»   » ಕರೀನಾ ಹೀರೋಯಿನ್ 'ಕಚಡಾ' ಎಂದ ಜಾಕಿಶ್ರಾಫ್

ಕರೀನಾ ಹೀರೋಯಿನ್ 'ಕಚಡಾ' ಎಂದ ಜಾಕಿಶ್ರಾಫ್

Posted by:
Subscribe to Filmibeat Kannada
ಮಧುರ್ ಭಂಡಾರ್ಕರ್ ನಿರ್ದೇಶನ ಹಾಗೂ ಕರೀನಾ ಕಪೂರ್ 'ಹೀರೋಯಿನ್' ಚಿತ್ರವನ್ನು ಜಾಕಿ ಶ್ರಾಫ್ 'ರಬ್ಬಿಶ್' ಎಂದು ಟೀಕಿಸಿದ್ದಾರೆ. ಬಿಡುಗಡೆಗೂ ಪೂರ್ವದಲ್ಲಿ ಈ ಚಿತ್ರಕ್ಕೆ ಭಾರಿ ನಿರೀಕ್ಷೆ ವ್ಯಕ್ತವಾಗಿತ್ತಾದರೂ ಬಿಡುಗಡೆ ಬಳಿಕ ಚಿತ್ರಕ್ಕೆ ಕೆಟ್ಟ ವಿಮರ್ಶೆಗಳೇ ಕೇಳಿಬಂದಿದ್ದವು. ಅಷ್ಟೇ ಅಲ್ಲ, ಚಿತ್ರವು ಬಾಕ್ಸ್ ಆಫೀಸ್ ಗಳಿಕೆಯಲ್ಲೂ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ವಿಫಲವಾಗಿದೆ. ಹೀಗಿರುವಾಗ ಹಿರಿಯ ನಟ ಜಾಕಿಶ್ರಾಫ್ ಟೀಕೆಯೂ ಕೇಳಿಬಂದಿದೆ.

ಸದ್ಯಕ್ಕೆ 'ಲಾರೆನ್ಸ್ ಪೋಸ್ಟ್ ಕವರ್ ಸ್ಟೋರಿ'ಯ ಬಾಲಿವುಡ್ ಆವೃತ್ತಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರಿವ ನಟ ಜಾಕಿಶ್ರಾಫ್, "ನಾವೆಲ್ಲರೂ (ನಟನಟಿಯರು) ಮನುಷ್ಯರೇ. ನಮ್ಮೆಲ್ಲರೂ ಕಣ್ಣೀರಿನ ಬಣ್ಣವೂ ಒಂದೇ. ಎಲ್ಲರಿಗೂ ಹಸಿವೆ, ಬಾಯಾರಿಕೆ ಆಗುತ್ತದೆ. ಹೀಗಿರುವಾಗ ಇತ್ತೀಚಿನ ಕೆಲವು ಚಿತ್ರೀಗಳಲ್ಲಿ ಸೆಲೆಬ್ರಿಟಿಗಳನ್ನು ಡ್ರಗ್ಸ್ ಹಾಗೂ ಆಲ್ಕೋಹಾಲಿಕ್ ಅಡಿಕ್ಟ್'ಗಳಂತೆ ಚಿತ್ರಿಸಿರುವುದು ನನಗೆ ಇಷ್ಟವಾಗಿಲ್ಲ. ನಾನು ನಟಿಸುತ್ತಿರುವ ಚಿತ್ರವಂತೂ ಹಾಗೆ 'ರಬ್ಬಿಶ್' ಅಲ್ಲ" ಎಂದಿದ್ದಾರೆ.

ಹಿರಿಯ ನಟ ಜಾಕಿಶ್ರಾಫ್ ಈ ಟೀಕೆ ಬಾಲಿವುಡ್ ನಲ್ಲಿ ಸಾಕಷ್ಟು ಪ್ರಭಾವ ಬೀರುವುದಂತೂ ಖಂಡಿತ. ಅವರ ಮಾತು ಸಾಕಷ್ಟು ಜನರ ಕುತೂಹಲಕ್ಕೆ ಕಾರಣವಾಗಿದೆ, ಅಷ್ಟೇ ಅಲ್ಲ, ಈಗಾಗಲೇ ಹಲವರ ಚರ್ಚೆಗೂ ಕಾರಣವಾಗಿದೆ. ಕರೀನಾ ಅವರಂತೂ 'ಹಿರೋಯಿನ್' ಚಿತ್ರದ ನಂತರ ಕೈಗೆ ಸಿಗಲಾರರು ಎನ್ನಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಮೊದಲಿಗಿಂತ ಭಿನ್ನವಾಗೇನೂ ಇಲ್ಲ. ಸದ್ಯಕ್ಕೆ 'ಕರೀನಾ ಕೈಗೆ ಸಿಕ್ಕರೂ ಬೇಡ' ಎನ್ನುವಂತಾಗಿಲ್ಲ ಎಂಬುದೇ ಸಮಾಧಾನದ ಸಂಗತಿ.

ಅದಿರಲಿ, ಮಧುರ್ ಭಂಡಾರ್ಕರ್ ಸಾಕಷ್ಟು ಒಳ್ಳೆಯ ಚಿತ್ರಗಳನ್ನು ನೀಡಿರುವ ನಿರ್ದೇಶಕ. ಅದರಲ್ಲೂ ಈ 'ಹೀರೋಯಿನ್' ಚಿತ್ರವು ಅವರ ಕನಸಿನ ಕೂಸಾಗಿತ್ತು. ಕರೀನಾ ಕಪೂರ್ ನಟಿಸಿದ್ದರೂ ಈ 'ಹಿರೋಯಿನ್' ಚಿತ್ರದ ಗತಿ ಹೀಗೇಕಾಯ್ತು ಎಂಬುದು ಈಗ ಬಾಲಿವುಡ್ ಪಂಡಿತರ ಪ್ರಶ್ನೆ. ಮೊದಲು ಈ ಚಿತ್ರಕ್ಕೆ ಆಯ್ಕೆಯಾಗಿದ್ದು ಐಶ್ವರ್ಯಾ ರೈ. ಅವರು ಆ ವೇಳೆ ಗರ್ಭಿಣಿಯಾಗಿದ್ದರಿಂದ ಅವಕಾಶ ಕರೀನಾ ಪಾಲಾಯ್ತು. ಈಗ ಬಹುಶಃ ಐಶೂ ಮುಖದಲ್ಲಿ ಯಾರೂ ಇಲ್ಲದಿರುವಾಗ ಮಂದಹಾಸ ಮೂಡಬಹುದು... (ಏಜೆನ್ಸೀಸ್)

English summary
Jackie Shroff has criticised Kareena Kapoor Heroine. Jackie Shroff indirectly said that the movie Heroine is nothing but rubbish.
Please Wait while comments are loading...

Kannada Photos

Go to : More Photos