖ ಆಕರ್ಷಣೆ ಎಂದರೆ ಸುದೀರ್ಘ ಚುಂಬನ ಸನ್ನಿವೇಶವಂತೆ. ಜಾಕಿ ಶ್ರಾಫ್ ಪುತ್ರ ಟೈಗರ್ ಶ್ರಾಫ್ ಚಿತ್ರದ ನಾಯಕ ನಟ. ಇದುವರೆಗೂ ಎಷ್ಟೋ ಮಂದಿ ಚುಂಬನ ಸನ್ನಿವೇಶದಲ್ಲಿ ಅಭಿನಯಿಸಿದ್ದಾರೆ. ಇದು ಒಂಥರಾ ಡಿಫರೆಂಟ್ ಅಂತಾರೆ ಕೃತಿ.

ಸುದೀರ್ಘ ಲಿಪ್ ಲಾಕ್ ಸನ್ನಿವೇಶವೂ ಇದೆಯಂತೆ

ಸುದೀರ್ಘ ಲಿಪ್ ಲಾಕ್ ಸನ್ನಿವೇಶವೂ ಇದೆಯಂತೆ

ಈ ಚಿತ್ರದಲ್ಲಿ ಲಿಪ್ ಲಾಕ್ ಸನ್ನಿವೇಶ ಇರುತ್ತದೆ ಎಂದು ನಿರ್ದೇಶಕರು ನನಗೆ ಮೊದಲೇ ತಿಳಿಸಿದ್ದರು. ಆ ಸನ್ನಿವೇಶವನ್ನು ಸೈಡಿಗಿಟ್ಟರೆ ಆಗಲ್ಲವೇ ಎಂದು ಕೇಳಿದ್ದೆ. ಆದರೆ ಕಥೆಯಲ್ಲಿ ಚುಂಬನ ಸಹ ಒಂದು ಭಾಗ ಎಂದು ವಿವರಿಸಿದರು. ಬಳಿಕ ನೋ ಎನ್ನಲು ಆಗಲಿಲ್ಲ.

ಒಂದಡಿ ಇಡಬೇಕಾದರೂ ತಂದೆತಾಯಿ ಬಗ್ಗೆ ಯೋಚಿಸುತ್ತೇನೆ

ಒಂದಡಿ ಇಡಬೇಕಾದರೂ ತಂದೆತಾಯಿ ಬಗ್ಗೆ ಯೋಚಿಸುತ್ತೇನೆ

ಸಂಪ್ರದಾಯಬದ್ಧ ಕುಟುಂಬದಿಂದ ಬಂದಂತಹ ನಾನು ತಂದೆತಾಯಿ ಸಲಹೆ ಸೂಚನೆಗಳನ್ನು ಪಾಲಿಸುತ್ತಿದ್ದೇನೆ. ನಾನು ಒಂದಡಿ ಮುಂದೆ ಇಡಬೇಕಾದರೂ ನಮ್ಮ ತಂದೆತಾಯಿಯನ್ನು ಗಮನದಲ್ಲಿಟ್ಟುಕೊಂಡೇ ಮಾಡುತ್ತೇನೆ. ಇನ್ನೇನೋ ಮಾಡಲು ಹೋಗಿ ಅವರಿಗೆ ತಲೆನೋವು ತರುವುದು ನನಗಿಷ್ಟವಿಲ್ಲ.

ಅವಕಾಶಗಳ ನಿರೀಕ್ಷೆಯಲ್ಲಿ ಕಾದ ಬೆಡಗಿ

ಅವಕಾಶಗಳ ನಿರೀಕ್ಷೆಯಲ್ಲಿ ಕಾದ ಬೆಡಗಿ

ತನ್ನ ಚೊಚ್ಚಲ '1' ಚಿತ್ರ ನಿರೀಕ್ಷಿಸಿದ ಮಟ್ಟದಲ್ಲಿ ಗೆಲ್ಲದೆ ಇದ್ದ ಕಾರಣ ಕೃತಿಗೆ ಅವಕಾಶಗಳಿಲ್ಲದಂತಾಯಿತು. ಆದರೂ ಧೃತಿಗೆಡದೆ ಬಂದ ಅವಕಾಶಗಳನ್ನು ಒಪ್ಪಿಕೊಳ್ಳದೆ ತಾಳ್ಮೆಯಿಂದ ಉತ್ತಮ ಅವಕಾಶಕ್ಕೆ ನಿರೀಕ್ಷಿಸಿದರು. ಕಡೆಗೂ ಅಂತಹ ಕಾಲ ಬಂದೇ ಬಂತು.

