»   » ಇದು ಐಶ್ವರ್ಯನಾ? ಗುಡಿಯಲ್ಲಿ ಬಚ್ಚನ್ ಸೊಸೆ ಕಸ ಗುಡಿಸಿದ್ರಾ?

ಇದು ಐಶ್ವರ್ಯನಾ? ಗುಡಿಯಲ್ಲಿ ಬಚ್ಚನ್ ಸೊಸೆ ಕಸ ಗುಡಿಸಿದ್ರಾ?

Posted by:
Subscribe to Filmibeat Kannada

ಮಾಜಿ ವಿಶ್ವ ಸುಂದರಿ...ಅಮಿತಾಬ್ ಬಚ್ಚನ್ ಬಹುರಾಣಿ...ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಸಿಖ್ಕರ ಪವಿತ್ರ ಸ್ಥಳ ಗುರುದ್ವಾರದಲ್ಲಿ ಪೊರಕೆ ಹಿಡಿದು ಕಸ ಗುಡಿಸಿದ್ದಾರೆ. ಸಾಲ್ದು ಅಂತ ಭಕ್ತಾದಿಗಳಿಗೆ ಅಡುಗೆ ಮಾಡಿದ್ದಾರೆ. ಪಂಕ್ತಿಯಲ್ಲಿ ಎಲ್ಲರೊಂದಿಗೆ ಕೆಳಗೆ ಕುಳಿತು ಊಟ ಮಾಡಿದ್ದಾರೆ.

ನೀವು ಹೆಚ್ಚಿಗೆ ಯೋಚಿಸುವ ಮುನ್ನ ಇದು ರೀಲ್ ಸುದ್ದಿ ಅನ್ನೋದನ್ನ ಮೊದಲು ನೆನಪು ಮಾಡಿಕೊಳ್ಳಿ. [ಯೂಟ್ಯೂಬ್ ನಲ್ಲಿ ಐಶ್ವರ್ಯ ರೈ 'ಜಝ್ಬಾ' ಸಂಚಲನ]

ಐಶ್ವರ್ಯ ರೈ ಹಾಗೆ ಗುರುದ್ವಾರದಲ್ಲಿ ಕಸ ಗುಡಿಸಿ, ಅಡುಗೆ ಮಾಡಿರುವುದು 'ಸರ್ಬ್ಜಿತ್' ಚಿತ್ರಕ್ಕಾಗಿ.

ಗುರುದ್ವಾರದಲ್ಲಿ ಶೂಟಿಂಗ್ ಮಾಡಿದ 'ಸರ್ಬ್ಜಿತ್' ಚಿತ್ರದ ಮೇಕಿಂಗ್ ಸ್ಟಿಲ್ ಗಳು ನಿಮ್ಮ 'ಫಿಲ್ಮಿಬೀಟ್'ಗೆ ಲಭ್ಯವಾಗಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ, ಚಿತ್ರಗಳನ್ನು ನೋಡಿ...

ಗುರುದ್ವಾರದಲ್ಲಿ ಕಸ ಗುಡಿಸಿದ ಐಶ್ವರ್ಯ

ಗುರುದ್ವಾರದಲ್ಲಿ ಕಸ ಗುಡಿಸಿದ ಐಶ್ವರ್ಯ

'ಸರ್ಬ್ಜಿತ್' ಚಿತ್ರಕ್ಕಾಗಿ ನಟಿ ಐಶ್ವರ್ಯ ರೈ ಗುರುದ್ವಾರದಲ್ಲಿ ಕ್ಲೀನಿಂಗ್ ಮಾಡುತ್ತಿರುವಾಗ ಕ್ಲಿಕ್ ಆಗಿರುವ ಫೋಟೋ ಇದು.

ಅಡುಗೆ ಮಾಡಿದ ಐಶೂ

ಅಡುಗೆ ಮಾಡಿದ ಐಶೂ

'ಸರ್ಬ್ಜೀತ್' ಚಿತ್ರದಲ್ಲಿ ಗುರುದ್ವಾರದಲ್ಲಿ ಸೇವೆ ಸಲ್ಲಿಸುವ ದಲ್ಬೀರ್ ಕೌರ್ ಪಾತ್ರ ನಿರ್ವಹಿಸುತ್ತಿದ್ದಾರೆ ನಟಿ ಐಶ್ವರ್ಯ ರೈ.

