»   » ಇಂಡಿಯಾ ಜಿಂದಾಬಾದ್ ಎಂದು ಟಾಪ್ ಕಳಚಿದ ಬೆಡಗಿ

ಇಂಡಿಯಾ ಜಿಂದಾಬಾದ್ ಎಂದು ಟಾಪ್ ಕಳಚಿದ ಬೆಡಗಿ

Written by: ರವಿಕಿಶೋರ್
Subscribe to Filmibeat Kannada

ಒಂದು ಕಡೆ ವಿಶ್ವ ಕಪ್ ಸಂಭ್ರಮದಲ್ಲಿ ಕ್ರಿಕೆಟ್ ಪ್ರೇಮಿಗಳು ಮಿಂದೇಳುತ್ತಿದ್ದರೆ ಇನ್ನೊಂದು ಕಡೆ ಬಾಲಿವುಡ್ ಬಿಂಕದ ಬೆಡಗಿಯರು ಗರಿಗೆದರಿದ ನವಿಲಿನಂತೆ ನಾಟ್ಯವಾಡಲು ಮುಂದಾಗಿದ್ದಾರೆ. ಈ ಕ್ರಿಕೆಟ್ ಗೂ ಲಲನಾಮಣಿಗಳಿಗೂ ಬಿಡಿಸಲಾರದ ಬಾಂಧವ್ಯವಿದೆ.

ಇತ್ತೀಚೆಗೆ ಟೀಂ ಇಂಡಿಯಾ ತನ್ನ ಚಿರಕಾಲದ ಪ್ರತಿಸ್ಪರ್ಧಿ ಪಾಕಿಸ್ತಾನದ ಜೊತೆಗೆ ಸೆಣೆಸಾಡಿ ಭರ್ಜರಿ ಗೆಲುವನ್ನು ದಾಖಲಿಸಿದ್ದು ಗೊತ್ತಿರುವುದೇ. ಈ ರೀತಿಯ ಉತ್ಕಂಠ ಪರಿಸ್ಥಿತಿಯಲ್ಲಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಕೆಲವು ತಾರೆಗಳು ತುದಿಗಾಲಲ್ಲಿ ನಿಂತಿರುತ್ತಾರೆ.

ಈ ಹಿಂದೆ ಪೂನಂ ಪಾಂಡೆ ಇದೇ ರೀತಿ ಪ್ರಚಾರಕ್ಕಾಗಿ ಸಾಕಷ್ಟು ಸೈಕಲ್ ಹೊಡೆದು ಕಡೆಗೆ ಬಾಲಿವುಡ್ ನಲ್ಲಿ ನೆಲೆಕಂಡುಕೊಂಡರು. ಇದೇ ಹಾದಿಯಲ್ಲಿ ಸೋಫಿಯಾ ಹಯಾತ್ ಎಂಬ ಬೆಡಗಿ ಇಂಡಿಯಾ ಜಿಂದಾಬಾದ್ ಎಂದು ಟಾಪ್ ಲೆಸ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದಾರೆ.

ಟಾಪ್ ಕಳಚಿ ಯುವಕರ ಮನಸ್ಸಿನಲ್ಲಿ ಕಚಗುಳಿ

ಟಾಪ್ ಕಳಚಿ ಯುವಕರ ಮನಸ್ಸಿನಲ್ಲಿ ಕಚಗುಳಿ

ಸೋಪಿಯಾ ಹಯಾತ್ ಬಗ್ಗೆ ಹೇಳಬೇಕೆಂದರೆ...ಬ್ರಿಟನ್ ಮೂಲಕ ಈ 29ರ ಚೆಲುವೆ ಬಾಲಿವುಡ್ ನಲ್ಲಿ ನೆಲೆಕಂಡುಕೊಳ್ಳಲು ಸಾಕಷ್ಟು ತಿಪ್ಪರಲಾಗ ಹಾಕುತ್ತಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. ಈಗ ಏಕ್ ದಂ ಟಾಪ್ ಕಳಚಿ ಯುವಕರ ಮನಸ್ಸಿನಲ್ಲಿ ಕಚಗುಳಿ ಇಟ್ಟಿದ್ದಾರೆ.

