twitter
    For Quick Alerts
    ALLOW NOTIFICATIONS  
    For Daily Alerts

    ಜಿಯಾ ಖಾನ್ ಕೇಸ್ ಮತ್ತೆ ತನಿಖೆ ನಡೆಸಿ : ಕೋರ್ಟ್

    By ಜೇಮ್ಸ್ ಮಾರ್ಟಿನ್
    |

    ಬಾಲಿವುಡ್ ನಟಿ ಜಿಯಾಖಾನ್ ಆತ್ಮಹತ್ಯೆ ಪ್ರಕರಣಕ್ಕೆ ಅವರ ತಾಯಿ ರಬಿಯಾ ಮತ್ತೊಂದು ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡುತ್ತಿರುವ ಬೆನ್ನಲ್ಲೇ ಬುಧವಾರ ಈ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಎನ್ನಲಾದ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿರುವ ವಿಡಿಯೋ ತುಣುಕು ಹಾಗೂ ಇನ್ನಿತರ ಸಾಕ್ಷಿ ಆಧಾರಗಳನ್ನು ಪರಿಶೀಲಿಸಿದ ಬಾಂಬೆ ಹೈಕೋರ್ಟ್ ಪ್ರಕರಣದ ಮರು ತನಿಖೆಗೆ ಆಗ್ರಹಿಸಿದೆ.

    ಜಿಯಾಖಾನ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಅವರ ತಾಯಿ ರಬಿಯಾ ಅವರ ಇತ್ತೀಚಿನ ಹೇಳಿಕೆ ಪಡೆದು ಮರು ತನಿಖೆ ನಡೆಸುವಂತೆ ಜುಹು ಪೊಲೀಸರಿಗೆ ಬಾಂಬೆ ಹೈಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.

    ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಎನ್ನಲಾದ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿರುವ ವಿಡಿಯೋ ತುಣುಕುಗಳನ್ನು ರಬಿಯಾ ಅವರು ಹೊರಹಾಕಿದ ಬೆನ್ನಲ್ಲೇ ಈಗ ನನ್ನ ಮಗಳ ಆತ್ಮದ ಜತೆ ನಾನು ಮಾತನಾಡಿದ್ದೇನೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ರಬಿಯಾ ಇತ್ತೀಚೆಗೆ ಹೇಳಿಕೊಂಡಿದ್ದರು.

    ಸಿಸಿಟಿವಿ ತುಣುಕುಗಳ ಮೂಲಕ ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಂಡ ರಾತ್ರಿ ಆದಿತ್ಯಾ ಪಂಚೋಲಿ ಅವರು ಸಾಗರ್ ಸಂಗೀತ್ ಅಪಾರ್ಟ್ಮೆಂಟ್ ಗೆ ಬಂದು ಹೋಗಿರುವುದು ಖಚಿತವಾಗಿತ್ತು. ಇದಾದ ನಂತರ ಜಿಯಾಖಾನ್ ಪ್ರೇತದ ಕಥೆಯನ್ನು ರಬಿಯಾಖಾನ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು. ಮಗಳಿಲ್ಲದೆ ಬಕ್ರೀದ್ ಆಚರಣೆ ನೋವನ್ನು ತೋಡಿಕೊಂಡಿದ್ದಾರೆ. ಸಾಕ್ಷಿ ಆಧಾರಗಳು ಕಣ್ಮುಂದೆ ಇದ್ದರೂ ಮುಂಬೈ ಪೊಲೀಸರು ಕೈಕಟ್ಟಿ ಕುಳಿತ್ತಿದ್ದಾರೆ ಏಕೆ? ಎಂದು ಪ್ರಶ್ನಿಸಿ ಜಿಯಾ ಖಾನ್ ತಾಯಿ ಟ್ವೀಟ್ ಮಾಡಿದ್ದರು.