ನೈಜ ಘಟನೆ ಆಧರಿಸಿರುವ ಸಿನಿಮಾ

ನೈಜ ಘಟನೆ ಆಧರಿಸಿರುವ ಸಿನಿಮಾ

2013ರಲ್ಲಿ ಪಾಕಿಸ್ತಾನದಲ್ಲಿ ಕೊನೆಯುಸಿರೆಳೆದ ಭಾರತೀಯ 'ಸರಬ್ಜಿತ್ ಸಿಂಗ್' ರವರ ಜೀವನಚರಿತ್ರೆ ಈ ಸಿನಿಮಾ.

ಸರಬ್ಜಿತ್ ಗೆ ಏನಾಗಿತ್ತು?

ಸರಬ್ಜಿತ್ ಗೆ ಏನಾಗಿತ್ತು?

ಪಾಕಿಸ್ತಾನದ ಲಾಹೋರ್ ನಲ್ಲಿರುವ ಜಿನ್ನಾ ಆಸ್ಪತ್ರೆಯಲ್ಲಿ ಒಂದು ವಾರ ಕೋಮಾ ಸ್ಥಿತಿಯಲ್ಲಿದ್ದು ಮೃತಪಟ್ಟಿದ್ದ ಭಾರತೀಯ ಖೈದಿ ಸರಬ್ಜಿತ್ ಸಿಂಗ್.

ಸರಬ್ಜಿತ್ ಹಿನ್ನಲೆ

ಸರಬ್ಜಿತ್ ಹಿನ್ನಲೆ

ಪಾಕಿಸ್ತಾನಕ್ಕೆ ಸೇರಿದ್ದ ಪಂಜಾಬ್ ಪ್ರಾಂತ್ಯದಲ್ಲಿ 1990ರಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿ 14 ಜನರು ಹತ್ಯೆಯಾಗಿದ್ದರು. ಈ ಪ್ರಕರಣದಲ್ಲಿ ಭಾರತೀಯ ರೈತ ಸರಬ್ಜಿತ್ ಸಿಂಗ್ ಅಪರಾಧಿ ಎಂದು ಪಾಕಿಸ್ತಾನ ಮರಣದಂಡನೆ ಶಿಕ್ಷೆ ವಿಧಿಸಿತ್ತು.

ಖೈದಿಗಳೇ ಹಲ್ಲೆ ನಡೆಸಿದ್ದರು!

ಖೈದಿಗಳೇ ಹಲ್ಲೆ ನಡೆಸಿದ್ದರು!

ಪಾಕಿಸ್ತಾನದ ಕೋಟ್ ಲಖ್ ಪತ್ ಜೈಲಿನಲ್ಲಿ ಸುಮಾರು ಆರು ಮಂದಿ ಖೈದಿಗಳು ಜೈಲಿನಲ್ಲಿದ್ದ ಸರಬ್ಜಿತ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದರು. ಗಂಭೀರವಾಗಿ ಗಾಯಗೊಂಡಿದ್ದ ಸರಬ್ಜಿತ್ ಒಂದು ವಾರ ಕೋಮಾ ಸ್ಥಿತಿಯಲ್ಲಿದ್ದರು. ಮೆದುಳು ನಿಷ್ಕ್ರಿಯಗೊಂಡಿದ್ದ ಕಾರಣ ಸರಬ್ಜಿತ್ ಸಿಂಗ್ ಕೊನೆಯುಸಿರೆಳೆದರು.

ಸರಬ್ಜಿತ್ ಪಾತ್ರಧಾರಿ?

ಸರಬ್ಜಿತ್ ಪಾತ್ರಧಾರಿ?

ಸರಬ್ಜಿತ್ ಸಿಂಗ್ ಪಾತ್ರದಲ್ಲಿ ಬಾಲಿವುಡ್ ನಟ ರಣದೀಪ್ ಹೂಡ ನಟಿಸುತ್ತಿದ್ದಾರೆ. ಪಾತ್ರಕ್ಕಾಗಿ ಬರೋಬ್ಬರಿ 18 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ ನಟ ರಣದೀಪ್ ಹೂಡ. [ಪಾತ್ರಕ್ಕಾಗಿ 18 ಕೆಜಿ ತೂಕ ಇಳಿಸಿಕೊಂಡ ನಟ ಹೂಡಾ]

ಸತ್ಯಾಸತ್ಯತೆ ಬಯಲಿಗೆ ಬರುತ್ತಾ?

ಸತ್ಯಾಸತ್ಯತೆ ಬಯಲಿಗೆ ಬರುತ್ತಾ?