ಇಂಡಿಯಾ ಜಿಂದಾಬಾದ್ ಎಂದು ಟಾಪ್ ಕಳಚಿದ ಬೆಡಗಿ

ಇಂಡಿಯಾ ಜಿಂದಾಬಾದ್ ಎಂದು ಟಾಪ್ ಕಳಚಿದ ಬೆಡಗಿ

ಪಬ್ಲಿಸಿಟಿಗಾಗಿ ಆಗಾಗ ತನ್ನ ಹಾಟ್ ಮತ್ತು ಸೆಕ್ಸಿ ಅಂದಚೆಂದಗಳನ್ನು ತೆರೆದಿಡುತ್ತಾ ತಮ್ಮ ಬೇಳೆಬೇಯಿಸಿಕೊಳ್ಳುತ್ತಿದ್ದಾರೆ. ಪಾಕಿಸ್ತಾನದ ವಿರುದ್ಧ ಭಾರತ ಜಯಭೇರಿ ಭಾರಿಸಿದ ಕೂಡಲೆ ಇಂಡಿಯಾ ಜಿಂದಾಬಾದ್ ಎಂದು ಟಾಪ್ ಕಳಚಿದ್ದಾರೆ.

ಈ ಹಿಂದೆ ಐಸ್ ಬಕೆಟ್ ಚಾಲೆಂಜ್ ನಲ್ಲಿ...

ಈ ಹಿಂದೆ ಐಸ್ ಬಕೆಟ್ ಚಾಲೆಂಜ್ ನಲ್ಲಿ...

ಈ ಹಿಂದೆ ಐಸ್ ಬಕೆಟ್ ಚಾಲೆಂಜ್ ಬಿಸಿಯಿದ್ದಾಗ ಇದೇ ರೀತಿ ಅರೆನಗ್ನವಾಗಿ ಐಸ್ ಬಕೆಟ್ ಚಾಲೆಂಜ್ ನಲ್ಲಿ ಪಾಲ್ಗೊಂಡಿದ್ದರು. ಬಾಲಿವುಡ್ ನಲ್ಲಿ ಸೆಕ್ಸ್ ಬಾಂಬ್ ಟೈಟಲ್ ಗಾಗಿ ಭಾರಿ ಪೈಪೋಟಿಯೇ ನಡೆದಿದ್ದು, ಸೋಫಿಯಾ ತರಹದ ಬೆಡಗಿಯರು ಹರಸಾಹಸವನ್ನೇ ಮಾಡುತ್ತಿದ್ದಾರೆ.

ಅವಕಾಶಕ್ಕಾಗಿ ಈ ರೀತಿ ಪ್ರಚಾರ ತಂತ್ರ

ಅವಕಾಶಕ್ಕಾಗಿ ಈ ರೀತಿ ಪ್ರಚಾರ ತಂತ್ರ

ಸಾಕಷ್ಟು ತಾರೆಗಳು ತಾಮುಂದು ನಾಮುಂದು ಎಂದು ಬಟ್ಟೆ ಕಳಚಲು ಬರುತ್ತಿದ್ದಾರೆ. ಸಿನಿಮಾಗಳಲ್ಲಿ ಅವಕಾಶಕ್ಕಾಗಿ ಈ ರೀತಿ ಪ್ರಚಾರ ತಂತ್ರವನ್ನು ಇವರೆಲ್ಲಾ ಅನುಸರಿಸುತ್ತಿರುವುದು ವಿಶೇಷ. ಇವರು ಏನೇ ಕಸರತ್ತು ಮಾಡಿದರೂ ಅವಕಾಶಗಳು ಮಾತ್ರ ಬರುತ್ತಿಲ್ಲ.

ಐಟಂ ಹಾಡಿಗೂ ಕೆಲಸಕ್ಕೆ ಬರಲ್ಲವಂತೆ ಸೋಫಿಯಾ

ಐಟಂ ಹಾಡಿಗೂ ಕೆಲಸಕ್ಕೆ ಬರಲ್ಲವಂತೆ ಸೋಫಿಯಾ

ಸೋಫಿಯಾಗೆ ಸೆಕ್ಸಿ ಸೌಷ್ಠವ ಇದೆ ಎಂಬುದನ್ನು ಎಲ್ಲರೂ ಒಪ್ಪುತ್ತಾರಾದರೂ ಆದರೆ ಅವಕಾಶಗಳು ಮಾತ್ರ ಸಿಗುತ್ತಿಲ್ಲ. ಐಟಂ ಗರ್ಲ್ ಆಗಿಯೂ ಅವರು ಚಲಾವಣೆಯಾಗುವುದಿಲ್ಲ ಎನ್ನುತ್ತಿದೆ ಬಾಲಿವುಡ್.

English summary
India defeated Pakistan and Fans were ecstatic and they congratulated the cricket team on social media for the victory. But Sofia Hayat went all out to express her joy and she posed topless and congratulated team india for the win by posting topless picture.
Please Wait while comments are loading...

Kannada Photos

Go to : More Photos