    ಟ್ವಿಟ್ಟರ್ ನಲ್ಲಿ ಸಂಚಲನ

    ಟ್ವಿಟ್ಟರ್ ನಲ್ಲಿ ಸಂಚಲನ

    ರಬಿಯಾ ಅವರನ್ನು ಟ್ವಿಟ್ಟರ್ ನಲ್ಲಿ ಹಿಂಬಾಲಿಸುವವರು ಪ್ರಶ್ನೆಗಳ ಮಹಾಪೂರವನ್ನು ಹರಿಸಿದರು. ಇದಕ್ಕೆ ಉತ್ತರಿಸಿದ ರಬಿಯಾ ಘಟನೆ ನಡೆದ ರಾತ್ರಿಯ ಸನ್ನಿವೇಶವನ್ನು ವಿವರಿಸಿದ್ದಾರೆ. ಜಿಯಾಗೆ ತುಂಬಾ ಹಿಂಸೆ ನೀಡಲಾಗಿದೆ ನಂತರ ನೇಣು ಬಿಗಿದು ಹತ್ಯೆ ಮಾಡಲಾಗಿದೆ ಎಂದು ರಬಿಯ ಹೇಳಿದ್ದಾರೆ.

    ಕೋರ್ಟ್ ಮೆಟ್ಟಿಲೇರಿದ ರಬಿಯಾ

    ಕೋರ್ಟ್ ಮೆಟ್ಟಿಲೇರಿದ ರಬಿಯಾ

    ಜಿಯಾಖಾನ್ ಅವರ ಶವದ ಚಿತ್ರಗಳು, ಮರಣೋತ್ತರ ಪರೀಕ್ಷೆ ವರದಿ ಹಿಡಿದುಕೊಂಡು ಕೋರ್ಟ್ ಮೆಟ್ಟಿಲೇರಿರುವ ರಬಿಯಾ ಈಗ ಸಿಸಿಟಿವಿ ಕೆಮೆರಾ ವಿಡಿಯೋ ದೃಶ್ಯಾವಳಿಗಳನ್ನು ಬಹಿರಂಗಗೊಳಿಸಿದ್ದಾರೆ. ಸಿಬಿಐ ತನಿಖೆಗೂ ಆಗ್ರಹಿಸಿದ್ದಾರೆ. ಆದರೆ, ಸಾಕ್ಷಿಗಳನ್ನು ಮಾದ್ಯಮಗಳ ಮುಂದೆ ಮೊದಲಿಗೆ ನೀಡಿದ್ದು ಏಕೆ ಇನ್ನೂ ಸ್ಪಷ್ಟವಾಗಿಲ್ಲ

    ಪೀಟಿಷನ್ ನಲ್ಲಿ ಏನಿದೆ?

    ಪೀಟಿಷನ್ ನಲ್ಲಿ ಏನಿದೆ?

    ಆರೋಪಿಗಳಲ್ಲಿ ಒಬ್ಬರಾದ ಆದಿತ್ಯ ಪಂಚೋಲಿ ಅವರು ಘಟನೆ ನಡೆದ ದಿನ ಜಿಯಾಖಾನ್ ಮನೆಗೆ ಭೇಟಿ ನೀಡಿದ್ದರು. ಸಿಸಿಟಿವಿ ಕೆಮೆರಾ ನೋಡಿ ಗಾಬರಿಗೊಂಡಿದ್ದನ್ನು ನೋಡಬಹುದು. ಮುನ್ನು ಹಾಗೂ ಅಂಜು ಮಹೇಂದ್ರು ಅವರನ್ನು ಮನೆಗೆ ಬಿಟ್ಟ ಮೇಲೂ ಕೂಡಾ ಕಟ್ಟಡ ಬಳಿ ಅನುಮಾನಾಸ್ಪದವಾಗಿ ಓಡಾಡಿದ್ದು ಕಂಡು ಬಂದಿದೆ. ಫೋನ್ ಕಾಲ್ ನಂತರ ಗೊಂದಲಗೊಂಡ ಆದಿತ್ಯ ಜಿಯಾ ಮನೆಗೆ ಹೋಗದೆ ಹಿಂತಿರುಗಿದ್ದಾರೆ. ಮುನ್ನು ಕೆಲ ಹೊತ್ತಿನ ನಂತರ ಬಂದು ಜಿಯಾ ಇನ್ನಿಲ್ಲ ಎಂಬ ಸುದ್ದಿ ಕೊಟ್ಟಿದ್ದಾರೆ.