ಭಾರತೀಯ ಗೂಢಾಚಾರಿ ಅಂತಲೂ ಹೇಳಲಾಗಿರುವ ಸರಬ್ಜಿತ್ ಶಿಕ್ಷೆ ಹಾಗೂ ಸಾವಿನ ಕುರಿತು 'ಸರ್ಬ್ಜಿತ್' ಚಿತ್ರದಲ್ಲಿ ಅಸಲಿ ಸತ್ಯಗಳು ಬಯಲಿಗೆ ಬರಲಿವೆ ಎನ್ನಲಾಗಿದೆ. ಸರಬ್ಜಿತ್ ಸಹೋದರಿ ದಲ್ಬೀರ್ ಕೌರ್ ದೃಷ್ಟಿಕೋನದಿಂದ 'ಸರ್ಬ್ಜಿತ್' ಚಿತ್ರಕಥೆ ಹೆಣೆಯಲಾಗಿದೆ. ದಲ್ಬೀರ್ ಕೌರ್ ಪಾತ್ರದಲ್ಲಿ ನಟಿ ಐಶ್ವರ್ಯ ರೈ ಅಭಿನಯಿಸುತ್ತಿದ್ದಾರೆ. ಓಮಂಗ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

15 ನಿಮಿಷದಲ್ಲಿ ಗ್ರೀನ್ ಸಿಗ್ನಲ್ ಕೊಟ್ಟ ಐಶ್ವರ್ಯ!

15 ನಿಮಿಷದಲ್ಲಿ ಗ್ರೀನ್ ಸಿಗ್ನಲ್ ಕೊಟ್ಟ ಐಶ್ವರ್ಯ!

'ಸರ್ಬ್ಜಿತ್' ಚಿತ್ರಕ್ಕೆ 'ಓಕೆ' ಅನ್ನೋಕೆ ನಟಿ ಐಶ್ವರ್ಯ ರೈ ತೆಗೆದುಕೊಂಡ ಕಾಲಾವಧಿ ಕೇವಲ ಹದಿನೈದು ನಿಮಿಷ ಅಂದ್ರೆ ನೀವು ನಂಬಲೇಬೇಕು.

ಸರ್ಬ್ಜಿತ್ ಪತ್ನಿ?

ಸರ್ಬ್ಜಿತ್ ಪತ್ನಿ?

ಸರಬ್ಜಿತ್ ಪತ್ನಿ ಪಾತ್ರದಲ್ಲಿ ನಟಿ ರೀಚಾ ಚಡ್ಡಾ ನಟಿಸುತ್ತಿದ್ದಾರೆ.

ಗುರುದ್ವಾರದಲ್ಲಿ ಚಿತ್ರೀಕರಣ

ಗುರುದ್ವಾರದಲ್ಲಿ ಚಿತ್ರೀಕರಣ

ಗುರುದ್ವಾರದಲ್ಲಿ 'ಸರ್ಬ್ಜಿತ್' ಚಿತ್ರದ ಚಿತ್ರೀಕರಣದ ವೇಳೆ ನಟಿ ಐಶ್ವರ್ಯ ಕಂಡು ಬಂದಿದ್ದು ಹೀಗೆ.

ಡೀ ಗ್ಲಾಮರಸ್ ರೋಲ್ ನಲ್ಲಿ ಐಶ್ವರ್ಯ

ಡೀ ಗ್ಲಾಮರಸ್ ರೋಲ್ ನಲ್ಲಿ ಐಶ್ವರ್ಯ

'ಸರ್ಬ್ಜಿತ್' ಚಿತ್ರದಲ್ಲಿ ಡೀ ಗ್ಲಾಮರಸ್ ರೋಲ್ ನಲ್ಲಿ ಐಶ್ವರ್ಯ ರೈ ನಟಿಸುತ್ತಿದ್ದಾರೆ.

ಗೋಲ್ಡನ್ ಟೆಂಪಲ್ ಮುಂದೆ ಫ್ಯಾಮಿಲಿ!

ಗೋಲ್ಡನ್ ಟೆಂಪಲ್ ಮುಂದೆ ಫ್ಯಾಮಿಲಿ!

ಚಿತ್ರೀಕರಣದ ಬಿಡುವಿನಲ್ಲಿ ನಟಿ ಐಶ್ವರ್ಯ ರೈ ಜೊತೆ ತಾಯಿ ಬೃಂದಾ ರೈ ಹಾಗೂ ಪುತ್ರಿ ಆರಾಧ್ಯ ಬಚ್ಚನ್

English summary
Bollywood Actress Aishwarya Rai Bachchan was spotted cooking and cleaning floors at Golden Temple for her upcoming biopic Film 'Sarbjit'. Check out the pics here.
Please Wait while comments are loading...

Kannada Photos

Go to : More Photos