»   » ನಟಿ ಕತ್ರಿನಾ ಕೈಫ್ ಅಸಲಿ ಬಂಡವಾಳ ಬಯಲಾಗುತ್ತಾ?

ನಟಿ ಕತ್ರಿನಾ ಕೈಫ್ ಅಸಲಿ ಬಂಡವಾಳ ಬಯಲಾಗುತ್ತಾ?

Written by: ಉದಯರವಿ
Subscribe to Filmibeat Kannada

ಬಾಲಿವುಡ್ ತಾರೆ ಕತ್ರಿನಾ ಕೈಫ್ ಗೆ ಈಗ ಹೊಸ ಭಯವೊಂದು ಕಾಡುತ್ತಿದೆ. ಆ ಭಯ ಅವರನ್ನು ಹೇಗೆ ಕಾಡುತ್ತಿದೆ ಎಂದರೆ ಕನಸಿನಲ್ಲೂ ಬೆಚ್ಚಿ ಬೀಳುವಂತಾಗಿದೆ. ಇಷ್ಟಕ್ಕೂ ಈ ಭಯಕ್ಕೆ ಕಾರಣವಾಗಿರುವುದು ಅವರ ಮೇಕಪ್ ಮ್ಯಾನ್.

ಕತ್ರಿನಾ ಕೈಫ್ ಬಳಿ ಕಳೆದ ಹನ್ನೊಂದು ವರ್ಷಗಳಿಂದ ಕೆಲಸ ಮಾಡುತ್ತಿರುವ ಮೇಕಪ್ ಮ್ಯಾನ್ ಸುಭಾಷ್ ಸಿಂಗ್ ಎಲ್ಲಿ ತನ್ನ ಖಾಸಗಿ ವಿಚಾರಗಳನ್ನು ಬಯಲು ಮಾಡುತ್ತಾನೋ ಎಂಬ ಆತಂಕದಲ್ಲಿ ದಿನದೂಡುವಂತಾಗಿದೆ.

ಕತ್ರಿನಾರ ಖಾಸಗಿ ವಿಚಾರಗಳನ್ನು ಅವನೇಕೆ ಬಯಲು ಮಾಡಬೇಕು? ಕತ್ರಿನಾ ಏನಾದರೂ ಅವನಿಗೆ ಕಿರುಕುಳ ಕೊಟ್ಟರೇ? ಇತ್ತೀಚೆಗೆ ನಡೆದ ಈ ಘಟನೆಯನ್ನೊಮ್ಮೆ ನೋಡಿದರೆ ನಿಮಗೇ ಎಲ್ಲವೂ ಅರ್ಥವಾಗುತ್ತದೆ. ಸ್ವಲ್ಪ ದಿನಗಳ ಹಿಂದೆ ಸುಭಾಷ್ ಅವರು ಶೂಟಿಂಗ್ ಗೆ ಲೇಟಾಗಿ ಬಂದ ಕಾರಣ ಅವರ ಮೇಲೆ ಕತ್ರಿನಾ ಎಗರಿಬಿದ್ದಿದ್ದರು.

Katrina Kaif's makeup artist turns producer

ಇದರಿಂದ ಕುಪಿತಗೊಂಡ ಸುಭಾಷ್ ಅಲ್ಲಿಂದ ಕಾಲ್ತಿತ್ತಿದ್ದ. ಇಷ್ಟಕ್ಕೇ ಸುಮ್ಮನಾಗದೆ ಶೀಘ್ರದಲ್ಲೇ ಒಂದು ಸಿನಿಮಾ ಸಹ ಮಾಡ್ತೀನಿ ಎಂದು ಪ್ರಕಟಿಸಿದ್ದ. ಇದು ಸಿನಿಮಾ ತಾರೆಯೊಬ್ಬಳ ಕಥೆ ಎಂಬ ಪ್ರಚಾರವನ್ನೂ ನೀಡಲಾಗುತ್ತಿದೆ.

ಈ ಘಟನೆಗಳ ಹಿನ್ನೆಲೆಯಲ್ಲಿ ಸುಭಾಷ್ ಸಿಂಗ್ ತೆಗೆಯುತ್ತಿರುವ ಚಿತ್ರದ ಕಥೆ ಕತ್ರಿನಾರನ್ನು ವಿಡಂಬನಾತ್ಮಕವಾಗಿ ಚಿತ್ರಿಸಲಾಗುತ್ತದೆಂದು. ಕತ್ರಿನಾರ ಬಂಡವಾಳ ಬಯಲು ಮಾಡುತ್ತಾನೆ ಎಂಬ ಮಾತುಗಳು ಕೇಳಿಬರುತ್ತಿವೆ. ಸದ್ಯಕ್ಕೆ ಈ ವಿಚಾರ ಬಾಲಿವುಡ್ ನಲ್ಲಿ ಸಖತ್ ಹಾಟ್ ಆಗಿ ಬದಲಾಗಿದೆ.

ಈ ಚಿತ್ರದಲ್ಲಿ ಬಾಲಿವುಡ್ ತಾರೆಗಳಾದ ಶಬಾನಾ ಅಜ್ಮಿ, ಅನುಪಮ್ ಖೇರ್, ಜೂಹಿ ಚಾವ್ಲಾ, ದಿವ್ಯಾ ದತ್ತಾ ಪಾತ್ರವರ್ಗದಲ್ಲಿದ್ದಾರೆ. ಇದರ ಜೊತೆಗೆ ಅತಿಥಿ ಪಾತ್ರದಲ್ಲಿ ಅಭಿನಯಿಸಲು ರಣಬೀರ್ ಕಪೂರ್ ಅವರನ್ನೂ ಸಂಪರ್ಕಿಸಲಾಗಿದೆಯಂತೆ.

English summary
Subhash Singh has been the make-up artist for Katrina Kaif for the past 11 years. He was sacked by the Top Actress recently for being late to a shoot. This development garnered widespread media coverage only to irk the pretty beauty.
Please Wait while comments are loading...

Kannada Photos

Go to : More Photos