»   » 'ರಂಗೂನ್' ಶೂಟಿಂಗ್ ಸಮಯದಲ್ಲಿ ಕಂಗನಾಗೆ ಎದುರಾದ ಕಷ್ಟಗಳಿವು

'ರಂಗೂನ್' ಶೂಟಿಂಗ್ ಸಮಯದಲ್ಲಿ ಕಂಗನಾಗೆ ಎದುರಾದ ಕಷ್ಟಗಳಿವು

ಯಾವುದೇ ಸೌಲಭ್ಯಗಳು ಇಲ್ಲದ ಜಾಗಗಳಲ್ಲಿ ಶೂಟಿಂಗ್ ನಡೆಯುವಾಗ ನಟಿಯರು ಯಾವ ರೀತಿ ಎಲ್ಲಾ ಕಷ್ಟ ಅನುಭವಿಸಬೇಕಾಗುತ್ತದೆ, ಎಂಬುದನ್ನು ಬಾಲಿವುಡ್ ನಟಿ ಕಂಗನಾ ರನೌತ್ ಅವರು ಟಾಕ್ ಶೋ ಒಂದರಲ್ಲಿ ಬಿಚ್ಚಿಟ್ಟಿದ್ದಾರೆ.

Written by: ಸೋನು ಗೌಡ
Subscribe to Filmibeat Kannada

ಬಾಲಿವುಡ್ ಚಿತ್ರರಂಗದಲ್ಲಿ ಅತ್ಯಂತ ಗಟ್ಟಿಗಿತ್ತಿ ನಟಿ ಅಂದ್ರೆ ಅದು ಕಂಗನಾ ರನೌತ್ ಅಂತಾನೇ ಹೇಳಬಹುದು. ಯಾವುದೇ ಸಂದರ್ಭ ಬಂದರೂ ಅದನ್ನು ಸರಿಯಾಗಿ ನಿಭಾಯಿಸೋದು, ಅಥವಾ ಯಾವುದೇ ಸನ್ನಿವೇಶ ಎದುರಾದರೂ ಅದನ್ನು ಧೈರ್ಯದಿಂದ ಸ್ವೀಕರಿಸುವಲ್ಲಿ ಕಂಗನಾ ಅವರು ನಿಸ್ಸೀಮರು.

ಒಂದು ಕಾಲದಲ್ಲಿ ಮನೆಯವರಿಂದ ತಿರಸ್ಕರಿಸಲ್ಪಟ್ಟರು ಕೂಡ, ಎದೆಗುಂದದೆ ತಮ್ಮದೇ ಹಾದಿಯಲ್ಲಿ ಸಾಗಿ ಇದೀಗ ಸಾಧನೆಯ ತುತ್ತ ತುದಿಯಲ್ಲಿ ನಿಂತಿರುವ ಕಂಗನಾ ಅವರು ಶೂಟಿಂಗ್ ಸಂದರ್ಭದಲ್ಲೂ ಕೂಡ ಹಲವು ಸಮಸ್ಯೆ ಎದುರಿಸಿದ್ದಾರಂತೆ.[ಭೀಕರ ರಸ್ತೆ ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ ನಟಿ ಕಂಗನಾ]

ರಾಜ್ಯ-ರಾಷ್ಟ್ರ ಪ್ರಶಸ್ತಿ ಬಗಲಿಗೆ ಹಾಕಿಕೊಂಡು ಸದ್ಯಕ್ಕೆ ಬಾಲಿವುಡ್ ನ 'ಕ್ವೀನ್' ಆಗಿರುವ ನಟಿ ಕಂಗನಾ ರನೌತ್ ಅವರು, ಸ್ಟಾರ್ ನಟಿಯಾದರೂ ಶೂಟಿಂಗ್ ಸಮಯದಲ್ಲಿ ಮಾತ್ರ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರಂತೆ.

ಇನ್ನು ಶೂಟಿಂಗ್ ಸಮಯದಲ್ಲಿ ನಟಿಯರು ಏನೆಲ್ಲಾ ಅಡ್ಜಸ್ಟ್ ಮಾಡಿಕೊಳ್ಳಬೇಕು, ಇತ್ಯಾದಿ ಬಗ್ಗೆ ಈಗಾಗಲೇ ಕೆಲವು ಸ್ಟಾರ್ ನಟಿಯರು ಹೇಳಿಕೊಂಡಿದ್ದಾರೆ. ಇದೀಗ ಕಂಗನಾ ಸರದಿ, ಏನಪ್ಪಾ ಕಂಗನಾ ಅವರಿಗೆ ಅಂತಹ ಕಷ್ಟ ಎದುರಾಯ್ತು, ಮುಂದೆ ಓದಿ.....

