»   »  ಬಾಲಿವುಡ್ಡಿಗೂ ತಟ್ಟಿದ ಐಸ್ ಬಕೆಟ್ ಚಾಲೆಂಜ್ ಚಳಿ

ಬಾಲಿವುಡ್ಡಿಗೂ ತಟ್ಟಿದ ಐಸ್ ಬಕೆಟ್ ಚಾಲೆಂಜ್ ಚಳಿ

Written by: * ಜೇಮ್ಸ್ ಮಾರ್ಟಿನ್
Subscribe to Filmibeat Kannada

ಐಸ್ ಬಕೆಟ್ ಚಾಲೆಂಜ್ ಚಳಿ ಜ್ವರ ಬಾಲಿವುಡ್ಡಿಗೂ ಹಬ್ಬಿದೆ. ಎಎಲ್ ಎಸ್ ಐಸ್ ಬಕೆಟ್ ಓಪನ್ ಚಾಲೆಂಜ್ ನಲ್ಲಿ ಅಕ್ಷಯ್ ಕುಮಾರ್, ಸೋನಾಕ್ಷಿ ಸಿನ್ಹಾ ಸೇರಿದಂತೆ ಅನೇಕ ನಟಿ ನಟಿಯರು ಪಾಲ್ಗೊಂಡಿದ್ದಾರೆ.

ಮೈಮೇಲೆ ತಣ್ಣೀರು ಸುರಿದುಕೊಂಡ ವಿಡಿಯೋವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿರುವ ತಾರೆಯರು, ಜೊತೆಗೆ ತಮ್ಮ ನೆಚ್ಚಿನ ಗೆಳಯ ಅಥವಾ ಗೆಳೆತಿಗೆ ಚಾಲೆಂಜ್ ಹಾಕುತ್ತಿದ್ದಾರೆ.

ಅಮೆರಿಕದ ಎಎಲ್ಎಸ್ ಅಸೋಸಿಯೇಷನ್ ಗೆ ದೇಣಿಗೆ ನೀಡಲು ಒಂದು ಬಕೆಟ್ ಮಂಜುಗಡ್ಡೆ ಭರಿತ ನೀರನ್ನು ತಲೆ ಮೇಲಿಂದ ಸುರಿದುಕೊಳ್ಳುವ ಹುಚ್ಚಾಟ ಉತ್ತರಗೋಳದಲ್ಲಿ ಆರಂಭವಾಯಿತು. ಅದೀಗ ವಿಶ್ವದೆಲ್ಲೆಡೆ ಹಬ್ಬಿದೆ. ಮೊದಲಿಗೆ ಕ್ರೀಡಾಪಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಫೋಟೊ, ವಿಡಿಯೋ ಹಾಕಿದರು ನಂತರ ಸಿನಿಮಾ ತಾರೆಯರು ನಾಮುಂದು ತಾಮುಂದು ಎಂದು ಮುಗಿಬಿದ್ದರು.

ವಿದೇಶದಲ್ಲಿ ಚಿತ್ರೀಕರಣ ನಿರತರಾಗಿರುವ ಅಕ್ಷಯ್ ಕುಮಾರ್ ಅವರು ತಾಪಮಾನ 8 ಡಿಗ್ರಿ ಸೆಲ್ಸಿಯಸ್ ವಾತವಾರಣದಲ್ಲಿ ತಮ್ಮ ಮೈ ಮೇಲೆ 11 ಬಕೆಟ್‍ಗಳಲ್ಲಿದ್ದ ಐಸ್ ಕ್ಯೂಬ್ ನೀರನ್ನು ತಮ್ಮ ಮೇಲೆ ಸುರಿದುಕೊಂಡು ನೆರೆದಿದ್ದವರನ್ನು ಚಕಿತಗೊಳಿಸಿದ್ದಲ್ಲದೆ ತಮ್ಮ ಪತ್ನಿ ಡಿಂಪಲ್ ಹಾಗೂ ಸಲ್ಮಾನ್ ಖಾನ್ ಗೆ ಚಾಲೆಂಜ್ ಪಾಸ್ ಮಾಡಿದರು. ಬಕೆಟ್ ಚಾಲೆಂಜ್ ತೆಗೆದುಕೊಂಡ ತಾರೆಗಳ ತೋಟ ಮುಂದಿದೆ ನೋಡಿ..

ನಟ ಸಿದ್ದಾರ್ಥ್ ಮಲ್ಹೋತ್ರ
  

ನಟ ಸಿದ್ದಾರ್ಥ್ ಮಲ್ಹೋತ್ರ

ನಟ ರಿತೇಶ್ ದೇಶ್ ಮುಖ್ ಅವರು ನೀಡಿದ ಐಸ್ ಬಕೆಟ್ ಚಾಲೆಂಜ್ ಸ್ವೀಕರಿಸಿದ ನಟ ಸಿದ್ದಾರ್ಥ್ ಮಲ್ಹೋತ್ರ ಅವರು ವರುಣ್ ಧವನ್, ಅರ್ಜುನ್ ಕಪೂರ್ ಹಾಗೂ ಮೋಹಿತ್ ಸೂರಿ ಅವರನ್ನು ನಾಮಿನೇಟ್ ಮಾಡಿದರು.

