»   » ಭೀಕರ ರಸ್ತೆ ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ ನಟಿ ಕಂಗನಾ

ಭೀಕರ ರಸ್ತೆ ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ ನಟಿ ಕಂಗನಾ

Posted by:
Subscribe to Filmibeat Kannada

ಬಾಲಿವುಡ್ ನಟಿ ಕಂಗನಾ ರನೌತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂದಲೆಳೆ ಅಂತರದಲ್ಲಿ ಗಂಡಾಂತರದಿಂದ ತಪ್ಪಿಸಿಕೊಂಡಿದ್ದಾರೆ. 'ಸಿಮ್ರಾನ್' ಚಿತ್ರದ ಚಿತ್ರೀಕರಣಕ್ಕೆಂದು ಯು.ಎಸ್ ಗೆ ತೆರಳಿದ್ದ ನಟಿ ಕಂಗನಾ ರನೌತ್, ಭೀಕರ ರಸ್ತೆ ಅಪಘಾತದಲ್ಲಿ ಪವಾಡಸದೃಶ್ಯ ರೀತಿಯಲ್ಲಿ ಬಚಾವ್ ಆಗಿದ್ದಾರೆ.

ಅಸಲಿಗೆ ನಡೆದದ್ದು ಇಷ್ಟು: ನಟಿ ಕಂಗನಾ ರನೌತ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ 'ಸಿಮ್ರಾನ್' ಚಿತ್ರದ ಶೂಟಿಂಗ್ ಯು.ಎಸ್ ನಲ್ಲಿ ನಡೆಯುತ್ತಿತ್ತು. ಶೂಟಿಂಗ್ ಮುಗಿಸಿ ಅಟ್ಲಾಂಟಾದಲ್ಲಿ ಇರುವ ಹೋಟೆಲ್ ನತ್ತ 'ಸಿಮ್ರಾನ್' ಚಿತ್ರತಂಡ ಪಯಣ ಬೆಳೆಸಿದಾಗ ಆಕ್ಸಿಡೆಂಟ್ ಆಗಿದೆ.

ಚಾಲಕನ ನಿಯಂತ್ರಣ ತಪ್ಪಿದ ಕಾರು

ಚಾಲಕನ ನಿಯಂತ್ರಣ ತಪ್ಪಿದ ಕಾರು

ಹೈವೇ 381 ನಲ್ಲಿ ಕಾರು ಚಾಲನೆ ಮಾಡುತ್ತಿದ್ದಾಗ, ಚಾಲಕನಿಗೆ ಕೆಮ್ಮು ಶುರು ಆಗಿದೆ. ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಇದನ್ನ ಗಮನಿಸಿ, ಚಾಲಕನ ಪಕ್ಕದಲ್ಲಿ ಕುಳಿತಿದ್ದ ಕಂಗನಾ ಬಾಡಿಗಾರ್ಡ್ ಕಾರನ್ನ ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಅದು ಸಾಧ್ಯವಾಗದ ಪರಿಣಾಮ ಅಪಘಾತ ಸಂಭವಿಸಿದೆ. ['ಅಸಲಿ ಸತ್ಯ ಹೊರಬೀಳಲಿದೆ': ಕಂಗನಾಗೆ ಟಾಂಗ್ ಕೊಟ್ಟ ಹೃತಿಕ್]

ಕಂಗನಾಗೆ ಏನಾಯ್ತು?

ಕಂಗನಾಗೆ ಏನಾಯ್ತು?

ನಟಿ ಕಂಗನಾ ಹಣೆ, ಕಣ್ಣುಬ್ಬಿನ ಬಳಿ ಹಾಗೂ ಕೈಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಕಂಗನಾ ರನೌತ್ ಆಪ್ತ ಮೂಲಗಳು ತಿಳಿಸಿವೆ.

ಸಾವು ಸಂಭವಿಸಿಲ್ಲ

ಸಾವು ಸಂಭವಿಸಿಲ್ಲ

ಅದೃಷ್ಟವಶಾತ್, ಈ ಭೀಕರ ರಸ್ತೆ ಅಪಘಾತದಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

'ಸಿಮ್ರಾನ್' ನಿರ್ಮಾಪಕ ಏನಂತಾರೆ?

'ಸಿಮ್ರಾನ್' ನಿರ್ಮಾಪಕ ಏನಂತಾರೆ?

ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ 'ಸಿಮ್ರಾನ್' ಚಿತ್ರದ ನಿರ್ಮಾಪಕ ಶೈಲೇಶ್.ಆರ್.ಸಿಂಗ್, ''ಕೂದಲೆಳೆ ಅಂತರದಲ್ಲಿ ಎಲ್ಲರೂ ಪಾರಾಗಿದ್ದಾರೆ. ಕಂಗನಾ ರವರಿಗೆ ತುಂಬಾ ಧೈರ್ಯ ಇದೆ. ಅಪಘಾತ ಆಗಿದ್ದರೂ, ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ'' ಅಂತ ಹೇಳಿಕೆ ನೀಡಿದ್ದಾರೆ.

'ಸಿಮ್ರಾನ್' ಚಿತ್ರದ ಕುರಿತು

'ಸಿಮ್ರಾನ್' ಚಿತ್ರದ ಕುರಿತು

ಹನ್ಸಾಲ್ ಮೆಹ್ತಾ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ 'ಸಿಮ್ರಾನ್'. ಮಹಿಳಾ ಪ್ರಧಾನ ಚಿತ್ರವಾಗಿರುವ 'ಸಿಮ್ರಾನ್' ನಲ್ಲಿ ಕಂಗನಾ ರನೌತ್ ರದ್ದು ನೆಗೆಟಿವ್ ಶೇಡ್ ಇರುವ ಪಾತ್ರ ಎಂದು ವರದಿ ಆಗಿದೆ.

English summary
Bollywood Actress Kangana Ranaut miraculously escaped in US Road Accident.
Please Wait while comments are loading...

Kannada Photos

Go to : More Photos