ಟಾಕ್ ಶೋನಲ್ಲಿ ಬಹಿರಂಗ

ಟಾಕ್ ಶೋನಲ್ಲಿ ಬಹಿರಂಗ

ಶೂಟಿಂಗ್ ಸಮಯದಲ್ಲಿ ತಮಗಾದ ಕಷ್ಟಗಳನ್ನು ನಟಿ ಕಂಗನಾ ಅವರು ಇತ್ತೀಚೆಗೆ ಟಾಕ್ ಶೋ ಒಂದರಲ್ಲಿ ಹಂಚಿಕೊಂಡಿದ್ದಾರೆ. ನಟಿ ನೇಹಾ ಧುಪಿಯಾ ನಡೆಸಿಕೊಡೋ '#NoFilterNeha' ಎಂಬ ಟಾಕ್ ಶೋದಲ್ಲಿ ಭಾಗವಹಿಸಿದ್ದ 'ಕ್ವೀನ್' ಕಂಗನಾ ತಮ್ಮ ಸಮಸ್ಯೆಯನ್ನು ಹಂಚಿಕೊಂಡಿದ್ದಾರೆ.['ವೇಶ್ಯೆ' ಪಟ್ಟ ಹೊರಲು ತಯಾರು ಎಂದ್ಹೇಳಿ ವಿವಾದ ಸೃಷ್ಟಿಸಿದ ಕಂಗನಾ]

'ರಂಗೂನ್' ಶೂಟಿಂಗ್ ಸಂದರ್ಭದಲ್ಲಿ ಕಹಿ ಘಟನೆ

'ರಂಗೂನ್' ಶೂಟಿಂಗ್ ಸಂದರ್ಭದಲ್ಲಿ ಕಹಿ ಘಟನೆ

ವಿಶಾಲ್ ಭಾರದ್ವಾಜ್ ನಿರ್ದೇಶನದ ಮುಂಬರುವ ಸಿನಿಮಾ 'ರಂಗೂನ್' ಶೂಟಿಂಗ್ ಸಮಯದಲ್ಲಿ ಕಂಗನಾ ಅವರಿಗೆ ಬಟ್ಟೆ ಬದಲಾಯಿಸಲು ತುಂಬಾ ಕಷ್ಟಕರ ಆಗಿತ್ತಂತೆ. 'ರಂಗೂನ್' ಶೂಟಿಂಗ್ ಗಾಗಿ ಅರುಣಾಚಲ ಪ್ರದೇಶದ ಕಣಿವೆಗಳಲ್ಲಿ ಬೀಡು ಬಿಟ್ಟಿದ್ದ ಸಮಯದಲ್ಲಿ ಕಂಗನಾ ಅವರಿಗೆ ಬಟ್ಟೆ ಬದಲಾಯಿಸಲು ಸರಿಯಾದ ಜಾಗ ಸಿಕ್ಕಿರಲಿಲ್ಲವಂತೆ.['ಕ್ವೀನ್' ಕಂಗನಾ-ಹೃತಿಕ್ ಬಗ್ಗೆ ಹೊರಬಿದ್ದಿರುವ ಶಾಕಿಂಗ್ ನ್ಯೂಸ್]

ಬಂಡೆ ಹಿಂದೆ ಬಟ್ಟೆ ಬದಲಾಯಿಸಿದ ಕಂಗನಾ

ಬಂಡೆ ಹಿಂದೆ ಬಟ್ಟೆ ಬದಲಾಯಿಸಿದ ಕಂಗನಾ

ಕಾಡು ಪ್ರದೇಶದಲ್ಲಿ ಶೂಟಿಂಗ್ ನಡೆಯುತ್ತಿದ್ದ ಸಮಯದಲ್ಲಿ ಕಂಗನಾ ಅವರು ಬಂಡೆಯ ಹಿಂದೆ ಹೋಗಿ ಬಟ್ಟೆ ಬದಲಾಯಿಸುತ್ತಿದ್ದರಂತೆ. ಯಾಕೆಂದರೆ ಅವರು ಶೂಟಿಂಗ್ ಮಾಡುತ್ತಿದ್ದ ಪ್ರದೇಶದಲ್ಲಿ ಹಳ್ಳಿ ಆಗ್ಲಿ ಮನೆ ಆಗ್ಲಿ ಇರಲಿಲ್ಲವಂತೆ. ಆದ್ದರಿಂದ ಅನಿವಾರ್ಯವಾಗಿ ಬಂಡೆ ಅಥವಾ ಮರ ಹುಡುಕಿ ಕಾಸ್ಟ್ಯೂಮ್ ಬದಲಾಯಿಸಬೇಕಿತ್ತಂತೆ.