    ಮರಣೋತ್ತರ ಪರೀಕ್ಷೆ ವರದಿ

    ಮರಣೋತ್ತರ ಪರೀಕ್ಷೆ ವರದಿ

    ಮರಣೋತ್ತರ ಪರೀಕ್ಷೆ ವರದಿಯಲ್ಲೂ ಶವ ಪತ್ತೆಯಾದ ಸ್ಥಿತಿ ಹಾಗೂ ನೇಣು ಬಿಗಿದುಕೊಂಡಾಗ ಆಗಿರುವ ಗಾಯದ ಕಲೆ ಬಗ್ಗೆ ವಿವರಿಸಿ ಇದು ಮೃತ ವ್ಯಕ್ತಿ ಒಬ್ಬರಿಂದ ಹೇಗೆ ಸಾಧ್ಯ. ಬೇರೊಬ್ಬರು ನೇಣು ಬಿಗಿದಿರುವ ಅಥವಾ ಉಸಿರುಗಟ್ಟಿಸಿರುವ ಸಾಧ್ಯತೆ ಯಿದೆ ಎಂದಿದೆ.

     ಪತ್ರಗಳ ನಿಗೂಢತೆ

    ಪತ್ರಗಳ ನಿಗೂಢತೆ

    ಜೂ. 3 ರಂದು ಜುಹು ಅಪಾರ್ಟ್ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ 25 ವರ್ಷದ ಜಿಯಾ ಖಾನ್ ಅವರ ಸಾವಿನ ನಿಗೂಢತೆ ಮುಂದುವರೆಯುತ್ತಲೇ ಇದೆ. ಜಿಯಾ ಬರೆದಿದ್ದಾಳೆ ಎನ್ನಲಾದ ಎರಡು ಪತ್ರಗಳ ಕೈಬರಹದ ಸ್ಯಾಂಪಲ್ ಕೋರ್ಟಿಗೆ ನೀಡಿ ಇದರ ವರದಿ ಆಧಾರದ ಮೇಲೆ ನನ್ನ ಕಕ್ಷಿದಾರ ಮೃತಳಿಗೆ ಹಿಂಸೆ ನೀಡಿದ ದಿನಾಂಕ ಹಾಗೂ ಪತ್ರ ಬರೆದಿರುವ ದಿನಾಂಕ ಪರಿಶೀಲಿಸಿ ಎಂದು ಸೂರಜ್ ವಕೀಲರು ವಾದಿಸಿದ್ದು ಪ್ರಕರಣಕ್ಕೆ ಬೇರೆ ತಿರುವು ನೀಡಿತ್ತು

    ರಬಿಯಾ ಪ್ರತಿಕ್ರಿಯೆ

    ರಬಿಯಾ ಪ್ರತಿಕ್ರಿಯೆ

    "She(Jiah Khan) found out the truth about him, what he is and what he does to other girls." ಇಲ್ಲಿ ರಬಿಯಾ ಹೇಳುತ್ತಿರುವುದು ಅದಿತ್ಯ ಪಂಚೋಲಿ ಬಗ್ಗೆಯೇ ಅಥವಾ ಸೂರಜ್ ಬಗ್ಗೆಯೇ ಎಂಬುದು ಸ್ಪಷ್ಟತೆ ಇಲ್ಲ.

    ಉಪವಾಸ ಕೂರುತ್ತೇನೆ

    ಉಪವಾಸ ಕೂರುತ್ತೇನೆ

    ನಾನು ನನ್ನ ಮಗಳಿಗೆ ಆದ ಅನ್ಯಾಯದ ಬಗ್ಗೆ ಜಗತ್ತಿಗೆ ಸಾರುತ್ತಿದ್ದೇನೆ. ನನಗೆ ನ್ಯಾಯ ಸಿಗುವ ತನಕ ಹೋರಾಟ ಮುಂದುವರೆಯಲಿದೆ. ಉಪವಾಸ ಸತ್ಯಾಗ್ರಹ ಕೂರಲು ಸಿದ್ದ ಎಂದು ಬಾಂಬ್ ಎಸೆದಿದ್ದಾರೆ ರಬಿಯಾ

    English summary
    After studying all evidences produced by Jiah Khan's mother Rabia Khan claiming that it was a case of murder, the Bombay High Court has ordered a reinvestigation.The Juhu police has been asked by the court to register her complain and re-investigate into the matter.
    Wednesday, October 23, 2013, 18:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X