ಈ ಲವ್ಲಿ ಜೋಡಿಗಳಲ್ಲಿ ಹಾಟ್ ದಂಪತಿಗಳ್ಯಾರು?

Posted by:

ಬಣ್ಣದ ಜಗತ್ತಿನಲ್ಲಿದ್ದರೂ ನೈಜ ಪ್ರೀತಿ ಸಾಧ್ಯ. ಲವ್ ಬರ್ಡ್ ಗಳಾಗಿ ವಿಹಾರಿಸುತ್ತಾ ಇದ್ದ ಮುಂದೆ ಸತಿ ಪತಿಗಳಾಗಿ ತುಂಬು ಜೀವನ ನಡೆಸಿದ ಉದಾಹರಣೆಗಳಿದೆ. ಬಾಲಿವುಡ್ ನಲ್ಲಿ ಈ ರೀತಿ ಲವ್ಲಿ ಜೋಡಿಗಳಲ್ಲಿ ಹಾಟ್ ದಂಪತಿಗಳ್ಯಾರು ಎಂಬುದನ್ನು ನೀವೆ ಹೇಳಬೇಕು?

ಶಾರುಖ್ ಖಾನ್ ಗೌರಿ: ಚಿತ್ರರಂಗಕ್ಕೆ ಕಾಲಿಡುವ ಮುನ್ನವೇ ಗೌರಿ ಜೊತೆ ಪ್ರೀತಿ ಹೊಂದಿದ್ದ ಶಾರುಖ್ ಖಾನ್ ತನ್ನ 21 ವರ್ಷ ವಯಸ್ಸಿಗೆ ಮದುವೆಯಾದರು. ಗೌರಿ ತಂದೆ ಪಠಾಣರ ಕುಟುಂಬಕ್ಕೆ ಮಗಳನ್ನು ಕಳಿಸಲು ಒಪ್ಪದಿದ್ದಾಗ, ಶಾರುಖ್ ತನ್ನ ಎಲ್ಲಾ ವಾಕ್ಚಾತುರ್ಯ ಬಳಸಿ ಗೌರಿ ಮನೆಯವರ ಮನ ಗೆದ್ದು ಮದುವೆಯಾಗಿದ್ದರು.

ಐಶ್ವರ್ಯಾ- ಅಭಿಷೇಕ್: ಇಬ್ಬರಿಗೂ ಹಲವು ಸ್ಟಾರ್ ಗಳ ಜೊತೆ ಲಿಂಕ್ ಅಪ್ ಗಳಿತ್ತು. ಆದರೂ ಇಬ್ಬರು ಢಾಯ್ ಅಕ್ಷರ್ ಪ್ರೇಮ್ ಕೆ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದು ಮುಂದೆ ಪ್ರೇಮ ಮದ್ವೆ ತನಕ ಬೆಳೆಯಿತು. ಬಂಟ್ಲಿ ಔರ್ ಬಬ್ಲಿ, 'ಕಜ್ರಾ ರೆ' ಹಾಡಿನ ಮೂಲಕ ಹತ್ತಿರಾದ ಈ ಜೋಡಿ ಲವ್ಲಿ ಜೋಡಿಗಳಲ್ಲಿ ಟಾಪ್ ಸ್ಥಾನದಲ್ಲಿದ್ದಾರೆ.

ಸೈಫ್ ಕರೀನಾ: ಸುಮಾರು 2007ರ ವೇಳೆಗೆ ಮನೀಶ್ ಮಲ್ಹೋತ್ರ ಫ್ಯಾಶನ್ ಶೋ ವೇಳೆ ಬೇಬೋ ಜೊತೆ ಪ್ರೇಮ ಇರುವುದನ್ನು ಛೋಟಾ ನವಾಬ್ ಒಪ್ಪಿಕೊಂಡಿದ್ದರು. ಸೈಫ್ ಮದುವೆಗೆ ಚಿಕ್ಕ ಬಾಲಕಿ ಕರೀನಾ ಹೋಗಿ ಬಂದಿದ್ದಳು ಎಂಬುದು ಮರೆಯುವಂತೆ ಇಬ್ಬರು ವಯಸ್ಸಿನ ಅಂತರ ಮರೆತು ಬೆರೆತಿದ್ದಾರೆ. ಉಳಿದ ಜೋಡಿಗಳ ಕಥೆಯನ್ನು ಚಿತ್ರ ಸರಣಿಯಲ್ಲಿ ನೋಡಿ

ಶಾರುಖ್- ಗೌರಿ

ದೆಹಲಿ ಮೂಲದ ಶಾರುಖ್ ಹಾಗೂ ಗೌರಿ ಜೋಡಿ ಆರಂಭದ ದಿನಗಳಲ್ಲಿ ಮುಂಬೈಗೆ ಬರಲು ತಯಾರಿರಿಲ್ಲ. ಶಾರುಖ್ ಚಿತ್ರಗಳು ಫ್ಲಾಪ್ ಆದ್ರೆ ಸಾಕು ಮತ್ತೆ ಡೆಲ್ಲಿಗೆ ಹೋಗ್ಬಹುದು ಎಂದು ಗೌರಿ ಅಂದುಕೊಂಡಿದ್ದರಂತೆ.