ಅಲ್ಲು ಅರ್ಜುನ್ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ

ಅಲ್ಲು ಅರ್ಜುನ್ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ

ಈಗ ತೆಲುಗಿನ ಮತ್ತೊಂದು ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲು ಅರ್ಜುನ್ ನಾಯಕ ನಟನಾಗಿರುವ ತ್ರಿವಿಕ್ರಮ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ. ಈ ಚಿತ್ರದ ಮೂಲಕ ತಮ್ಮ ಹಣೆಬರಹವೇ ಬದಲಾಗಲಿದೆ ಎಂದು ಭಾವಿಸಿದ್ದಾರೆ ಕೃತಿ.

ಆಗಬೇಕು ಅಂದುಕೊಂಡದ್ದು ಇಂಜಿನಿಯರ್

ಆಗಬೇಕು ಅಂದುಕೊಂಡದ್ದು ಇಂಜಿನಿಯರ್

ದೆಹಲಿ ಮೂಲಕದ ಈ ಬೆಡಗಿ ಆಗಬೇಕು ಅಂದುಕೊಂಡದ್ದು ಇಂಜಿನಿಯರ್. ಕಾಲೇಜು ದಿನಗಳಲ್ಲಿ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದರಂತೆ.

ಬಹಳ ಕಾಲ ಈ ಕ್ಷೇತ್ರದಲ್ಲೇ ಸೈಕಲ್ ಹೊಡೆದರು

ಬಹಳ ಕಾಲ ಈ ಕ್ಷೇತ್ರದಲ್ಲೇ ಸೈಕಲ್ ಹೊಡೆದರು

ಆ ಬಳಿಕ ಮಾಡೆಲಿಂಗ್ ಕ್ಷೇತ್ರಕ್ಕೆ ಅಡಿಯಿಟ್ಟು ಹಣ, ಹೆಸರು ಸಂಪಾದಿಸಿದರು. ಬಹಳ ಕಾಲ ಈ ಕ್ಷೇತ್ರದಲ್ಲೇ ಸೈಕಲ್ ಹೊಡೆದರು.

ಜೀವನದ ದಿಕ್ಕನ್ನೇ ಬದಲಾಯಿಸಿದ ರತ್ನಾನಿ

ಜೀವನದ ದಿಕ್ಕನ್ನೇ ಬದಲಾಯಿಸಿದ ರತ್ನಾನಿ

ಈ ನಡುವೆ ಖ್ಯಾತ ಛಾಯಾಗ್ರಾಹಕ ಡಬೂ ರತ್ನಾನಿ ಕಣ್ಣಿಗೆ ಬಿದ್ದರು. ಅವರ ಕ್ಯಾಮೆರಾ ಕಣ್ಣು ಕೃತಿ ಅವರ ಜೀವನದ ದಿಕ್ಕನ್ನೇ ಬದಲಾಯಿಸಿ ಬಿಡ್ತು.

ಈಗ ಟಾಲಿವುಡ್, ಬಾಲಿವುಡ್ ನಲ್ಲಿ ಬಿಜಿ ತಾರೆ

ಈಗ ಟಾಲಿವುಡ್, ಬಾಲಿವುಡ್ ನಲ್ಲಿ ಬಿಜಿ ತಾರೆ

ಡಬೂ ರತ್ನಾನಿ ತೆಗೆದಂತಹ ಅದ್ಭುತ ಫೋಟೋಗಳು ಮುಂಬೈ ಫಿಲಂ ಸರ್ಕಲ್ ಗಳಲ್ಲಿ ಪ್ರತಿಧ್ವನಿಸತೊಡಗಿತು. ಆಗ ಸಾಕಷ್ಟು ಬಾಲಿವುಡ್ ನಿರ್ಮಾಪಕರ, ನಿರ್ದೇಶಕರ ಕಣ್ಣು ಬಿತ್ತು. ಈಗ ತೆಲುಗು, ಬಾಲಿವುಡ್ ಎರಡರಲ್ಲೂ ಬಿಜಿ ತಾರೆ.

English summary
Actress Kriti Sanon made her acting debut in Sukumar's psychological thriller film 1: Nenokkadine, a Telugu film opposite actor Mahesh Babu. She will be making her Hindi film debut opposite newcomer Tiger Shroff in Heropanti. Kriti Sanon said.. "I come from a conservative family, but my parents took it in a positive way and they supported me with each and every decision of mine," she added.
Please Wait while comments are loading...

Kannada Photos

Go to : More Photos