»   » ಹಾಡು ನಿಲ್ಲಿಸಿದ ಜೈಪುರ್ ಘರಾನಾದ ಕೋಗಿಲೆ ಕಿಶೋರಿ

ಹಾಡು ನಿಲ್ಲಿಸಿದ ಜೈಪುರ್ ಘರಾನಾದ ಕೋಗಿಲೆ ಕಿಶೋರಿ

ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಗಾಯಕಿ ಕಿಶೋರಿ ಹಿಂದೂಸ್ತಾನಿ ಪಾರಂಪರಿಕ ರಾಗಗಳಲ್ಲಿ ಖ್ಯಾಲ್ ಹಾಡುವುದರಲ್ಲಿ ಪ್ರಸಿದ್ಧರಾಗಿದ್ದರು. ಜೊತೆಗೆ ಕ್ಲಾಸಿಕಲ್ ಸಂಗೀತಗಳಲ್ಲಿ ಠುಮರಿ, ಭಜನ್ ಹಾಗೂ ಸಿನಿಮಾ ಹಾಡು ಹಾಡುವುದರಲ್ಲೂ ಖ್ಯಾತಿಗಳಿಸಿದ್ದರು.

Posted by:
Subscribe to Filmibeat Kannada

ಜೈಪುರ ಘರಾನಾ ಶೈಲಿಯ ಪ್ರಖ್ಯಾತ ಹಿಂದೂಸ್ತಾನಿ ಗಾಯಕಿ ಕಿಶೋರಿ ಅಮೋನ್ಕರ್ (84) ನಿಧನರಾದರು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದ ಅವರು ತಮ್ಮ ಮುಂಬೈನ ನಿವಾಸದಲ್ಲಿ ಸೋಮವಾರ(ಏಪ್ರಿಲ್ 3) ತಡರಾತ್ರಿ ಕೊನೆಯುಸಿರೆಳೆದರು.

ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಗಾಯಕಿ ಕಿಶೋರಿ ಅವರು ಹಿಂದೂಸ್ತಾನಿ ಪಾರಂಪರಿಕ ರಾಗಗಳಲ್ಲಿ ಖ್ಯಾಲ್ ಹಾಡುವುದರಲ್ಲಿ ಪ್ರಸಿದ್ಧರಾಗಿದ್ದರು. ಜೊತೆಗೆ ಕ್ಲಾಸಿಕಲ್ ಸಂಗೀತಗಳಲ್ಲಿ ಠುಮರಿ, ಭಜನ್ ಹಾಗೂ ಸಿನಿಮಾ ಹಾಡು ಹಾಡುವುದರಲ್ಲೂ ಖ್ಯಾತಿಗಳಿಸಿದ್ದರು.

 Hindustani classical vocalist Kishori Amonkar passes away

ಕಿಶೋರಿ ಅಮೋನ್ಕರ್ ಅವರು ಹಲವು ರಾಷ್ಟ್ರೀಯ ಹಾಗೂ ನಾಗರಿಕ ಗೌರವ ಪ್ರಶಸ್ತಿಗಳನ್ನು ಪಡೆದಿದ್ದರು. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1985), ಪದ್ಮಭೂಷಣ (1987), ಪದ್ಮವಿಭೂಷಣ (2002) ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿದ್ದವು.

 Hindustani classical vocalist Kishori Amonkar passes away

ಖ್ಯಾತ ಗಾಯಕಿ ಅಗಲಿಕೆಗೆ ಸಂಗೀತ ಕ್ಷೇತ್ರದ ಹಲವರ ಕಂಬಿನಿ ಮಿಡಿದಿದೆ. ಕಿಶೋರಿ ಅವರು ಇಹಲೋಕ ತ್ಯಜಿಸಿರುವುದಕ್ಕೆ ನೊಂದು ಗಾಯಕಿ ಶ್ರೇಯಾ ಘೋಷಲ್ " ಸಂಗೀತ ಪ್ರೇಮಿಗಳಿಗೆ ಇದು ದುಃಖದ ದಿನ. ಭಾರತೀಯ ಶಾಸ್ತ್ರೀಯ ಸಂಗೀತ ಇಂದು ಅತ್ಯಂತ ಅಮೂಲ್ಯ ಕಲಾವಿದೆಯನ್ನು ಕಳೆದುಕೊಂಡಿದೆ. ಜೀವಂತ ಇರುವಾಗಲೇ ಅವರನ್ನು ಭೇಟಿ ಮಾಡುವ ಅದೃಷ್ಟ ನನಗೆ ಸಿಕ್ಕಿತ್ತು. ಆ ದಿನವನ್ನು ಎಂದು ಮರೆಯಲು ಸಾಧ್ಯವಿಲ್ಲ. ಅವರು ನನ್ನ ಜೀವನದ ಅತಿದೊಡ್ಡ ಸ್ಫೂರ್ತಿ" ಎಂದು ಟ್ವೀಟ್ ಮಾಡಿದ್ದಾರೆ.

English summary
Renowned Hindustani classical vocalist Kishori Amonkar passed away in mumbai yesterday(April 3) after a brief illness. She was 84.
Please Wait while comments are loading...

Kannada Photos

Go to : More Photos