ಐಶ್ವರ್ಯಾ-ಅಭಿಷೇಕ್

ಬಚ್ಚನ್ ನಿವಾಸದಲ್ಲಿ ಜನವರಿ 14 ರಂದು ನಿಶ್ಚಿತಾರ್ಥ ಮುಗಿಸಿಕೊಂಡು ಏ 20,2007ರಲ್ಲಿ ಐಶ್ ಪಾಣಿಗ್ರಹಣ ಮಾಡಿ ಬಿಟ್ಟ ಅಭಿಷೇಕ್. ಅಭಿ ಲಕ್ ತಿರುಗದಿದ್ದರೂ ಐಶ್ವರ್ಯಾ ಜನಪ್ರಿಯತೆ ಇಬ್ಬರನ್ನು ಹಾಟ್ ಜೋಡಿಯಾಗಿ ಉಳಿಸಿದೆ

ಹೃತಿಕ್ -ಸುಝಾನ್

ಸಂಜಯ್ ಖಾನ್ ಮಗಳು ಸುಝಾನ್ ಳನ್ನು ಮೊದಲ ಬಾರಿ ಟ್ರಾಫಿಕ್ ಸಿಗ್ನಲ್ ನಲ್ಲಿ ನೋಡಿ ಮೊದಲ ನೋಟದಲ್ಲೇ ಮನಸೋತ ನೀಳ ಕಂಗಳ ಹುಡುಗ ಹೃತಿಕ್ ಆಸೆಗೆ ಮನೆಯಲ್ಲಿ ಯಾವುದೇ ಅಡ್ಡಿ ಎದುರಾಗಲಿಲ್ಲ. ಡಿಸೆಂಬರ್ 20,2000ರಲ್ಲಿ ಕೈ ಹಿಡಿದೇ ಬಿಟ್ಟ

ಸೈಫ್ ಅಲಿಖಾನ್- ಕರೀನಾ

ತಶಾನ್ ಚಿತ್ರಕ್ಕಾಗಿ ಶರ್ಟ್ ಕಳಚಿ ಬಿಸಿಲಿನಲ್ಲಿ ಸ್ನಾನ ಮಾಡುತ್ತಿದ್ದ ಸೈಫ್ ಅಲಿ ಖಾನ್ ನೋಡಿ ಕರೀನಾ ಕಪೂರ್ ಗೆ ಪ್ಯಾರ್ ಆಯಿತಂತೆ. ಇಬ್ಬರು ಇಂದಿನ ಯುವ ಜನಾಂಗಕ್ಕೆ ಹೊಸ ಸ್ಟೈಲ್ ಲುಕ್ ಕಲಿಸಿಕೊಟ್ಟ ಹಾಟ್ ಜೋಡಿಯಾಗಿದ್ದಾರೆ.

ಅಕ್ಷಯ್- ಟ್ವಿಂಕಲ್

ರಾಜೇಶ್ ಖನ್ನಾರಂಥ ಸೂಪರ್ ಸ್ಟಾರ್ ಮಗಳು ಸಿಕ್ಕಿದ್ದು ಅಕ್ಷಯ್ ಕುಮಾರ್ ಲಕ್ ಎಂದು ಜನ ಹೇಳಿಕೊಳ್ಳುತ್ತಿದ್ದದ್ದು ಅಕ್ಷಯ್ ಕಿವಿಗೆ ಬಿದ್ದಿತ್ತು. ನಂತರ ಸಂಪೂರ್ಣ ಕುಟುಂಬದ ಕಷ್ಟ ನಷ್ಟಗಳಲ್ಲಿ ತೊಡಗಿಸಿಕೊಂಡ ಅಕ್ಷಯ್ ಹಂತ ಹಂತವಾಗಿ ಚಿತ್ರರಂಗದಲ್ಲೂ ಬೆಳೆದು ಈಗ ಸ್ಟಾರ್ ಆಗಿದ್ದಾರೆ. ಇದೆಲ್ಲವೂ ನನ್ನ ಪತ್ನಿ ಲಕ್ ನಿಂದ ಆಗಿದ್ದು ಎಂದು ಹೇಳುತ್ತಾರೆ.

See next photo feature article

ಜೆನಿಲಿಯಾ-ರಿತೇಶ್

ದಕ್ಷಿಣ ಭಾರತ ಚಿತ್ರರಂಗದ ಬಬ್ಲಿ ಸ್ಟಾರ್, ಕೊಂಕಣಿ ಬೆಡಗಿ ಜೆನಿಲಿಯಾ ಡಿಸೋಜಾ ನೋಡಿ ಮರುಳಾದ ಮರಾಠಿ ಹುಡುಗ ರಿತೇಶ್ ದೇಶ್ ಮುಖ್ ತಾಳಿ ಕಟ್ಟಲು ಎಳೆಂಟು ವರ್ಷವನ್ನು ತೆಗೆದುಕೊಂಡ. 2012ರಲ್ಲಿ ದಂಪತಿಗಳಾದ ಈ ಜೋಡಿ ಹಿಂದೂ ಹಾಗೂ ಕ್ರೈಸ್ತ ಧರ್ಮದ ಪ್ರಕಾರ ಮದುವೆಯಾದರು.

Read more about: aishwarya rai, abhishek bachchan, shahrukh khan, kareena kapoor, ಶಾರುಖ್ ಖಾನ್, ಕರೀನಾ ಕಪೂರ್, ಐಶ್ವರ್ಯಾ ರೈ

English summary
They have made us believe in love. They have taught us how to fall in love. Our Bollywood stars are not only famous for their on screen romance, but also for their off screen love stories. Here are the list of five hottest couple of Bollywood, who stayed together through thick and thin.
Please Wait while comments are loading...

Kannada Photos

Go to : More Photos