 ನಟ ಅಕ್ಷಯ್ ಕುಮಾರ್
  

ನಟ ಅಕ್ಷಯ್ ಕುಮಾರ್

ಕೇಪ್ ಟೌನ್ ನಲ್ಲಿರುವ ಅಕ್ಷಯ್ ಕುಮಾರ್ ಅವರು ಕೂಡಾ ರಿತೇಶ್ ದೇಶ್ ಮುಖ್ ನೀಡಿದ ಚಾಲೆಂಜ್ ಸ್ವೀಕರಿಸಿದರು. ಐಸ್ ಬಕೆಟ್ ಚಾಲೆಂಜ್ ಸ್ವೀಕರಿಸಿದರು ನಂತರ ಪತ್ನಿ ಟ್ವಿಂಕಲ್ ಖನ್ನ, ಸಲ್ಮಾನ್ ಖಾನ್ ಹಾಗೂ ಜಾನಿ ಲಿವರ್ ಅವರನ್ನು ನಾಮಿನೇಟ್ ಮಾಡಿದರು.

 ರಿತೇಶ್ ದೇಶ್ ಮುಖ್
  

ರಿತೇಶ್ ದೇಶ್ ಮುಖ್

ಟೆನಿಸ್ ಪಟು ಸಾನಿಯಾ ಮಿರ್ಜಾ ನೀಡಿದ ಚಾಲೆಂಜ್ ಸ್ವೀಕರಿಸಿದ ಮೊದಲಿಗೆ ಸ್ವೀಕರಿಸಿದ ನಟ ರಿತೇಶ್ ಅವರು ಚಾಲೆಂಜ್ ಪೂರೈಸಿ, ಅಭಿಷೇಕ್ ಬಚ್ಚನ್, ಸಿದ್ದಾರ್ಥ್, ಪುಳಕಿತ್ ಸಮರ್ಥ್ ಹಾಗೂ ಆಶೀಶ್ ಚೌಧರಿರನ್ನು ನಾಮಿನೇಟ್ ಮಾಡಿದರು.

 ಅಭಿಷೇಕ್ ಬಚ್ಚನ್
  

ಅಭಿಷೇಕ್ ಬಚ್ಚನ್

ಅಭಿಷೇಕ್ ಬಚ್ಚನ್ ಚಾಲೆಂಜ್ ಪೂರೈಸಿ ಹ್ಯಾಪಿ ನ್ಯೂ ಇಯರ್ ಚಿತ್ರತಂಡಕ್ಕೆ ಚಾಲಂಜ್ ಎಸೆದರು. ಜೊತೆಗೆ ಅಮಿತಾಬ್ ಬಚ್ಚನ್ ಹಾಗೂ ಶಾರುಖ್ ಗೂ ಚಾಲೆಂಜ್ ಹಾಕಿದರು.

ನಟಿ ಸೋನಾಕ್ಷಿ ಸಿನ್ಹಾ
  

ನಟಿ ಸೋನಾಕ್ಷಿ ಸಿನ್ಹಾ

ಪಾಪ.... ಸೋನಾಕ್ಷಿ ಸಿನ್ಹಾರನ್ನು ಯಾರೂ ನಾಮಿನೇಟ್ ಮಾಡಲಿಲ್ಲ. ಆದರೂ ಚಾಲೆಂಜ್ ತೆಗೆದುಕೊಂಡು ತಣ್ಣೀರು ಸುರಿದುಕೊಂಡಿದ್ದಾರೆ.

ಬಿಪಾಶಾ ಬಸು
  

ಬಿಪಾಶಾ ಬಸು

ಬಿಪಾಶಾ ಬಸು ಅವರ ಗೆಳತಿಯೊಬ್ಬರು ನೀಡಿದ ಚಾಲೆಂಜ್ ಸ್ವೀಕರಿಸಿ ಸ್ನಾನಗೃಹದಲ್ಲಿ ಮಂಜುಗಡ್ಡೆ ಭರಿತ ನೀರು ಸುರಿದುಕೊಂಡಿದ್ದಾರೆ.

ಗಾಯಕ ದಲೇರ್ ಮಹೆಂದಿ
  

ಗಾಯಕ ದಲೇರ್ ಮಹೆಂದಿ

ಗಾಯಕ ದಲೇರ್ ಮಹೆಂದಿ ಅವರು ಚಾಲೆಂಜ್ ಸ್ವೀಕರಿಸಿ ನಂತರ ನಟ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಪ್ರಿಯಾಂಕಾ ಚೋಪ್ರಾರನ್ನು ನಾಮಿನೇಟ್ ಮಾಡಿದರು.

 ಹಂಸಿಕಾ ಮೋತ್ವಾನಿ
  

ಹಂಸಿಕಾ ಮೋತ್ವಾನಿ

ದಕ್ಷಿಣ ಭಾರತದ ಜನಪ್ರಿಯ ನಟಿ ಹಂಸಿಕಾ ಮೋತ್ವಾನಿ ಮುಂಬೈನಲ್ಲಿ ಚಾಲೆಂಜ್ ಸ್ವೀಕರಿಸಿದರು.

 ನಟಿ ನಿರೂಪಕಿ ಮಂದಿರಾ
  

ನಟಿ ನಿರೂಪಕಿ ಮಂದಿರಾ

ನಟಿ ನಿರೂಪಕಿ ಮಂದಿರಾ ಬೇಡಿ ಅವರು ಆಶೀಶ್ ಚೌಧರಿ ನೀಡಿದ ಚಾಲೆಂಜ್ ಪಡೆದು ನೀರು ಸುರಿದುಕೊಂಡರು. ಕರಣ್ ವಾಹಿ, ವಿಶಾಲ್ ದಡ್ಲಾನಿ, ಸೊಹೈಲ್ ಖಾನ್ ರನ್ನು ನಾಮಿನೇಟ್ ಮಾಡಿದರು.

English summary
The Ice Bucket Challenge, sometimes called the ALS Ice Bucket Challenge, is an activity involving dumping a bucket of ice water on one's head or donating to the ALS Association in the United States.In the mean time take a look at the Bollywood celebrities who have taken up this Ice Bucket Challenge.
Please Wait while comments are loading...

Kannada Photos

Go to : More Photos