ಶೌಚಾಲಯ ಕೂಡ ಇರುತ್ತಿರಲಿಲ್ಲ

ಶೌಚಾಲಯ ಕೂಡ ಇರುತ್ತಿರಲಿಲ್ಲ

ಬರೀ ಬಟ್ಟೆ ಬದಲಾಯಿಸೋ ವಿಚಾರ ಯಾಕೆ, ಅಲ್ಲಿ ಶೌಚಾಲಯ ಕೂಡ ಇರಲಿಲ್ಲವಂತೆ. ಹೇಗೋ ಕಷ್ಟಪಟ್ಟು ಅರುಣಾಚಲ ಪ್ರದೇಶದಲ್ಲಿ ಶೂಟಿಂಗ್ ನಿಭಾಯಿಸಿದೆ. ಈ ಸಂದರ್ಭಗಳಲ್ಲಿ ಸ್ಟಾರ್ ನಟಿ ಅನ್ನೋ ಪ್ರಶ್ನೆಯೇ ಇರೋದಿಲ್ಲ. ಎಲ್ಲವನ್ನೂ ಮ್ಯಾನೇಜ್ ಮಾಡಬೇಕು ಎಂದಿದ್ದಾರೆ ನಟಿ ಕಂಗನಾ. ಬರೀ ಇವರು ಮಾತ್ರವಲ್ಲದೇ ಇಡೀ ಚಿತ್ರತಂಡದವರು ಕೂಡ ಇಂತಹ ಕಷ್ಟ ಅನುಭವಿಸಿದ್ದಾರಂತೆ. ಈ ಚಿತ್ರದಲ್ಲಿ ಕಂಗನಾ ಅವರಿಗೆ ಶಾಹೀದ್ ಕಪೂರ್ ಮತ್ತು ಸೈಫ್ ಅಲಿಖಾನ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ಕಂಗನಾಗೆ ಯುರೋಪ್ ನಲ್ಲೂ ಇಂತಹ ಅನುಭವ

ಕಂಗನಾಗೆ ಯುರೋಪ್ ನಲ್ಲೂ ಇಂತಹ ಅನುಭವ

ಬರೀ ಇದು ಮಾತ್ರವಲ್ಲದೇ ಈ ಮೊದಲು 'ಕ್ವೀನ್' ಚಿತ್ರದ ಶೂಟಿಂಗ್ ಸಮಯದಲ್ಲಿ ಯುರೋಪ್ ನಲ್ಲಿ ಈ ತರದ ಅನುಭವ ಆಗಿತ್ತಂತೆ. ಅಲ್ಲಿನ ಕೆಫೆಯೊಂದರಲ್ಲಿ ಕಂಗನಾ ಅವರು ತಮ್ಮ ಬಟ್ಟೆ ಬದಲಾಯಿಸಿದ್ದರಂತೆ.

ಈ ಮೊದಲು ಐಂದ್ರಿತಾ ಬಾಯಿ ಬಿಟ್ಟಿದ್ದರು

ಈ ಮೊದಲು ಐಂದ್ರಿತಾ ಬಾಯಿ ಬಿಟ್ಟಿದ್ದರು

ಬಟ್ಟೆ ಬದಲಾಯಿಸೋ ವಿಚಾರದ ಬಗ್ಗೆ ಕನ್ನಡ ನಟಿ ಐಂದ್ರಿತಾ ರೇ ಅವರು ಬಾಯಿ ಬಿಟ್ಟಿದ್ದರು. ಚಿತ್ರತಂಡದವರು ಕ್ಯಾರಾವಾನ್ ಕೊಡೋದಿಲ್ಲ. ಆದ್ದರಿಂದ ಮರದ ಹಿಂದೆ ಹೋಗಿ ಬಟ್ಟೆ ಬದಲಾವಣೆ ಮಾಡುತ್ತಿದ್ದೆವು ಎಂದಿದ್ದರು.[ಸ್ಯಾಂಡಲ್ ವುಡ್ ಕಹಿಸತ್ಯಗಳನ್ನು ಬಿಚ್ಚಿಟ್ಟ ಐಂದ್ರಿತಾ ರೇ]

English summary
National Award-winning Bollywood actress Kangana Ranaut, who will be seen in filmmaker Vishal Bhardwaj's 'Rangoon', says she used to change her costumes behind rocks due to lack of facilities while shooting for the periodic drama film.
Please Wait while comments are loading...

Kannada Photos

Go to : More Photos